• Home
  • »
  • News
  • »
  • lifestyle
  • »
  • Weight Gain: ತೂಕ ಹೆಚ್ಚಾಗ್ಬೇಕು ಅಂತ ಸಿಕ್ಕಿದ್ದೆಲ್ಲಾ ತಿಂತೀರಾ? ಅದರ ಬದಲು ಈ ಆರೋಗ್ಯಕರ ಆಹಾರ ಸೇವಿಸಿ

Weight Gain: ತೂಕ ಹೆಚ್ಚಾಗ್ಬೇಕು ಅಂತ ಸಿಕ್ಕಿದ್ದೆಲ್ಲಾ ತಿಂತೀರಾ? ಅದರ ಬದಲು ಈ ಆರೋಗ್ಯಕರ ಆಹಾರ ಸೇವಿಸಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ತುಂಬಾ ತೆಳ್ಳಗಿರುವವರು ತೂಕ ಹೆಚ್ಚಳಕ್ಕೆ ಅನಾರೋಗ್ಯಕರ ಪದಾರ್ಥ ಸೇವನೆಗೆ ಮುಂದಾಗುತ್ತಾರೆ. ಆದರೆ ಇದು ತಪ್ಪು ವಿಧಾನ. ತೂಕ ಹೆಚ್ಚಳಕ್ಕೆ ಕರಿದ, ಹುರಿದ ಮತ್ತು ಜಂಕ್ ಫುಡ್ ಸೇವನೆ ಅನಾರೋಗ್ಯಕರ ಕೊಬ್ಬು ಹೆಚ್ಚಿಸುತ್ತದೆ. ಅದರ ಬದಲು ಆರೋಗ್ಯಕರ ಆಹಾರ ಸೇವಿಸಿ...

  • Share this:

    ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಬೊಜ್ಜು ಸಮಸ್ಯೆ (Obesity Problem) ತುಂಬಾ ಜನರನ್ನು (Many People) ಕಾಡುತ್ತಿದೆ. ಹೆಚ್ಚಿನ ಜನರು ಸ್ಥೂಲಕಾಯ ತೊಂದರೆಗೆ ಒಳಗಾಗಿದ್ದಾರೆ. ಇದಕ್ಕೆ ತಿನ್ನುವ, ಕುಡಿಯುವ ಮತ್ತು ಜೀವನಶೈಲಿ (Lifestyle) ಅಂಶ ಕಾರಣವಾಗಿರಬಹುದು. ತೂಕ ಇಳಿಸಿ ಫಿಟ್ (Fit) ಆಗಿರಲು ತುಂಬಾ ಜನ ಎಷ್ಟೆಲ್ಲಾ ಪ್ರಯತ್ನ ಮಾಡ್ತಾರೆ. ಹಾಗೆಯೇ ಇನ್ನು ಕೆಲವು ಜನರು ತೂಕ ಹೆಚ್ಚಿಸಲು (Weight Gain) ಸಾಕಷ್ಟು ಕಷ್ಟ ಪಡುತ್ತಾರೆ. ಏನೆಲ್ಲಾ ತಿಂದರೂ ಹೆಚ್ಚದ ತೂಕದಿಂದ ತುಂಬಾ ಟೆನ್ಶನ್ ಮಾಡಿಕೊಳ್ತಾರೆ. ಎತ್ತರಕ್ಕೆ ಸರಿಯಾದ ತೂಕ ಹೊಂದುವುದು ಆಕಲರ್ಷಕವಾಗಿಸುತ್ತದೆ. ಕೆಲವರು ತುಂಬಾ ತೆಳ್ಳಗಿರುತ್ತಾರೆ. ತಮ್ಮ ತೂಕ ಹೆಚ್ಚಿಸಲು ಪ್ರಯತ್ನ ಮಾಡ್ತಿರ್ತಾರೆ.


    ತೂಕ ಹೆಚ್ಚಳಕ್ಕೆ ಏನು ಮಾಡಬೇಕು?


    ತುಂಬಾ ತೆಳ್ಳಗಿರುವವರು ತೂಕ ಹೆಚ್ಚಳಕ್ಕೆ ಅನಾರೋಗ್ಯಕರ ಪದಾರ್ಥ ಸೇವನೆಗೆ ಮುಂದಾಗುತ್ತಾರೆ. ಆದರೆ ಇದು ತಪ್ಪು ವಿಧಾನ. ತೂಕ ಹೆಚ್ಚಳಕ್ಕೆ ಕರಿದ, ಹುರಿದ ಮತ್ತು ಜಂಕ್ ಫುಡ್ ಸೇವನೆ ಅನಾರೋಗ್ಯಕರ ಕೊಬ್ಬು ಹೆಚ್ಚಿಸುತ್ತದೆ. ಹಾಗಾಗಿ ಇದು ತೂಕ ಹೆಚ್ಚಿಸುತ್ತದೆ.


    ಆದರೆ ನಿಮ್ಮನ್ನು ಆರೋಗ್ಯ ಸಮಸ್ಯೆಗೆ ಗುರಿಯಾಗಿಸುತ್ತದೆ. ಹಾಗಾಗಿ ನೀವು ತೂಕ ಹೆಚ್ಚಳಕ್ಕೆ ಕರಿದ ಪದಾರ್ಥಗಳ ಬದಲು ಉತ್ತಮ ಮತ್ತು ಆರೋಗ್ಯ ವೃದ್ಧಿಸುವ ಪದಾರ್ಥ ಸೇವನೆ ಮಾಡಿ ತೂಕ ಹೆಚ್ಚಿಸಿಕೊಳ್ಳುವುದು ತುಂಬಾ ಮುಖ್ಯ. ಹಾಲು, ಆವಕಾಡೊ, ಬೀಜಗಳು


    ಇದನ್ನೂ ಓದಿ: ಸಸ್ಯಾಹಾರಿಗಳಿಗೆ ಪ್ರೋಟೀನ್ ಕೊರತೆ ಕಾಡುತ್ತದೆ ಎಂಬ ಯೋಚನೆಯೇ? ಈ ಪದಾರ್ಥಗಳಲ್ಲಿದೆ ಸಮೃದ್ಧ ಪೋಷಕಾಂಶ!


    ಅಥವಾ ಸಾಲ್ಮನ್‌ಗಳಂತಹ ಕೆಲವು ಆರೋಗ್ಯಕರ ಆಹಾರಗಳ ಸೇವನೆ ನೀವು ತೂಕ ಹೆಚ್ಚಳದ ಗುರಿ ತಲುಪಲು ಸಹಕಾರಿ. ಈ ವಸ್ತುಗಳು ಆರೋಗ್ಯಕರ ಕೊಬ್ಬು, ಸಾಕಷ್ಟು ಪ್ರೋಟೀನ್ ಅನ್ನು ಹೊಂದಿದ್ದು, ನಿಮ್ಮ ಆರೋಗ್ಯದ ಜೊತೆಗೆ ಉತ್ತಮ ಕೊಬ್ಬು ಹೆಚ್ಚುವಂತೆ ಮಾಡುತ್ತದೆ.


    ತೂಕ ಹೆಚ್ಚಿಸುವ ಮಾರ್ಗಗಳು?


    ಪೌಷ್ಟಿಕತಜ್ಞೆ ಮತ್ತು ಡಯೆಟಿಷಿಯನ್ ಶಿಖಾ ಅಗರ್ವಾಲ್ ಶರ್ಮಾ, ತೂಕ ಹೆಚ್ಚಳಕ್ಕೆ ಕೆಲವು ಹೆಚ್ಚಿನ ಪ್ರೋಟೀನ್ ಮತ್ತು ಆರೋಗ್ಯಕರ ಕೊಬ್ಬು ಭರಿತ ಆಹಾರಗಳ ಬಗ್ಗೆ ಹೇಳಿದ್ದಾರೆ. ಇದರ ನಿಯಮಿತ ಸೇವನೆಯು ಸ್ನಾಯುವಿನ ದ್ರವ್ಯರಾಶಿ ನಿರ್ಮಿಸಲು ಮತ್ತು ದೌರ್ಬಲ್ಯ ನಿವಾರಿಸಲು ಸಹಾಯ ಮಾಡುತ್ತದೆ.


    ಪೂರ್ಣ ಕೆನೆಸಹಿತ ಹಾಲು ಸೇವನೆ


    ಹಾಲು ಪ್ರೋಟೀನ್, ಕಾರ್ಬೋಹೈಡ್ರೇಟ್ಗಳು ಮತ್ತು ಕೊಬ್ಬಿನ ಜೊತೆಗೆ ಕ್ಯಾಲ್ಸಿಯಂ ಮತ್ತು ಇತರ ವಿಟಮಿನ್ಗಳು, ಕ್ಯಾಸೀನ್ ಮತ್ತು ಪ್ರೋಟೀನ್ಗಳಿಂದ ತುಂಬಿದೆ. ಅಕಾಡೆಮಿಯಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ,


    ತಾಲೀಮು ನಂತರ ಸೋಯಾ-ಪ್ರೋಟೀನ್ ಪಾನೀಯಕ್ಕಿಂತ ಕೆನೆ ಸಹಿತ ಹಾಲನ್ನು ಕುಡಿಯುವುದು ಸ್ನಾಯುಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ನಿರ್ಮಿಸಲು ಸಹಕಾರಿ. ಕೆಲಸ ಮಾಡದಿದ್ದರೆ, ನೀವು ಪ್ರತಿದಿನ ಒಂದು ಅಥವಾ ಎರಡು ಲೋಟ ಹಾಲು ಕುಡಿಯಬೇಕು.


    ಚಾಕೊಲೇಟ್ ಬಾಳೆ ಕಾಯಿ ಶೇಕ್


    ಚಾಕೊಲೇಟ್ ಬಾಳೆ ಕಾಯಿ ಶೇಕ್ ಇದನ್ನು ಮಾಡಲು, 2 ಕಪ್ ಹಾಲು, 1 ಬಾಳೆಹಣ್ಣು, 1 ಸ್ಕೂಪ್ ಚಾಕೊಲೇಟ್ ಹಾಲೊಡಕು ಪ್ರೋಟೀನ್ ಮತ್ತು 1 ಟೀಸ್ಪೂನ್ ಕಡಲೆಕಾಯಿ ಅಥವಾ ಇತರ ಕಾಯಿ ಬೆಣ್ಣೆ ಮಿಶ್ರಣ ಮಾಡಿ. ಈಗ ಶೇಕ್ ಸಿದ್ಧವಾಗಿದೆ. ನೀವು ಅದನ್ನು ಬೆಳಿಗ್ಗೆ ಅಥವಾ ಸಂಜೆ ಕುಡಿಯಬಹುದು.


    ಆವಕಾಡೊ


    ಆವಕಾಡೊ ಆರೋಗ್ಯಕರ ಕೊಬ್ಬಿನ ರಾಜ. ಇದು ಹೆಚ್ಚಿನ ಕ್ಯಾಲೊರಿ ಹೊಂದಿಲ್ಲ. ಆದರೆ ತೂಕ ಹೆಚ್ಚಿಸಲು ಇದು ಅತ್ಯುತ್ತಮ ಆಹಾರಗಳಲ್ಲಿ ಇದು ಒಂದಾಗಿದೆ. ಒಂದು ಆವಕಾಡೊ 332 ಕ್ಯಾಲೋರಿ, 29 ಗ್ರಾಂ ಕೊಬ್ಬು ಮತ್ತು 17 ಗ್ರಾಂ ಫೈಬರ್ ಹೊಂದಿದೆ. ಇದು ವಿಟಮಿನ್‌ಗಳಲ್ಲಿ ಸಮೃದ್ಧವಾಗಿದೆ. ತೂಕ ಹೆಚ್ಚಿಸಲು ಸಹಾಯ ಮಾಡುವ ಸಾಮರ್ಥ್ಯ ಹೊಂದಿದೆ.


    ಕೆಂಪು ಮಾಂಸ


    ಕೆಂಪು ಮಾಂಸವು ತೂಕ ಹೆಚ್ಚಿಸಲು ಮತ್ತು ಸ್ನಾಯುವಿನ ಬೆಳವಣಿಗೆಗೆ ಸಹಕಾರಿ. ಇದು ಪ್ರೋಟೀನ್ ಮತ್ತು ಕೊಬ್ಬು ಎರಡನ್ನೂ ಒಳಗೊಂಡಿದೆ. ತೂಕ ಹೆಚ್ಚಿಸಲು ಸಹಕಾರಿ. ಹೆಚ್ಚು ಮಾಂಸ ತಿನ್ನುವುದನ್ನು ತಪ್ಪಿಸಿ.


    ಸೋಯಾಬೀನ್


    ಸೋಯಾಬೀನ್ ವಿಟಮಿನ್ ಕೆ, ಕಬ್ಬಿಣ ಮತ್ತು ರಂಜಕದ ಉತ್ತಮ ಮೂಲ. ಕಬ್ಬಿಣವು ರಕ್ತ ಮತ್ತು ಸ್ನಾಯುಗಳ ಮೂಲಕ ಆಮ್ಲಜನಕ ಸಾಗಿಸುತ್ತದೆ. ಒಂದು ಕಪ್ ಬೇಯಿಸಿದ ಸೋಯಾಬೀನ್ 298 ಕ್ಯಾಲೋರಿ, 29 ಗ್ರಾಂ ಪ್ರೋಟೀನ್, 17 ಗ್ರಾಂ ಕಾರ್ಬೋಹೈಡ್ರೇಟ್ ಮತ್ತು 15 ಗ್ರಾಂ ಕೊಬ್ಬನ್ನು ಹೊಂದಿದೆ. ಉತ್ಕರ್ಷಣ ನಿರೋಧಕ ಹೊಂದಿದೆ.


    ಇದನ್ನೂ ಓದಿ: ರಕ್ತದೊತ್ತಡ ಸುಧಾರಿಸುವ ಖರ್ಜೂರದ ಪ್ರಯೋಜನ ತಿಳಿದರೆ ಇಂದೇ ಸೇವಿಸಲು ಪ್ರಾರಂಭಿಸುವಿರಿ


    ಸಾಲ್ಮನ್ ಮತ್ತು ಟ್ಯೂನ


    ಸಾಲ್ಮನ್ ಮತ್ತು ಟ್ಯೂನ ಮೀನುಗಳು ಸ್ನಾಯುಗಳನ್ನು ನಿರ್ಮಿಸಲು ಸಹಕಾರಿ. ಒಮೆಗಾ -3 ಕೊಬ್ಬಿನಾಮ್ಲದ ಅಂಶ ದೇಹಕ್ಕೆ ಪ್ರಯೋಜನಕಾರಿ.

    Published by:renukadariyannavar
    First published: