• Home
 • »
 • News
 • »
 • lifestyle
 • »
 • ABCG Juice: ವಾರಕ್ಕೊಮ್ಮೆ ಎಬಿಸಿಜಿ ಜ್ಯೂಸ್ ಕುಡಿದರೆ ಎಷ್ಟೆಲ್ಲಾ ಪ್ರಯೋಜನ ಸಿಗುತ್ತೆ ನೋಡಿ!

ABCG Juice: ವಾರಕ್ಕೊಮ್ಮೆ ಎಬಿಸಿಜಿ ಜ್ಯೂಸ್ ಕುಡಿದರೆ ಎಷ್ಟೆಲ್ಲಾ ಪ್ರಯೋಜನ ಸಿಗುತ್ತೆ ನೋಡಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಡಾ. ಶ್ರೀರಾಮ್ ನೆನೆ ಎಬಿಸಿಜಿ ಜ್ಯೂಸ್ ಜೊತೆಗಿನ ಫೋಟೋವನ್ನು ಹಂಚಿಕೊಂಡಿದ್ದಾರೆ. ಎಬಿಸಿಜಿ ಜ್ಯೂಸ್‌ ಹೆಚ್ಚು ಆರೋಗ್ಯ ವರ್ಧಕ. ಇದರ ಪ್ರಯೋಜನಗಳ ಬಗ್ಗೆ ಕೆಲವರು ತಿಳಿದಿದ್ದಾರೆ. ಇನ್ನು ಕೆಲವರಿಗೆ ಗೊತ್ತಿಲ್ಲ. ನಿಮಗೆ ಯಾವ ಜ್ಯೂಸ್ ಕುಡಿಯಬೇಕು ಎಂದು ಗೊತ್ತಾಗದೇ ಹೋದರೆ ಮನೆಯಲ್ಲೇ ಎಬಿಸಿಜಿ ಜ್ಯೂಸ್ ತಯಾರಿಸಿ ಸೇವಿಸಿ. ಇದು ನಿಮಗೆ ಸರಿಯಾದ ಆಯ್ಕೆ.

ಮುಂದೆ ಓದಿ ...
 • Share this:

  ಬಾಲಿವುಡ್ (Bollywood) ಚಿತ್ರರಂಗದಲ್ಲಿ ಮೇರು ನಟಿಯಾಗಿ ಗುರುತಿಸಿಕೊಂಡಿದ್ದಾರೆ ಮಾಧುರಿ ದೀಕ್ಷಿತ್ (Madhuri Dixit). ತಮ್ಮ ನಟನೆ ಹಾಗೂ ಸೌಂದರ್ಯದಿಂದ ಸಾಖಷ್ಟು ಖ್ಯಾತಿ ಪಡೆದಿದ್ದಾರೆ. ನಟಿ ಮಾಧುರಿ ದೀಕ್ಷಿತ್ ಅವರ ಪತಿ ಡಾ. ಶ್ರೀರಾಮ್ ನೆನೆ (Dr. Shriram Nene), ಹೆಸರಾಂತ ಹೃದಯ ರಕ್ತನಾಳದ ಶಸ್ತ್ರಚಿಕಿತ್ಸಕರು ಆಗಿದ್ದಾರೆ. ಇತ್ತೀಚೆಗೆ ಡಾ. ಶ್ರೀರಾಮ್ ನೆನೆ ತಮ್ಮ ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ಎಬಿಸಿಜಿ ಜ್ಯೂಸ್ (ABCG Juice) ಬಗ್ಗೆ ಮಾಹಿತಿ ಮತ್ತು ಫೋಟೋ ಶೇರ್ ಮಾಡಿದ್ದಾರೆ. ಹೃದಯ ರಕ್ತನಾಳದ ಶಸ್ತ್ರಚಿಕಿತ್ಸಕರು ಆಗಿರುವ ಡಾ. ಶ್ರೀರಾಮ್ ನೆನೆ, ಎಬಿಸಿಜಿ ಜ್ಯೂಸ್ ಹೇಗೆ ಆರೋಗ್ಯ ವೃದ್ಧಿಗೆ ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.


  ಎಬಿಸಿಜಿ ಜ್ಯೂಸ್ ಮತ್ತು ಆರೋಗ್ಯ ಪ್ರಯೋಜನಗಳು


  ಡಾ. ಶ್ರೀರಾಮ್ ನೆನೆ, ಎಬಿಸಿಜಿ ಜ್ಯೂಸ್ ಜೊತೆಗಿನ ಫೋಟೋವನ್ನು ಹಂಚಿಕೊಂಡಿದ್ದಾರೆ. ತಮ್ಮ ಪೋಸ್ಟ್‌ ನ ಶೀರ್ಷಿಕೆಯಲ್ಲಿ 'ಎಬಿಸಿಜಿ ಜ್ಯೂಸ್‌ ನೊಂದಿಗೆ ಭಾನುವಾರದ ಪ್ರಾರಂಭ ವಿನೋದಮಯ ಆಗಿರುತ್ತದೆ’ ಎಂದು ಬರೆದಿದ್ದಾರೆ. ಈ ಜ್ಯೂಸ್ ನ್ನು ಸೇಬು, ಬೀಟ್‌ ರೂಟ್, ಕ್ಯಾರೆಟ್ ಮತ್ತು ಶುಂಠಿಯಿಂದ ತಯಾರಿಸಲಾಗುತ್ತದೆ.


  ಈ ನಾಲ್ಕು ಪದಾರ್ಥಗಳು ಸಾಕಷ್ಟು ಪೋಷಕಾಂಶ ಮತ್ತು ಹೆಚ್ಚಿನ ಜೀವಸತ್ವಗಳಿಂದ ಸಮೃದ್ಧವಾಗಿದೆ. ಜನರು ಯಾವಾಗಲೂ ತಮ್ಮಿಷ್ಟದ ಜ್ಯೂಸ್ ಕುಡಿಯುತ್ತಾರೆ. ಆದರೆ ಎಬಿಸಿಜಿ ಜ್ಯೂಸ್‌ ಹೆಚ್ಚು ಆರೋಗ್ಯ ವರ್ಧಕ.
  ಇದರ ಪ್ರಯೋಜನಗಳ ಬಗ್ಗೆ ಕೆಲವರು ತಿಳಿದಿದ್ದಾರೆ. ಇನ್ನು ಕೆಲವರಿಗೆ ಗೊತ್ತಿಲ್ಲ. ನಿಮಗೆ ಯಾವ ಜ್ಯೂಸ್ ಕುಡಿಯಬೇಕು ಎಂದು ಗೊತ್ತಾಗದೇ ಹೋದರೆ ಮನೆಯಲ್ಲೇ ಎಬಿಸಿಜಿ ಜ್ಯೂಸ್ ತಯಾರಿಸಿ ಸೇವಿಸಿ. ಇದು ನಿಮಗೆ ಸರಿಯಾದ ಆಯ್ಕೆ.


  ಹೃದಯರಕ್ತನಾಳದ ತಜ್ಞರಾಗಿರುವ ಡಾ. ಶ್ರೀರಾಮ್ ನೆನೆ, ಸ್ವತಃ ಎಬಿಸಿಜಿ ಜ್ಯೂಸ್ ಕುಡಿಯುತ್ತಾರೆ. ಆದರೆ, ಯಾರಿಗಾದರೂ ಯಾವುದೇ ವೈದ್ಯಕೀಯ ಸ್ಥಿತಿ ಹೊಂದಿದ್ದರೆ ಎಬಿಸಿಜಿ ಜ್ಯೂಸ್ ಕುಡಿಯುವ ಮೊದಲು ವೈದ್ಯರ ಸಲಹೆ ಪಡೆಯಿರಿ ಎಂದು ಹೇಳಿದ್ದಾರೆ.


  ಎಬಿಸಿಜಿ ಜ್ಯೂಸ್ ಎಂದರೇನು?


  ಎಬಿಸಿಜಿ ರಸವನ್ನು ತರಕಾರಿ, ಹಣ್ಣು ಮತ್ತು ಮಸಾಲೆಗಳಿಂದ ತಯಾರು ಮಾಡಲಾಗುತ್ತದೆ. ಎಬಿಸಿಜಿ ಅಂದ್ರೆ ಆಪಲ್, ಬೀಟ್ರೂಟ್, ಕ್ಯಾರೆಟ್, ಶುಂಠಿ. ಈ ರಸವು ಸತು, ಪೊಟ್ಯಾಸಿಯಮ್, ಮ್ಯಾಂಗನೀಸ್, ವಿಟಮಿನ್ ಎ ಸೇರಿದಂತೆ ಅನೇಕ ಅಗತ್ಯ ಪೋಷಕಾಂಶಗಳನ್ನು ದೇಹಕ್ಕೆ ಒದಗಿಸುತ್ತದೆ. ಖಾಲಿ ಹೊಟ್ಟೆಯಲ್ಲಿ ಈ ರಸವನ್ನು ಸೇವಿಸುವುದು ಉತ್ತಮ ಎಂದು ಹೇಳಲಾಗಿದೆ.


  ಎಬಿಸಿಜಿ ಜ್ಯೂಸ್ ಮಾಡಲು ಬೇಕಾಗುವ ಪದಾರ್ಥಗಳು


  300 ಗ್ರಾಂ ಬೀಟ್ರೂಟ್, 300 ಗ್ರಾಂ ಕ್ಯಾರೆಟ್, 100 ಗ್ರಾಂ ಸೇಬು, ಅರ್ಧ ಇಂಚು ಶುಂಠಿ, ರುಚಿಗೆ ತಕ್ಕಷ್ಟು ಉಪ್ಪು.


  ಮೊದಲು ಬೀಟ್ರೂಟ್, ಕ್ಯಾರೆಟ್, ಸೇಬು, ಶುಂಠಿಯನ್ನು ಕತ್ತರಿಸಿ ಅವುಗಳನ್ನು ಮಿಕ್ಸಿಯಲ್ಲಿ ರುಬ್ಬಿ, ರಸವನ್ನು ಹೊರ ತೆಗೆಯಿರಿ. ಈಗ ಅದನ್ನು ಚೆನ್ನಾಗಿ ಮಿಶ್ರಣ ಮಾಡಿ ಮತ್ತು ಫಿಲ್ಟರ್ ಮಾಡಿ. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಕುಡಿಯಿರಿ.


  ಸೇಬು ಜ್ಯೂಸ್ ಪ್ರಯೋಜನ


  ಎನ್‌ಸಿಬಿಐನಲ್ಲಿ ಪ್ರಕಟವಾದ ವರದಿ ಪ್ರಕಾರ, ಸೇಬು ತಿಂದರೆ ಮಧುಮೇಹ, ಹೃದ್ರೋಗ, ಅಸ್ತಮಾ ಮತ್ತು ಕ್ಯಾನ್ಸರ್ ಅನ್ನು ತಡೆಯುವ ಗುಣ ಹೊಂದಿವೆ. ಇದರಲ್ಲಿ ಆಂಟಿ-ಆಕ್ಸಿಡೆಂಟ್ ಪರಿಣಾಮಗಳಿವೆ. ಆಕ್ಸಿಡೇಟಿವ್ ಒತ್ತಡ ಕಡಿಮೆ ಮಾಡುತ್ತದೆ. ದೇಹವನ್ನು ಆರೋಗ್ಯಕರವಾಗಿಡುತ್ತದೆ.


  ಬೀಟ್ರೂಟ್ ರಸ ಪ್ರಯೋಜನ


  ಬೀಟ್ರೂಟ್ ಶಕ್ತಿಯುತ ಉತ್ಕರ್ಷಣ ನಿರೋಧಕ ಹೊಂದಿದೆ. ಇದು ಉರಿಯೂತದ ವಿರುದ್ಧ ಹೋರಾಡಲು ಮತ್ತು ಕ್ಯಾನ್ಸರ್ ಮತ್ತು ಇತರ ಕಾಯಿಲೆಗಳಿಂದ ರಕ್ಷಿಸುತ್ತದೆ. ಬೀಟ್ರೂಟ್ ವ್ಯಾಯಾಮದ ಸಮಯದಲ್ಲಿ ಹೃದಯ ಮತ್ತು ಶ್ವಾಸಕೋಶ, ಸ್ನಾಯುಗಳಿಗೆ ರಕ್ತದ ಹರಿವನ್ನು ಹೆಚ್ಚಿಸುತ್ತದೆ.


  ಕ್ಯಾರೆಟ್ ಜೀರ್ಣಾಂಗ ವ್ಯವಸ್ಥೆಗೆ ಸಹಕಾರಿ


  ಕ್ಯಾರೆಟ್ ಮಧುಮೇಹ, ಕ್ಯಾನ್ಸರ್, ಹೃದಯ ಕಾಯಿಲೆ ತಡೆಗೆ ಪ್ರಯೋಜನಕಾರಿ. ಇದರ ರಸವು ಜೀರ್ಣಾಂಗ ವ್ಯವಸ್ಥೆ ಬಲಪಡಿಸುತ್ತದೆ. ಕ್ಯಾರೊಟಿನಾಯ್ಡ್‌ ಗಳು ಮತ್ತು ಆಹಾರದ ಫೈಬರ್‌ ಜೈವಿಕ ಸಕ್ರಿಯ ಸಂಯುಕ್ತಗಳು ದೇಹಕ್ಕೆ ತುಂಬಾ ಪ್ರಯೋಜನಕಾರಿ.


  ಇದನ್ನೂ ಓದಿ: ಮದುವೆ ಮೊದಲು ತೂಕ ಇಳಿಸಲು ಈ ಪಾನೀಯ ಪರಿಣಾಮಕಾರಿ ಅಂತಾರೆ ಆಯುರ್ವೇದ ತಜ್ಞರು!


  ಶುಂಠಿ ಪ್ರಯೋಜನಗಳು


  ಶುಂಠಿಯು ಆಯುರ್ವೇದದ ಅತ್ಯಂತ ಹಳೆಯ ಗಿಡಮೂಲಿಕೆಗಳಲ್ಲಿ ಒಂದಾಗಿದೆ. ಕರುಳು ಮತ್ತು ಜೀರ್ಣಾಂಗ ವ್ಯವಸ್ಥೆಗೆ ಔಷಧವಾಗಿದೆ.

  Published by:renukadariyannavar
  First published: