• Home
  • »
  • News
  • »
  • lifestyle
  • »
  • Vikram Betal: ಮಾತು ಆಡಿದರೆ ಹೋಯ್ತು, ಮುತ್ತು ಒಡೆದರೆ ಹೋಯ್ತು - ಈ ಕಥೆಯ ಸಾರ ಬಹಳ ಸುಂದರ

Vikram Betal: ಮಾತು ಆಡಿದರೆ ಹೋಯ್ತು, ಮುತ್ತು ಒಡೆದರೆ ಹೋಯ್ತು - ಈ ಕಥೆಯ ಸಾರ ಬಹಳ ಸುಂದರ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Weekend Story for Kids: ಈ ಬಾರಿ ಸಹ ನಾವು ಹೊಸ ಕಥೆಯನ್ನು ತಂದಿದ್ದು, ಇದಕ್ಕೆ ಕೊಟ್ಟ ಉತ್ತರ ನಮಗೆ ನಾವು ಮಾತನಾಡುವ ಬಹಳ ಎಚ್ಚರಿಕೆಯಿಂದ ಇರಬೇಕು ಎಂಬುದನ್ನ ಕಲಿಸುತ್ತದೆ.

  • Share this:

ವಿಕ್ರಮ ಬೇತಾಳನ (Vikram Betal) ಕಥೆಗಳು (Story) ಎಂದಿಗೂ ಬೋರ್ ಬರಿಸುವುದಿಲ್ಲ. ಬಹಳ ಗೊಂದಲದಿಂದ ಕೂಡಿರುವ ಬೇತಾಳನ ಪ್ರಶ್ನೆಗಳಿಗೆ ವಿಕ್ರಮ ಶಾಂತವಾಗಿ ಹಾಗೂ ಅಲೋಚಿಸಿ ಕೊಡುವ ಉತ್ತರ (Answer) ನಮಗೆ ಹಲವು ಪಾಠಗಳನ್ನು ಹೇಳಿಕೊಡುತ್ತದೆ. ನಾವು ಕೆಲವೊಮ್ಮೆ ಈ ಕಥೆಗಳನ್ನು ಕೇಳುವಾಗ ಉತ್ತರ ಬೇರೆ ನಿರೀಕ್ಷೆ ಮಾಡಿರುತ್ತೇವೆ. ಆದರೆ, ವಿಕ್ರಮನ ಉತ್ತರ ಬೇರೆಯದಾಗಿರುತ್ತದೆ. ಅದು ನಮಗೆ ಹೊಸ  ಪಾಠ ಎನ್ನಬಹುದು. ಈ ಬಾರಿ ಸಹ ನಾವು ಹೊಸ ಕಥೆಯನ್ನು ತಂದಿದ್ದು, ಇದಕ್ಕೆ ಕೊಟ್ಟ ಉತ್ತರ ನಮಗೆ ನಾವು ಮಾತನಾಡುವ ಬಹಳ ಎಚ್ಚರಿಕೆಯಿಂದ ಇರಬೇಕು ಎಂಬುದನ್ನ ಕಲಿಸುತ್ತದೆ.


ರಾಜ ಹಾಗೂ ಮುದುಕನ ಕಥೆ


ಅಂದಕನಗರ ಅರಸ ಬಹಳ ನ್ಯಾಯಪರನಾಗಿದ್ದ. ಆತನನ್ನ ಯಾರು ಬೇಕಾದರೂ ಸಹ ಭೇಟಿಯಾಗಬಹುದು. ಹೀಗೆ ಒಂದು ದಿನ ಅಲ್ಲಿಗೆ ಮುದುಕ ತನ್ನ ಇಬ್ಬರು ಕುರುಡ ಮಕ್ಕಳ ಜೊತೆ ಬರುತ್ತಾನೆ. ರಾಜ, ಯಾವ ರೀತಿ ಸಹಾಯವಾಗಬೇಕು ಎಂದು ಕೇಳುತ್ತಾನೆ. ಆಗ ಆ ಮುದುಕ, ನನ್ನ ವ್ಯಾಪಾರ ಮಾಡುತ್ತಿರುವ ನಮ್ಮ ಜೀವನ ಬಹಳ ಚೆನ್ನಾಗಿತ್ತು. ಆದರೆ, ಕಳೆದ ಕೆಲ ವರ್ಷದಿಂದ ವ್ಯಾಪಾರದಲ್ಲಿ ನಷ್ಟವಾದ ಕಾರಣದಿಂದ ನಾವು ಕಡುಬಡತನದಲ್ಲಿ ಜೀವನ ನಡೆಸುತ್ತಿದ್ದೇವೆ. ನಿಮ್ಮಿಂದ ಬಹಳ ಭರವಸೆಯನ್ನು ಇಟ್ಟುಕೊಂಡಿದ್ದೇನೆ ಎನ್ನುತ್ತಾನೆ.




ಅದಕ್ಕೆ ರಾಜ ಸರಿ ನಾನು ಸಹಾಯ ಮಾಡುತ್ತೇನೆ ಏನು ಬೇಕು ಎಂದು ಕೇಳುತ್ತಾನೆ. ಆಗ ಮುದುಕ, ನನಗೆ ಸುಮಾರು 500 ಚಿನ್ನದ ವರಾಹಗಳು ಬೇಕು ಎಂದು ಕೇಳುತ್ತಾನೆ. ರಾಜ ಮಾತ್ರವಲ್ಲದೇ, ಆಸ್ಥಾನದಲ್ಲಿದ್ದವರು ಸಹ ಇದನ್ನು ಕೇಳಿ ಆಶ್ಚರ್ಯಪಡುತ್ತಾರೆ. ಅಲ್ಲದೇ, ಆ ಮುದುಕ ನಾನು ಕೇವಲ 6 ತಿಂಗಳ ಒಳಗೆ ಈ ಹಣವನ್ನು ವಾಪಾಸ್ ಮಾಡುತ್ತೇನೆ. ನಿಮ್ಮ ಬಳಿ ನಾನು ಸಾಲದ ರೀತಿ ಹಣ ಕೇಳುತ್ತಿದ್ದೇನೆ ಎಂದು ಹೇಳುತ್ತಾನೆ. ಇದನ್ನು ಕೇಳಿದ ರಾಜ, ನಿನಗೆ 6 ತಿಂಗಳ ಒಳಗೆ ಹಣವನ್ನು ಹಿಂತಿರುಗಿಸಲು ಆಗದಿದ್ದರೆ ಏನು ಮಾಡಬೇಕು ಎಂದು ಕೇಳುತ್ತಾನೆ. ಅದಕ್ಕೆ ಮುದುಕ, ನನ್ನ ಮತ್ತು ನನ್ನ ಮಕ್ಕಳ ತಲೆ ಕಡಿಯಿರಿ ಎಂದು ಹೇಳುತ್ತಾನೆ. ಅಲ್ಲದೇ, 6 ತಿಂಗಳ ತನಕ ತನ್ನ ಇಬ್ಬರು ಕಂಡು ಮಕ್ಕಳನ್ನು ನಿಮ್ಮ ಬಳಿ ಇರಲಿ, ನಿಮಗೆ ತುಂಬಾ ಸಹಾಯಕ್ಕೆ ಬರುತ್ತದೆ ಎನ್ನುತ್ತಾನೆ.


ಅದ್ಭುತ ಕಲೆ ಇರುವ ಗಂಡು ಮಕ್ಕಳು


ನನ್ನ ಮೊದಲ ಮಗ ಕುದುರೆ ಪರೀಕ್ಷಕ, ಒಂದು ಕುದುರೆಯನ್ನು ಕೇವಲ ಮುಟ್ಟಿ ನೋಡಿ ಅದರ ಗುಣವನ್ನು ಹೇಳುತ್ತಾನೆ. ತನ್ನ ಎರಡನೇ ಮಗ ವಸ್ತುಗಳನ್ನು ಮುಟ್ಟಿ ಅದರ ಬಗ್ಗೆ ಹೇಳುತ್ತಾನೆ ಎಂದು ಮಕ್ಕಳನ್ನು ರಾಜನ ಆಸ್ಥಾನದಲ್ಲಿ ಬಿಟ್ಟು ಹೋಗುತ್ತಾನೆ.


ಹೀಗೆ ಕೆಲ ಸಮಯ ಕಳೆಯುತ್ತದೆ. ಒಂದು ದಿನ ರಾಜನ ಆಸ್ಥಾನಕ್ಕೆ ಕುದುರೆ ವ್ಯಾಪಾರ ಮಾಡಲು ಅಶ್ವನಾಯಕನೊಬ್ಬ ಬರುತ್ತಾನೆ. ರಾಜ, ನನ್ನ ಬಳಿ ಒಂದು ಅದ್ಭುತವಾದ ಕುದುರೆ ಇದು. ಇದು ಬಹಳ ವಿಶೇಷವಾದ್ದು. ಶುದ್ಧ ಅರಬ್ಬೀ ತಳಿ. ಹಾಗೆಯೇ ಬಹಳ ನಿಷ್ಟಾವಂತ ಎಂದು ಹೇಳುತ್ತಾನೆ. ಅದಕ್ಕೆ ರಾಜ ನಾನು ಇದನ್ನು ಪರೀಕ್ಷೆ ಮಾಡಿಸುತ್ತೇನೆ ಎನ್ನುತ್ತಾನೆ.


ಇದನ್ನೂ ಓದಿ: ಪುನೀತ್ ಕಂಡ ರೀತಿಯಲ್ಲೇ ಜೋಗ್ ಫಾಲ್ಸ್ ನೋಡ್ಕೊಂಡ್ ಬನ್ನಿ, ಫುಲ್ ಟ್ರಿಪ್ ಪ್ಲಾನ್ ಇಲ್ಲಿದೆ


ಹೊರಗೆ ಬಂದ ರಾಜ ಆ ಮುದುಕನ ಹಿರಿಯ ಮಗನ ಬಳಿ, ನೀನು ಕುದುರೆ ಪರೀಕ್ಷಕ ತಾನೆ, ಇದನ್ನು ಪರೀಕ್ಷೆ ಮಾಡು ಎಂದು ಹೇಳುತ್ತಾನೆ. ಅದರಂತೆ, ಆತ ಸರಿಯಾಗಿ ಪರೀಕ್ಷೆ ಮಾಡಿ, ಇದು ಅರಬ್ಬೀ ತಳಿಯ ಕುದುರೆ. ಆದರೆ ಸವಾರಿ ಮಾಡಲು ಹೋದರೆ, ಅವರನ್ನು ಬೀಳಿಸುತ್ತದೆ ಎನ್ನುತ್ತಾನೆ. ಇದನ್ನು ವ್ಯಾಪಾರಿ ನಂಬುವುದಿಲ್ಲ. ಆದರೆ, ಕುದುರೆ ಸವಾರನೊಬ್ಬ ಬಂದು ಕುಳಿತಾಗ ಕುದುರೆ ಬೀಳಿಸುತ್ತದೆ. ಇದನ್ನು ನೋಡಿದ ರಾಜ ಕುದುರೆಯನ್ನ ಖರೀದಿಸುವುದಿಲ್ಲ.




ಹೀಗೆ ಕೆಲ ದಿನಗಳ ನಂತರ ವಜ್ರದ ವ್ಯಾಪಾರಿ ಬಂದು ಒಳ್ಳೆಯ ವಜ್ರವಿದೆ ಎನ್ನುತ್ತಾನೆ. ಅದನ್ನು ರಾಜ ಎರಡನೇಯ ಮಗನ ಕೈಲಿ ಪರೀಕ್ಷೆ ಮಾಡಿಸುತ್ತಾನೆ. ಆಗ ಆತಮ ಇದು ಒಳ್ಳೆಯ ವಜ್ರ, ಆದರೆ ಧರಿಸಲು ಯೋಗ್ಯವಲ್ಲ. ಈ ವ್ಯಾಪಾರಿಯ ಮನೆಯಲ್ಲಿ 2 ಜೀವವನ್ನು ಬಳಿ ಪಡೆದಿದೆ ಎಂದು ಹೇಳುತ್ತಾನೆ. ಹೀಗೆ ಇಬ್ಬರು ಒಂದೊಂದು ರೀತಿಯಲ್ಲಿ ರಾಜನಿಗೆ ಸಹಾಯ ಮಾಡುತ್ತಾರೆ. 6 ತಿಂಗಳ ನಂತರ ಮುದುಕ ಬಂದು ಹಣ ಮರಳಿಸಿ, ಮಕ್ಕಳನ್ನು ಕರೆದುಕೊಂಡು ಹೋಗುತ್ತೇನೆ ಎನ್ನುತ್ತಾನೆ.


ಮುದುಕನ ತಲೆ ಕಡಿಯಲು ಹೇಳಿದ ರಾಜ


ಆಗ ರಾಜ, ನಿನ್ನ ಇಬ್ಬರು ಮಕ್ಕಳಿಗೆ ಬಹಳ ಅದ್ಬುತವಾದ ಗುಣಗಳಿವೆ, ನಿಮಗೂ ಸಹ ಏನಾದರೂ ವಿಶೇಷ ಗುಣ ಇರಬೇಕು. ನಿನ್ನ ವಿಶೇಷ ಗುಣ ಏನು ಎಂದು ಕೇಳುತ್ತಾನೆ. ಅದಕ್ಕೆ ಮುದುಕ, ನಾನು ಒಬ್ಬ ವ್ಯಕ್ತಿಯನ್ನು ನೋಡಿ, ಅವನ ಹಿನ್ನೆಲೆ ಹೇಳಬಲ್ಲೆ ಎನ್ನುತ್ತಾನೆ. ರಾಜ ಇದನ್ನು ಕೇಳಿ ನನ್ನ ಬಗ್ಗೆ ಹೇಳು ಎನ್ನುತ್ತಾನೆ. ಕೆಲ ನಿಮಿಷ ರಾಜ ಮುಖ ದಿಟ್ಟಿಸಿದ ಈ ಮುದುಕ, ನಿನ್ನ ತಂದೆ ಕಳ್ಳನಾಗಿದ್ದ, ನೀನು ಕಳ್ಳನ ಮಗ ಎನ್ನುತ್ತಾನೆ. ಇದನ್ನು ಕೇಳಿ ಕೋಪ ಮಾಡಿಕೊಂಡು, ಮುದುಕ ಮತ್ತು ಆತನ ಮಕ್ಕಳ ರುಂಡ ಕತ್ತರಿಸುವಂತೆ ಆದೇಶ ನೀಡುತ್ತಾನೆ.


ಇದನ್ನೂ ಓದಿ: ಫೇಶಿಯಲ್ ಆದ ಮೇಲೆ ಯಾವುದೇ ಕಾರಣಕ್ಕೂ ಈ ತಪ್ಪು ಮಾಡ್ಬೇಡಿ, ಚರ್ಮ ಹಾಳಾಗೋದ್ರಲ್ಲಿ ಡೌಟೇ ಇಲ್ಲ


ಇಲ್ಲಿಗೆ ಕಥೆ ಮುಗಿಸಿದ ಬೇತಾಳ ಈಗ ಹೇಳು ವಿಕ್ರಮ, ರಾಜ ಸರಿಯಾಗಿ ಆದೇಶ ಕೊಟ್ಟಿದ್ದಾನಾ? ಯಾರ ತಪ್ಪು ಎಂದು ಕೇಳುತ್ತಾನೆ. ಇದನ್ನು ಕೇಳಿ ವಿಕ್ರಮ, ರಾಜ ಕಳ್ಳನ ಮಗ ಹಾಗಾಗಿ ಆ ರೀತಿ ಆದೇಶ ಕೊಟ್ಟ. ಆದರೆ, ಮುದುಕ ಸಹ ಮಾತನಾಡುವಾಗ ಯೋಚನೆ ಮಾಡಿ ಮಾತನಾಡಬೇಕು ಎಂದು ಹೇಳುತ್ತಾನೆ. ಇದನ್ನು ಕೇಳಿ ಖುಷಿಯಾದ ಬೇತಾಳ ಹಾರಿ ಹೋಗುತ್ತದೆ.

Published by:Sandhya M
First published: