Weekly Horoscope: ವೃಶ್ಚಿಕ ರಾಶಿಯವರಿಗೆ ಈ ವಾರ ಅದೃಷ್ಟದ ವಾರವಂತೆ; ಉಳಿದ ರಾಶಿಯವರಿಗೆ ಯಾವ ಫಲ ಇರಲಿದೆ?

ಈ ವಾರದ ದ್ವಾದಶ ರಾಶಿ ದಿನ ಭವಿಷ್ಯ ಕುರಿತು ಕೆ.ಎಲ್ ವಿದ್ಯಾಶಂಕರ ಸೋಮಯಾಜಿ ತಿಳಿಸಿದ್ದಾರೆ. ಇವರ ಸಂಪರ್ಕಕ್ಕೆ : 9449186129

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:
  ಮೇಷ
  ಸರಕಾರಿ ಅಧಿಕಾರಿಗಳಿಗೆ ಕೆಲಸದ ಒತ್ತಡ ಕಡಿಮೆಯಾಗಲಿದೆ. ಮಾನಸಿಕ ನೆಮ್ಮದಿಗಾಗಿ ಧಾರ್ಮಿಕ ಕಾರ್ಯಗಳನ್ನು ಅಥವಾ ಪುಣ್ಯಕ್ಷೇತ್ರಗಳ ದರ್ಶನ ಮಾಡಲಿರುವಿರಿ. ನಿಮ್ಮ ಸಲಹೆ ಸೂಚನೆಗಳನ್ನು ಹೆಚ್ಚು ಚರ್ಚಿಸದೆ ಮೇಲಧಿಕಾರಿಗಳು ನಿಮ್ಮ ನಿರ್ಧಾರಗಳನ್ನು ಒಪ್ಪಿಕೊಳ್ಳುವರು. ಕಾರ್ಮಿಕರ ಬೇಡಿಕೆಗಳನ್ನು ಪರಿಶೀಲಿಸುವಿರಿ. ನಿರುದ್ಯೋಗಿಗಳಿಗೆ ಉತ್ತಮ ಕೆಲಸ ದೊರೆಯಲಿದೆ. ಹಳೆಯ ಬಾಕಿ ಮೊತ್ತ ನಿಮ್ಮ ಕೈ ಸೇರಲಿದೆ. ಹಿರಿಯರ ಆಶೀರ್ವಾದ ನಿಮ್ಮ ಪಾಲಿಗಿದೆ. ಶ್ರೀ ಮೂಕಂಬಿಕೆಯ ದರ್ಶನದಿಂದ ಕೆಲಸ ಕಾರ್ಯಗಳು ಸುಗಮವಾಗುವುದು.

  ವೃಷಭ
  ವಾರದ ಆರಂಭದ ದಿನಗಳಲ್ಲಿ ಪ್ರಾರಂಭಿಸಿದ ಕಾರ್ಯಗಳು ಸೂಕ್ತ ಸಮಯದಲ್ಲಿ ಪೂರ್ಣಗೊಳ್ಳುವುದು. ಹಣದ ವಿಚಾರದಲ್ಲಿ ಮಿತ ವ್ಯಯಿಗಳಾಗುವಿರಿ. ಸಾಮಾಜಿಕ ವಲಯದಲ್ಲಿ ನಿಮ್ಮ ಸ್ಥಾನಮಾನಗಳು ಹೆಚ್ಚಲಿದೆ. ದೂರ ಸಂಚಾರದ ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯವಾಗಿರಲಿ. ವ್ಯಾಪಾರದಲ್ಲಿ ನಿರೀಕ್ಷಿತ ಲಾಭ ಕಂಡುಕೊಳ್ಳುವಿರಿ. ಮಕ್ಕಳಿಗಾಗಿ ಹೊಸ ವಸ್ತ್ರ ಅಥವ ವಾಹನವನ್ನು ಕೊಳ್ಳುವಿರಿ. ಹೊಸ ಸಾಮಾಜಿಕ ಕಾರ್ಯಕ್ರಮದಲ್ಲಿ ಮಕ್ಕಳನ್ನು ಭಾಗವಹಿಸಲು ಕಳುಹಿಸುವಿರಿ. ಶ್ರೀ ಮಹಾವಿಷ್ಣುವನ್ನು ಸ್ತುತಿಸಿದಲ್ಲಿ ಮನೆಯಲ್ಲಿ ಆರೋಗ್ಯ, ಐಶ್ವರ್ಯಗಳ ವೃದ್ಧಿಯಾಗುವುದು.

  ಮಿಥುನ
  ಸ್ವಯಂ ಸಾಮರ್ಥ್ಯದಿಂದ ಅವಕಾಶಗಳನ್ನು ಪಡೆದುಕೊಳ್ಳುವಿರಿ. ಜೀವನದ ಹಾದಿ ಬದಲಾಗುವುದನ್ನು ಕಾಣುವಿರಿ. ವ್ಯಾಪಾರದಲ್ಲಿ ಸಾಧಾರಣ ಲಾಭ. ನೆರೆಯವರ ಸಹಾಯ ಸಹಕಾರ ಕೇಳುವ ಸಂದರ್ಭ ಬರಲಿದೆ. ಆಪ್ತರೊಬ್ಬರ ನೆರವು ದೊರೆತು ಮಗನ ವಿದ್ಯಾಭ್ಯಾಸಕ್ಕೆ ಸಹಾಯವಾಗಲಿದೆ. ಆರೋಗ್ಯದ ಬಗ್ಗೆ ಗಮನ ಕೊಡಿ. ಹೊಸ ಮನೆಯ ಕೆಲಸಗಳು ಮುಗಿದು ಹಿರಿಯರ ಸಲಹೆಯಂತೆಯೇ ಗೃಹ ಪ್ರವೇಶದ ದಿನ ನಿಗದಿಗೊಳಿಸುವಿರಿ. ಗೆಳೆಯರೊಂದಿಗೆ ಪ್ರವಾಸ ನಿಶ್ಚಿತವಾಗುವುದು. ಹೊಲದ ಕೆಲಸಗಳು ಸರಾಗವಾಗುವುವು. ಶ್ರೀ ಲಕ್ಷ್ಮೀ ನರಸಿಂಹ ದೇವರನ್ನು ಪೂಜಿಸಿ.

  ಕರ್ಕಾಟಕ
  ಆಫೀಸಿನ ಕೆಲಸಗಳಲ್ಲಿ ಕೆಲವೊಂದು ವಿಷಯಗಳನ್ನು ಪರಾಮರ್ಶಿಸಲೇಬೇಕಾದ ಸಮಯ ಬಂದಿದೆ. ಅದರಿಂದಾಗುವ ಲಾಭ ನಷ್ಟಗಳ ಬಗ್ಗೆ ಪುನರಾವಲೋಕನೆ ಅಗತ್ಯವೆನಿಸುವುದು. ನಿಮ್ಮ ಮುಂದಿನ ಗುರಿ ಸಾಧನೆಗೆ ಇದು ಅತಿ ಮುಖ್ಯ. ಧಾರ್ಮಿಕ ಕಾರ್ಯಕ್ರಮಗಳಿಗೆ ಭೇಟಿ ನೀಡುವಿರಿ. ರಕ್ತದೊತ್ತಡವನ್ನು ನಿಯಂತ್ರಿಸಿಕೊಳ್ಳುವಿರಿ. ವಾರಾಂತ್ಯದಲ್ಲಿ ಬಿರುಸಿನ ಚಟುವಟಿಕೆಗಳಿಂದ ಬಿಡುವು ಮಾಡಿಕೊಂಡು ಮನೆಯವರೊಡನೆ ಕಾಲ ಕಳೆಯುವಿರಿ. ರಾಜಕೀಯದಲ್ಲಿನ ಬದಲಾವಣೆಯ ಲಾಭ ಪಡೆಯುವಿರಿ. ಈಶ್ವರನ ದೇವಸ್ಥಾನಕ್ಕೆ ಮನೆಯವರೊಡನೆ ಹೋಗಿ ಪ್ರಾರ್ಥನೆ ಸಲ್ಲಿಸಿ.

  ಸಿಂಹ
  ಈ ವಾರ ಮನೆಯಲ್ಲಿ ಶುಭ ಸಮಾರಂಭವು ಸುಸೂತ್ರವಾಗಿ ನಡೆದುದಕ್ಕೆ ಸಮಾಧಾನಗೊಳ್ಳುವಿರಿ. ವ್ಯಾಪಾರ ವ್ಯವಹಾರಗಳನ್ನು ಸರಿ ವ್ಯವಸ್ಥೆಗೆ ತರುವಿರಿ. ವಿದೇಶಿ ಬಂಡವಾಳಗಳಿಂದ ಲಾಭ ಗಳಿಸುವ ಅವಕಾಶ ಬರಲಿದೆ. ಸಂಸ್ಥೆಯೊಂದರ ಸಲಹೆಗಾರರಾಗಿ ನೇಮಕಗೊಳ್ಳುವಿರಿ. ಅರ್ಹರಿಗೆ ಅಧಿಕಾರದಲ್ಲಿ ಬಡ್ತಿ ದೊರೆತು ಸಂತಸ. ಸ್ವತ್ತು ಮಾರಾಟ ವಿಚಾರದಲ್ಲಿ ಸೋದರರ ಅಭಿಪ್ರಾಯವನ್ನು ಪಡೆದು ಮುಂದುವರಿಯುವಿರಿ. ಹೆಚ್ಚಿನ ವಿದ್ಯಾಭ್ಯಾಸಕ್ಕೆ ವಿದೇಶಕ್ಕೆ ತೆರಳುವ ಯೋಗವಿದಿ. ಆರೋಗ್ಯದಲ್ಲಿ ಉತ್ತಮ ಸುಧಾರಣೆ ತೋರುವುದು.

  ಕನ್ಯಾ
  ಭಾಷಾ ಅಧ್ಯಾಪಕರಿಗೆ ಮತ್ತು ನಾಟಕ ಕಲಾವಿದವರಿಗೆ ಹೆಚ್ಚಿನ ಮನ್ನಣೆ ಸಿಗುವುದು. ಮಕ್ಕಳ ಜೊತೆ ಸಮಾರಂಭಗಳಲ್ಲಿ ಭಾಗವಹಿಸುವಿರಿ. ನಿಮ್ಮ ಆಲೋಚನೆಯಂತೆ ನೂತನ ಮನೆ ಕೊಳ್ಳಲು ಹಣದ ವ್ಯವಸ್ಥೆಯಾಗಲಿದೆ. ಕುಶಲ ಕರ್ಮಿಗಳಿಗೆ ಪ್ರದರ್ಶನ ಮಾರಾಟಗಳಿಂದ ಅಧಿಕ ಆದಾಯ. ಬರಬೇಕಾಗಿದ್ದ ಹಣಕ್ಕೆ ಇರುವ ಅಡಚಣೆಗಳನ್ನು ನಿವಾರಿಸಿಕೊಳ್ಳುವ ಬಗ್ಗೆ ಮಾರ್ಗದರ್ಶಕರನ್ನು ಬೇಟಿಮಾಡಿ. ಅವರ ಮಾರ್ಗಸೂಚಿಯಂತೆ ಕಳೆದು ಹೋಗಿದ್ದ ವಸ್ತುಗಳೂ ಸಹ ಪತ್ತೆಯಾಗುವುವು. ಶ್ರೀ ಸಿದ್ಧಿ ವಿನಾಯಕನನ್ನು ಸ್ತುತಿಸುವುದರಿಂದ ಮಂಗಳವಾಗುವುದು.

  ತುಲಾ
  ಅಪ್ತರ ಮನೆಯಲ್ಲಿನ ಸಮಾರಂಭಗಳಿಗಾಗಿ ನಿಮ್ಮ ಜವಾಬ್ದಾರಿ, ಓಡಾಟ ಹೆಚ್ಚಲಿದೆ. ವ್ಯವಹಾರದಲ್ಲಿ ಉತ್ತಮ ಲಾಭವಿರುವುದು. ರೇಷ್ಮೇ ಬೆಳೆಗಾರರಿಗೆ ಉತ್ತಮ ಆದಾಯ. ಷೇರು ಮಾರಾಟದಿಂದ ಅಧಿಕ ಲಾಭ. ಮನೆಯಲ್ಲಿನ ಬಿಗು ವಾತಾವರಣ ವಾರದ ಆರಂಭದಲ್ಲೇ ತಿಳಿಯಾಗಿ ಮನಸ್ಸಿಗೆ ಸಮಾಧಾನ. ಮಗಳ ಮದುವೆ ವಿಚಾರದ ವಿಷಯವನ್ನು ಮನೆಯವರ ಜೊತೆ ಪ್ರಸ್ತಾಪಿಸುವಿರಿ. ವಾರಾಂತ್ಯದೊಳಗೆ ಗುತ್ತಿಗೆ ಉದ್ಯೋಗ ಲಭಿಸುವ ಸಾಧ್ಯತೆಗಳು. ವಾಹನದಲ್ಲಿ ಚಲಿಸುವಾಗ ಜಾಗ್ರತೆ ಇರಲಿ.

  ವೃಶ್ಚಿಕ
  ಈ ವಾರ ನಿಮಗೆ ಅದೃಷ್ಟದ ವಾರವೆನಿಸಲಿದೆ. ಅಧಿಕ ತಿರುಗಾಟಗಳಿದ್ದರೂ ಆದಾಯಕ್ಕೆ ಕೊರತೆ ಇರುವುದಿಲ್ಲ. ನಾನಾ ಮೂಲಗಳಿಂದ ಧನ ಸಂಪಾದನೆಯಾಗುವ ಸಮಯ. ಪಾಲುದಾರಿಕೆಯಲ್ಲಿ ಒಮ್ಮತ ಮೂಡದೆ ಹಿಂದೆ ಸರಿಯುವಂತೆ ಆಗಲಿದೆ. ಸ್ವಂತ ಉದ್ಯೋಗಸ್ಥರಿಗೆ ಬಿಡುವಿಲ್ಲದೆ ಕೆಲಸಗಳು ಪೂರ್ತಿಗೊಳಿಸಬೇಕಾದ ಸಂದರ್ಭ. ಸಿದ್ಧ ಉಡುಪುಗಳ ರಫ್ತು ವ್ಯಾಪಾರದಿಂದ ಹೇರಳ ಲಾಭ. ಷೇರು ವ್ಯವಹಾರದಲ್ಲಿ ಹೆಚ್ಚಿನ ಕಮಿಷನ್ ಲಭ್ಯ. ಮದುವೆಯ ತಯಾರಿಯನ್ನು ನಡೆಸುವಿರಿ.

  ಧನು
  ನೀವು ಬಹಳ ದಿನದಿಂದಲೂ ಆರಂಭಿಸಬೇಕೆಂದುಕೊಂಡಿದ್ದ ನೂತನ ಕಾರ್ಖಾನೆಯನ್ನು ಆರಂಭಿಸಲು ಮುಂಚಿತವಾದ ಕೆಲಸಗಳು ನೆಡೆಸಲು ಈ ವಾರದಲ್ಲಿ ಸಮಯಾವಕಾಶ ಒದಗಿ ಬರುವುದು. ನಿಮ್ಮ ಮಿತ್ರರೊಬ್ಬರು ಎಲ್ಲ ವಿಧದಲ್ಲಿಯೂ ನಿಮಗೆ ಸಹಾಯವಾಗಲಿದ್ದಾರೆ. ಕೋರ್ಟು ವ್ಯವಹಾರಗಳಲ್ಲಿ ಜಯ ಸಿದ್ಧಿಸಲಿದೆ. ವಿವಾದಾಸ್ಪದ ವಿಷಯಗಳ ಕಡೆ ಗಮನ ಕೊಡಬೇಡಿ. ಮನೆಯಲ್ಲಿ ಹಣಕಾಸಿನ ವಿಷಯದಲ್ಲಿ ಚರ್ಚೆ ನಡೆಸುವಿರಿ. ವ್ಯವಹಾರದಲ್ಲಿನ ಹೊಸ ವಿಷಯಗಳನ್ನು ತಿಳಿದುಕೊಂಡು ಅದರಂತೆಯೇ ನಡೆದು ಹೆಚ್ಚು ಆದಾಯವನ್ನು ಹೊಂದುವಿರಿ.

  ಮಕರ
  ಈ ವಾರ ಸಹನೆ, ತಾಳ್ಮೆ ಇವುಗಳು ನಿಮ್ಮ ಮಂತ್ರಗಳಾಗಿರಲಿ. ಹೊಸ ಯೋಜನೆಗಳನ್ನು ಆರಂಭಿಸುವ ಮುನ್ನ ದೀರ್ಘಾಲೋಚನೆ ಮತ್ತು ಸಲಹೆ ಪಡೆದುಕೊಳ್ಳುವುದನ್ನು ಅವಶ್ಯ ಪಾಲಿಸಿ. ಇದರಿಂದಾಗಿ ನಿಮ್ಮ ಭವಿಷ್ಯದ ದಿನಗಳು ಹರ್ಷದಾಯಕವಾಗುವುದು. ದೈವ ಬಲ ನಿಮಗಿದೆ. ಈ ವಾರದಲ್ಲಿ ಒದಗಿಬರುವ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಿ. ಮಕ್ಕಳಿಂದ ಸುಖ ನೆಮ್ಮದಿ ದೊರೆಯಲಿದೆ. ವಿದೇಶದಿಂದ ಒಂದು ಒಳ್ಳೆ ಸುದ್ದಿ ಕೇಳುವಿರಿ. ಮನೋಬಲದಿಂದ ನಿಮ್ಮೆಲ್ಲಾ ಕಾರ್ಯಗಳನ್ನು ಈ ವಾರದಲ್ಲಿ ನೆರವೇರಿಸಿಕೊಳ್ಳುವಿರಿ.

  ಕುಂಭ
  ವ್ಯವಹಾರದಲ್ಲಿ ನೀವು ಈಗ ತೆಗೆದುಕೊಂಡಿದ್ದ ನಿರ್ಧಾರಗಳು ಸರಿಯಾಗಿದೆಯೇ ಎಂದು ಇನ್ನೊಮ್ಮೆ ಪರಾಮರ್ಶಿಸಿಕೊಳ್ಳಿ. ಅದರ ಫಲಗಳು ಕೂಡ ನಿರೀಕ್ಷಿಸಿದಂತೆಯೇ ಬರುವುದು. ವಿದೇಶ ಪ್ರವಾಸ ಯೋಜನೆಗಳು ಸಹ ನಿಮಗೆ ಲಾಭವನ್ನೇ ನೀಡಲಿದೆ. ನಿಮ್ಮ ಆರ್ಥಿಕ ಸ್ಥಿತಿ ಇನ್ನಷ್ಟು ಉತ್ತಮ ಗೊಳಿಸಿಕೊಳ್ಳುವಂಥಹ ಅವಕಾಶಗಳು ಬರಲಿದೆ. ವಿದ್ಯಾರ್ಥಿಗಳು ಹೆಚ್ಚಿನ ವಿದ್ಯಾಭ್ಯಾಸದಿಂದ ಪ್ರಗತಿ ಸಾಧಿಸಬಹುದು. ಇಂಜಿನೀಯರಿಂಗ್ ಹಾಗೂ ಮೆಡಿಕಲ್ ವಿದ್ಯಾರ್ಥಿಗಳಿಗೆ ಹೆಚ್ಚಿನ ಶ್ರಮದ ಅಗತ್ಯ.

  ಮೀನ
  ಈ ವಾರ ಕೊಡು-ಕೊಳ್ಳುವಿಕೆಯ ವ್ಯವಹಾರದಿಂದ ಅಧಿಕ ಲಾಭ ಬರಲಿದೆ. ಸಗಟು ವ್ಯಾಪಾರಿಗಳಿಗೆ ಹೇರಳ ವ್ಯಾಪಾರ. ಅಂತರಾಜ್ಯದ ಅತಿ ಮುಖ್ಯವಾದ ವ್ಯಕ್ತಿಯೊಬ್ಬರ ಪರಿಚಯ ನಿಮ್ಮ ವ್ಯಾಪಾರದ ಅಭಿವೃದ್ಧಿಗೆ ಕಾರಣವಾಗುವುದು. ರಾಜಕಾರಣಿಗಳು ಚುನಾವಣಾ ದೃಷ್ಟಿಯಿಂದ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವರು. ಬಹುಕಾಲ ನೆನಪಿನಲ್ಲಿ ಉಳಿಯುವಂತಹ ಒಂದು ಮಧುರ ಘಟನೆ ಈ ವಾರ ನಿಮ್ಮ ಮನೆಯಲ್ಲಿ ನಡೆಯಲಿದೆ. ಶ್ರೀ ಮಂಜುನಾಥನ ದರ್ಶನ ಮತ್ತು ಅನುಗ್ರಹ ಪಡೆದುಕೊಳ್ಳಿ.
  Published by:Latha CG
  First published: