ಆನ್​ಲೈನ್​ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದ ಯುವತಿ ಸಾವು..!

ವಿವಿಧ ರೀತಿಯ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಸಾವನ್ನಪ್ಪುವ ಸಾಧ್ಯತೆಯಿದೆ ಎಂದು ರೋಗಶಾಸ್ತ್ರಜ್ಞರು ಸಹ ಅಭಿಪ್ರಾಯಪಟ್ಟಿದ್ದಾರೆ ಎಂದು ಕಾರ್ನ್‌ವಾಲ್‌ಲೈವ್ ವರದಿ ಮಾಡಿದೆ.

news18
Updated:June 26, 2019, 10:43 PM IST
ಆನ್​ಲೈನ್​ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದ ಯುವತಿ ಸಾವು..!
@cafe4eck.blogspot.com
  • News18
  • Last Updated: June 26, 2019, 10:43 PM IST
  • Share this:
ಆನ್​ಲೈನ್​ ಸೆಕ್ಸ್​ನಲ್ಲಿ ತೊಡಗಿಸಿಕೊಂಡಿದ್ದ ಯುವತಿಯೊಬ್ಬಳು ಸಾವನ್ನಪ್ಪಿದ ವಿಚಿತ್ರ ಘಟನೆಯೊಂದು ಇಂಗ್ಲೆಂಡ್​ನಲ್ಲಿ ನಡೆದಿದೆ. ಸಂಗಾತಿಯೊಂದಿಗಿನ ಲೈವ್​ ವೆಬ್​ಕ್ಯಾಮ್ ಲೈಂಗಿಕ ಕ್ರಿಯೆಯಲ್ಲಿ ಭಾಗವಹಿಸಿದ್ದ 21 ರ ಕೇರರ್ ಹೋಪ್ ಬಾರ್ಡನ್​ ಉಸಿರುಗಟ್ಟಿ ಮೃತಪಟ್ಟಿದ್ದಾರೆ.

ಈ ಸಂಬಂಧ ಲೈವ್ ಚಾಟಿಂಗ್​ನಲ್ಲಿ ಜೊತೆಯಾಗಿದ್ದ ಜೆರೋಮ್ ಡಂಗರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. 45 ಹರೆಯದ ಜೆರೋಮ್ ಹಾಗೂ 21 ಕೇರರ್ ಆನ್​ಲೈನ್​ನಲ್ಲಿ "ಲೈಂಗಿಕ ಸಂಬಂಧಿತ ರೋಲ್ ಪ್ಲೇ'' ಚಟುವಟಿಕೆಯಲ್ಲಿ ಪಾಲ್ಗೊಳ್ಳುತ್ತಿದ್ದರು.​ ಈ ಮೂಲಕ ಸೆಕ್ಸ್ ವಿಡಿಯೋಗಳನ್ನು ಡಂಗರ್ ಚಿತ್ರೀಕರಿಸಿಕೊಳ್ಳುತ್ತಿದ್ದನು. ಇದಕ್ಕಾಗಿ ಯುವತಿಗೆ ಇಂತಿಷ್ಟು ಹಣ ಕೂಡ ಸಂದಾಯವಾಗುತ್ತಿತ್ತು.

ಆದರೆ ಮಾರ್ಚ್​ 15 ರಂದು ಫ್ಲಾಟ್​ನಲ್ಲಿ ಕೆರರ್ ಮೃತದೇಹ ಪತ್ತೆಯಾಗಿತ್ತು. ಯುವತಿಯ ಅನಿರೀಕ್ಷಿತ ಸಾವಿಗೆ ಜಾಡು ಹಿಡಿದ ಪೊಲೀಸರಿಗೆ ಡಂಗರ್ ಎಂಬ ವ್ಯಕ್ತಿಯು ತನ್ನ ಮಗಳೊಂದಿಗೆ ಕಳೆದ ಮೂರು ತಿಂಗಳಿಂದ ಸಂಪರ್ಕದಲ್ಲಿದ್ದಾರೆ. ಅವರಿಬ್ಬರ ಅಪಾಯಕಾರಿ ಸೆಕ್ಸ್ ಸನ್ನಿವೇಶಗಳೇ ಸಾವಿಗೆ ಕಾರಣ ಎಂದು ಬಾರ್ಡನ್ ತಾಯಿ ತಿಳಿಸಿದ್ದರು.

ಈ ಮಾಹಿತಿಯ ಬೆನ್ನತ್ತಿದಾಗ ಕೆರರ್ ಸತ್ತಾಗ ಡಂಗರ್ ಆನ್​ಲೈನ್​ನಲ್ಲಿದ್ದರು ಎಂಬ ವಿಷಯ ಗೊತ್ತಾಗಿದೆ. ಅಷ್ಟೇ ಅಲ್ಲದೆ ವಿವಿಧ ಭಂಗಿಯ ಮೂಲಕ ಲೈಂಗಿಕ ಕ್ರಿಯೆಗೆ ಪ್ರಚೋದನೆ ನೀಡಿರುವ ವಿಷಯ ಬೆಳಕಿಗೆ ಬಂದಿದೆ.  ಸೆಕ್ಸ್​ ಎಂಬ ನಶೆಯಲ್ಲಿ ತೇಲಿದ್ದ ಕೆರರ್ ಉಸಿರುಗಟ್ಟುವಿಕೆಗೆ ಒಳಗಾಗಿ ಸಾವನ್ನಪ್ಪಿದ್ದರು ಎಂಬುದು ಇದರಿಂದ  ತಿಳಿದಿದೆ.

ಆದರೆ ಅತ್ತ ಉಸಿರುಗಟ್ಟುವಿಕೆಗೆ ಒಳಗಾದ ಕೆರರ್​ ನೆರವಿಗೆ ಬರದೇ ಲೈವ್​ನಲ್ಲಿದ್ದ ಡಂಗರ್ ನಿರ್ಲಕ್ಷ್ಯವಹಿಸಿದ್ದನು. ಅಲ್ಲದೆ ಈ ಬಗ್ಗೆ  ಆಸ್ಪತ್ರೆಗೆ ಅಥವಾ ಕುಟುಂಬದವರಿಗೆ ಸೂಚನೆ ನೀಡುವ ಪ್ರಯತ್ನವನ್ನೂ ಮಾಡಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಕೆರರ್​ ಮರಣೋತ್ತರ ಪರೀಕ್ಷೆಯಲ್ಲಿ ಉಸಿರುಕಟ್ಟುವಿಕೆಯಿಂದ ಸಾವನ್ನಪ್ಪಿದ್ದಾಳೆ ಎಂಬುದು ದೃಢಪಟ್ಟಿದ್ದು, ಹಾಗೆಯೇ ಆಕೆಯ ಮೊಬೈಲ್ ಫೋನ್‌ನ ಪರೀಕ್ಷೆಯಲ್ಲಿ ಅವಳು ಲೈಂಗಿಕ ಸಂಬಂಧದ ಅಪಾಯಕಾರಿ ಕೃತ್ಯಗಳಲ್ಲಿ ತೊಡಗಿಸಿಕೊಳ್ಳಲು ವ್ಯಕ್ತಿಯೊಬ್ಬರು ಪ್ರೋತ್ಸಾಹಿಸಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ. ವಿವಿಧ ರೀತಿಯ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಸಾವನ್ನಪ್ಪುವ ಸಾಧ್ಯತೆಯಿದೆ ಎಂದು ರೋಗಶಾಸ್ತ್ರಜ್ಞರು ಸಹ ಅಭಿಪ್ರಾಯಪಟ್ಟಿದ್ದಾರೆ ಎಂದು ಕಾರ್ನ್‌ವಾಲ್‌ಲೈವ್ ವರದಿ ಮಾಡಿದೆ.

ಇದನ್ನೂ ಓದಿ: 'ಕೇಸರಿ' ಜೆರ್ಸಿ ಬಗ್ಗೆ ರಾಜಕೀಯ ನಾಯಕರ ತಗಾದೆ: ಹೇಗಿದೆ ಗೊತ್ತಾ ಟೀಂ ಇಂಡಿಯಾದ ಹೊಸ ಜೆರ್ಸಿ?ಈ ಹಿನ್ನೆಲೆಯನ್ನು ಇದೀಗ ಪೊಲೀಸರು ನರಹತ್ಯೆಯ ಆರೋಪದ ಅಡಿಯಲ್ಲಿ ಡಂಗರ್​ನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಅಲ್ಲದೆ ಅಶ್ಲೀಲ ಕೃತ್ಯಗಳಿಗೆ ಪ್ರೇರಪಿಸಿದ ಆರೋಪದ ಮೇಲೆ ಬಂಧನದಲ್ಲಿರಿಸಲಾಗಿದ್ದು, ಈ ವೇಳೆ ಡಂಗರ್ ಅಶ್ಲೀಲ ದೃಶ್ಯಗಳಿಗಾಗಿ ಇಂತಹ ಕೃತ್ಯಕ್ಕೆ ಕೈ ಹಾಕಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ ಎಂದು ವರದಿಯಲ್ಲಿ ತಿಳಿಸಿದೆ.

ಇದನ್ನೂ ಓದಿ: ನೀವು ಪೋರ್ನ್ ವಿಡಿಯೋ ನೋಡುತ್ತೀರಾ? ಹಾಗಿದ್ರೆ ಇಲ್ಲಿದೆ ಶಾಕಿಂಗ್ ನ್ಯೂಸ್
First published:June 26, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ