ಮಕ್ಕಳಿಗೆ (Children) ಕಥೆ (Story) ಹೇಳುವುದು ಕೇವಲ ಮನರಂಜನೆಗಾಗಿ ಮಾತ್ರ ಅಲ್ಲ, ಅದರಿಂದ ಜೀವನಕ್ಕೆ ಬೇಕಾದ ಅಂಶಗಳನ್ನು ಮಕ್ಕಳು ಕಲಿತುಕೊಳ್ಳಲಿ ಎಂದು. ಜೀವನದಲ್ಲಿ (Life) ಹಲವಾರು ರೀತಿಯ ಸವಾಲುಗಳು ಎದುರಾಗುತ್ತದೆ, ಕಷ್ಟ ಎದುರಾದಾಗ ಜಾಣ್ಮೆಯಿಂದ ಅದನ್ನು ಎದುರಿಸುವ ಕಲೆ ಗೊತ್ತಿರುವುದು ಅವಶ್ಯಕ. ಕೆಲವೊಂದು ಸಮಯದಲ್ಲಿ ನಾವು ಸರಿಯಾದ ಉಪಾಯ ಮಾಡುವುದರಿಂದ ಅಪಾಯದಿಂದ ಪಾರಾಗಬಹುದು. ಇದನ್ನು ಮಕ್ಕಳಿಗೆ ಸಹ ಕಲಿಸುವುದು ಬಹಳ ಅಗತ್ಯ. ಮಕ್ಕಳಿಗೆ ಪಾಠ 9Lesson) ಹೇಳುವ ರೀತಿ ಹೆಳುವ ಬದಲಾಗಿ, ಕಥೆಯ ರೂಪದಲ್ಲಿ ಹೇಳುವುದರಿಂದ ಸುಲಭವಾಗಿ ಅರ್ಥವಾಗುತ್ತದೆ. ಹಾಗಾಗಿ ಈ ದಿನ ನಾವು ಅಜ್ಜಿಯೊಬ್ಬಳ ಕಥೆ ತಂದಿದ್ದು, ಹೇಗೆ ಆ ಅಜ್ಜಿ ಉಪಾಯದಿಂದ ಹುಲಿ ಹಾಗೂ ನರಿಯಿಂದ ಪಾರಾದಳು ಎಂಬುದು ಇಲ್ಲಿದೆ.
ಅಜ್ಜಿಯೊಬ್ಬಳ ಉಪಾಯದ ಕಥೆ
ಗಜಗ್ರಾಮ ಎನ್ನುವ ಒಂದು ಪುಟ್ಟ ಹಳ್ಳಿ, ಆ ಹಳ್ಳಿಯಲ್ಲಿ ಗಜಗಾಮಿನಿ ಎನ್ನುವ ಮುದುಕಿ ಇದ್ದಳು. ಊರಿನ ಜನರೆಲ್ಲಾ ಆ ಮುದುಕಿಯನ್ನು ಬಹಳ ಬುದ್ದಿವಂತೆ ಎಂದು ಕರೆಯುತ್ತಿದ್ದರು. ಯಾವುದೇ ಸಮಸ್ಯೆ ಇದ್ದರೂ ಈ ಅಜ್ಜಿಯ ಬಳಿ ಬರುತ್ತಿದ್ದರು. ಬಹಳ ಸುಲಭವಾಗಿ ತನ್ನ ಬುದ್ದಿವಂತಿಕೆಯ ಮೂಲಕ ಎಲ್ಲಾ ಸಮಸ್ಯೆಯನ್ನು ಪರಿಹಾರ ಮಾಡುತ್ತಿದ್ದಳು.
ಆ ಊರಿನ ಮಧ್ಯೆ ಒಂದು ಕಾಡು ಹಾಗೂ ನದಿ. ಅದರ ಪಕ್ಕ ಮತ್ತೊಂದು ಊರು. ಈ ಊರಿನಿಂದ ಆ ಊರಿಗೆ ಹೋಗಬೇಕಾದರೆ ಆ ನದಿ ಮತ್ತು ಕಾಡನ್ನು ದಾಟಿಕೊಂಡೇ ಹೋಗಬೇಕಿತ್ತು. ಆ ಕಾಡಿನಲ್ಲಿ ಪ್ರಾಣಿಗಳ ಹಿಂಡೇ ಇತ್ತು. ಕತ್ತಲೆಯಾದ ನಂತರ ಹೋಗುವುದಂತೂ ಭಯಾನಕವಾಗಿತ್ತು. ಆ ಪಕ್ಕದ ಊರಿನ ಹೆಸರು ತ್ರಿಲೋಕ, ಆ ಊರಿಗೆ ಈ ಅಜ್ಜಿಯ ಮಗಳನ್ನು ಮದುವೆ ಮಾಡಿ ಕೊಡಲಾಗಿತ್ತು. ಆಗಾಗ ಅಜ್ಜಿ ಸಹ ಮಗಳ ಮನೆಗೆ ಹೋಗಿ ಬರುತ್ತಿದ್ದಳು. ಹೀಗೆ ಹೋಗಿ ಬರುವಾಗ ಕಾಡಿನ ಮೂಲಕವೇ ಹೋಗಬೇಕಿತ್ತು.
ಹೀಗಿರುವಾಗ ಅಜ್ಜಿ ಕೆಲ ಕಾರಣದಿಂದ ತುಂಬಾ ದಿನಗಳ ಕಾಲ ಮಗಳ ಮನೆಗೆ ಹೋಗಿರಲಿಲ್ಲ. ಒಂದು ದಿನ ಹೋಗಲೇಬೇಕು, ಮಗಳನ್ನು ನೋಡಿ ಕಾಲವಾಯಿತು, ಬಹಳ ನೆನಪಾಗುತ್ತಿದೆ ಎಂದು ಹೊರಟಳು. ಹೀಗೆ ಹೋಗುತ್ತಿರುವಾಗ ಕಾಡಿನ ದಾರಿ ಬರುತ್ತದೆ, ಆ ಮಧ್ಯೆ , ಹುಲಿಯೊಂದು ಅಜ್ಜಿಯನ್ನು ಅಡ್ಡ ಹಾಕಿ, ಏ ಮುದುಕಿ ನಾನು ನಿನ್ನನ್ನ ತಿನ್ನದೇ ಬಿಡುವುದಿಲ್ಲ ಎನ್ನುತ್ತದೆ. ಇದನ್ನು ಕೇಳಿ ಹೆದರಿದ ಅಜ್ಜಿ ತಲೆ ಓಡಿಸಿ ಉಪಾಯವನ್ನು ಮಾಡುತ್ತಾಳೆ.
ಉಪಾಯ ಬಲ್ಲವನಿಗೆ ಅಪಾಯವಿಲ್ಲ
ನೋಡು ಹುಲಿರಾಯ, ನಾನು ಆರೋಗ್ಯವಾಗಿಲ್ಲ, ಕೆಲ ಸಮಸ್ಯೆಗಳಿದೆ. ಅಲ್ಲದೇ ಬಹಳ ತೆಳ್ಳಗಿದ್ದೀನಿ. ನನ್ನ ದೇಹದಲ್ಲಿ ಇರುವುದು ಕೇವಲ ಮೂಳೆಗಳು, ಮಾಂಸ ಸ್ವಲ್ಪವೂ ಇಲ್ಲ. ನೀವು ನನ್ನನ್ನ ಕೊಂದು ತಿಮದರೆ ಕೇವಲ ಮೂಳೆಗಳೇ ಸಿಗುತ್ತದೆ ಎಂದು ಹೇಳುತ್ತಾಳೆ. ಅಲ್ಲದೇ ನಾನೀಗ ನನ್ನ ಮಗಳ ಮನೆಗೆ ಹೋಗುತ್ತಿದ್ದೇನೆ, ಅಲ್ಲಿ ಚೆನ್ನಾಗಿ ತಿಂದು ದಪ್ಪ ಆಗಿ ಬರುತ್ತೇನೆ. ಆಗ ನೀನು ನನ್ನನ್ನ ತಿನ್ನಬಹುದು ಎನ್ನುತ್ತಾಳೆ.
ಇದನ್ನೂ ಓದಿ: ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು, ರಾಜನೊಬ್ಬ ಬುದ್ಧಿ ಕಲಿತ ಕಥೆ
ಇದನ್ನು ಕೇಳಿದ ಹುಲಿಯು, ನೀನು ಮೋಸ ಮಾಡಬಾರದು ಈಗ ನಂಬಿ ಬಿಡುತ್ತಿದ್ದೇನೆ ಎಂದು ಹೇಳುತ್ತದೆ. ಅದಕ್ಕೆ ಒಪ್ಪಿದ ಅಜ್ಜಿ ಮುಂದೆ ಬರುತ್ತಾಳೆ. ಸ್ವಲ್ಪ ಮುಂದೆ ಬಂದ ಅಜ್ಜಿಗೆ ನರಿಯೊಂದು ಕಾಣಿಸುತ್ತದೆ, ನರಿಗೆ ಸಹ ಅಜ್ಜಿ ಇದೇ ಕಥೆಯನ್ನು ಹೇಳಿ ಹೋಗುತ್ತಾಳೆ.
ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡರೆ ನೂರು ವರ್ಷ ಆಯಸ್ಸಂತೆ. ಅಜ್ಜಿ ಸಹ ನೆಮ್ಮದಿಯಿಂದ ಮಗಳ ಮನೆಗೆ ಹೋಗುತ್ತಾಳೆ. ಆದರೆ ಅಲ್ಲಿಂದ ಹೊರಡುವ ಸಮಯ ಬಂದಾಗ ಮಾತ್ರ ಚಿಂತೆ ಆರಂಭವಾಗುತ್ತದೆ. ತಾಯಿಯ ಚಿಂತೆಯನ್ನು ಗಮನಿಸಿದ ಮಗಳು, ಏನಾಯಿತು ಎಂದು ಕೇಳಿದಾಗ, ಕಾಡಿನಲ್ಲಿ ನಡೆದ ಘಟನೆಯನ್ನು ವಿವರಿಸುತ್ತಾಳೆ. ಇದನ್ನು ಕೇಳಿ ಉಪಾಯ ಮಾಡಿದ ಮಗಳು ದೊಡ್ಡ ಕುಂಬಳ ಕಾಯಿಯಯನ್ನು ಕತ್ತರಿಸಿ ಅಜ್ಜಿಯ ಕೈ ಕಾಲು ಹಾಗೂ ಕಣ್ಣು ಮಾತ್ರ ಕಾಣುವಂತೆ ತೂತು ಮಾಡಿ, ಕಾಡಿನ ದಾರಿಯಲ್ಲಿ ಹೋಗುವಂತೆ ಕಳುಹಿಸುತ್ತಾಳೆ.
ಅಜ್ಜಿ ಸಹ ಕಾಡಿನ ದಾರಿಯಲ್ಲಿ ಓಡುತ್ತಿರುತ್ತಾಳೆ. ಆಗ ಮಧ್ಯೆ ನರಿ ಸಿಕ್ಕು ಅಜ್ಜಿಯನ್ನು ನೋಡಿದೆಯಾ ಎಂದು ಕೇಳುತ್ತದೆ. ಅದಕ್ಕೆ ಈ ಕುಂಬಳಕಾಯಿ ಒಳಗಿದ್ದ ಅಜ್ಜಿ ಇಲ್ಲ ಎಂದು ಹೋಗುತ್ತಾಳೆ. ಅನುಮಾನ ಬಂದ ನರಿ ಅಜ್ಜಿಯನ್ನು ಹಿಂಬಾಲಿಸುತ್ತದೆ. ಆಗ ಮಧ್ಯೆ ಹುಲಿರಾಯ ಬಂದು ಕುಂಬಳಕಾಯಿಯ ಮೇಲೆ ಎರಗಿಬಿಡುತ್ತದೆ. ಆಗ ಅದರಿಂದ ಹೊರಬಂದ ಅಜ್ಜಿಯನ್ನು ನೋಡಿ ಏಕೆ ಸುಳ್ಳು ಹೇಳಿದ್ದು ಎಂದು ನರಿ ಹಾಗೂ ಹುಲಿ ಪ್ರಶ್ನೆ ಮಾಡುತ್ತವೆ.
ಇದನ್ನೂ ಓದಿ: ಹಣದಿಂದ ನೆಮ್ಮದಿ ಖರೀದಿ ಮಾಡಲು ಆಗಲ್ಲ, ಜೀವನದಲ್ಲಿ ಸಂತೋಷ ಮುಖ್ಯ
ಆಗ ಅಜ್ಜಿ ಕ್ಷಮಿಸಿ, ಈಗ ನನ್ನ ತಲೆಯನ್ನು ಯಾರೂ ತಿನ್ನುತ್ತೀರಿ ಎಂದು ಕೇಳುತ್ತದೆ. ತಲೆ ತಿನ್ನುವುದರ ವಿಚಾರವಾಗಿ ನರಿ ಹಾಗೈ ಹುಲಿಯ ಮಧ್ಯೆ ಜಗಳವಾಗುತ್ತಿರುತ್ತದೆ. ಇಬ್ಬರ ಜಗಳವನ್ನು ಲಾಭ ಮಾಡಿಕೊಂಡ ಅಜ್ಜಿ, ಅಲ್ಲಿಂದ ಪಾರಾರಿ ಆಗುತ್ತಾಳೆ. ಉಪಾಯ ಮಾಡಿ ಅಪಾಯದಿಂದ ಪಾರಾಗುವುದನ್ನ ಅಜ್ಜಿಯಿಂದ ನೋಡಿ ಕಲಿಯಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ