Weekly Horoscope: ಈ ವಾರವಿಡೀ ನಿಮ್ಮ ರಾಶಿಗಳ ಭವಿಷ್ಯ ಹೇಗಿದೆ? ಯಾರಿಗೆ ಲಾಭ, ಯಾರಿಗೆ ನಷ್ಟ? ಇಲ್ಲಿದೆ ವಾರ ಭವಿಷ್ಯ

Weekly Horoscope: ಈ ವಾರ ಕೆಲ ರಾಶಿಯವರಿಗೆ ಧನಲಾಭವಿದ್ದರೆ, ಇನ್ನು ಕೆಲ ರಾಶಿಯವರು ಎಚ್ಚರಿಕೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಉತ್ತಮ ಎನ್ನುತ್ತಾರೆ ಜ್ಯೋತಿಷ್ಯ ತಜ್ಞರು. ಇಡೀ ವಾರದ ರಾಶಿ ಭವಿಷ್ಯ ತಿಳಿದರೆ ಅದಕ್ಕೆ ತಕ್ಕಂತೆ ಯೋಜನೆಗಳನ್ನು ರೂಪಿಸಿಕೊಂಡು ಮುನ್ನಡೆಯುವುದು ಸುಲಭ. ಈ ಕುರಿತು ಹೆಚ್ಚಿನ ಸಂಪರ್ಕಕ್ಕಾಗಿ: ಕೆ.ಎಲ್ ವಿದ್ಯಾಶಂಕರ ಸೋಮಯಾಜಿ, +91 9449186129

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಮೇಷ

  ಮನೆಯಲ್ಲಿ ಸುಖ-ಶಾಂತಿ ಸಮೃದ್ಧಿಯಾಗಿದ್ದರೂ ಮನದಲ್ಲಿ ಭಯದ ಭೀತಿ ತೋರಿಬಂದೀತು. ಆಲಸ್ಯಕರವಾದ ದೇಹ ಸ್ಥಿತಿಯಿಂದ ಕೆಲಸ ಕಾರ್ಯ ವಿಳಂಬಗತಿಯಲ್ಲಿ ಸಾಗಲಿದೆ. ಗೃಹೋಪಕರಣಗಳ ಖರೀದಿ ನಡೆಸುವಿರಿ. ಮನೆಯಲ್ಲಿ ದೇವತಾಕಾರ್ಯ ಜರುಗಲಿದೆ. ಮನೆಯವರು ನಿಮ್ಮ ನೆರವಿಗೆ ನಿಲ್ಲಲಿದ್ದಾರೆ. ರಾಜಕೀಯ ವ್ಯಕ್ತಿಗಳೊಂದಿಗೆ ಒಡನಾಟ ಬೆಳೆಸಿಕೊಳ್ಳುವಿರಿ. ಅಧಿಕಾರಿ ವರ್ಗದವರಿಗೆ ರಾಜಕಾರಣಿಗಳ ಕಿರುಕುಳ ಹೆಚ್ಚಾಗುತ್ತದೆ. ದೈವಾನುಗ್ರಹ ನಿಮ್ಮ ಮೇಲಿರುವುದರಿಂದ ಹಿಡಿದ ಕೆಲಸಗಳು ದಡ ಸೇರುವುದು.

  ವೃಷಭ

  ಈ ವಾರ ಹೆಚ್ಚು ಆತ್ಮವಿಶ್ವಾಸದಿಂದ ಹೊಸ ಕೆಲಸಗಳನ್ನು ಆರಂಭಿಸುವಿರಿ. ನಿಮ್ಮ ಸಂಕಲ್ಪಿತ ಯೋಜನೆಗಳಿಗೆ ನಿರ್ಧಿಷ್ಟ ರೂಪ ದೊರಕುವುದು. ಮಕ್ಕಳ ಆರೋಗ್ಯದ ಬಗೆಗೆ ಹೆಚ್ಚಿನ ಕಾಳಜಿ ವಹಿಸಿ. ಹೊಸ ಸ್ಥಳದಲ್ಲಿ ವ್ಯಾಪಾರ ಆರಂಭಿಸುವಿರಿ. ಕುಟುಂಬದಲ್ಲಿ ಸೌಹಾರ್ದ ವಾತಾವರಣ ವಿರುವುದು. ಆರ್ಥಿಕವಾಗಿ ಸಾಲ ತೀರಿದ ನೆಮ್ಮದಿಯ ಜೊತೆಯಲ್ಲಿ ಕಾಲಕಳೆಯುವ ಸಮಯವಾಗಿದೆ. ಅರೆ ಸರಕಾರೀ ಇಲಾಖೆಯಲ್ಲಿ ಕೆಲಸ ಮಾಡುವವರಿಗೆ ಇನ್ನಷ್ಟು ಹೆಚ್ಚಿನ ಅನುಕೂಲಗಲಾಗುವ ಸಾಧ್ಯತೆ ಇದೆ. ಗೃಹ ನಿರ್ಮಾಣ ಅಥವಾ ನಿವೇಶನ ಖರೀದಿಯ ಕೆಲಸ ಆರಂಭಿಸಲು ಒಳ್ಳೆಯ ಕಾಲವಾಗಿದೆ.

  ಮಿಥುನ

  ಈ ವಾರದಲ್ಲಿ ಹೆಚ್ಚಿನ ಆದಾಯವಿರುವುದರಿಂದ ಮನಸ್ಸಿಗೆ ಸ್ವಲ ನೆಮ್ಮದಿ ತೋರುವುದು. ಕ್ರಯ ವಿಕ್ರಯಗಳಿಗೆ ಇದು ಉತ್ತಮ ಕಾಲ. ಸಾಧ್ಯವಾದಷ್ಷು ಸಮಾಧಾನ ತಾಳ್ಮೆಯಿಂದ ಮುಂದುವರದಲ್ಲಿ ಮಾನಸಿಕ ನೆಮ್ಮದಿ ಕಾಣುವಿರಿ. ಆರ್ಥಿಕವೃದ್ಧಿ, ಆರೋಗ್ಯವೃದ್ಧಿ, ಅಕಸ್ಮಿಕ ಧನ ಯೋಗ ಈ ವಾರದಲ್ಲಿದೆ. ಕೋರ್ಟುಕಛೇರಿ ವ್ಯವಹಾರದಲ್ಲಿ ಜಯ ಸಿಗುವ ಬಗ್ಗೆ ಅಧಿಕವಾದ ಪ್ರಯತ್ನವಿರಲಿ. ನೌಕರಿಯಲ್ಲಿ ಭಡ್ತಿ ಸಂಭವ. ಆಸ್ತಿ ಖರೀದಿ ವಿಚಾರ ಪ್ರಸ್ತಾಪವಾಗಲಿದೆ. ವಿದ್ಯಾಭ್ಯಾಸದಲ್ಲಿ ಮಕ್ಕಳ ಅಸಡ್ಡೆಯು ವಿದ್ಯಾಪ್ರಗತಿಗೆ ಮಾರಕವಾಗಲಿದೆ.

  ಕರ್ಕಾಟಕ

  ಅಧಿಕಾರದಲ್ಲಿ ಸ್ಥಾನಮಾನ ಪಡೆಯಲು ದೇವರ ಸೇವೆಯಂತಹ ಧಾರ್ಮಿಕ ಕಾರ್ಯಗಳನ್ನು ನಡೆಸುವುದು ಒಳ್ಳೆಯದು. ಭೂ ಸಂಬಂಧ ಕೆಲಸ ಕಾರ್ಯಗಳು ಹಾಗೂ ಸರಕಾರದ ಕೆಲಸಗಳು ನಿಧಾನವಾದರು ಮೇಲಧಿಕಾರಿಗಳ ಸಹಾಯದಿಂದ ಸಂಪನ್ನಗೊಳ್ಳುವುದು. ಹೋಟೆಲ್ ಉದ್ಯಮಿಗಳಿಗೆ ವ್ಯಾಪಾರದಲ್ಲಿ ಅನುಕೂಲವಾಗುತ್ತದೆ. ಸಂಸಾರದಲ್ಲಿ ಅಂತಃಕಲಹಗಳು ನೆಡೆದು, ಅಸಮಾಧಾನಕ್ಕೆ ಕಾರಣವಾಗುವಂತೆ ಆಗಲಿದೆ. ಶ್ರೀಶನೈಶ್ಚರನ ಕೃಪೆಯನ್ನು ಸಂಪಾದಿಸಿದಲ್ಲಿ ಗೃಹದಲ್ಲಿ ನೆಮ್ಮದಿ, ಸಮಾಧಾನಕರವಾದ ವಾತಾವರಣ ಉಂಟಾಗಿ ಸುಖ ವೃದ್ಧಿಯಾಗುವುದು.

  ಸಿಂಹ

  ಈ ವಾರದಲ್ಲಿ ಬಂಧು ಸಹಾಯದಿಂದಾಗಿ ಶತ್ರುಗಳ ಷಡ್ಯಂತ್ರದಿಂದ ತಪ್ಪಿಸಿಕೊಳ್ಳಬಹುದು ಅಥವಾ ಶತ್ರುಗಳ ವಿರುದ್ಧ ಜಯ ಸಾಧಿಸಬಹುದು. ರಾಜಕೀಯ ವಿಭಾಗದಲ್ಲಿ ಶ್ರಮರಹಿತ ಜಯಸಾಧನೆ ಮನಸ್ಸಿಗೆ ತೃಪ್ತಿತರುವುದು. ಪದೇ ಪದೇ ವ್ಯಾವಹಾರಿಕ ಪ್ರಯಾಣದಿಂದ ಆದಾಯದಲ್ಲಿ ಕೊಂಚ ವೃದ್ಧಿ ಕಂಡುಬರಲಿದೆ. ವಿದ್ಯಾರ್ಥಿಗಳಿಗೆ ಕಠಿಣ ಸಾಧನೆ ಅಗತ್ಯ. ಮನರಂಜನೆ ಸಾಂಸ್ಕೃತಿಕ ಕಾರ್ಯಕ್ರಮಗಳಿಂದಾಗಿ ಮನಸ್ಸಿಗೆ ಸಂತೋಷ ಉಂಟಾಗುವುದು. ಬಂಧು ಜನರಿಗೆ ಸಹಾಯ ಹಸ್ತ ತೋರುವುದು ದೇವರು ಮೆಚ್ಚುವ ಕೆಲಸವೆಂದು ತಿಳಿದುಬರಲಿದೆ.

  ಕನ್ಯಾ

  ಸರಕಾರಿ ನೌಕರರಿಗೆ ತಮ್ಮ ಉದ್ಯೋಗದಲ್ಲಿ ಜಿಗುಪ್ಸೆ ಬರುವಂತೆ ಆಗುವುದು. ಬಂಧುಗಳಲ್ಲಿ ಮಾತಿನ ಚಕಮಕಿ ಮನಸ್ಸಿಗೆ ಕಿರಿಕಿರಿ ತಂದೀತು. ಕೆಲಸದ ಹೊರೆ ಹೆಚ್ಚಾಗಿ ಮಡದಿ ಮಕ್ಕಳಿಂದ ಸಹಕಾರ ದೊರೆತು ನೆಮ್ಮದಿ ಎನಿಸಲಿದೆ. ಈ ವಾರ ಮರಮಟ್ಟು, ಕೃಷಿ, ಹೈನುಗಾರಿಕೆ ಇತ್ಯಾದಿ ವೃತ್ತಿಗಳಲ್ಲಿರುವವರಿಗೆ ನಿರೀಕ್ಷಿತ ವರಮಾನ ದೊರೆಯಲಿದೆ. ಅವಿವಾಹಿತರಿಗೆ ಮಾಂಗಲ್ಯ ಯೋಗ ಕೂಡಿ ಬಂದೀತು. ವೈದ್ಯರ ಸಲಹೆಯಂತೆ ವ್ಯಾಯಾಮ ಮತ್ತು ಯೋಗಾಭ್ಯಾಸವನ್ನು ದೈನಂದಿನ ಬದುಕಿನಲ್ಲಿ ಅಳವಡಿಸಿಕೊಳ್ಳಿ.

  ತುಲಾ

  ನೂತನ ಕಾರ್ಯ ಅಥವಾ ಗೃಹ ನಿರ್ಮಾಣದಂತಹ ಕೆಲಸಗಳಿಗಾಗಿ ಹೆಚ್ಚು ಸಮಯ ವಿನಿಯೋಗಿಸುವಿರಿ. ತಂದೆ ತಾಯಿಯು ನಿಮ್ಮ ಕಷ್ಟಕಾರ್ಪಣ್ಯಗಳಿಗೆ ನೆರವಾಗಲಿದ್ದಾರೆ. ಸಂಯಮವರಿತು ಕೆಲಸ ಮಾಡುವುದು ಒಳ್ಳೆಯದು. ಸಾಲದ ಬಾಕಿ ಬಾಬ್ತು ಹಿಂದಿರುಗಿಸುವರು. ರಕ್ತದೊತ್ತಡ ಕಡಿಮೆಯಾಗಿ ಮನಸ್ಸಿಗೆ ಸಮಾಧಾನ. ದಂತ ವೈದ್ಯರಿಗೆ ಮತ್ತು ಶಸ್ತ್ರ ಚಿಕಿತ್ಸಕರಿಗೆ ವೃತ್ತಿಯಲ್ಲಿ ಅತೀವವಾದ ಗಮನವಿರುವುದು ಮುಖ್ಯವಾಗುತ್ತದೆ. ವಾಣಿಜ್ಯ ಬೆಳೆಗಾರರಿಗೆ ಉತ್ತಮ ಬೆಲೆ ದೊರಕಲಿದೆ. ಔಷಧ ವ್ಯಾಪಾರಗಳಿಂದ ಲಾಭ.

  ವೃಶ್ಚಿಕ

  ಸೋದರರೊಡನೆ ಆಥವಾ ದಾಯಾದಿಗಳೊಡನೆ ಇದ್ದ ಕಲಹಗಳು ಈ ವಾರಾಂತ್ಯದಲ್ಲಿ ನಿರ್ಮೂಲವಾಗಿ ಶುಭವಾಗಲಿದೆ. ಗೃಹೋಪಕರಣ ಹಾಗು ವಾಹನ ಖರೀದಿಯಂತಹ ವಿಚಾರದಲ್ಲಿ ಕೈಯನ್ನು ಖಾಲಿ ಮಾಡಿಕೊಳ್ಳಬೇಡಿ. ಕೆಲವಾರು ಯೋಜನೆಗಳಲ್ಲಿ ಎಡವಿದ ಅನುಭವ ನಿಮಗಾಗಿಲಿದೆ. ಮನಸ್ಸು ಧ್ಯಾನದತ್ತ ಹರಿಯಲು ಧಾರ್ಮಿಕ ವಿಚಾರಧಾರೆಯಂತಹ ಸಮಾರಂಭಗಳ ಆಲಿಕೆಯು ಕಾರಣವಾಗುವುದು. ಕಾಗದ ಪತ್ರಗಳ ಬರವಣಿಗೆ ಗಾರರಿಗೆ ಮತ್ತು ಕಂಪ್ಯೂಟರ್ ಕೆಲಸಗಾರರಿಗೆ ತೃಪ್ತಿಕರ ವಾರ. ಶ್ರೀ ವಿಷ್ಣುಸಹಸ್ರಮಾನ ಸ್ತೋತ್ರ ಪಠಣೆ ಶ್ರೇಯಸ್ಕರವಾಗುವುದು.

  ಧನು

  ಉದ್ಯೋಗದಲ್ಲಿ ಬದಲಾವಣೆಗೆ ಪೆÇರಕವಾದ ಸನ್ನಿವೇಶ ಈ ವಾರದಲ್ಲಿ ಕಂಡುಬರುತ್ತದೆ. ಸ್ವಾಮಿ ವೆಂಕಟೇಶನ ಒಲಮೆಯಿಂದ ನಿಮ್ಮ ಕಷ್ಟಗಳು ಪರಿಹಾರವಾಗುವುದು. ಕಾರ್ಯರಂಗದಲ್ಲಿ ನಿಮ್ಮ ನಿರ್ಧಾರಗಳಿಗೆ ಹೆಚ್ಚಿನ ಪ್ರಾಮುಖ್ಯತೆ ದೊರೆಯಲಿದೆ. ವಿದ್ಯುತ್ ಕಂಟ್ರಾಕ್ಟ್ ದಾರರಿಗೆ ಸರ್ಕಾರಿ ಕಾಮಗಾರಿಗಳು ದೊರೆಯಲಿದೆ. ಆರ್ಥಿಕ ರಂಗದಲ್ಲಿ ನೂತನವಾಗಿ ಹೂಡಿಕೆ ಮಾಡುವುದು ಸದ್ಯಕ್ಕೆ ಉತ್ತಮವಲ್ಲ. ಗೃಹ ನಿರ್ಮಾಣ ಕಟ್ಟಡ ಸಾಮಗ್ರಿಗಳ ಮಾರಾಟಗಾರರಿಗೆ ಮತ್ತು ಭೂ ಸಂಬಂಧಿ ವ್ಯವಹಾರದವರಿಗೆ ಅನುಕೂಲವಾಗಲಿದೆ.

  ಮಕರ

  ಬಂಧು-ಮಿತ್ರರ ಸಹಕಾರದಿಂದ ಯಶಸ್ಸುಗಳಿಸುವಿರಿ. ನಿರುದ್ಯೋಗಿಗಳಿಗೆ ಅನಿರೀಕ್ಷಿತ ಉದ್ಯೋಗ ಪ್ರಾಪ್ತಿಯಾಗುತ್ತದೆ. ಕೋರ್ಟುಕಛೇರಿ ವಿವಾದಗಳಲ್ಲಿ ರಾಜಿ ಮಾಡಿಕೊಳ್ಳುವ ಮನೋಭಾವದಿಂದ ಮುಂದುವರಿದಲ್ಲಿ, ಶುಭವಾಗುವುದು. ಹಾಗೆ ಜೀವನದಲ್ಲಿ ಮಗಳ ವಿಚಾರದಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಬೇಕಾದ ಅನಿವಾರ್ಯತೆ ಉಂಟಾಗಲಿದೆ. ನಿಮ್ಮ ಅಧಿಕ ಶ್ರಮದಿಂದ ದೀರ್ಘಕಾಲಿಕ ಕಾರ್ಯಗಳು ಚಾಲನೆಗೊಂಡು ಸಂತಸ ವೃದ್ಧಿಯಾಗುವುದು. ಮೇಲಧಿಕಾರಿಯಿಂದಲೋ, ಗುರು-ಹಿರಿಯರಿಂದಲೋ ಉತ್ತಮ ಪ್ರಶಂಸೆಯ ಮಾತುಗಳು ಕೇಳಿಬರಲಿದೆ.

  ಕುಂಭ

  ಈ ವಾರದ ಆರಂಭದ ದಿನಗಳಲ್ಲಿ ಮನೆಯವರಲಿ ಕಾಣಿಸಿಕೊಂಡಿದ್ದ ಇರಿಸು ಮುರಿಸುಗಳು ಕ್ರಮೇಣ ಸರಿಹೋಗಲಿದೆ. ಅನಿರೀಕ್ಷಿತ ಪ್ರಯಾಣಗಳು ಕೆಲ ಮುಖ್ಯವ್ಯಕ್ತಿಗಳ ಪರಿಚಯಕ್ಕೆ ಕಾರಣವಾಗಲಿದೆ. ತೆರಿಗೆ ಅಧಿಕಾರಿಗಳಿಗೆ ಹೆಚ್ಚಿನ ಕಾರ್ಯಭಾರವಹಿಸುವರು. ಸಹೋದ್ಯೋಗಿಗಳೊಡನೆ ಅನಾವಶ್ಯಕ ವಾದ-ವಿವಾದಗಳು ನಡೆಯದಂತೆ ವರ್ತಿಸಿ. ದಾಂಪತ್ಯದಲ್ಲಿ ಸಂಶಯದ ವಾತಾವರಣ ಇದ್ದು ಅಸಮಾಧಾನ ಮೂಡುವುದು. ವಾರಾಂತ್ಯದಲ್ಲಿ ಆಸ್ಪತ್ರೆ ಅಲೆದಾಟಗಳು ಕೊನೆಗೊಳ್ಳುವುದು. ಈಶ್ವರನಿಗೆ ರುದ್ರಾಭಿಷೇಕ ಮಾಡಿಸುವುದರಿಂದ ಕಷ್ಟಗಳು ದೂರವಾಗುತ್ತದೆ.


  ಮೀನ

  ಸಹೋದರರಲ್ಲಿ ಸ್ಥಿರಾಸ್ತಿ ವಿಚಾರದಲ್ಲಿದ್ದ ಮನಸ್ತಾಪಗಳು ದೂರಾಗುವುದು. ಬದಲಾದ ಪರಿಸ್ಥಿತಿಗೆ ಹೊಂದಿಕೊಳ್ಳಲು ಯತ್ನಿಸುವಿರಿ. ತಾಂತ್ರಿಕ ವಿದ್ಯಾರ್ಥಿಗಳಿಗೆ ಹುದ್ದೆಗಳು ಅರಸಿ ಬರಲಿದೆ. ನೀವು ಕೈಗೊಂಡ ಕೆಲಸಗಳು ಸುಗಮವಾಗಿ ಸಾಗಲಿದೆ. ನೆರೆಯವರೊಂದಿಗಿನ ಸಂಬಂಧಗಳು ಮತ್ತಷ್ಟು ಸುಧಾರಿಸಲಿದೆ. ಚಿಲ್ಲರೆ ವ್ಯಾಪಾರಿಗಳಿಗೆ ಮತ್ತು ರೈತವರ್ಗದವರಿಗೆ ಅನುಕೂಲಕರ ದಿನಗಳು. ಅಲಂಕಾರಿಕ ವಸ್ತುಗಳ ಮಾರಾಟದಲ್ಲಿ ಹೆಚ್ಚಳ ಕಾಣುವಿರಿ. ನೆಂಟರಿಷ್ಟರ ಅಗಮನ ಮನೆಯಲ್ಲಿ ಹಬ್ಬದ ವಾತಾವರಣವನ್ನು ಮೂಡಿಸಲಿದೆ.
  Published by:Soumya KN
  First published: