Thyroid And Weight Loss: ಥೈರಾಯ್ಡ್‌ನಿಂದಾಗಿ ನಿಮ್ಮ ತೂಕ ಹೆಚ್ಚುತ್ತಿದೆಯೇ? ಹಾಗಾದ್ರೆ ಈ ಪದಾರ್ಥಗಳನ್ನು ಸೇವಿಸಿ

ನಿಧಾನ ಚಯಾಪಚಯ ಕ್ರಿಯೆಯು ಅನೇಕ ಆರೋಗ್ಯ ಅಪಾಯ ಉಂಟು ಮಾಡುತ್ತದೆ. ಇದು ಆಯಾಸಕ್ಕೆ ಕಾರಣವಾಗುತ್ತದೆ. ಮತ್ತು ನಿಮ್ಮ ರಕ್ತದ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಿಸಬಹುದು. ಇದು ನಿಮಗೆ ತೂಕ ಇಳಿಸಲು ತೊಂದರೆ ಉಂಟು ಮಾಡುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ದೇಹವು (Body) ಸಾಕಷ್ಟು ಥೈರಾಯ್ಡ್ ಹಾರ್ಮೋನ್ (Thyroid) ನ್ನು ಉತ್ಪಾದನೆ ಮಾಡದೇ ಇದ್ದಾಗ ಉಂಟಾಗುವ ಒಂದು ಸ್ಥಿತಿ ಹೈಪೋಥೈರಾಯ್ಡಿಸಮ್ ಆಗಿದೆ. ಥೈರಾಯ್ಡ್ ಹಾರ್ಮೋನುಗಳು ಆರೋಗ್ಯದ (Health) ವಿಷಯದಲ್ಲಿ ತುಂಬಾ ಮುಖ್ಯ ಪಾತ್ರ ವಹಿಸಿವೆ. ಬೆಳವಣಿಗೆ, ಜೀವಕೋಶದ ದುರಸ್ತಿ ಮತ್ತು ಚಯಾಪಚಯ ನಿಯಂತ್ರಿಸಲು ಥೈರಾಯ್ಡ್ ಹಾರ್ಮೋನುಗಳು ಸಹಾಯ ಮಾಡುತ್ತವೆ. ನಿಮ್ಮ ದೇಹವು ನೀವು ತಿನ್ನುವ ಆಹಾರವನ್ನು ಶಕ್ತಿಯನ್ನಾಗಿ ಪರಿವರ್ತಿಸುವ ಪ್ರಕ್ರಿಯೆ ಆಗಿದೆ. ಹಾಗಾದರೆ ಥೈರಾಯ್ಡ್ ಏಕೆ ತೂಕ ಹೆಚ್ಚಳವಾಗಲು ಕಾರಣವೇನು? ಎಂಬ ಪ್ರಶ್ನೆ ಉದ್ಭವವಾಗುತ್ತದೆ. ಇದು ನಿಮ್ಮ ಚಯಾಪಚಯ ಕ್ರಿಯೆಯ ಕಾರಣದಿಂದ, ನಿಮ್ಮ ದೇಹದ ಉಷ್ಣತೆ ಮತ್ತು ನೀವು ಕ್ಯಾಲೊರಿ ಸುಡುವ ದರದ ಮೇಲೆ ಪರಿಣಾಮ ಬೀರುತ್ತದೆ.

    ನಿಧಾನ ಚಯಾಪಚಯ ಕ್ರಿಯೆ

    NCBI ಪ್ರಕಾರ, ನಿಧಾನ ಚಯಾಪಚಯ ಕ್ರಿಯೆಯು ಅನೇಕ ಆರೋಗ್ಯ ಅಪಾಯ ಉಂಟು ಮಾಡುತ್ತದೆ. ಇದು ಆಯಾಸಕ್ಕೆ ಕಾರಣವಾಗುತ್ತದೆ. ಮತ್ತು ನಿಮ್ಮ ರಕ್ತದ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಿಸಬಹುದು. ಇದು ನಿಮಗೆ ತೂಕ ಇಳಿಸಲು ತೊಂದರೆ ಉಂಟು ಮಾಡುತ್ತದೆ. ಹಾಗಾಗಿ ಹೈಪೋಥೈರಾಯ್ಡಿಸಮ್ನೊಂದಿಗೆ ನಿಮ್ಮ ತೂಕ ಕಾಪಾಡಿಕೊಳ್ಳಲು ನಿಮಗೆ ಕಷ್ಟವಾದರೆ, ಮಧ್ಯಮ ಅಥವಾ ಹೆಚ್ಚಿನ ತೀವ್ರತೆಯ ಕಾರ್ಡಿಯೋ ಮಾಡಿ.

    ವೇಗದ ನಡಿಗೆ, ಓಟ, ಹೈಕಿಂಗ್ ಮತ್ತು ರೋಯಿಂಗ್‌ನಂತಹ ವ್ಯಾಯಾಮ ಮಾಡಿ. ನಿಮ್ಮ ಆಹಾರದಲ್ಲಿ ಸಾಕಷ್ಟು ಜೀವಸತ್ವ ಮತ್ತು ಖನಿಜಾಂಶವಿರುವ ಪದಾರ್ಥ ಸೇವನೆ ಮಾಡಿ. ಇದು ತೂಕ ಇಳಿಸಲು ಸಹಾಯ ಮಾಡುತ್ತದೆ.

    ಇದನ್ನೂ ಓದಿ: ಈಸ್ಟ್ರೊಜೆನ್ ಹಾರ್ಮೋನ್ ಮಟ್ಟ ಹೆಚ್ಚಾದರೆ ಯಾವ ಸಮಸ್ಯೆ ಉಂಟಾಗುತ್ತದೆ?

    ಫೈಬರ್- ಥೈರಾಯ್ಡ್ ಬೊಜ್ಜು ಕಡಿಮೆ ಮಾಡುತ್ತದೆ

    ಫೈಬರ್ ಭರಿತ ಪದಾರ್ಥಗಳು ಜೀರ್ಣಕ್ರಿಯೆ ಸುಧಾರಿಸಲು ಸಹಾಯ ಮಾಡುತ್ತದೆ. ಮತ್ತು ಕೆಟ್ಟ ವಿಷವನ್ನು ನಿವಾರಣೆ ಮಾಡುತ್ತದೆ. ಇದು ಕ್ಯಾಲೋರಿ ಸೇವನೆ ನಿಯಂತ್ರಿಸಲು ಸಹಾಯ ಮಾಡುತ್ತದೆ. ಮತ್ತು ಅಂತಿಮವಾಗಿ ತೂಕ ನಷ್ಟಕ್ಕೆ ಕಾರಣವಾಗುತ್ತದೆ. ದೈನಂದಿನ ಆಹಾರದಲ್ಲಿ ಫೈಬರ್ ಭರಿತ ಹಣ್ಣು, ತರಕಾರಿ ಮತ್ತು ಕಾಳು ಸೇರಿಸಿ ಸೇವನೆ ಮಾಡಿ.

    ಅಯೋಡಿನ್ ಯುಕ್ತ ಆಹಾರ ಸೇವನೆ

    ತಜ್ಞರ ಪ್ರಕಾರ, ಅಯೋಡಿನ್ ಅತ್ಯಗತ್ಯ ಖನಿಜ. ಇದು ದೇಹದಲ್ಲಿ ಥೈರಾಯ್ಡ್ ಕಾರ್ಯವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಹೀಗಾಗಿ ನೀವು ಹೈಪೋಥೈರಾಯ್ಡಿಸಮ್ ಹೊಂದಿದ್ದರೆ, ಮೀನು, ಉಪ್ಪು, ಡೈರಿ ಮತ್ತು ಮೊಟ್ಟೆಗಳ ಮೂಲಕ ನಿಮ್ಮ ಅಯೋಡಿನ್ ಸೇವನೆ ಹೆಚ್ಚಿಸಿ. ಇದು ದೇಹದಲ್ಲಿ TSH ಉತ್ಪಾದನೆ ಹೆಚ್ಚಿಸುತ್ತದೆ. ಜೊತೆಗೆ ಥೈರಾಯ್ಡ್ ಅಡ್ಡ ಪರಿಣಾಮ ಕಡಿಮೆ ಮಾಡುತ್ತದೆ.

    ಗ್ಲುಟನ್ ಮುಕ್ತ ಆಹಾರ ಸೇವನೆ ಮಾಡಿ  

    ಗ್ಲುಟನ್ ಮುಕ್ತ ಉತ್ಪನ್ನಗಳ ನಿಯಮಿತ ಸೇವನೆಯು ಹೈಪೋಥೈರಾಯ್ಡಿಸಮ್ ಅನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಮತ್ತು ಪರಿಣಾಮಕಾರಿ ತೂಕ ನಷ್ಟಕ್ಕೆ ಕಾರಣವಾಗುತ್ತದೆ. ಗ್ಲುಟನ್ ಸೆನ್ಸಿಟಿವಿಟಿ ಮತ್ತು ಹ್ಯಾಶಿಮೊಟೊಸ್ ಥೈರಾಯ್ಡಿಟಿಸ್ ನಡುವೆ ಸಂಬಂಧವಿದೆ. ಇದು ಥೈರಾಯ್ಡ್ ನಿಷ್ಕ್ರಿಯತೆಗೆ ಕಾರಣವಾಗುತ್ತದೆ ಎಂದು ಹೇಳಲಾಗಿದೆ.

    ಸೆಲೆನಿಯಮ್ ಸಮೃದ್ಧ ಆಹಾರ ಸೇವಿಸಿ

    ನಿಮ್ಮ ಆಹಾರದಲ್ಲಿ ಬ್ರೆಜಿಲ್ ಬೀಜ, ಸಾರ್ಡೀನ್ಗಳು, ಮೊಟ್ಟೆ ಮತ್ತು ದ್ವಿದಳ ಧಾನ್ಯಗಳಂತಹ ಸೆಲೆನಿಯಮ್-ಭರಿತ ಆಹಾರ ಸೇರಿಸಿ. ಬಹಳಷ್ಟು TSH ಹಾರ್ಮೋನ್ ನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ. ಆಹಾರದಲ್ಲಿರುವ ಸೆಲೆನಿಯಮ್ ಸ್ವತಂತ್ರ ರಾಡಿಕಲ್ಗಳನ್ನು ತೊಡೆದು ಹಾಕಲು ಮತ್ತು ದೇಹದ ಪ್ರತಿರಕ್ಷಣಾ ಕಾರ್ಯ ಬಲಪಡಿಸುತ್ತದೆ.

    ಇದನ್ನೂ ಓದಿ: ಕೂದಲ ಆರೈಕೆಗೆ ಕಡಲೆ ಹಿಟ್ಟಿನ ಹೇರ್ ಮಾಸ್ಕ್; ತಯಾರಿಸೋದು ಹೇಗೆ?

    ದೇಹವನ್ನು ಹೈಡ್ರೀಕರಿಸಿ

    ತೂಕ ನಷ್ಟಕ್ಕೆ ಜಲಸಂಚಯನ ಮುಖ್ಯ. ಇದು ಜೀರ್ಣಕ್ರಿಯೆ ಸುಧಾರಿಸುತ್ತದೆ. ದೇಹದಿಂದ ವಿಷ ಹೊರ ಹಾಕುತ್ತದೆ. ಇದು ಹಸಿವನ್ನು ಕಡಿಮೆ ಮಾಡುತ್ತದೆ. ಇದು ದೀರ್ಘಾವಧಿಯಲ್ಲಿ ತೂಕ ನಷ್ಟಕ್ಕೆ ಸಹಕಾರಿ.
    Published by:renukadariyannavar
    First published: