• Home
  • »
  • News
  • »
  • lifestyle
  • »
  • Weekend Stories: ಮಣ್ಣಿನಿಂದ ಬಂಗಾರ ಪಡೆದ ವ್ಯಕ್ತಿಯ ಕಥೆ, ದುಡಿಮೆಯೇ ದೈವ

Weekend Stories: ಮಣ್ಣಿನಿಂದ ಬಂಗಾರ ಪಡೆದ ವ್ಯಕ್ತಿಯ ಕಥೆ, ದುಡಿಮೆಯೇ ದೈವ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Panchatantra Stories for Kids: ಹಣದ ಮೌಲ್ಯ ಅರ್ಥವಾಗುವುದು ನಾವು ಸಂಪಾದಿಸಿದಾಗ ಮಾತ್ರ. ಹಣವನ್ನು ವೇಸ್ಟ್​ ಮಾಡುವುದು ಸಮಸ್ಯೆಗೆ ಕಾರಣವಾಗುತ್ತದೆ. ಈ ರೀತಿ ಪ್ರಯೋಗಗಳ ಹೆಸರಿನಲ್ಲಿ ಹಣ ವ್ಯರ್ಥ ಮಾಡಿ, ನಂತರ ಬುದ್ದಿ ಕಲಿತ ವ್ಯಕ್ತಿಯೊಬ್ಬನ ಕಥೆ ಇಲ್ಲಿದೆ.  

  • Share this:

ನೀವು ಸಾಮಾನ್ಯವಾಗಿ ಕೇಳಿರುತ್ತೀರಿ, ಕುಳಿತು ತಿಂದರೆ ಕುಡಿಕೆ ಹೊನ್ನು (Gold) ಸಾಲದು ಎಂಬ ಗಾದೆಯನ್ನು. ಇದರ ಹಿಂದೆ ಹಲವಾರು ಗೂಡಾರ್ಥವಿದೆ. ದುಡಿಮೆ ಜೀವನದಲ್ಲಿ ಬಹಳ ಮುಖ್ಯವಾದ ವಿಚಾರ. ದುಡಿಮೆಯೇ ಬಂಗಾರ ಎನ್ನುವ ಮಾತು ನಮ್ಮ ಜೀವನಕ್ಕೆ (Life) ಬಹಳ ಮುಖ್ಯ. ಹಣದ ಮೌಲ್ಯ ಅರ್ಥವಾಗುವುದು ನಾವು ಸಂಪಾದಿಸಿದಾಗ ಮಾತ್ರ. ಹಣವನ್ನು ವೇಸ್ಟ್​ ಮಾಡುವುದು ಸಮಸ್ಯೆಗೆ ಕಾರಣವಾಗುತ್ತದೆ. ಈ ರೀತಿ ಪ್ರಯೋಗಗಳ ಹೆಸರಿನಲ್ಲಿ ಹಣ ವ್ಯರ್ಥ ಮಾಡಿ, ನಂತರ ಬುದ್ದಿ ಕಲಿತ ವ್ಯಕ್ತಿಯೊಬ್ಬನ ಕಥೆ ಇಲ್ಲಿದೆ.  ರಾಮನಗರ ಎಂಬ ಊರಿನಲ್ಲಿ ಸುಮಾರು 200 ಕುಟುಂಬಗಳಿದ್ದವು, ಅದರಲ್ಲಿ ಕುಬೇರಪ್ಪ ಎನ್ನುವವರ ಕುಟುಂಬ ಸಹ ಒಂದು. ಕುಬೇರಪ್ಪ ಆ ಊರಿನಲ್ಲಿ ಅಲ್ಪ –ಸ್ವಲ್ಪ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದರು. ಇವರಿಗೆ ಚಂದ್ರಕೀರ್ತಿ ಎನ್ನುವ ಮಗನಿದ್ದ. ಆ ಮಗ ಮಾಡುತ್ತಿದ್ದ ಕೆಲಸ ತಂದೆಗೆ ತಲೆ ನೋವಾಗಿತ್ತು.


ಹಣ ವ್ಯರ್ಥ ಮಾಡುತ್ತಿದ್ದ ಮಗ


ಚಂದ್ರಕೀರ್ತಿಗೆ ಪ್ರಯೋಗಗಳನ್ನು ಮಾಡುವ ಹುಚ್ಚು ಅದಕ್ಕಾಗಿ ತಂದೆಯ ಬಳಿ ಹಣ ಪಡೆದು, ಪಡೆದು ವ್ಯರ್ಥ ಮಾಡಿದ್ದ. ಯಾರೂ ಅವನಿಗೆ ತಾಮ್ರದಿಂದ ಬಂಗಾರ ಪಡೆಯಬಹುದು ಎಂದು ಹೇಳಿದ್ದರು. ಇದನ್ನು ನಂಬಿದ್ದ ಆತ, ಅದಕ್ಕೆ ಸಹ ಬಹಳಷ್ಟು ಹಣ ಖರ್ಚು ಮಾಡಿದ್ದ. ಇದು ಕುಬೇರಪ್ಪನನ್ನ ಚಿಂತೆಗೀಡು ಮಾಡಿತ್ತು. ಹೇಗೆ ಮಗನಿಗೆ ಬುದ್ದಿ ಕಲಿಸುವುದು ಎಂದು ಯೋಚಿಸುತ್ತಿದ್ದರು.  ಹೀಗಿರುವಾಗ ಆ ಊರಿಗೆ ಜ್ಞಾನಿಗಳೊಬ್ಬರು ಬರುತ್ತಾರಂತೆ. ಅವರ ಬಳಿ ಹೋದ ಕುಬೇರಪ್ಪ ಮಗನ ಕೆಲಸಗಳನ್ನು ಹೇಳಿ ಹೇಗೆ ದಾರಿಗೆ ತರುವುದು, ಸಹಾಯ ಮಾಡಿ ಎಂದು ಕೇಳಿಕೊಳ್ಳುತ್ತಾನೆ.


ಅದಕ್ಕೆ ಒಪ್ಪಿಗೊಂಡ ಜ್ಞಾನಿಯು, ಚಂದ್ರಕೀರ್ತಿಯನ್ನು ಕರೆಸಿ, ಕುಳಿತುಕೊ ನನಗೆ ತಾಮ್ರದಿಂದ ಬಂಗಾರ ಮಾಡುವ ಪ್ರಯೋಗದ ಬಗ್ಗೆ ಮಾತನಾಡಬೇಕು ಎಂದು ಹೇಳುತ್ತಾರೆ. ಜ್ಞಾನಿಯು ನೋಡು ಚಂದ್ರಕೀರ್ತಿ ತಾಮ್ರದಿಂದ ಬಂಗಾರ ಪಡೆಯುವುದು ಬಹಳ ಸುಲಬ. ನನಗೆ ಗೊತ್ತು. ಆದರೆ ಅದಕ್ಕೆ 4 ವಸ್ತುಗಳು ಬೇಕು. ಅದರಲ್ಲಿ ನನ್ನ ಬಳಿ 3 ವಸ್ತುಗಳಿದೆ. 1 ವಸ್ತುವನ್ನು ನೀನು ತಂದೆ ಮಾಡಬಹುದು ಎನ್ನುತ್ತಾರೆ.


ಇದನ್ನೂ ಓದಿ: ದುಷ್ಟ ಬುದ್ದಿ ತೋರಿಸಿದ ಹಾವಿಗೆ ಬುದ್ದಿ ಕಲಿಸಿದ ಬಾತುಕೋಳಿ, ಮಕ್ಕಳಿಗಾಗಿ ಪಂಚತಂತ್ರ ಕಥೆ


ಇದನ್ನು ಕೇಳಿ ಸಂತೋಷಗೊಂಡ ಚಂದ್ರಕೀರ್ತಿ, ಯಾವ ವಸ್ತುಬೇಕು ಹೇಳಿ ಎಷ್ಟು ಕಷ್ಟವಾದರೂ ಸರಿ ನಾನು ಸಂಪಾದಿಸಿಕೊಂಡು ಬರುತ್ತೇನೆ ಎಂದು ಹೇಳುತ್ತಾನೆ.  ಇದನ್ನು ಕೇಳಿದ ಜ್ಞಾನಿಗಳು, ಬಾಳೆ ಎಲೆಯ ಮೇಲೆ ತೆಳ್ಳಗಿನ ಧೂಳು ಇರುತ್ತದೆ. ಅದು ಬೇಕು. ಆದರೆ ಬಾಳೆ ಗಿಡವನ್ನು ನೀನೇ ಬೆಳೆಸಬೇಕು ಎಂದು ಹೇಳುತ್ತಾರೆ. ಅಲ್ಲದೇ, ನಾನು 5 ವರ್ಷದ ನಂತರ ಮರಳಿ ಬರುತ್ತೇನೆ. ನೀನು 2 ಕೆಜಿ ಧೂಳು ಸಂಗ್ರಹಿಸಿಕೊಂಡಿರುವ ಎನ್ನುತ್ತಾರೆ. ಇದಕ್ಕೆ ಒಪ್ಪಿಕೊಂಡ ಚಂದ್ರಕೀರ್ತಿ ಮನೆಗೆ ಹೋಗಿ ಅಪ್ಪನ ಬಳಿ ತೋಟ ಎಲ್ಲಿದೆ ಎಂದು ತಿಳಿದುಕೊಳ್ಳುತ್ತಾನೆ.


ಜ್ಞಾನಿಯಿಂದ ಬದಲಾದ ಚಂದ್ರಕೀರ್ತಿ


ಸುಮಾರು 5 ಎಕರೆ ತೋಟ ಯಾರೂ, ಉತ್ತದೆ-ಬಿತ್ತದೆ ಪಾಳು ಬಿದ್ದಿದ್ದು.  ಅದನ್ನು ಚಂದ್ರಕೀರ್ತಿಯೇ ಫಸಲು ಮಾಡಿ, ಹಗಲು ರಾತ್ರಿ ಪರದಾಡಿ ಹಸನು ಮಾಡುತ್ತಾನೆ. ನಂತರ ಅದರಲ್ಲಿ ಬಾಳೆಗಿಡ ನೆಡುತ್ತಾನೆ. ಪ್ರತಿದಿನ ಮಿಸ್ ಮಾಡದೇ ಅದಕ್ಕೆ ನೀರು ಹಾಕಿ, ಅದರ ಎಲೆಯ ಮೇಲಿನ ಧೂಳನ್ನು ಸಂಗ್ರಹಿಸುತ್ತಾನೆ.  ಹೀಗಿರುವಾಗ ಒಂದು ವರ್ಷ ಕಳೆಯುತ್ತದೆ. ಆದರೆ ಕೇವಲ ಒಂದು ಹಿಡಿ ಧೂಳು ಸಂಗ್ರಹವಾಗುತ್ತದೆ. ಇತ್ತ ಬಾಳೆಗಿಡದಲ್ಲಿ ಉತ್ತಮ ಬಾಳೆಗೊನೆಗಳು ಬಂದಿರುತ್ತದೆ. ಇದರ ಬಗ್ಗೆ ಚಂದ್ರಕೀರ್ತಿಗೆ ಚಿಂತೆ ಇರುವುದಿಲ್ಲ. ಅವನ ತಂದೆ ಕುಬೇರಪ್ಪ ಈ ಬಾಳೆಗೊನೆ ಮಾರಿ ಒಳ್ಳೆಯ ಹಣ ಸಂಪಾದಿಸುತ್ತಾನೆ.




ಹೀಗೆ 5 ವರ್ಷಗಳು ಕಳೆಯುತ್ತದೆ, 5 ವರ್ಷದಲ್ಲಿ ಕುಬೇರಪ್ಪ ಬಾಳೆಗೊನೆ ಮಾಡಿ ಸಾಕಷ್ಟು ಹಣ ಸಂಪಾದಿಸಿರುತ್ತಾನೆ. ಇತ್ತ ಚಂದ್ರಕೀರ್ತಿ 2 ಕೆಜಿ ಧೂಳನ್ನು ಸಹ ಸಂಗ್ರಹಿಸಿ ಇಟ್ಟುಕೊಂಡಿರುತ್ತಾನೆ. ಕೊಟ್ಟ ಮಾತಿನಂತೆ ಆ ಜ್ಞಾನಿಗಳು ಸಹ ಊರಿಗೆ ಬರುತ್ತಾರೆ. ಜ್ಞಾನಿಗಳ ಬಳಿ ಕುಬೇರಪ್ಪ ಮತ್ತು ಚಂದ್ರಕೀರ್ತಿ ಬರುತ್ತಾರೆ. ಚಂದ್ರಕೀರ್ತಿ ನಾನು ಧೂಳು ಸಂಪಾದಿಸಿಕೊಂಡು ಬಂದಿದ್ದು, ತಾಮ್ರದಿಂದ ಬಂಗಾರ ಮಾಡುವುದು ಹೇಗೆ ಎಂದು ಕೇಳುತ್ತಾನೆ. ಆಗ ಕುಬೇರಪ್ಪ ಈ 5 ವರ್ಷದಲ್ಲಿ ಬಾಳೆಯಿಂದ ಪಡೆದ ಹಣದ ಮೂಟೆಯನ್ನು ತಂದು ಇಡುತ್ತಾನೆ.




ಇದನ್ನೂ ಓದಿ: ಒಬ್ಬರಿಗೆ ಸಹಾಯ ಮಾಡಿದ್ರೆ ಎಂದಿಗೂ ಕೆಟ್ಟದಾಗಲ್ಲ, ಪಾರಿವಾಳ-ಇರುವೆಯ ಸುಂದರ ಕಥೆ


ಆಗ ಜ್ಞಾನಿ, ನೋಡು ಚಂದ್ರಕೀರ್ತಿ ತಾಮ್ರದಿಂದ ಯಾರೂ ಬಂಗಾರ ಮಾಡಲು ಸಾಧ್ಯವಿಲ್ಲ. ನೀನು ಬೆಳೆದ ಬೆಳೆಯಿಂದ ಬಂದ ಹಣವೇ ಬಂಗಾರ. ಮಣ್ಣಿನಿಂದ ಬಂಗಾರ ಪಡೆದ ಕೀರ್ತಿ ನಿನ್ನದು ಚಂದ್ರಕೀರ್ತಿ ಎಂದು ಹೇಳುತ್ತಾರೆ. ಇದನ್ನು ಅರ್ಥ ಮಾಡಿಕೊಂಡ ಚಂದ್ರಕೀರ್ತಿ ಕಷ್ಟಪಟ್ಟು ದುಡಿಯುವ ನಿರ್ಧಾರ ಮಾಡುತ್ತಾರೆ. ಕುಬೇರಪ್ಪನಿಗೆ ಇದನ್ನು ನೋಡಿ ಸಂತೋಷವಾಗುತ್ತದೆ. ಜ್ಞಾನಿಗಳಿಗೆ ಧನ್ಯವಾದ ತಿಳಿಸಿ ತಂದೆ-ಮಗ ಹೋಗುತ್ತಾರೆ.

Published by:Sandhya M
First published: