ಕೆಲವೊಮ್ಮೆ ನಾವು ಜೀವನದಲ್ಲಿ (Life) ವಿವಿಧ ರೀತಿಯ ವ್ಯಕ್ತಿಗಳನ್ನು ಭೇಟಿಯಾಗುತ್ತೇವೆ. ಅವರಲ್ಲಿ ಕೆಲವರು ಕೆಟ್ಟ (Bad Habits) ಬುದ್ದಿಯನ್ನು ಹೊಂದಿರುತ್ತಾರೆ. ಅದರಲ್ಲೂ ನಂಬಿಕೆ ದ್ರೋಹ ಮಾಡುತ್ತಾರೆ. ಅಲ್ಲದೇ ತಮ್ಮ ತಪ್ಪನ್ನು ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ. ಅವರಿಗೆ ಪೆಟ್ಟುಕೊಟ್ಟು ಹೇಳಬೇಕು ಎನ್ನುವ ಪರಿಸ್ಥಿತಿ ಇರುತ್ತದೆ. ಈ ರೀತಿ ಸಮಸ್ಯೆ ಜೀವನದಲ್ಲಿ ಬಂದಾಗ ಹೇಗೆ ಎದುರಿಸಬೇಕು ಎಂಬುದನ್ನ ಮಕ್ಕಳಿಗೆ (Children) ಸಹ ತಿಳಿಸಿಕೊಡುವುದು ಅವಶ್ಯಕ. ಹಾಗಾಗಿ ಇಂದು ಸಿಂಹ (Lion) ಹಾಗೂ ಕಳ್ಳನ ಕಥೆಯೊಂದನ್ನು ನಾವು ತಂದಿದ್ದು, ಇದನ್ನು ಮಕ್ಕಳಿಗೆ ಹೇಳಬಹುದು.
ಕಾಡಿನ ರಾಜನ ಕಥೆ ಇದು
ಒಂದು ದೊಡ್ಡ ಕಾಡು, ಆ ಕಾಡನ್ನು ಕಾಯುವ ದೇವತೆಯ ಕಾರಣದಿಂದ ಅಲ್ಲಿನ ಪ್ರಾಣಿಗಳು ಯಾವುದೇ ಸಮಸ್ಯೆ ಇಲ್ಲದೇ ಬದುಕುತ್ತಿದ್ದವು. ಆ ಕಾಡಿನ ರಾಜ ಸಿಂಹ ಸಹ ಇತರ ಪ್ರಾಣಿಗಳ ಜೊತೆ ಒಳ್ಳೆಯ ಸಂಬಂಧ ಹೊಂದಿತ್ತು. ಒಂದು ದಿನ ಆ ಸಿಂಹ ಬೇಟೆ ಆಡಲು ಕಾಡಿನಲ್ಲಿ ಕುಳಿತುಕೊಂಡಿತ್ತು. ಆಗ ಸುಂದರವಾದ ಜಿಂಕೆಯೊಂದು ಓಡಾಡುತ್ತಿತ್ತು. ಅದನ್ನು ನೋಡಿ ಖುಷಿಯಾದ ಸಿಂಹ ಉಪಾಯದಿಂದ ಎಗರಿ, ಜಿಂಕೆಯನ್ನು ಬಲಿ ಪಡೆಯಿತು.
ಈ ಜಿಂಕೆಯನ್ನು ನೋಡಿ ಸಿಂಹದ ಬಾಯಲ್ಲಿ ನೀರು ಬರಲು ಆರಂಭಿಸಿತ್ತು, ಯಾವಾಗ ಇದನ್ನು ತಿನ್ನುತ್ತೇನೋ ಎಂದು ಹೇಳಿಕೊಳ್ಳುತ್ತಾ, ಆ ಜಿಂಕೆಯನ್ನು ಎತ್ತಿಕೊಂಡು ಗುಹೆಗೆ ಹೋಗುತ್ತದೆ. ಗುಹೆಯಲ್ಲಿ ಜಿಂಕೆಯನ್ನು ತಿನ್ನಲು ಆರಂಭಿಸಿದ ಸಿಂಹಗೆ ಒಂದು ಯೋಚನೆ ಬರುತ್ತದೆ, ಈ ಆಹಾರ ಎಷ್ಟು ರುಚಿಯಾಗಿದೆ. ಇದು ಪದೇ ಪದೇ ಸಿಗುವುದಿಲ್ಲ, ಇದನ್ನು ಇಟ್ಟುಕೊಂಡು ಸ್ವಲ್ಪ ದಿನಗಳ ಕಾಲ ತಿನ್ನೋಣ ಎಂದು ನಿರ್ಧಾರ ಮಾಡುತ್ತದೆ. ಹಾಗೆಯೇ, ಜಿಂಕೆಯ ಹೃದಯವನ್ನು ತೆಗೆದು ಗುಹೆಯಲ್ಲಿ ಒಂದು ಮೂಲೆಯಲ್ಲಿ ಬಚ್ಚಿಡುತ್ತದೆ. ನಂತರ ಗುಹೆಯಿಂದ ಹೊರ ಹೋಗುತ್ತದೆ.
ಮರುದಿನ ಸಿಂಹಕ್ಕೆ ಹಸಿವಾದಾಗ ಗುಹೆಯ ಬಳಿ ಹೋಗುತ್ತದೆ, ಆದರೆ ಅಲ್ಲಿ ಹೋಗಿ ನೋಡಿದರೆ ಅದಕ್ಕೆ ಶಾಕ್ ಆಗುತ್ತದೆ. ಮುಚ್ಚಿಟ್ಟಿದ್ದ ಜಿಂಕೆಯ ಹೃದಯ ಕಾಣಿಸುವುದಿಲ್ಲ. ಯಾರೂ ಜಿಂಕೆಯ ಹೃದಯ ಕದ್ದಿದ್ದರೆ ಎಂದು ತಿಳಿದು ಕೋಪಗೊಂಡ ಸಿಂಹ ಜೋರಾಗು ಘರ್ಜಿಸುತ್ತದೆ. ಇದರಿಂದ ಈಡೀ ಕಾಡು ನಡುಗುತ್ತದೆ. ಮರದಲ್ಲಿದ್ದ ಹಕ್ಕಿಗಳು ಹೆದರಿ ಓಡುತ್ತವೆ. ಪ್ರಾಣಿಗಳು ಏನು ಕಾದಿದೆಯೋ ಎಂದು ಯೋಚನೆ ಮಾಡುತ್ತವೆ.
ಇದನ್ನೂ ಓದಿ: ಉಪಾಯ ಬಲ್ಲವನಿಗೆ ಅಪಾಯವಿಲ್ಲ, ಹುಲಿಯಿಂದ ಪಾರಾದ ಅಜ್ಜಿಯೊಬ್ಬಳ ಕಥೆ
ಕಾಡು ನಡುಗುವಂತೆ ಘರ್ಜಿಸಿದ ಸಿಂಹ
ಈ ಘರ್ಜನೆ ಕೆಳಿ ಸಿಂಹದ ಮಂತ್ರಿ ನರಿ ಹೆದರಿಕೆಯಿಂದಲೇ ಓಡಿ ಗುಹೆಯ ಬಳಿ ಬರುತ್ತದೆ. ಅದಕ್ಕೆ ಒಂದು ಮಾತೂ ಹೊರ ಬರದಷ್ಟು ಭಯ ಕಾಡುತ್ತಿರುತ್ತದೆ. ಆದರೂ ಧೈರ್ಯ ಮಾಡಿ, ರಾಜ ಏನಾಯಿತು, ಕೋಪ ಏಕೆ ಎಂದು ಕೇಳುತ್ತದೆ. ಅದಕ್ಕೆ ಸಿಂಹ, ನೋಡು ನನ್ನ ಗುಹೆಯಿಂದ ಆಹಾರ ಮಿಸ್ ಆಗಿದೆ. ನೀನು ಯಾವ ಸೀಮೆ ಮಂತ್ರಿ ಎಂದು ಗುಡುಗುತ್ತದೆ. ಅದಕ್ಕೆ ನರಿ, ಮಹಾರಾಜ ನಾನು ನಿನ್ನೆ ಸಂಜೆ ಒಂದು ತೋಳವನ್ನು ನಿಮ್ಮ ಗುಹೆಯ ಬಳಿ ನೋಡಿದೆ. ಅದು ಬಹಳ ಭಯದಿಂದ ಇಲ್ಲಿಂದ ಓಡಿ ಹೋಗುತ್ತಿತ್ತು, ನೀವು ಒಪ್ಪಿಗೆ ನೀಡಿದರೆ ಹೋಗಿ ಅದನ್ನು ಕೇಳಿ ಬರುತ್ತೇನೆ ಎನ್ನುತ್ತದೆ.
ಇದನ್ನು ಕೆಳಿ ಸಿಂಹದ ಕೋಪ ಹೆಚ್ಚಾಗುತ್ತದೆ, ಆ ಕಳ್ಳನನ್ನ ಕೇಳುವುದು ಏನಿದೆ, ಹೋಗಿ ಆ ತೋಳವನ್ನು ಕರೆದುಕೊಂಡು ಬಾ ಎಂದು ಹೇಳುತ್ತದೆ. ಅದರಂತೆ ನರಿ ಹೋಗಿ ತೋಳವನ್ನು ಕರೆದುಕೊಂಡು ಬರುತ್ತದೆ. ಆದರೆ ತೋಳ ನಾನು ನಿಮ್ಮ ಆಹಾರವನ್ನು ಕದ್ದಿಲ್ಲ, ನಿನ್ನೆ ಈ ನರಿ ಭಯದಿಂದ ನಿಮ್ಮ ಗುಹೆಯಿಂದ ಓಡಿ ಹೋಗಿತ್ತು ಎಂದು ಹೇಳುತ್ತದೆ. ಆದರೆ ನರಿ ಕೂಡ ಈ ಆರೋಪವನ್ನು ಒಪ್ಪುವುದಿಲ್ಲ.
ಇದನ್ನೂ ಓದಿ: ಹಣದಿಂದ ನೆಮ್ಮದಿ ಖರೀದಿ ಮಾಡಲು ಆಗಲ್ಲ, ಜೀವನದಲ್ಲಿ ಸಂತೋಷ ಮುಖ್ಯ
ಇದರಿಂದ ಕೋಪಗೊಂಡ ಸಿಂಹ, ನೋಡಿ 5 ನಿಮಿಷ ಸಮಯ ಕೊಡುತ್ತೇನೆ. ಅಷ್ಟರಲ್ಲಿ ಯಾರೂ ಕಳ್ಳ ಎಂಬುದನ್ನ ಒಪ್ಪಿಕೊಂಡರೆ ನಿಮಗೆ ಒಳ್ಳೆಯದು, ಇಲ್ಲದಿದ್ದರೆ ಇಬ್ಬರನ್ನೂ ಸಾಯಿಸುತ್ತೇನೆ. ಕಳ್ಳನ ಜೊತೆ ನಿರಪರಾಧಿ ಸಹ ಸಾಯುತ್ತಾನೆ ಎಂದು ಹೇಳುತ್ತದೆ. ಇದರಿಂದ ಹೆದರಿದ ನರಿಯು, ಸಿಂಹದ ಕಾಲಿಗೆ ಬಿದ್ದು ತಪ್ಪಾಯಿತು, ನಾನೇ ಜಿಂಕೆಯ ಹೃದಯ ಕದ್ದೆ ಎಂದು ಒಪ್ಪಿಕೊಳ್ಳುತ್ತದೆ. ಆಗ ಸಿಂಹ, ನರಿಯನ್ನು ಸಾಯಿಸುತ್ತದೆ ಹಾಗೂ ತೋಳವನ್ನು ಬಿಟ್ಟು ಬಿಡುತ್ತದೆ.
ಕಥೆಯ ಅರ್ಥ: ಜಾಣನಿಗೆ ಮಾತಿನ ಪೆಟ್ಟು, ದಡ್ಡನಿಗೆ ದೊಣ್ಣೆ ಪೆಟ್ಟು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ