HOME » NEWS » Lifestyle » WEEKEND HAIR CARE TRY THIS QUICK HIBISCUS OIL TO PREVENT HAIR FALL AND STRENGTHEN HAIR FOLLICLES NATURALLY STG LG

Health Tips: ಕೂದಲು ಉದುರುವಿಕೆ ಸಮಸ್ಯೆ ನಿವಾರಿಸಲು ಇಲ್ಲಿವೆ ಕೆಲವು ಟಿಪ್ಸ್...!

ದಾಸವಾಳದ ಎಣ್ಣೆ ತಯಾರಿಸಲು 8 ದಾಸವಾಳದ ಹೂವು ಮತ್ತು 8 ದಾಸವಾಳದ ಎಲೆಗಳನ್ನು ತೆಗೆದುಕೊಳ್ಳಬೇಕು. ನಂತರ ದಾಸವಾಳದ ಎಲೆ ಮತ್ತು ದಾಸವಾಳದ ಹೂವು ಎರಡನ್ನು ಚೆನ್ನಾಗಿ ರುಬ್ಬಿ ಪೇಸ್ಟ್ ಮಾಡಿಕೊಳ್ಳಬೇಕು. ಬಳಿಕ ಒಂದು ಕಪ್​ನಷ್ಟು ಕೊಬ್ಬರಿ ಎಣ್ಣೆಯನ್ನು ಬಿಸಿ ಮಾಡಿಕೊಳ್ಳಬೇಕು. ಅದಕ್ಕೆ ರುಬ್ಬಿಕೊಂಡ ದಾಸವಾಳದ ಪೇಸ್ಟ್​ ಸೇರಿಸಿ ಮಿಕ್ಸ್ ಮಾಡಿಕೊಳ್ಳಬೇಕು.

news18-kannada
Updated:March 31, 2021, 3:14 PM IST
Health Tips: ಕೂದಲು ಉದುರುವಿಕೆ ಸಮಸ್ಯೆ ನಿವಾರಿಸಲು ಇಲ್ಲಿವೆ ಕೆಲವು ಟಿಪ್ಸ್...!
ಸಾಂದರ್ಭಿಕ ಚಿತ್ರ
  • Share this:
ಸದೃಢ, ಕಾಂತಿಯುಕ್ತ ಮತ್ತು ಆರೋಗ್ಯಕರ ಕೇಶರಾಶಿ ಎಲ್ಲರ ಕನಸಾಗಿರುತ್ತದೆ. ಆದರೆ ಇದನ್ನು ಪಡೆಯುವುದು ಅಷ್ಟು ಸುಲಭವಲ್ಲ. ಪೋಷಕಾಂಶಯುಕ್ತ ಆಹಾರ ಸೇವಿಸುವುದರ ಜೊತೆಗೆ ರೆಗ್ಯೂಲರ್ ಹೇರ್​ ಕೇರ್​ ರೊಟೀನ್ ಅನುಸರಿಸಬೇಕು. ಆಗ ನಿಮ್ಮ ಕೂದಲು ಒಳಗಿನಿಂದಲೇ ಪೋಷಣೆಯನ್ನು ಪಡೆಯುತ್ತದೆ. ಇನ್ನು, ಇದೇ ಹಿನ್ನೆಲೆಯಲ್ಲಿ ಸೆಲೆಬ್ರಿಟಿ ನ್ಯೂಟ್ರಿಷನಿಸ್ಟ್​​ ಪೂಜಾ ಮಖೀಜಾ ಅವರು ಇತ್ತೀಚೆಗೆ ಇನ್​ಸ್ಟಾಗ್ರಾಂನಲ್ಲಿ ದಾಸವಾಳದಿಂದ ಮನೆಯಲ್ಲೇ ಸಿದ್ಧ ಮಾಡಬಹುದಾದ ಕೇಶ ತೈಲ ತಯಾರಿಸುವುದನ್ನು ತಿಳಿಸಿಕೊಟ್ಟಿದ್ದಾರೆ. ರೆಗ್ಯೂಲರ್ ಆಗಿ ಈ ಎಣ್ಣೆಯನ್ನು ಹಚ್ಚಿಕೊಳ್ಳುವ ಮೂಲಕ ಆರೋಗ್ಯಕರ ಮತ್ತು ಸದೃಢ ಕೇಶವನ್ನು ಹೊಂದಬಹುದು. ಈ ಹೇರ್​ ಆಯಿಲ್​ ಜೊತೆಗೆ ನೀವು ಪ್ರೊಟೀನ್ ಯುಕ್ತ ಆಹಾರ ಸೇವಿಸುವುದು ಕೂಡ ಬಹಳ ಮುಖ್ಯವಾಗುತ್ತದೆ. ಇದರಿಂದ ಕೂದಲು ಉದುರುವುದನ್ನು ತಡೆಯಬಹುದು.

ಇದಿಷ್ಟೇ ಅಲ್ಲದೇ ಬಯೋಟಿನ್‌ಯುಕ್ತ ಆಹಾರ ಸೇವನೆಯೂ ಕೂಡ ಮುಖ್ಯವಾಗುತ್ತದೆ. ನಟ್ಸ್, ಬೀಜಗಳ ಸೇವನೆ ಪ್ರಯೋಜನಕಾರಿ. ದು ನಿಮ್ಮ ಕೇಶಕ್ಕೆ ಅಗತ್ಯವಿರುವ ಕೆರಟಿನ್ ಪ್ರೋಟೀನ್‌ ನೀಡುವುದರಿಂದ ಕೂದಲು ಹೊಳಯುತ್ತದೆ. ನಾವು ಸುಂದರ ಕೂದಲನ್ನು ಪಡೆಯಲು ಏನೆಲ್ಲಾ ಮಾಡುತ್ತೇವೆ. ಆದರೆ ಹೇರ್​ ಫಾಲಿಕ್ಯೂಲ್ಸ್​ನ ಸದೃಢತೆ ಯ ವಿಚಾರಕ್ಕೆ ಬಂದಾಗ ನಾವು ಸಾಕಷ್ಟು ನಿರ್ಲಕ್ಷ್ಯವನ್ನು ವಹಿಸುತ್ತೇವೆ ಎಂದು ಪೂಜಾ ಮಖೀಜಾ ತಮ್ಮ ಇನ್​ಸ್ಟಾಗ್ರಾಂನಲ್ಲಿ ತಿಳಿಸಿದ್ದಾರೆ.

ಕೂದಲಿನ ಆರೋಗ್ಯಕ್ಕೆ ದಾಸವಾಳದ ಎಣ್ಣೆ ತಯಾರಿಸುವುದು ಹೇಗೆ? ಇಲ್ಲಿದೆ ನೋಡಿ

ಕೂದಲಿನ ಆರೋಗ್ಯ ಸಮಸ್ಯೆ ಎದುರಿಸುತ್ತಿರುವವರಿಗೆ ದಾಸವಾಳ ಬಹಳ ಪ್ರಯೋಜನಕಾರಿಯಾಗಿದೆ. ಈ ನಿಟ್ಟಿನಲ್ಲಿ ದಾಸವಾಳದ ಎಣ್ಣೆ ತಯಾರಿಸಲು 8 ದಾಸವಾಳದ ಹೂವು ಮತ್ತು 8 ದಾಸವಾಳದ ಎಲೆಗಳನ್ನು ತೆಗೆದುಕೊಳ್ಳಬೇಕು. ನಂತರ ದಾಸವಾಳದ ಎಲೆ ಮತ್ತು ದಾಸವಾಳದ ಹೂವು ಎರಡನ್ನು ಚೆನ್ನಾಗಿ ರುಬ್ಬಿ ಪೇಸ್ಟ್ ಮಾಡಿಕೊಳ್ಳಬೇಕು. ಬಳಿಕ ಒಂದು ಕಪ್​ನಷ್ಟು ಕೊಬ್ಬರಿ ಎಣ್ಣೆಯನ್ನು ಬಿಸಿ ಮಾಡಿಕೊಳ್ಳಬೇಕು. ಅದಕ್ಕೆ ರುಬ್ಬಿಕೊಂಡ ದಾಸವಾಳದ ಪೇಸ್ಟ್​ ಸೇರಿಸಿ ಮಿಕ್ಸ್ ಮಾಡಿಕೊಳ್ಳಬೇಕು.

ಹುಬ್ಬಳ್ಳಿ - ಹೈದರಾಬಾದ್ ನಡುವೆ ವಿಮಾನ ಹಾರಾಟ ಆರಂಭ; ಶೀಘ್ರವೇ ಅಂತರರಾಷ್ಟ್ರೀಯ ವಿಮಾನ ಸೇವೆ ಎಂದ ಪ್ರಹ್ಲಾದ್ ಜೋಶಿ

ನಂತರ ಈ ಮಿಶ್ರಣವನ್ನು 1-2 ನಿಮಿಷಗಳ ಕಾಲ ಬಿಸಿ ಮಾಡಿಕೊಳ್ಳಬೇಕು. ಬಳಿಕ ಈ ಎಣ್ಣೆಯನ್ನು ಕೂಲ್ ಆಗಲು ಬಿಡಬೇಕು. ಇಷ್ಟಾದರೆ ದಾಸವಾಳದ ಎಣ್ಣೆ ತಲೆಗೆ ಹಚ್ಚಿಕೊಳ್ಳಲು ಸಿದ್ಧವಾದಂತೆ.

ಈ ಎಣ್ಣೆಯನ್ನು ತಲೆಗೆ ಹಚ್ಚಿಕೊಂಡು 10 ನಿಮಿಷ ಮಸಾಜ್​ ಮಾಡಿಕೊಳ್ಳಬೇಕು. ಆ ನಂತರ 30 ನಿಮಿಷಗಳ ಕಾಲ ಬಿಟ್ಟು ಸ್ನಾನ ಮಾಡಿದರೆ ಅತ್ಯುತ್ತಮ ಫಲಿತಾಂಶ ಲಭ್ಯವಾಗುತ್ತದೆ ಎಂದು ಮಖೀಜಾ ಅವರು ಸಲಹೆ ನೀಡುತ್ತಾರೆ.ಈ ಎಣ್ಣೆಯೂ ಕೂದಲಿನ ಫಾಲಿಕ್ಯೂಲ್ಸ್​ಗಳ ಬಲವರ್ಧನೆ ಮಾಡುತ್ತದೆ. ಜೊತೆಗೆ ಹೇರ್​ಫಾಲ್​ ಕೂಡ ನಿಯಂತ್ರಿಸುತ್ತದೆ. ಈ ವಾರ ನಿಮ್ಮ ಕೂದಲಿನ ಆರೈಕೆಗೆ ಮನೆಯಲ್ಲೇ ತಯಾರಿಸಿದ ಈ ಎಣ್ಣೆಯನ್ನು ಹಚ್ಚಿಕೊಳ್ಳಿ. ನಿಮ್ಮ ಕೂದಲಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ.

ಸೆಲೆಬ್ರಿಟಿ ನ್ಯೂಟ್ರಿಷನಿಸ್ಟ್​ ಪೂಜಾ ಮಖೀಜಾ

ಪೂಜಾ ಮಖೀಜಾ ಸೆಲೆಬ್ರಿಟಿ ನ್ಯೂಟ್ರಿಷನಿಸ್ಟ್ , ಬರಹಗಾರರು ಮತ್ತು ಉದ್ಯಮಿಯೂ ಹೌದು. ಬಾಲಿವುಡ್ ಸೆಲೆಬ್ರಿಟಿಗಳಾದ ದೀಪಿಕಾ ಪಡುಕೋಣೆ, ಕರಣ್ ಜೋಹರ್, ರಣಬೀರ್​ ಕಪೂರ್ , ಶಾಹೀದ್ ಕಪೂರ್ ರಂಥಹ ಹಲವಾರು ಸೆಲೆಬ್ರಿಟಿಗಳಿಗೆ ಮಾರ್ಗದರ್ಶಕರಾಗಿದ್ದಾರೆ. ಅಲ್ಲದೇ ಇಲ್ಲಿಯ ತನಕ 10,000 ಜನರ ಜೀವನವನ್ನು ತಮ್ಮ ನ್ಯೂಟ್ರಿಷಿಯನ್​ ಸಲಹೆಗಳಿಂದ ಬದಲಿಸಿದ್ದಾರೆ. ವೇಯ್ಟ್​ ಲಾಸ್, ಆರೋಗ್ಯ ಮತ್ತು ಸ್ಕಿನ್​ಕೇರ್​ಗೆ ಸಂಬಂಧಿಸಿದಂತೆ, ಸಾಕಷ್ಟು ಲೈಫ್​ ಸ್ಟೈಲ್​ ಸಂಬಂಧಿತ ವಿಷಯಗಳಲ್ಲಿ ಪರಿಣಿತಿಯನ್ನು ಹೊಂದಿದ್ದಾರೆ ಪೂಜಾ ಮಖೀಜಾ.
Published by: Latha CG
First published: March 31, 2021, 3:14 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories