Weight loss: ತೂಕ ಕಡಿಮೆ ಮಾಡುವಾಗ ಅಪ್ಪಿತಪ್ಪಿಯೂ ಈ ತಪ್ಪು ಮಾಡ್ಬೇಡಿ, ಇದೇ ನಿಮ್ಮ ತೂಕ ಹೆಚ್ಚಲು ಕಾರಣವಂತೆ!

ಆಹಾರದಷ್ಟೇ ನಿದ್ರೆಯು ಆರೋಗ್ಯಕರ ಜೀವನಕ್ಕೆ ಅತ್ಯಗತ್ಯ. ಹೀಗಾಗಿ ಕಡಿಮೆ ನಿದ್ರೆ ಅಂತಿಮವಾಗಿ ತೂಕ ಹೆಚ್ಚಾಗಲು ಕಾರಣವಾಗಬಹುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಈಗಿನ ಜನರೇಷನ್ (Generation) ಅದೇನೆ ಆದರೂ ಸಹಿಸಿಕೊಳ್ತಾರೆ ಆದ್ರೆ ದಪ್ಪ ಆಗೋದನ್ನ ಮಾತ್ರ ಸಹಿಸಲ್ಲ. ಬೊಜ್ಜಿಲ್ಲದ ಹೊಟ್ಟೆ, ಸಿಕ್ಸ್ ಪ್ಯಾಕ್ (Six-pack) , ಬಿಗಿಯಾದ ಕಟ್ಟು ಮಸ್ತಿನ ತೋಳು ಅಂತೆಲ್ಲಾ ಫುಲ್ ಫಿಟ್ ಅಂಡ್ ಫೈನ್ (Fit and Fine) ಆಗಿರಲು ಎಲ್ಲರೂ ಇಷ್ಟ ಪಡ್ತಾರೆ. ಅದಕ್ಕೋಸ್ಕರ ಜಿಮ್, ವರ್ಕೌಟ್, ಡಯಟ್ ಅಂತ ಸರ್ಕಸ್ ಮಾಡ್ತಾರೆ. ಆದರೆ ಈ ಹೆಲ್ತಿ ಡಯಟ್ (Healthy Diet) ಕೂಡ ನಮ್ಮ ಅಧಿಕ ತೂಕ, ಹೊಟ್ಟೆ ಬೊಜ್ಜಿಗೆ ಕೆಲವೊಮ್ಮೆ ಕಾರಣವಾಗಿ ಬಿಡುತ್ತೆ ಅಂದ್ರೆ ನಂಬ್ತೀರಾ..?

ಹೌದು ತುಂಬಾ ಡಯಟ್, ಒಳ್ಳೆಯ ಆಹಾರ ಮಾತ್ರ ತಿನ್ನುತ್ತೇನೆ, ಮೊಟ್ಟೆ ಸೇವಿಸ್ತೀನೆ, ಕೊಬ್ಬಿನ ಆಹಾರಗಳನ್ನು ತಿನ್ನೋದೆ ಇಲ್ಲ, ವ್ಯಾಯಾಮ ಮಾಡ್ತಿನಿ ಆದ್ರೂ ನನ್ನ ತೂಕ ಕರಗೋದೆ ಇಲ್ಲಾ ಅಂತ ಕೆಲವರು ಹೇಳ್ತಿರ್ತಾರೆ. ಹೌದಲ್ಲ ಇಷ್ಟೆಲ್ಲಾ ಉತ್ತಮ ಕ್ರಮಗಳ ಅಭ್ಯಾಸವಿದ್ರೆ ಬೊಜ್ಜು ಕರಗಬೇಕಲ್ವಾ..?.

ನಾವು ಮಾಡುವ ಹೆಲ್ತಿ ಡಯಟ್ ಕೂಡ ಕೆಲವೊಮ್ಮೆ ನಮ್ಮ ಬೊಜ್ಜಿಗೆ ಕಾರಣವಾಗುತ್ತೆ. ಏಕೆಂದರೆ ಅಲ್ಲಿ ನಾವು ಸಣ್ಣ ಪುಟ್ಟ ತಪ್ಪುಗಳನ್ನು ಮಾಡಿಬಿಡುತ್ತೇವೆ. ಅವುಗಳನ್ನು ನಾವು ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ. ಈ ಚಿಕ್ಕ ತಪ್ಪುಗಳು ತೂಕ ಇಳಿಯಲು ಇಲ್ಲಾ ಬೊಜ್ಜು ಕರಗಿಸಲು ಸಹಕರಿಸುವುದಿಲ್ಲ. ಆಹಾರದಿಂದ ಹಿಡಿದು, ನಿದ್ದೆ ಮಾಡುವ ಮತ್ತು ವ್ಯಾಯಾಮ ಮಾಡುವ ವಿಧಾನದವರೆಗೆ ಕೆಲವು ತಪ್ಪು ಮಾಡುತ್ತೇವೆ. ಆರೋಗ್ಯಕರ ಜೀವನ ಶೈಲಿಯಲ್ಲಿ ಯಾವೆಲ್ಲಾ ತಪ್ಪು ವಿಧಾನಗಳು ನಮ್ಮ ತೂಕ ಹೆಚ್ಚಿಸುತ್ತವೆ ತಿಳಿಯೋಣ.

ಇದನ್ನೂ ಓದಿ: Health tips: ಪ್ರತಿದಿನ ಮೊಟ್ಟೆ ಸೇವಿಸಿದರೆ ಮಧುಮೇಹ ಬರುತ್ತಾ? ಏನ್​ ಹೇಳುತ್ತೆ ಸಂಶೋಧನೆ?

1) ನಿದ್ರೆ ಬಿಟ್ಟು ವ್ಯಾಯಾಮ

ಜಿಮ್ ಹೋಗಲು ಇಲ್ಲ ಮನೆಯಲ್ಲಿಯೇ ವ್ಯಾಯಾಮ ಮಾಡಲು ನಸುಕಿನ ವೇಳೆಯಲ್ಲಿ ಎದ್ದು ಬಿಡುತ್ತೇವೆ. ಬೆಳಗ್ಗೆ ಚಯಾಪಚಯ ಕ್ರಿಯೆ ಚೆನ್ನಾಗಿರುತ್ತದೆ ಎಂದು ಫಿಟ್ನೆಸ್ ತಜ್ಞರು ಕೂಡ ಇದನ್ನೇ ಶಿಫಾರಸು ಮಾಡುತ್ತಾರೆ. ಆದ್ರೆ ಕೆಲಸದ ಒತ್ತಡದಿಂದಾಗಿ ತಡವಾಗಿ ಮಲಗುವುದು ಮತ್ತೆ ಪುನ: ಬೇಗನೆ ಏಳುವುದರಿಂದ ಸರಿಯಾದ ನಿದ್ರೆ ಆಗುವುದಿಲ್ಲ. ಆಹಾರದಷ್ಟೇ ನಿದ್ರೆಯು ಆರೋಗ್ಯಕರ ಜೀವನಕ್ಕೆ ಅತ್ಯಗತ್ಯ. ಹೀಗಾಗಿ ಕಡಿಮೆ ನಿದ್ರೆ ಅಂತಿಮವಾಗಿ ತೂಕ ಹೆಚ್ಚಾಗಲು ಕಾರಣವಾಗಬಹುದು. ವೇಕ್ ಫಾರೆಸ್ಟ್ ಸಂಶೋಧನೆಯ ಪ್ರಕಾರ, ಕಡಿಮೆ ಗಂಟೆಗಳ ಕಾಲ ಮಲಗುವ ಜನರು ಹೊಟ್ಟೆಯ ಕೊಬ್ಬನ್ನು ಪಡೆಯುವ ಸಾಧ್ಯತೆ ಹೆಚ್ಚಿದೆ ಎಂದಿದೆ.

2) ಕಡಿಮೆ-ಕೊಬ್ಬಿನ, ಸಕ್ಕರೆಯಿಲ್ಲದ ಆಹಾರಗಳಿಗೆ ಬದಲಾವಣೆ

ಬೇಗ ಬೇಗ ತೂಕ ಕಳೆದುಕೊಳ್ಳುವ ಆಸೆಯಿಂದ ನೆಚ್ಚಿನ ಕುಕೀಸ್, ಚಿಪ್ಸ್, ಸಕ್ಕರೆಯಿಲ್ಲದ ಆಹಾರಗಳನ್ನು ದೂರ ಮಾಡುತ್ತಾರೆ. ಸಕ್ಕರೆಯಿಲ್ಲದ ಜ್ಯೂಸ್ ಮತ್ತು ಬೇಯಿಸಿದ ಚಿಪ್ಸ್ ಮತ್ತು ಮೊಸರುಗಳಂತಹ ಕಡಿಮೆ-ಕೊಬ್ಬಿನ ಆಹಾರಗಳಿಗೆ ಬದಲಾಗುತ್ತಾರೆ. ಈ ಆಹಾರಗಳು ಸಂಸ್ಕರಿಸಿದ ಸಕ್ಕರೆಯಿಂದ ಮುಕ್ತವಾಗಿರಬಹುದು, ಆದಾಗ್ಯೂ, ಅವು ಕೃತಕ ಸಿಹಿ ಹೊಂದಿರಬಹುದು, ಮತ್ತು ಹೆಚ್ಚಿನ ಕ್ಯಾಲೋರಿಗಳನ್ನು ಹೊಂದಿದ್ದು, ಕಾಲಾನಂತರದಲ್ಲಿ ತೂಕವನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ: Health tips: ಗಂಟಲು ನೋವಿಗೆ ಮನೆಯಲ್ಲಿಯೇ ಇದೆ ಮದ್ದು

3 ) ತುಂಬಾ ನಿದ್ರೆ

ಯಾವುದೇ ಆಗಲಿ ಹೆಚ್ಚು ಆಗಬಾರದು, ತುಂಬಾ ಕಡಿಮೆಯೂ ಆಗಬಾರದು. ಆರೋಗ್ಯ ತಜ್ಞರು ವಯಸ್ಕರಿಗೆ 7-8 ಗಂಟೆಗಳ ನಿದ್ರೆಯನ್ನು ಶಿಫಾರಸು ಮಾಡುತ್ತವೆ, ಆದರೂ, ನೀವು ಹೆಚ್ಚು ನಿದ್ರೆ ಮಾಡುತ್ತಿದ್ದರೆ ಹೃದ್ರೋಗ, ಮಧುಮೇಹ ಮತ್ತು ಸ್ಥೂಲಕಾಯತೆಯ ಅಪಾಯವನ್ನು ಹೆಚ್ಚಿಸುತ್ತದೆ. ತೂಕ ನಿಯಂತ್ರಣಕ್ಕೆ 6 - 7 ಗಂಟೆಗಳ ನಿದ್ದೆ ಅತ್ಯುತ್ತಮವೆಂದು ಪರಿಗಣಿಸಲಾಗುತ್ತದೆ.

4) ಮೊಟ್ಟೆಯ ಹಳದಿ ಭಾಗತೆಗೆಯುವುದು

ಮೊಟ್ಟೆಗಳು ಅತ್ಯಂತ ಜನಪ್ರಿಯ ಉಪಹಾರಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ತೂಕ ನಷ್ಟಕ್ಕೆ ಬೇಯಿಸಿದ ಮೊಟ್ಟೆಗಳನ್ನು ಶಿಫಾರಸು ಮಾಡಲಾಗುತ್ತದೆ. ಸಾಮಾನ್ಯವಾಗಿ ಮೊಟ್ಟೆ ಹಳದಿ ಭಾಗವನ್ನು ಡಯಟ್ ಮಾಡುವವರು ಸೇವಿಸುವುದಿಲ್ಲ.ಹಳದಿ ಭಾಗದಲ್ಲಿ ಶುದ್ಧ ಕೊಲೆಸ್ಟ್ರಾಲ್ ಇದ್ದು ವಿಟಮಿನ್ ಮತ್ತು ಕೊಬ್ಬನ್ನು ಕರಗಿಸುವ ಕೋಲೀನ್ ಅಂಶ ಇರುತ್ತದೆ. ಇದನ್ನು ಬೇರ್ಪಡಿಸಿ ತಿನ್ನುವುದು ತೂಕ ಹೆಚ್ಚಾಗಲು ಕಾರಣವಾಗಬಹುದು.

5) ಪ್ರತಿದಿನ ವ್ಯಾಯಾಮ

ಪ್ರತಿದಿನದ ವ್ಯಾಯಾಮವನ್ನು ನಮ್ಮ ದೇಹ ಸಹಿಸಿಕೊಳ್ಳುವುದಿಲ್ಲ. ಅಧಿಕ ವ್ಯಾಯಾಮದಿಂದ ಚೇತರಿಸಿಕೊಳ್ಳಲು ವರ್ಕೌಟ್ ಮಧ್ಯೆ ಎರಡು ದಿನಗಳ ಅಂತರ ಪಡೆಯಲು ತಜ್ಞರು ಶಿಫಾರಸು ಮಾಡುತ್ತಾರೆ. ಹೀಗೆ ಆರೋಗ್ಯಕರ ಜೀವನದಲ್ಲೂ ಕೆಲವು ಗೊತ್ತಿಲ್ಲದ ಸಣ್ಣ ವಿಷಯಗಳು ಹಾನಿ ಉಂಟುಮಾಡುತ್ತವೆ. ತಜ್ಞರ ಸಲಹೆ ಜೊತೆಗೆ ಉತ್ತಮ ಡಯಟ್ ಸೂಕ್ತ.
Published by:vanithasanjevani vanithasanjevani
First published: