• Home
  • »
  • News
  • »
  • lifestyle
  • »
  • Weekend Story: ಹಣಕ್ಕಿಂತ ಸಂಬಂಧ ಮುಖ್ಯ, ಚಿಕ್ಕಪ್ಪ ತಿಳಿಸಿದ ಬಾಂಧವ್ಯದ ಮಹತ್ವ

Weekend Story: ಹಣಕ್ಕಿಂತ ಸಂಬಂಧ ಮುಖ್ಯ, ಚಿಕ್ಕಪ್ಪ ತಿಳಿಸಿದ ಬಾಂಧವ್ಯದ ಮಹತ್ವ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Moral Stories: ಜೀವನದಲ್ಲಿ ಸಂಬಂಧಗಳು ಬಹಳ ಮುಖ್ಯವಾಗುತ್ತದೆ, ಆದರೆ ಹಲವಾರು ಜನರು ಹಣದ ಮುಂದೆ ಯಾವುದಕ್ಕೂ ಬೆಲೆ ಕೊಡುವುದಿಲ್ಲ. ಆದರೆ ಚಿಕ್ಕಪ್ಪನೊಬ್ಬ ಅಣ್ಣನ ಮನೆಯವರ ಸಂಬಂಧಕ್ಕಾಗಿ ಮಾಡಿದ ಅದ್ಭುತ ಕೆಲಸ ಕಥೆಯನ್ನು ನಾವಿಲ್ಲಿ ನೀಡಿದ್ದು, ಮಕ್ಕಳಿಗೆ ನೀತಿಪಾಠ ಕಲಿಸಲು ಉತ್ತಮ ಮಾರ್ಗ ಇದು.

ಮುಂದೆ ಓದಿ ...
  • Share this:

ಮಕ್ಕಳಿಗೆ ಕಥೆ (Story For Kids)  ಹೇಳುವುದರಿಂದ ಹಲವಾರು ಲಾಭಗಳಿದೆ. ಇದು ಅವರ ಬುದ್ದಿ ಹಾಗೂ ಮಾನಸಿಕ ಅಭಿವೃದ್ದಿಗೆ (Development)  ಸಹಾಯ ಮಾಡುತ್ತದೆ. ಜೀವನದಲ್ಲಿ ಪಾಠ ಕಲಿಯಲು ಸಹ ಸಹಾಯ (Help) ಮಾಡುತ್ತದೆ. ಮಕ್ಕಳಿಗೆ ನೀವು ಕೆಲವೊಂದು ವಿಚಾರಗಳನ್ನು ನಾವು ನೇರವಾಗಿ ಹೇಳಲು ಸಾಧ್ಯವಿಲ್ಲ, ಮುಖ್ಯವಾಗಿ ಹೇಳಿದರೂ ಸಹ ಅರ್ಥವಾಗುವುದಿಲ್ಲ. ಅದಕ್ಕೆ ಈ ಕಥೆಗಳು ಸಹಾಯ ಮಾಡುತ್ತದೆ. ಮೊದಲೆಲ್ಲಾ ಅಜ್ಜಿಯಂದಿರು ಮಕ್ಕಳಿಗೆ ಕಥೆ ಹೇಳುತ್ತಿದ್ದರು, ಆದರೆ ಈಗ ಯಾವುದಕ್ಕೂ ಸಮಯವಿಲ್ಲ. ವಾರಕ್ಕೆ ಒಂದಾದರೂ ಕಥೆಯನ್ನು ಮಕ್ಕಳಿಗೆ ಹೇಳುವುದು ಅವಶ್ಯಕ. 


ವಜ್ರದ ವ್ಯಾಪಾರಿಯ ಕಥೆ


ಒಂದು ಊರು ಆ ಊರಿನ ವಜ್ರದ ವ್ಯಾಪಾರಿ ಒಬ್ಬನಿದ್ದ, ಆತ ಬದುಕಿದ್ದಾಗ ಮನೆಯನ್ನು ಹಾಗು ಮನೆಯ ಸದಸ್ಯರನ್ನು ಸಮೃದ್ದವಾಗಿ ನೋಡಿಕೊಂಡಿದ್ದ, ಆದರೆ ಆತನ ಮರಣದ ನಂತರ ಅವನ ಕುಟುಂಬದಲ್ಲಿ ಸಮಸ್ಯೆಗಳು ಹೆಚ್ಚಾಗತೊಡಗಿದವು. ಆರ್ಥಿಕ ಪರಿಸ್ಥಿತಿ ಹದಗೆಡುತ್ತದೆ. ಒಂದು ದಿನ ಅವರಿಗೆ ಊಟ ಮಾಡಲು ಸಹ ಹಣ ಇರುವುದಿಲ್ಲ. ಆಗ ಆ ವ್ಯಾಪಾರಿಯ ಹೆಂಡತಿ ತನ್ನ ಮಗನಿಗೆ ಒಂದು ವಜ್ರದ ಹಾರವನ್ನು ಕೊಟ್ಟು, ನೋಡು ಪಕ್ಕದೂರಿನಲ್ಲಿರುವ ನಿನ್ನ ಚಿಕ್ಕಪ್ಪನ ಅಂಗಡಿಯಲ್ಲಿ ಈ ಹಾರವನ್ನು ಮಾರಿ, ಸ್ವಲ್ಪ ಹಣವನ್ನು ನಮಗೆ ಕೊಡಲು ಹೇಳು ಎಂದು ಹೇಳಿ ಕಳುಹಿಸುತ್ತಾಳೆ.


ತಾಯಿಯ ಮಾತಿನಂತೆ ಚಿಕ್ಕಪ್ಪನ ಅಂಗಡಿಗೆ ಹೋದ ಮಗ, ಅಲ್ಲಿ ಹಾರವನ್ನು ಮಾರುವ ಬಗ್ಗೆ ಹೇಳುತ್ತಾನೆ. ಅದಕ್ಕೆ ಹಾರವನ್ನು ಸರಿಯಾಗಿ ಪರೀಕ್ಷೆ ಮಾಡಿದ ಚಿಕ್ಕಪ್ಪ, ನೋಡು ಮಗ ಈಗ ಮಾರುಕಟ್ಟೆಯಲ್ಲಿ ಬೆಲೆ ಕಡಿಮೆ ಇದೆ. ಇದಕ್ಕೆ ಬಹಳ ಕಡಿಮೆ ಹಣ ಸಿಗುತ್ತದೆ. ಹಾಗಾಗಿ ನಿನ್ನ ತಾಯಿಗೆ ಸ್ವಲ್ಪ ದಿನ ಬಿಟ್ಟು ಹಾರವನ್ನು ಮಾಡುವಂತೆ ಹೇಳು. ಆಗ ಒಳ್ಳೆಯ ಹಣ ಸಿಗುತ್ತದೆ ಎನ್ನುತ್ತಾನೆ. ಹಾಗೆಯೇ, ಸ್ವಲ್ಪ ಹಣವನ್ನು ಕೊಟ್ಟು ಇದನ್ನು ತಾಯಿಗೆ ಕೊಡು, ಹಾಗೆಯೇ ನಾಳೆಯಿಂದ ನನ್ನ ಅಂಗಡಿಗೆ ಬಂದು ಕುಳಿತುಕೋ, ಎಲ್ಲವನ್ನೂ ಕಲಿ ಎಂದು ಹೇಳುತ್ತಾನೆ.


ಚಿಕ್ಕಪ್ಪನ ಮಾತಿನಂತೆ ಪ್ರತಿದಿನ ಅಂಗಡಿಗೆ ಹೋಗಿ ಕುಳಿತುಕೊಳ್ಳಲು ಆರಂಭಿಸಿದ. ಅಲ್ಲದೇ ವ್ಯವಹಾರಕ್ಕೆ ಸಂಬಂಧಿಸಿದ ಪ್ರತಿ ಮಾಹಿತಿಯನ್ನು ಸಹ ಕಲಿಯುತ್ತಿದ್ದ. ವಜ್ರ ಹಾಗೂ ಮುತ್ತು ರತ್ನಗಳನ್ನು ಪರೀಕ್ಷೆ ಮಾಡುವುದನ್ನ ಸಹ ಕಲಿಯಲು ಪ್ರಾರಂಭಿಸಿದ.


ಕೆಲವೇ ದಿನಗಳಲ್ಲಿ ವಜ್ರ ಹಾಗೂ ಮುತ್ತು-ರತ್ನಗಳನ್ನು ಪರೀಕ್ಷೆ ಮಾಡುವುದರಲ್ಲಿ ಸಿದ್ಧಹಸ್ತನಾದ. ಈತನ ಬಳಿ ಪರೀಕ್ಷೆ ಮಾಡಿಸಲು ದೂರದ ಊರುಗಳಿಂದ ಜನ ಬರಲು ಆರಂಭಿಸಿದರು. ಹೀಗಿರುವಾಗ ಒಂದು ದಿನ ಅವನ ಚಿಕ್ಕಪ್ಪ ಅವನಿಗೆ ಪುಟ್ಟ ಅಂದು ನೀನು ತಂದಿದ್ದ ನಿಮ್ಮ ತಾಯಿಯ ಆ ಹಾರವನ್ನು ತಗೆದುಕೊಂಡು ಬಾ. ಈಗ ಮಾರುಕಟ್ಟೆ ಚೆನ್ನಾಗಿದೆ. ಉತ್ತಮ ಬೆಲೆಗೆ ಹಾರ ಮಾರಾಟ ಮಾಡಬಹುದು, ನಿಮಗೆ ಒಳ್ಳೆಯ ಬೆಲೆ ಸಿಗುತ್ತದೆ ಎಂದು ಹೇಳುತ್ತಾನೆ.


ಹಣಕ್ಕಿಂತ ಸಂಬಂಧಕ್ಕೆ ಬೆಲೆ ಜಾಸ್ತಿ


ಅದರಂತೆ ತಾಯಿಯಿಂದ ಆ ಹಾರವನ್ನು ಮತ್ತೆ ಪಡೆದುಕೊಂಡು ಬಂದ ಮಗ ಈ ಹಾರದ ಸತ್ಯಾಸತ್ಯತೆಯನ್ನು ಪರಿಶೀಲನೆ ಮಾಡುತ್ತಾನೆ. ಆಗ ಅವನಿಗೆ ಈ ಹಾರ ನಕಲಿ ಎಂದು ತಿಳಿಯುತ್ತದೆ. ಆದರೆ ಈ ವಿಚಾರವನ್ನು ಚಿಕ್ಕಪ್ಪ ಮೊದಲೇ ಏಕೆ ಹೇಳಲಿಲ್ಲ, ಮೊದಲ ಬಾರಿ ಹಾರ ತಂದಾಗಲೇ ಅವರಿಗೆ ಇದು ನಕಲಿ ಎಂದು ತಿಳಿದಿದ್ದು ಎಂದು ಆಶ್ಚರ್ಯವಾಗುತ್ತದೆ.


ಇದನ್ನು ಚಿಕ್ಕಪ್ಪನ ಬಳಿಯೇ ಕೇಳಿಯೇ ಬಿಡೋಣ ಎಂದು ನಿರ್ಧರಿಸಿ, ಅಂಗಡಿಗೆ ಬರುತ್ತಿದ್ದಂತೆ, ಚಿಕ್ಕಪ್ಪನಿಗೆ, ನನ್ನ ತಾಯಿಯ ಬಳಿ ಇರುವ ಹಾರ ನಕಲಿ. ಇದು ನಿಮಗೆ ಮೊದಲೇ ಗೊತ್ತಿತ್ತು, ಆದರೂ ನನಗೆ ಏಕೆ ಹೇಳಲಿಲ್ಲ ಎಂದು ಕೇಳುತ್ತಾನೆ. ಅದಕ್ಕೆ ಉತ್ತರಿಸಿದ ಚಿಕ್ಕಪ್ಪ ನೀನು ಮೊದಲ ಬಾರಿ ಈ ಹಾರವನ್ನು ನನ್ನ ಬಳಿ ತಂದಾಗ ಅದು ವಜ್ರದ ಹಾರವಲ್ಲ ನಕಲಿ ಎಂದು ಗೊತ್ತಾಯಿತು. ಆದರೆ ಇದನ್ನು ನಿನಗೆ ಹೇಳಿದರೆ ನಾನು ಸುಳ್ಳು ಹೇಳುತ್ತಿದ್ದೇನೆ ಎಂದು ತಪ್ಪು ಅರ್ಥ ಮಾಡಿಕೊಳ್ಳುತ್ತಿದ್ದೆ. ಅಲ್ಲದೇ ನಿನ್ನ ತಾಯಿಗೂ ಬೇಸರವಾಗುತ್ತಿತ್ತು. ಆ ಸಮಯದಲ್ಲಿ ನಿನಗೆ ವಜ್ರ ನಕಲಿನಾ ಅಥವಾ ಅಸಲಿನಾ ಎಂದು ಕಂಡು ಹಿಡಿಯಲು ಸಹ ಬರುತ್ತಿರಲಿಲ್ಲ. ಹಾಗಾಗಿ ನಾನು ಸತ್ಯ ಹೇಳಲಿಲ್ಲ ಎನ್ನುತ್ತಾನೆ.




ಅಲ್ಲದೇ, ನಿನಗೆ ಈ ಬಗ್ಗೆ ಜ್ಞಾನ ಇಲ್ಲದ ಸಮಯದಲ್ಲಿ ಹೇಳುವುದು ವ್ಯರ್ಥ, ಆದರೆ ಈಗ ನಿನಗೆ ಸಂಪೂರ್ಣ ಮಾಹಿತಿ ಇದೆ. ಹಾಗಾಗಿ ಸತ್ಯ ಹೇಳುವುದು ಸೂಕ್ತ ಎನಿಸಿತು. ಅಲ್ಲದೇ ಈ ಮೂಲಕ ನನಗೆ ನಿಮ್ಮ ಸಂಬಂಧ ಸಹ ಕಾಪಾಡಿಕೊಳ್ಳುವುದು ಮುಖ್ಯವಾಗಿತ್ತು ಎಂದು ಹೇಳುತ್ತಾನೆ. ಇದನ್ನು ಕೆಳಿದ ಹುಡುಗನ ಕಣ್ಣಲ್ಲಿ ನೀರು ಬರುತ್ತದೆ. ಚಿಕ್ಕಪ್ಪನಿಗೆ ಹೇಗೆ ಕೃತಜ್ಞತೆ ತಿಳಿಸಬೇಕು ಎಂದು ತಿಳಿಯುವುದಿಲ್ಲ. ಚಿಕ್ಕಪ್ಪನಿಗೆ ಧನ್ಯವಾದ ತಿಳಿಸಿದ ಹುಡುಗ ಜೊತೆಗೆ ಕೆಲಸವನ್ನು ಮಾಡಿಕೊಂಡು ಹೋಗುತ್ತಾನೆ. ಜೊತೆಗೆ ತಾಯಿಗೆ ಸಹ ಒಂದು ಸುಂದರವಾದ ವಜ್ರದ ಹಾರ ಮಾಡಿಸಿ ಕೊಡುತ್ತಾನೆ.


ಕಥೆಯ ನೀತಿ: ಹಣಕ್ಕಿಂತ ಸಂಬಂಧ ಮುಖ್ಯ

Published by:Sandhya M
First published: