• Home
  • »
  • News
  • »
  • lifestyle
  • »
  • Vikrama Bethala: ಜೀವನದಲ್ಲಿ ಆಯ್ಕೆ ಮಾಡುವಾಗ ಹೀಗೂ ಯೋಚನೆ ಮಾಡ್ಬೇಕು, ಮಕ್ಕಳಿಗೆ ಹೇಳಿ ಈ ನೀತಿ ಕಥೆ

Vikrama Bethala: ಜೀವನದಲ್ಲಿ ಆಯ್ಕೆ ಮಾಡುವಾಗ ಹೀಗೂ ಯೋಚನೆ ಮಾಡ್ಬೇಕು, ಮಕ್ಕಳಿಗೆ ಹೇಳಿ ಈ ನೀತಿ ಕಥೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Weekend Story For Kids: ಕಾರ್ಯವನ್ನು ವ್ಯಾಪಾರಿಗೆ ಮಾಡಬೇಕು ಎನ್ನುತ್ತಾನೆ. ಇದರಿಂದ ಖುಷಿಯಾದ ಬೇತಾಳ, ಹಾರಿ ಹೋಗುತ್ತದೆ.  ನಾವು ಅಷ್ಟೇ ಜೀವನದಲ್ಲಿ ಯಾರು ನಮಗೆ ಒಳ್ಳೆಯ ದಾರಿಯಲ್ಲಿ ಜೀವನ ನಡೆಸಲು ಸಹಾಯ ಮಾಡುತ್ತಾರೆ ಎಂಬುದನ್ನ ತಿಳಿದುಕೊಳ್ಳಬೇಕು.

  • Share this:

ನಾವು ಜೀವನದಲ್ಲಿ ಕಲಿಯಲು (Life Lesson) ಹಲವಾರು ವಿಚಾರಗಳಿರುತ್ತದೆ. ಕೆಲವೊಂದನ್ನು ನಾವು ಹಿರಿಯರಿಂದ ತಿಳಿದರೆ, ಇನ್ನೂ ಕೆಲವು ಪಾಠಗಳನ್ನು ಬದುಕು ಕಲಿಸುತ್ತದೆ. ನಮ್ಮ ಜೀವನದಲ್ಲಿ ಬಹುಮುಖ್ಯವಾಗಿ ಬೇಕಿರುವುದು ಯಾವುದು ಸರಿ, ಯಾವುದು ತಪ್ಪು ಎನ್ನುವುದರ ಜೊತೆಗೆ ಯಾರು ನಮ್ಮ ಜೀವನದಲ್ಲಿ (Life) ಬಹಳ ಮುಖ್ಯವಾಗುತ್ತಾರೆ ಎಂಬುದನ್ನ ಸಹ ತಿಳಿದುಕೊಳ್ಳಬೇಕು. ನಮ್ಮ ಜೀವನದಲ್ಲಿ ಕೆಲ ಜನರು ಬಂದು ಹೋಗುತ್ತಾರೆ. ಆದರೆ ಎಲ್ಲರೂ ನಮಗೆ ಮುಖ್ಯವಲ್ಲ, ಪ್ರತಿಯೊಬ್ಬರೂ ನಮ್ಮ ಬದುಕಿನಲ್ಲಿ ಇರಲು ಸಾಧ್ಯವಿಲ್ಲ ಅಥವಾ ಬದಲಾವಣೆಗೆ ಕಾರಣರಲ್ಲ. ಅವರು ನಮ್ಮ ಬದುಕಿನಲ್ಲಿ ಯಾವ ರೀತಿ ಬದಲಾವಣೆ ತಂದಿದ್ದಾರೆ ಎಂಬುದನ್ನ ಮಾತ್ರ ನೋಡಿಕೊಂಡು ಜನರನ್ನು ಆಯ್ಕೆ ಮಾಡಿಕೊಳ್ಳಬೇಕು. ಈ ನೀತಿಗೆ ಸೂಕ್ತವಾಗುವ ಕಥೆಯನ್ನು (Vikrama Bethala)  ಬೇತಾಳ ಸಹ ಒಮ್ಮೆ ವಿಕ್ರಮಾದಿತ್ಯನಿಗೆ ಹೇಳಿತ್ತಂತೆ. ಅದಕ್ಕೆ ವಿಕ್ರಮಾದಿತ್ಯ ಕೊಟ್ಟ ಉತ್ತರ ನಿಜಕ್ಕೂ ಕಣ್ತೆರೆಸುವಂತಿದೆ.  


ಒಬ್ಬ ಸುಂದರಿಯ ಕಥೆ


ಎಂದಿನಂತೆ ವಿಕ್ರಮನ ಬೆನ್ನೆರಿದ ಬೇತಾಳ, ಕಥೆ ಹೇಳುತ್ತೇನೆ ಉತ್ತರಿಸದಿದ್ದರೆ ತಲೆ ಕಡಿಯುತ್ತೇನೆ ಎಂದು ಹೆದರಿಸುತ್ತದೆ. ಈ ಬಾರಿ ನಿಜಕ್ಕೂ ಬೇತಾಳ ಬಹಳ ಗೊಂದಲದ ಕತೆಯನ್ನೇ ಹೇಳುತ್ತದೆ.


ಒಂದು ಊರಿನಲ್ಲಿ ಲೀಲಾವತಿ ಎನ್ನುವ, ಬಹಳ ಸುಂದರಿ ಈಕೆ ಎಂದರೆ ತಪ್ಪಲ್ಲ. ಈಕೆ ಊರಿನಲ್ಲಿಯೇ ಒಬ್ಬನ್ನ ಬಹಳ ಪ್ರೀತಿಸಿ, ಮನೆಯವರ ವಿರೋಧ ಕಟ್ಟಿಕೊಂಡು ಮದುವೆಯಾಗುತ್ತಾಳೆ. ಆದರೆ ಆ ವ್ಯಕ್ತಿ ಕಳ್ಳತನವನ್ನು ವೃತ್ತಿಯಾಗಿ ಮಾಡಿಕೊಂಡವನು. ಮದುವೆಯ ನಂತರ ಲೀಲಾವತಿಗೆ ಕಳ್ಳತನವನ್ನು ಬಿಡುವುದಾಗಿ ಮಾತು ಸಹ ಕೊಡುತ್ತಾನೆ. ಅದನ್ನು ಬಿಟ್ಟು ನೆಮ್ಮದಿಯಿಂದ ಜೀವನ ಸಹ ನಡೆಸುತ್ತಿರುತ್ತಾರೆ.


ಹೀಗೆ ಕೆಲ ಸಮಯದವರೆಗೆ ಸಂತೋಷದಿಂದ ಇಬ್ಬರು ಬದುಕು ನಡೆಸುತ್ತಿರುತ್ತಾರೆ. ನಂತರ ಅವರಿಗೆ ಸೂರ್ಯ ಎನ್ನುವ ಮಗ ಹುಟ್ಟುತ್ತಾನೆ. ಆದರೆ ಕೆಲ ತೊಂದರೆಗಳ ಕಾರಣದಿಂದ ಅವರ ಆರ್ಥಿಕ ಪರಿಸ್ಥಿತಿ ಹದಗೆಡುತ್ತದೆ. ಇದರಿಂದ ಕಂಗೆಟ್ಟು ಹೋಗುತ್ತಾರೆ. ಮಗನನ್ನ ಸಾಕಲು ಹಣ ಇರುವುದಿಲ್ಲ. ಒಂದು ಹೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ.
ಏನು ಮಾಡುವುದು ಎಂದು ಯೋಚಿಸಿ, ಮತ್ತೆ ಆತ ಕಳ್ಳತನ ಮಾಡಲು ಆರಂಭಿಸುತ್ತಾನೆ. ಹೀಗೆ ಒಂದು ದಿನ ಕಳ್ಳತನಕ್ಕೆ ಹೋದಾಗ ಆಕಸ್ಮಿಕವಾಗಿ ಆತ ಸಾವಿಗೀಡಾಗುತ್ತಾನೆ. ಇದರಿಂದ ಲೀಲಾವತಿ ಬದುಕು ಬುಡಮೇಲಾಗುತ್ತದೆ. ಹಸುಗೋಸನ್ನು ಸಾಕುವುದು ಹೇಗೆ ಎಂದು ಚಿಂತೆಯಾಗುತ್ತದೆ. ಆದರೆ ಸ್ವಲ್ಪ ದಿನಗಳ ನಂತರ ಮತ್ತೆ ಆಕೆಯ ಬದುಕಿನಲ್ಲಿ ಬದಲಾವಣೆಯಾಗುತ್ತದೆ.


ಅದೇ ಊರಿನ ವ್ಯಾಪಾರಿಯೊಬ್ಬ ಆಕೆಯನ್ನು ಮದುವೆಯಾಗುತ್ತಾನೆ. ಆತ ಹಣವಂತ ಮಾತ್ರವಲ್ಲದೇ, ಗುಣವಂತ ಸಹ. ಕೇವಲ ಲೀಲಾವತಿಯನ್ನು ಪ್ರೀತಿಯಿಂದ ನೋಡಿಕೊಳ್ಳುವುದಲ್ಲದೇ, ಮಗ ಸೂರ್ಯನ್ನ ಸಹ ಸ್ವಂತ ಮಗನಂತೆ ಸಾಕಿ. ಒಳ್ಳೆಯ ಶಿಕ್ಷಣ ಕೊಡಿಸಿ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಬೆಳೆಸುತ್ತಾನೆ.
ಇದನ್ನೂ ಓದಿ: ರೆಸ್ಟೊರೆಂಟ್​ ಆಹಾರಗಳು ರುಚಿಯಾಗಿರುವುದರ ಹಿಂದಿನ ರಹಸ್ಯ ಇದು


ಗೊಂದಲದಲ್ಲಿ ಸೂರ್ಯ


ಹೀಗೆ ಎಲ್ಲವೂ ಸರಿಯಾಗಿ ನಡೆಯುತ್ತಿರುತ್ತದೆ. ಸೂರ್ಯ ಸಹ ದೊಡ್ಡವನಾಗುತ್ತಾನೆ. ಬೆಳೆದು ನಿಂತ ಸೂರ್ಯ ಇನ್ನೇನು ವ್ಯಾಪಾರವನ್ನು ವಹಿಸಿಕೊಂಡು, ಮುಂದುವರೆಸಿಕೊಂಡು ಹೋಗಬೇಕು ಎನ್ನುವ ಸಂದರ್ಭದಲ್ಲಿ, ಲೀಲಾವತಿ ಮತ್ತು ಆಕೆಯ ಗಂಡ ಅಪಘಾತವೊಂದರಲ್ಲಿ ಸಾವನ್ನಪ್ಪುತ್ತಾರೆ.  ಸೂರ್ಯ ತನ್ನ ತಂದೆ-ತಾಯಿಗಳ ಕಾರ್ಯ ಮಾಡಲು ನದಿಯ ಬಳಿ ತೆರಳುತ್ತಾನೆ. ಆಗ ಅವನಿಗೆ ನದಿಯಲ್ಲಿ ಮೂರು ಕೈಗಳು ಕಾಣಿಸುತ್ತದೆ.


ಒಂದು ಆತನ ತಾಯಿ ಲೀಲಾವತಿಯದ್ದು ಎಂದು ತಿಳಿಯುತ್ತದೆ. ಇನ್ನೆರಡರಲ್ಲಿ ಒಂದು ಸಾಕಿದ ತಂದೆ ವ್ಯಾಪಾರಿಯದ್ದು, ಮತ್ತೊಂದು ಬಹಳ ವರ್ಷಗಳ ಹಿಂದೆ ಮೃತಪಟ್ಟಿದ್ದ ಜನ್ಮಕೊಟ್ಟ ತಂದೆ ಕಳ್ಳನದ್ದಾಗಿರುತ್ತದೆ.


ಇಲ್ಲಿಗೆ ಕಥೆ ನಿಲ್ಲಿಸಿದ ಬೇತಾಳ, ವಿಕ್ರಮನಿಗೆ ಈಗ ಹೇಳು ಆತ ಯಾರ ಕಾರ್ಯ ಮಾಡಬೇಕು. ಜನ್ಮಕೊಟ್ಟ ತಂದೆಯೊದ್ದ ಅಥವಾ ಸಾಕಿದ ತಂದೆಯದ್ದಾ ಎಂದು ಕೇಳುತ್ತದೆ. ಸ್ವಲ್ಪ ಹೊತ್ತು ವಿಕ್ರಮಾದಿತ್ಯ ಯೋಚನೆ ಮಾಡುತ್ತಾನೆ. ನಂತರ, ಆತ ಸಾಕಿದ ವ್ಯಾಪಾರಿ ತಂದೆಯ ಕಾರ್ಯವನ್ನು ಮಾಡಬೇಕು ಎನ್ನುತ್ತಾನೆ.


ಅದಕ್ಕೆ ಮರುಪ್ರಶ್ನೆ ಹಾಕಿದ ಬೇತಾಳ ಯಾಕೆ ಎಂದು ಕೇಳುತ್ತದೆ.  ಅದಕ್ಕೆ ಉತ್ತರಿಸಿದ ವಿಕ್ರಮಾದಿತ್ಯ, ಜೀವನದಲ್ಲಿ ಒಳ್ಳೆಯ ಹೆಸರು ಗಳಿಸಲು ಸಾಕಿದ ತಂದೆಯೇ ಕಾರಣ. ಕಳ್ಳನ ಮಗನಾಗಿದ್ದರೆ, ಮುಂದೊಂದು ದಿನ ಸಮಾಜದಲ್ಲಿ ಅವಮಾನ ಅನುಭವಿಸಬೇಕಿತ್ತು. ಕೇವಲ ಜನ್ಮ ಕೊಡುವುದು ಸಾಧನೆಯಲ್ಲ. ಆದರೆ,  ಜೀವನ ಕೊಡುವುದು ಮುಖ್ಯ.


ಇದನ್ನೂ ಓದಿ: ಮದುವೆಗೆ ಮೊದಲು ತೂಕ ಇಳಿಸೋದು ಹೇಗೆ ಅಂತ ಚಿಂತೆ ಬಿಡಿ, ನಾವ್ ಹೇಳೋ ಟಿಪ್ಸ್ ಫಾಲೋ ಮಾಡಿ


ಅದನ್ನು ವ್ಯಾಪಾರಿ ಮಾಡಿದ್ದಾನೆ. ಹಾಗಾಗಿ ಕಾರ್ಯವನ್ನು ವ್ಯಾಪಾರಿಗೆ ಮಾಡಬೇಕು ಎನ್ನುತ್ತಾನೆ. ಇದರಿಂದ ಖುಷಿಯಾದ ಬೇತಾಳ, ಹಾರಿ ಹೋಗುತ್ತದೆ.  ನಾವು ಅಷ್ಟೇ ಜೀವನದಲ್ಲಿ ಯಾರು ನಮಗೆ ಒಳ್ಳೆಯ ದಾರಿಯಲ್ಲಿ ಜೀವನ ನಡೆಸಲು ಸಹಾಯ ಮಾಡುತ್ತಾರೆ ಎಂಬುದನ್ನ ತಿಳಿದುಕೊಳ್ಳಬೇಕು.

Published by:Sandhya M
First published: