• Home
  • »
  • News
  • »
  • lifestyle
  • »
  • Moral Story: ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು, ರಾಜನೊಬ್ಬ ಬುದ್ಧಿ ಕಲಿತ ಕಥೆ

Moral Story: ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು, ರಾಜನೊಬ್ಬ ಬುದ್ಧಿ ಕಲಿತ ಕಥೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Story For Kids: ವಾರಕ್ಕೆ ಒಂದಾದರೂ ಕಥೆಯನ್ನು ಮಕ್ಕಳಿಗೆ ಹೇಳುವುದು ಅವಶ್ಯಕ.  ಅದಕ್ಕೆ ನಾವು ಸಹಾಯ ಮಾಡುತ್ತೇವೆ. ನೀತಿ ಕಥೆಗಳ ಮೂಲಕ ಮಕ್ಕಳಿಗೆ ಜೀವನದ ಪಾಠವನ್ನು ಹೇಳಿಕೊಡಬಹುದು.

  • Share this:

ಮಕ್ಕಳಿಗೆ ಕಥೆ (Story For Kids)  ಹೇಳುವುದರಿಂದ ಹಲವಾರು ಲಾಭಗಳಿದೆ. ಇದು ಅವರ ಬುದ್ದಿ ಹಾಗೂ ಮಾನಸಿಕ ಅಭಿವೃದ್ದಿಗೆ (Development)  ಸಹಾಯ ಮಾಡುತ್ತದೆ. ಜೀವನದಲ್ಲಿ ಪಾಠ ಕಲಿಯಲು ಸಹ ಸಹಾಯ (Help) ಮಾಡುತ್ತದೆ. ಮಕ್ಕಳಿಗೆ ನೀವು ಕೆಲವೊಂದು ವಿಚಾರಗಳನ್ನು ನಾವು ನೇರವಾಗಿ ಹೇಳಲು ಸಾಧ್ಯವಿಲ್ಲ, ಮುಖ್ಯವಾಗಿ ಹೇಳಿದರೂ ಸಹ ಅರ್ಥವಾಗುವುದಿಲ್ಲ. ಅದಕ್ಕೆ ಈ ಕಥೆಗಳು ಸಹಾಯ ಮಾಡುತ್ತದೆ. ಮೊದಲೆಲ್ಲಾ ಅಜ್ಜಿಯಂದಿರು ಮಕ್ಕಳಿಗೆ ಕಥೆ ಹೇಳುತ್ತಿದ್ದರು, ಆದರೆ ಈಗ ಯಾವುದಕ್ಕೂ ಸಮಯವಿಲ್ಲ. ವಾರಕ್ಕೆ ಒಂದಾದರೂ ಕಥೆಯನ್ನು ಮಕ್ಕಳಿಗೆ ಹೇಳುವುದು ಅವಶ್ಯಕ.  ಅದಕ್ಕೆ ನಾವು ಸಹಾಯ ಮಾಡುತ್ತೇವೆ. ನೀತಿ ಕಥೆಗಳ ಮೂಲಕ ಮಕ್ಕಳಿಗೆ ಜೀವನದ ಪಾಠವನ್ನು ಹೇಳಿಕೊಡಬಹುದು.


ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು


ಈ ವಾರದ ಕಥೆಯಲ್ಲಿ ಅತಿಯಾಗಿ ಬಯಸುವುದು ಒಳ್ಳೆಯದಲ್ಲ ಎಂಬ ನೀತಿ ಅಡಗಿದೆ,  ಒಂದು ಊರು, ಆ ಊರಿನ ರಾಜ ಬಹಳ ಒಳ್ಳೆಯದು. ಇಲ್ಲಿನ ಜನರನ್ನು ಸುಖವಾಗಿ ನೋಡಿಕೊಳ್ಳುತ್ತಿದ್ದ. ಜನ ಸಹ ಸಂತೋಷದಿಂದ ಬಾಳ್ವೆ ನಡೆಸುತ್ತಿದ್ದರು. ಒಂದು ದಿನ ಈ ಊರಿಗೆ ಋಷಿಗಳೊಬ್ಬರು ಬರುತ್ತಾರೆ. ಹೀಗೆ ಊರೆಲ್ಲಾ ಸುತ್ತುವಾಗ ಒಂದು ಗ್ರಾಮದಲ್ಲಿ ಅವರಿಗೆ ಚಿನ್ನ ನಾಣ್ಯ ಸಿಗುತ್ತದೆ. ಇದನ್ನು ನೋಡಿದ ಸಂನ್ಯಾಸಿಗಳು ಆ ನಾಣ್ಯವನ್ನು ಎತ್ತಿಕೊಳ್ಳುತ್ತಾರೆ. ಆದರೆ ನಾನು ಬಹಳ ಸರಳವಾದ ಜೀವನವನ್ನು ನಡೆಸುವ ವ್ಯಕ್ತಿ, ನನ್ನ ಜೀವನದಲ್ಲಿ ತೃಪ್ತಿ ಸಿಕ್ಕಿದೆ. ಹಾಗಾಗಿ ಈ ನಾಣ್ಯದ ಅಗತ್ಯ ನನಗೆ ಇಲ್ಲ. ಇದನ್ನು ಯಾರಿಗಾದರೂ ದಾನ ಮಾಡಬೇಕು ಎಂದು ನಿರ್ಧಾರ ಮಾಡುತ್ತಾರೆ.


ಇದನ್ನೂ ಓದಿ: ಹಣೆ ಬರಹವನ್ನು ಯಾರಿಂದಲೂ ಬದಲಾಯಿಸಲು ಸಾಧ್ಯವಿಲ್ಲ, ಮಕ್ಕಳಿಗೆ ಈ ಕಥೆ ಹೇಳಿ


ಹಾಗಾಗಿ ಊರಿನ ಸುತ್ತ ಜನರಿಗಾಗಿ ಹುಡುಕುತ್ತಾರೆ. ಈ ನಾಣ್ಯವನ್ನು ಕೊಟ್ಟರೆ ಯಾರಿಗೆ ಸಹಾಯವಾಗುತ್ತದೆ ಎಂದು ಬಹಳ ಹುಡುಕುತ್ತಾರೆ. ಆದರೆ ಆ ಊರಿನಲ್ಲಿ ಆ ರೀತಿಯ ವ್ಯಕ್ತಿಗಳು ಸಿಗುವುದಿಲ್ಲ. ಆ ಊರಿನಲ್ಲಿ ಬಹುತೇಕ ಎಲ್ಲರೂ ಸುಖವಾಗಿ ಜೀವನ ನಡೆದುತ್ತಿದ್ದರೆ, ಈ ನಾಣ್ಯ ದಾನ ಪಡೆಯುವ ಪರಿಸ್ಥಿತಿ ಅಗತ್ಯವಿಲ್ಲ. ಹೀಗೆ ಹುಡುಕುತ್ತಿರುವಾಗ ಸಂಜೆಯಾಗುತ್ತದೆ. ಯಾರೂ ಸಿಗದ ಕಾರಣ ವಿಶ್ರಾಂತಿ ಪಡೆಯುವ ಸಲುವಾಗಿ ಗ್ರಾಮದ ಬಳಿ ಇದ್ದ ಒಂದು ಮಂದಿರದ ಬಳಿ ಹೋಗುತ್ತಾರೆ. ಆ ಮಂದಿರದಲ್ಲಿ ರಾತ್ರಿ ಕಳೆಯುವ ನಿರ್ಧಾರ ಮಾಡುತ್ತಾರೆ.


ಹೀಗಿರುವ ಮರುದಿನ ಬೆಳಗ್ಗೆ ಆ ಊರಿನ ರಾಜನು ಮತ್ತೊಂದು ರಾಜ್ಯವನ್ನು ಪಡೆಯುವ ಆಸೆಯಲ್ಲಿ ಪಕ್ಕದ ರಾಜ್ಯದ ಮೇಲೆ ದಾಳಿ ಮಾಡಲು ಹೋಗುತ್ತಿರುತ್ತಾನೆ. ಹೋಗುವ ದಾರಿಯಲ್ಲಿ ಋಷಿಗಳನ್ನು ನೋಡಿ ಆಶೀರ್ವಾದ ಪಡೆದು ಹೋಗೋಣ ಎಂದು, ಮಂದಿರದ ಬಳಿ ಹೋಗುತ್ತಾರೆ. ಸೈನವನ್ನು ಹೊರಗೆ ನಿಲ್ಲಿಸಿ, ಮಂದಿರ ಒಳಗೆ ಹೋದ ರಾಜ ಸಂನ್ಯಾಸಿಗಳ ಬಳಿ ಆಶೀರ್ವಾದ ಬೇಡುತ್ತಾನೆ.




ರಾಜನಿಗೆ ಪಾಠ ಹೇಳಿದ ಋಷಿ


ಆಗ ಋಷಿಗಳು ರಾಜನಿಗೆ ತನ್ನ ಬಳಿ ಇದ್ದ ಚಿನ್ನದ ನಾಣ್ಯವನ್ನು ಕೊಡುತ್ತಾರೆ. ಇದನ್ನು ನೋಡಿ ರಾಜನಿಗೆ ಗೊಂದಲವಾಗುತ್ತದೆ. ತನಗೆ ಈ ನಾಣ್ಯವನ್ನು ಕೊಟ್ಟಿರುವುದರ ಹಿಂದಿನ ಅರ್ಥ ತಿಳಿಯುವ ಉದ್ದೇಶದಿಂದ ಸಂನ್ಯಾಸಿಗಳ ಬಳಿ ಕೇಳುತ್ತಾನೆ. ಈ ನಾಣ್ಯವನ್ನು ನನಗೆ ಎಏಕೆ ಕೊಟ್ಟಿದ್ದು ಎಂದು.  ಇದಕ್ಕೆ ಉತ್ತರಿಸಿದ ಸಂನ್ಯಾಸಿ, ಮಹಾರಾಜ ನನಗೆ ಈ ನಾಣ್ಯ ರಸ್ತೆಯಲ್ಲಿ ಸಿಕ್ಕಿದ್ದು, ಇದರ ಅವಶ್ಯಕತೆ ನನಗಿಲ್ಲ. ನಾನು ಸಂನ್ಯಾಸಿ. ಸರಳ ಜೀವನದಿಂದ ತೃಪ್ತನಾಗಿದ್ದೇನೆ. ಹಾಗಾಗಿ ಇದನ್ನು ದಾನ ಮಾಡಲು ನಾನು ಬಹಳ ಹುಡುಕಾಡಿದ್ದೇನೆ. ಆದರೆ ಈ ರಾಜ್ಯದಲ್ಲಿ ಎಲ್ಲರೂ ಸುಖವಾಗಿ ಇದ್ದರೆ. ಎಲ್ಲರೂ ತೃಪ್ತರಾಗಿರುವ ಕಾರಣ ಯಾರಿಗೆ ದಾನ ಮಾಡಲು ಸಾಧ್ಯವಾಗುವುದಿಲ್ಲ ಎಂದು ಎಲ್ಲಾ ಕಥೆಯನ್ನು ವಿವರಿಸುತ್ತಾರೆ.


ಇದನ್ನೂ ಓದಿ: ಮಾತನಾಡುವಾಗ ಜಾಣ್ಮೆ ಮುಖ್ಯ, ಈ ಕೋಗಿಲೆಯ ಕಥೆಯೇ ಒಂದು ಪಾಠ


ಅಲ್ಲದೇ ಈ ರಾಜ್ಯದ ರಾಜನಾದ ನಿಮಗೆ ಈಗಿರುವ ಸಂಪತ್ತಿನಿಂದ ಸಂತೃಪ್ತರಾಗಿಲ್ಲ, ಇನ್ನೂ ಹೆಚ್ಚಿನ ಸಂಪತ್ತು ಗಳಿಸಲು ಹೊರಟಿದ್ದೀರಿ. ಹಾಗಾಗಿ ಈ ನಾಣ್ಯದ ಅವಶ್ಯಕತೆ ನಿಮಗಿರಬಹುದು, ಹಾಗಾಗಿ ನಿಮಗೆ ನಾಣ್ಯ ಕೊಟ್ಟೆ ಎಂದು ಹೇಳುತ್ತಾರೆ.  ಇದನ್ನು ಕೇಳಿಸಿಕೊಂಡ ರಾಜನಿಗೆ ತನ್ನ ತಪ್ಪಿನ ಅರ್ಥವಾಗುತ್ತದೆ. ಇಷ್ಟೆಲ್ಲಾ ಸಂಪತ್ತಿದ್ದರೂ ನಾನು ಮತ್ತೊಂದು ರಾಜ್ಯದ ಮೇಲೆ ದಾಳಿ ಮಾಡಲು ಹೊರಟಿರುವುದು ತಪ್ಪು ಎಂಬುದು ತಿಳಿಯುತ್ತದೆ. ಹಾಗಾಗಿ ಯುದ್ದ ಮಾಡದಿರಲು ನಿರ್ಧರಿಸಿ, ಮರಳಿ ಹೋಗುತ್ತದೆ.

Published by:Sandhya M
First published: