Weight Lifting: ಬಾಡಿ ಬಿಲ್ಡಿಂಗ್ ಮಾಡುವುದು, ತೂಕ ಎತ್ತುವುದು ಹೃದಯ ಆರೋಗ್ಯಕ್ಕೆ ಎಷ್ಟು ಲಾಭಕಾರಿ?

ವಾರಕ್ಕೆ ಒಂದು ಗಂಟೆಗಿಂತ ಕಡಿಮೆ ತೂಕ ಎತ್ತುವುದು ಹೃದಯಾಘಾತ ಅಥವಾ ಪಾರ್ಶ್ವವಾಯು ಅಪಾಯವನ್ನು 40 ರಿಂದ 70 ಪ್ರತಿಶತ ಕಡಿಮೆ ಮಾಡುತ್ತದೆ. ಇದೇ ವೇಳೆ ಒಂದು ಗಂಟೆಗೂ ಹೆಚ್ಚು ಕಾಲ ಭಾರ ಎತ್ತುವುದು ಲಾಭ ಹೆಚ್ಚಾಗುವ ಬದಲು ಕಡಿಮೆ ಮಾಡುತ್ತದೆ ಎಂಬ ಅಂಶವು ಅಧ್ಯಯನದಲ್ಲಿ ಹೇಳಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ವರ್ಕೌಟ್ (Workout) ಮಾಡುವಾಗ ಸಾಮಾನ್ಯವಾಗಿ ಜನರು (People) ಜಿಮ್ (Jim) ಗೆ ಹೋಗ್ತಾರೆ. ಆಗ ಜಿಮ್ ನಲ್ಲಿ ತರಬೇತುದಾರರು (Trainer) ವಾರದಲ್ಲಿ ಒಂದೆರಡು ದಿನ ತೂಕ (Weight) ಎತ್ತುವ ತರಬೇತಿ ನೀಡುತ್ತಾರೆ. ಇದನ್ನು ದೇಹ ನಿರ್ಮಾಣ ಅಂದ್ರೆ ಬಾಡಿ ಬಿಲ್ಡಿಂಗ್ ಉದ್ದೇಶಕ್ಕಾಗಿ ಮಾಡಲಾಗುತ್ತದೆ. ತೂಕ ಎತ್ತುವುದು ದೇಹಕ್ಕೆ ಇನ್ನೂ ಅನೇಕ ಪ್ರಯೋಜನ ನೀಡುತ್ತದೆ. ಇದು ಹೃದಯ ಮತ್ತು ಮೆದುಳಿಗೆ ಸಂಬಂಧಿಸಿದ ಮಾರಣಾಂತಿಕ ಕಾಯಿಲೆಗಳಿಂದ ರಕ್ಷಣೆ ನೀಡುತ್ತದೆ. ಆದರೆ ಹೆಚ್ಚಿನ ತೂಕ ಎತ್ತುವುದು ಅಪಾಯ ಹೆಚ್ಚಿಸುತ್ತದೆ. ಹಾಗಾಗಿ ಕಡಿಮೆ ತೂಕ ಮಾತ್ರ ಎತ್ತುವುದು ಸೂಕ್ತ. ಅಯೋವಾ ಸ್ಟೇಟ್ ಯೂನಿವರ್ಸಿಟಿ ನಡೆಸಿದ 2018 ರ ಅಧ್ಯಯನದ ಪ್ರಕಾರ,

  ವಾರಕ್ಕೆ ಒಂದು ಗಂಟೆಗಿಂತ ಕಡಿಮೆ ತೂಕ ಎತ್ತುವುದು ಹೃದಯಾಘಾತ ಅಥವಾ ಪಾರ್ಶ್ವವಾಯು ಅಪಾಯವನ್ನು 40 ರಿಂದ 70 ಪ್ರತಿಶತ ಕಡಿಮೆ ಮಾಡುತ್ತದೆ. ಇದೇ ವೇಳೆ ಒಂದು ಗಂಟೆಗೂ ಹೆಚ್ಚು ಕಾಲ ಭಾರ ಎತ್ತುವುದು ಲಾಭ ಹೆಚ್ಚಾಗುವ ಬದಲು ಕಡಿಮೆ ಮಾಡುತ್ತದೆ ಎಂಬ ಅಂಶವು ಅಧ್ಯಯನದಲ್ಲಿ ಹೇಳಿದೆ.

  ಅಧ್ಯಯನ ಹೇಳಿದ್ದೇನು?

  ಈ ಅಧ್ಯಯನವು ಹೃದಯಾಘಾತ ಮತ್ತು ಪಾರ್ಶ್ವವಾಯು ಗಂಭೀರ ಆರೋಗ್ಯ ತೊಡಕುಗಳಿಗೆ ಸಂಬಂಧಿಸಿದ ಅಪಾಯ ಕಡಿಮೆ ಮಾಡುವಲ್ಲಿ ದೈಹಿಕ ಚಟುವಟಿಕೆ ಮಹತ್ವದ ಪಾತ್ರ ವಹಿಸುತ್ತದೆ ಎಂದಿದೆ. ಅಧ್ಯಯನಕ್ಕಾಗಿ ಸಂಶೋಧಕರು ಏರೋಬಿಕ್ಸ್ ಸೆಂಟರ್ ಲಾಂಗಿಟ್ಯೂಡಿನಲ್ ಸ್ಟಡಿಯಲ್ಲಿ 13,000 ವಯಸ್ಕರಿಂದ ಡೇಟಾ ವಿಶ್ಲೇಷಿಸಿದ್ದಾರೆ.

  ಇದನ್ನೂ ಓದಿ: ನಾಲಿಗೆ ಮೇಲೆ ಈ ರೀತಿ ಆದಲ್ಲಿ ವಿಟಮಿನ್ ಡಿ ಕೊರತೆಯಂತೆ, ಎಚ್ಚರ ವಹಿಸಿ

  ವಾರಕ್ಕೆ ಒಂದು ಗಂಟೆಗೂ ಹೆಚ್ಚು ಕಾಲ ಶಕ್ತಿಯ ವ್ಯಾಯಾಮ ಮಾಡಿದವರು ಮೆಟಾಬಾಲಿಕ್ ಸಿಂಡ್ರೋಮ್ನ ಬೆಳವಣಿಗೆಯಲ್ಲಿ 29 ಪ್ರತಿಶತ ಕಡಿತ ಹೊಂದಿದೆ. ಇದು ಹೃದ್ರೋಗ, ಪಾರ್ಶ್ವವಾಯು ಮತ್ತು ಮಧುಮೇಹದ ಅಪಾಯ ಹೆಚ್ಚಿಸುತ್ತದೆ. ಹೈಪರ್ಕೊಲೆಸ್ಟರಾಲ್ಮಿಯಾ ಅಪಾಯ 32 ಪ್ರತಿಶತ ಕಡಿಮೆಯಾಗಿದೆ. ಈ ಎರಡು ಅಧ್ಯಯನಗಳನ್ನು ಏರೋಬಿಕ್ ವ್ಯಾಯಾಮದ ಮೇಲೆ ಪ್ರತ್ಯೇಕವಾಗಿ ಮಾಡಲಾಗಿದೆ.

  ಎರಡನೇ ಅಧ್ಯಯನ ಕೋಪನ್ ಹ್ಯಾಗನ್ ನ ಸಂಶೋಧಕರ ಅಧ್ಯಯನದ ಪ್ರಕಾರ, ಕಾರ್ಡಿಯೋ ವ್ಯಾಯಾಮಕ್ಕಿಂತ ತೂಕ ಎತ್ತುವಿಕೆಯು ಹೃದಯದ ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿಯಾಗಿದೆ ಎಂದು ಹೇಳಿದೆ. ಆದಾಗ್ಯೂ ಎರಡೂ ರೀತಿಯ ವ್ಯಾಯಾಮಗಳು ಹೃದಯಕ್ಕೆ ಒಳ್ಳೆಯದು ಎಂದು ಹೇಳಿದೆ.

  ತೂಕ ಎತ್ತುವಿಕೆ ಅಪಾಯಕಾರಿ ಹೃದಯ ಕೊಬ್ಬಿನ ಪೆರಿಕಾರ್ಡಿಯಲ್ ಅಡಿಪೋಸ್ ಅಂಗಾಂಶದ ಪ್ರಮಾಣ ಕಡಿಮೆ ಮಾಡುತ್ತದೆ.

  ಎಷ್ಟು ತೂಕ ಎತ್ತುವಿಕೆ ಎಷ್ಟು ಆರೋಗ್ಯಕರ?

  ಹಾರ್ವರ್ಡ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಆರೋಗ್ಯವಾಗಿರಲು ವಾರಕ್ಕೆ ಕೇವಲ 30 ರಿಂದ 60 ನಿಮಿಷಗಳ ಸಾಮರ್ಥ್ಯದ ತರಬೇತಿ ಸಾಕು ಎಂದಿದೆ. ಈ ಅವಧಿಯಲ್ಲಿ ಕೆಲಸ ಮಾಡಿದವರು ಎಲ್ಲಾ ಕಾರಣಗಳಿಂದ ಮತ್ತು ವಿಶೇಷವಾಗಿ ಕ್ಯಾನ್ಸರ್ ಮತ್ತು ಹೃದ್ರೋಗದಿಂದ ಸಾಯುವ ಅಪಾಯವನ್ನು 10% ರಿಂದ 20% ರಷ್ಟು ಕಡಿಮೆ ಹೊಂದಿದ್ದಾರೆ ಎಂದು ಅಧ್ಯಯನ ಹೇಳಿದೆ.

  ತೂಕ ಎತ್ತುವಿಕೆ ಹೃದಯದ ಆರೋಗ್ಯ ಹೇಗೆ ಕಾಪಾಡುತ್ತದೆ?  

  ತೂಕ ಎತ್ತುವಿಕೆ ನೇರ ದ್ರವ್ಯರಾಶಿ ಹೆಚ್ಚಿಸುತ್ತದೆ. ಇದು ಹೃದಯ ರಕ್ತನಾಳದ ವ್ಯವಸ್ಥೆಯು ಹೆಚ್ಚು ರಕ್ತವನ್ನು ಪಂಪ್ ಮಾಡುತ್ತದೆ. ಇದು ಅಪಧಮನಿಗಳ ಮೇಲಿನ ಒತ್ತಡ ಕಡಿಮೆ ಮಾಡುತ್ತದೆ. ಮಾರಣಾಂತಿಕ ಕಾಯಿಲೆಗಳ ಅಪಾಯ ಕಡಿಮೆ ಮಾಡುತ್ತದೆ. ಏರೋಬಿಕ್ ಮತ್ತು ಶಕ್ತಿ ತರಬೇತಿಯ ಸಂಯೋಜನೆಯು ಎಚ್‌ಡಿಎಲ್ (ಒಳ್ಳೆಯ) ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸಲು ಮತ್ತು ಎಲ್‌ಡಿಎಲ್ (ಕೆಟ್ಟ) ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ.

  ಮಾರಣಾಂತಿಕ ಕಾಯಿಲೆಗಳ ಅಪಾಯ

  ಜಡ ಜೀವನಶೈಲಿ, ದೀರ್ಘಕಾಲ ಕುಳಿತು ಮತ್ತು ಕನಿಷ್ಠ ದೈಹಿಕ ಚಟುವಟಿಕೆ ಹೊಂದಿರುವ ಜನರು, ಹೃದಯಾಘಾತ, ಪಾರ್ಶ್ವವಾಯು ಆರೋಗ್ಯದ ತೊಂದರೆ ಅಭಿವೃದ್ಧಿಪಡಿಸುವ ಹೆಚ್ಚಿನ ಅಪಾಯ ಹೊಂದಿದ್ದಾರೆ. ಪ್ರತಿಯೊಬ್ಬರೂ ತಮ್ಮ ದೈನಂದಿನ ದಿನಚರಿಯಲ್ಲಿ ದೈಹಿಕ ಚಟುವಟಿಕೆಗೆ ಪ್ರೋತ್ಸಾಹ ನೀಡಬೇಕು. ವಾರದಲ್ಲಿ ಕೆಲವೇ ಗಂಟೆಗಳ ವ್ಯಾಯಾಮವು ಗಂಭೀರ ತೊಡಕುಗಳ ಅಪಾಯ ಕಡಿಮೆ ಮಾಡುತ್ತದೆ.

  ಇದನ್ನೂ ಓದಿ: ಕೂದಲು ಮತ್ತು ತ್ವಚೆಯ ಆರೋಗ್ಯಕ್ಕೆ ಮಜ್ಜಿಗೆ ಬಳಸ್ತೀರಾ? ಹಾಗಾದ್ರೆ ತಪ್ಪದೇ ಓದಿ

  ಧೂಮಪಾನ, ಅಧಿಕ ರಕ್ತದೊತ್ತಡ, ಮಧುಮೇಹ, ದೈಹಿಕ ನಿಷ್ಕ್ರಿಯತೆ, ಅಧಿಕ ತೂಕ ಮತ್ತು ಅಧಿಕ ರಕ್ತದ ಕೊಲೆಸ್ಟ್ರಾಲ್‌ ಅಪಾಯ ತಂದೊಡ್ಡುತ್ತವೆ. ಜೀವನಶೈಲಿ ಬದಲಾಯಿಸುವ ಮೂಲಕ ಅಪಾಯ ತಪ್ಪಿಸಬಹುದು. ಕಾಲೋಚಿತ ಹಣ್ಣುಗಳು ಮತ್ತು ತರಕಾರಿ ಸೇವಿಸುವುದು, ತೂಕ ನಿಯಂತ್ರಣದಲ್ಲಿಟ್ಟುಕೊಳ್ಳುವುದು, ಕೊಲೆಸ್ಟ್ರಾಲ್ ನಿಯಂತ್ರಿಸುವುದು ಉತ್ತಮ.
  Published by:renukadariyannavar
  First published: