Moral Story: ಸ್ವಾರ್ಥ ಬಿಟ್ಟು ಆಲೋಚನೆ ಮಾಡೋದು ಬಹಳ ಮುಖ್ಯ, ಮಕ್ಕಳಿಗೆ ಹೇಳಿ ಈ ವಿಭಿನ್ನ ಕಥೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Weekend Story: ಮಕ್ಕಳಿಗೆ ಕಥೆ ಹೇಳಿದರೆ ಅವರ ಬುದ್ದಿ ಬೆಳವಣಿಗೆ ಆಗುವುದಲ್ಲದೇ, ಅವರು ಜೀವನದ ಪಾಠಗಳನ್ನು ಕಲಿಯುತ್ತಾರೆ. ಮಕ್ಕಳಿಗೆ ಸ್ವಾರ್ಥ ಎಷ್ಟು ಕೆಟ್ಟ ಅಭ್ಯಾಸ ಎಂಬುದನ್ನ ಈ ಸುಂದರವಾದ ಕಥೆಯ ಮೂಲಕ ತಿಳಿಸಿ ಹೇಳಿ.

  • Share this:

ಒಂದು ನದಿಯ (River)  ದಡದಲ್ಲಿ ಸುಂದರವಾದ ಊರಿತ್ತು. ಆ ಹಳ್ಳಿಯ (Village) ಜನರು ಕಷ್ಟಪಟ್ಟು ದುಡಿದು ತಮ್ಮ ಜೀವನವನ್ನು ಸಾಗಿಸುತ್ತಿದ್ದರು. ಈ ಹಳ್ಳಿಯಲ್ಲಿ ರಾಮು ಎನ್ನುವ ಬಡ ಕುರುಬ ವಾಸವಿದ್ದ, ತನ್ನ ಮಧುರವಾದ ಧ್ವನಿಗಾಗಿ 9Sing) ಆತ ಪ್ರಸಿದ್ಧನಾಗಿದ್ದ. ಆತ ಪ್ರತಿದಿನ ತನ್ನ ಕುರಿಗಳನ್ನು ಹಾಡು ಹೇಳುತ್ತಾ ಮೇಯಿಸಲು ಕರೆದುಕೊಂಡು ಹೋಗುತ್ತಿದ್ದ. ಆ ಊರಿನಲ್ಲೊಂದು ಬೆಟ್ಟ ಇತ್ತು, ಆ ಬೆಟ್ಟದ ಮೇಲೆ ವಿಶಾಲವಾದ ಮರ (Tree). ಈ ರಾಮು ಆ ಬೆಟ್ಟದಲ್ಲಿ ಕುರಿಗಳನ್ನು ಕಾಯಲು ಬಿಟ್ಟು ಆ ಮರದ ಬಳಿ ಕುಳಿತು ಹಾಡು ಹೇಳುತ್ತಾ, ಕುರಿಗಳನ್ನು ಕಾಯುತ್ತಿದ್ದ. ನಂತರ ಸಂಜೆಯಾದಾಗ ಎಲ್ಲಾ ಕುರಿಗಳನ್ನು ಕರೆದುಕೊಂಡು ಹಳ್ಳಿಯ ಕಡೆ ಹೋಗಿ, ಅವರವರ ಕುರಿಗಳನ್ನು ಅವರಿಗೆ ತಲುಪಿಸಿ ಮನೆಗೆ ಹೋಗುತ್ತಿದ್ದ. ಪ್ರತಿದಿನ ಬಿಸಿಲಿನಲ್ಲಿ ಕುರಿಗಳನ್ನು ಕಾಯುವ ಕಾರಣಕ್ಕೆ ರಾಮುವಿಗೆ ಪ್ರತಿದಿನ ಒಂದು ನಾಣ್ಯ ಸಿಗುತ್ತಿತ್ತು. ಆ ನಾಣ್ಯವನ್ನು ರಾಮು ಮನೆಗೆ ತೆಗೆದುಕೊಂಡು ಹೋಗುತ್ತಿದ್ದ.


ಕುಟುಂಬಕ್ಕಾಗಿ ದುಡಿಯುತ್ತಿದ್ದ ರಾಮು


ಮನೆಗೆ ಹೋದ ರಾಮು ಅಮ್ಮ ನನಗೆ ತುಂಬಾ ಹಸಿವಾಗಿದೆ ಎಂದು ತಮ್ಮನ ಜೊತೆ ಊಟಕ್ಕೆ ಕೂರುತ್ತಾನೆ. ಆದರೆ ಅವರ ಮನೆಯಲ್ಲಿ ಬಡತನದ ಕಾರಣದಿಂದ ಹೆಚ್ಚಾಗಿ ರೊಟ್ಟಿ ಮಾಡಲಾಗುತ್ತಿತ್ತು, ಅದಕ್ಕೆ ರಾಮುವಿನ ತಮ್ಮ ಚೀನು, ಥೋ ಯಾವಾಗಲೂ ಈ ರೊಟ್ಟಿ ತಿಂದು ಬೇಸರ ಆಗಿದೆ, ಬೇರೆ ಏನಾದರೂ ಮಾಡಬಹುದಲ್ವಾ? ಎಂದು ಅಮ್ಮನನ್ನ ಕೇಳುತ್ತಾನೆ.


ಅದಕ್ಕೆ ರಾಮುವಿನ ತಾಯಿ, ನೋಡು ಹಾಗೆಲ್ಲ ಹೇಳಬಾರದು. ರಾಮು ಕಷ್ಟಪಟ್ಟು ದುಡಿದ ಕಾರಣ ನಮಗೆ ಒಂದು ಹೊತ್ತಿನ ಊಟ ಸಿಗುತ್ತಿದೆ ಎಂದು ಹೇಳಿದಳು. ಊಟದ ನಂತರ ರಾಮು ಆ ದಿನ ದುಡಿಮೆಯನ್ನು ಅಮ್ಮನಿಗೆ ಕೊಟ್ಟು, ಅಮ್ಮ ತಗೋ ಈ ದಿನದ ದುಡಿಮೆ ಸಾಧ್ಯವಾದರೆ ಚೀನುಗೆ ಬೇರೆ ಅಡಿಗೆ ಮಾಡಿ ಹಾಕು ಎನ್ನುತ್ತಾನೆ.


ಹೀಗೆ ರಾಮು ಪ್ರತಿದಿನ ಕುರಿಗಳನ್ನು ಕರೆದುಕೊಂಡು ಬೆಟ್ಟಕ್ಕೆ ಬರುತ್ತಿದ್ದ. ಹೀಗೆ ಕೆಲ ದಿನಗಳ ನಂತರ ಒಂದು ದಿನ ಕುರಿ ಕಾಯಲು ಬಂದಾಗ ಅಲ್ಲೊಬ್ಬ ವ್ಯಕ್ತಿ ಮರವನ್ನು ಕಡಿಯುತ್ತಿದ್ದ. ಇದನ್ನು ನೋಡಿ ರಾಮುಗೆ ಬೇಸರವಾಯಿತು, ರಾಮುಗೆ ಆ ಮರ ಎಂದರೆ ಬಹಳ ಇಷ್ಟ. ಹಾಗಾಗಿ ಆ ಮರವನ್ನು ಕಾಪಾಡಬೇಕು ಎಂದು ನಿರ್ಧಾರ ಮಾಡಿದ.


ಮರ ಕಾಪಾಡಿದ ರಾಮು


ಸ್ವಲ್ಪ ಹೊತ್ತು ಯೋಚನೆ ಮಾಡಿದ ರಾಮು, ಒಂದು ಉಪಾಯ ಮಾಡಿದ. ಆ ಮರ ಕಡಿಯುವವನ ಬಳಿ ಹೋಗಿ, ನಿನಗೆ ಈ ಮರದ ಶಾಪದ ಬಗ್ಗೆ ಗೊತ್ತಿಲ್ವ? ಬಹಳ ವರ್ಷಗಳ ಹಿಂದೆ ಒಬ್ಬ ಋಷಿ , ಭೂತಕ್ಕೆ ಶಾಪ ಕೊಟ್ಟಿದ್ದ. ಹಾಗಾಗಿ ಈ ಮರದಲ್ಲಿ ಒಂದು ಮುದಿ ರಾಕ್ಷಷಿ ಇರುತ್ತದೆ. ಯಾವುದೇ ವ್ಯಕ್ತಿ ಈ ಮರವನ್ನು ಮುಟ್ಟಿದ್ರೆ, ಅವರ ಜೀವವನ್ನು ಅದು ತೆಗೆದುಬಿಡುತ್ತದೆ. ಹಾಗಾಗಿ ಆ ರಾಕ್ಷಸಿ ಬಂದು ನಿನ್ನ ಜೀವ ತೆಗೆಯುವ ಮೊದಲು ಇಲ್ಲಿಂದ ಓಡಿ ಹೋಗು ಎಂದು ಆ ವ್ಯಕ್ತಿಯನ್ನು ಹೆದರಿಸುತ್ತಾನೆ.


ಇದನ್ನೂ ಓದಿ:ಹಣದಿಂದ ನೆಮ್ಮದಿ ಖರೀದಿ ಮಾಡಲು ಆಗಲ್ಲ, ಜೀವನದಲ್ಲಿ ಸಂತೋಷ ಮುಖ್ಯ


ಇದರಿಂದ ಹೆದರಿಂದ ಮರ ಕಡಿಯುವವನು ಓಡಿ ಹೋದ. ಆ ಸಮಯದಲ್ಲಿ ಮರದ ದೇವಿ ಅಲ್ಲಿ ಪ್ರಕಟವಾಗಿ, ರಾಮು ನನ್ನ ಜೀವ ಉಳಿಸಿದಕ್ಕೆ ಧನ್ಯವಾದಗಳು. ನಾನು ನಿನಗೆ ಒಂದು ವರ ಕೊಡುತ್ತೇನೆ ಎನ್ನುತ್ತದೆ. ಹಾಗೆಯೇ ಒಂದು ಗಂಟೆಯನ್ನು ಸಹ ಕೊಡುತ್ತದೆ. ಆದರೆ ಅದನ್ನು ನೋಡಿ ರಾಮು, ಇದು ಸಾಮಾನ್ಯ ಗಂಟೆ, ಇದರಿಂದ ನನಗೇನು ಸಹಾಯ ಎಂದು ಕೇಳುತ್ತಾನೆ. ಅದಕ್ಕೆ ಆ ಮರ ಇದು ಸಾಮಾನ್ಯ ಗಂಟೆಯಲ್ಲ, ಜಾದುವಿನ ಗಂಟೆ. ಈ ಗಂಟೆಯ ಶಬ್ಧದಿಂದ ನಿನಗೆ ಯಾವ ಊಟ ಬೇಕೋ ಅದು ಸಿಗುತ್ತದೆ ಎಂದು ಹೇಳುತ್ತದೆ.




ಇದನ್ನು ಕೇಳಿ ಖುಷಿಯಾದ ರಾಮು, ಧನ್ಯವಾದ, ಇನ್ನು ಮುಂದೆ ನಾನು ಮತ್ತೆ ಕುಟುಂಬ ಹಸಿವಿನಿಂದ ಬಳಲುವುದಿಲ್ಲ ಎಂದು ಸಂತಸ ವ್ಯಕ್ತಪಡಿಸುತ್ತಾನೆ. ಆದರೆ ಇದಕ್ಕೆ ಮರ. ಒಂದು ನೆನಪಿರಲಿ, ಈ ಗಂಟೆ ದಿನದಲ್ಲಿ ಒಂದು ಹೊತ್ತು ಮಾತ್ರ ಕೆಲಸ ಮಾಡುತ್ತದೆ ಎಂದು. ಇದಕ್ಕೆ ಒಪ್ಪಿದ ರಾಮು ಮನೆಯಲ್ಲಿ ಹೋಗಿ ಈ ವಿಚಾರವನ್ನು ಹೇಳುತ್ತಾನೆ. ಅದರಂತೆ ಮನೆಯಲ್ಲಿ ಗಂಟೆಯ ಶಕ್ತಿಯನ್ನು ಪರೀಕ್ಷೆ ಮಾಡುತ್ತಾನೆ.


ಹೀಗೆ ದಿನಗಳು ಉರುಳುತ್ತವೆ. ಒಂದು ದಿನ ಮನೆಗೆ ಹೋದಾಗ ರಾಮುವಿನ ತಮ್ಮ ಆ ಗಂಟೆಯಿಂದ ಆಹಾರ ಪಡೆದು ಖಾಲಿ ಮಾಡಿಬಿಡುತ್ತಾನೆ. ಇದರಿಂದ ಕೋಪಗೊಂಡ ರಾಮು ಮರುದಿನ ಆ ಗಂಟೆಯನ್ನು ತನ್ನ ಜೊತೆ ತೆಗೆದುಕೊಂಡು ಹೋಗುತ್ತಾನೆ.


ಇದನ್ನೂ ಓದಿ: ನಂಬಿಕೆ ದ್ರೋಹ ಮಾಡಿದವರಿಗೆ ತಕ್ಕ ಶಿಕ್ಷೆ ಕೊಟ್ಟ ಸಿಂಹ, ಕಾಡಿನ ರಾಜನ ಕಥೆ ಇದು


ಆದರೆ ಮನೆಯಲ್ಲಿ ಆಹಾರವಿಲ್ಲದೇ ಅಮ್ಮ ಹಾಗೂ ತಮ್ಮ ಸಂಜೆಯ ತನಕ ಹಸಿವಿನಿಂದ ಪರದಾಡುತ್ತಿರುತ್ತಾರೆ. ಇದರಿಂದ ಅರ್ಥ ಮಾಡಿಕೊಂಡ ರಾಮು, ನಾನು ಬರೀ ನನ್ನ ಸ್ವಾರ್ಥವನ್ನು ನೋಡಿದೆ, ತಪ್ಪಾಯಿತು ಎಂದು, ಗಂಟೆಯನ್ನು ಮನೆಯಲ್ಲಿ ಇಟ್ಟುಹೋಗಲು ಆರಂಭಿಸುತ್ತಾನೆ.


ಕಥೆ: ನಿಸ್ವಾರ್ಥವಾಗಿ ಬದುಕಿದರೆ ಸಂತೋಷ ಜಾಸ್ತಿ

Published by:Sandhya M
First published: