• Home
  • »
  • News
  • »
  • lifestyle
  • »
  • Explained: ಬ್ಯುಸಿ ಶೆಡ್ಯುಲಿನಲ್ಲಿ ನಮ್ಮ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು? ಈಸಿ ಮೆತಡ್​ ಫಾಲೋ ಮಾಡಿ

Explained: ಬ್ಯುಸಿ ಶೆಡ್ಯುಲಿನಲ್ಲಿ ನಮ್ಮ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು? ಈಸಿ ಮೆತಡ್​ ಫಾಲೋ ಮಾಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Health Care: ಬೆಳಗ್ಗೆ ಚೆನ್ನಾಗಿ ಇದ್ದವರು ಸಂಜೆ ಅಷ್ಟೊತ್ತಿಗೆ ಇರುವುದಿಲ್ಲ. ಕಾರಣ ಏನು ಅಂತ ನೋಡಿದ್ರೆ, ಹೆಚ್ಚಾಗಿ ಹಾರ್ಟ್​ ಅಟಾಕ್​ ಅಂತ ಕೇಳಿ ಬರುತ್ತೆ. ಹಾಗಾಗಿ ಯಾವ ರೀತಿಯಾಗಿ ನಮಗೆ ನಾವು ಆರೊಗ್ಯದಲ್ಲಿ ಕೇರ್​ ಮಾಡಿಕೊಳ್ಳಬಹುದು ಎಂಬುದು ತಿಳಿಯೋಣ.

  • Share this:

 ಇತ್ತೀಚಿನ ವರ್ಷಗಳಲ್ಲಿ ಹೃದಯಾಘಾತ (Heart Attack), ಹೃದಯ ಸ್ತಂಭನ ಇತ್ಯಾದಿಗಳಿಂದ ಜೀವ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ಯಾಕೆಂದರೆ ಎಲ್ಲರು ಅವರವರ ಬ್ಯುಸಿ ಲೈಫ್​ನಲ್ಲಿ (Busy Life) ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ತುಂಬಾ ವಿರಳ. ಹಾಗಾಗಿ ನಾನಾ ರೀತಿಯ ರೋಗ ರುಚಿನಗಳಿಗೆ ತುತ್ತಾಗುತ್ತದ್ದಾರೆ ಜನರು. ಇದ್ಕಾಗಿ ಹಲವು ಆರೋಗ್ಯ ಕ್ರಮಗಳನ್ನು ಪಾಲಿಸಬೇಕು. ವಿಶ್ವ ಆರೋಗ್ಯ ಸಂಸ್ಥೆ (WHO)ಯ ವರದಿಗಳ ಪ್ರಕಾರ ಪ್ರತಿವರ್ಷ ಹದಿನೇಳು ದಶಲಕ್ಷಕ್ಕಿಂತಲೂ ಅಧಿಕ ಜನರು ಹೃದಯದ ಸಮಸ್ಯೆಯಿಂದ ಜೀವ ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ಈ ಅನಿರೀಕ್ಷಿತ ಮತ್ತು ಒತ್ತಡದ ಸಮಯದಲ್ಲಿ ಆರೋಗ್ಯಕರ ಹೃದಯಗಳ ಮೇಲೆ ಕೇಂದ್ರೀಕರಿಸುವುದು ಮುಖ್ಯವಾಗಿದೆ. 


2021ರಲ್ಲಿ 28,449 ಜನರು ಹೃದಯಾಘಾತದಿಂದ ಸಾವು
ಭಾರತದಲ್ಲಿ, ಹೃದ್ರೋಗಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದ್ದು, ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ಒದಗಿಸಿದ ಮಾಹಿತಿಯು 2021 ರಲ್ಲಿ 28,449 ಜನರು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ ಎಂದು ಬಹಿರಂಗಪಡಿಸಿದೆ.


ಹೃದಯಾಘಾತದಿಂದ ಸಾವನ್ನಪ್ಪುತ್ತಿರುವ ಯುವ ಪೀಳಿಗೆ
ಹೃದಯಕ್ಕೆ ಸಂಬಂಧಿಸಿದ ಅಪಘಾತಗಳಲ್ಲಿ ಮತ್ತೊಂದು ಆತಂಕಕಾರಿ ವಿಚಾರವೆಂದರೆ ಹೃದಯಾಘಾತ, ಹೃದಯ ಸ್ತಂಭನದಿಂದಾಗಿ ಹೆಚ್ಚಾಗಿ ಸಾವನ್ನಪ್ಪುತ್ತಿರುವವರು ಯುವಕರು, ಮಧ್ಯಮ ವಯಸ್ಸಿನವರು. ಇತ್ತೀಚಿನ ಕೆಲ ಗೊತ್ತಿರುವ ಘಟನೆಗಳನ್ನು ನೋಡುವುದಾದರೆ ಕನ್ನಡ ಚಿತ್ರರಂಗದ ನಟ ಪುನೀತ್‌ ರಾಜ್‌ ಕುಮಾರ್‌, ಹಿಂದಿಯ ನಟ ಸಿದ್ಧಾರ್ಥ್ ಶುಕ್ಲಾ, ಗಾಯಕ ಕೆಕೆ ಮತ್ತು ಹಾಸ್ಯನಟ ರಾಜು ಶ್ರೀವಾಸ್ತವ್ ಅವರಂತಹ ಹಲವಾರು ಪ್ರಸಿದ್ಧ ವ್ಯಕ್ತಿಗಳು ಹೃದಯ ಕಾಯಿಲೆಗಳಿಂದ ಚಿಕ್ಕ ವಯಸ್ಸಿನಲ್ಲೇ ಸಾವನ್ನಪ್ಪಿದ್ದಾರೆ.


WHO ಪ್ರಕಾರ, ಜಾಗತಿಕವಾಗಿ ವಿಶೇಷವಾಗಿ ಯುವ ಪೀಳಿಗೆಯಲ್ಲಿ ಸಂಭವಿಸುವ 17.9 ಮಿಲಿಯನ್ ಹೃದಯರಕ್ತನಾಳದ ಕಾಯಿಲೆ-ಸಂಬಂಧಿತ ಸಾವುಗಳಲ್ಲಿ, ಭಾರತವು ಕನಿಷ್ಠ ಐದನೇ ಒಂದು ಭಾಗವನ್ನು ಹೊಂದಿದೆ. ಇದು ನಿಜಕ್ಕೂ ದೇಶದಲ್ಲಿ ಹೃದಯಕ್ಕೆ ಸಂಬಂಧಿಸಿದ ರೋಗಗಳು ಎಷ್ಟರ ಮಟ್ಟಿಗೆ ಹದಗೆಟ್ಟಿದೆ ಎಂಬುದನ್ನು ತೋರಿಸುತ್ತದೆ.
2021 ರಲ್ಲಿ ಭಾರತದಲ್ಲಿ ಸಂಭವಿಸಿದ 28,449 ಹೃದಯಾಘಾತ ಸಾವುಗಳಲ್ಲಿ 19,744 ಜನರು 30-60 ವಯಸ್ಸಿನವರು ಎಂದು NCRB ಡೇಟಾ ಬಹಿರಂಗಪಡಿಸಿದೆ. ಕಳೆದ ಕೆಲವು ವರ್ಷಗಳಲ್ಲಿ 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ 25 ಪ್ರತಿಶತದಷ್ಟು ಹೃದಯಾಘಾತ ಪ್ರಕರಣಗಳು ಕಂಡುಬಂದಿವೆ.


ಹೃದಯರಕ್ತನಾಳದ ಕಾಯಿಲೆಗಳು ಯಾವುವು?
ಹೃದಯರಕ್ತನಾಳದ ಕಾಯಿಲೆಗಳು (CVD) ಪರಿಧಮನಿಯ ಹೃದಯ ಕಾಯಿಲೆ, ಸೆರೆಬ್ರೊವಾಸ್ಕುಲರ್ ಕಾಯಿಲೆ, ಬಾಹ್ಯ ಅಪಧಮನಿಯ ಕಾಯಿಲೆ, ಸಂಧಿವಾತ ಹೃದಯ ಕಾಯಿಲೆ, ಜನ್ಮಜಾತ ಹೃದಯ ಕಾಯಿಲೆ, ಆಳವಾದ ರಕ್ತನಾಳದ ಥ್ರಂಬೋಸಿಸ್ ಮತ್ತು ಪಲ್ಮನರಿ ಎಂಬಾಲಿಸಮ್ ಸೇರಿದಂತೆ ಹೃದಯ ಮತ್ತು ರಕ್ತನಾಳಗಳ ಅಸ್ವಸ್ಥತೆಗಳ ಪ್ರಕಾರಗಳಿವು. ಭಾರತದಲ್ಲಿ ಪರಿಧಮನಿಯ ಹೃದಯ ಕಾಯಿಲೆಯ ಹರಡುವಿಕೆಯ ಪ್ರಮಾಣವು ಗ್ರಾಮೀಣ ಜನಸಂಖ್ಯೆಯಲ್ಲಿ ಶೇಕಡಾ 1.6 ರಿಂದ 7.4 ರವರೆಗೆ ಮತ್ತು ನಗರ ಜನಸಂಖ್ಯೆಯಲ್ಲಿ ಶೇಕಡಾ 1 ರಿಂದ 13.2 ರವರೆಗೆ ಇದೆ.


ಅನಾರೋಗ್ಯಕರ ಹೃದಯಕ್ಕೆ ಕಾರಣಗಳು
ಅನಾರೋಗ್ಯಕರ ಆಹಾರ, ಜಡ ಜೀವನಶೈಲಿ, ಧೂಮಪಾನ, ಹೆಚ್ಚಿನ ಮಾಲಿನ್ಯ ಮಟ್ಟಗಳು ಮತ್ತು ಒತ್ತಡ, ಆತಂಕ ನಮ್ಮ ರಾಷ್ಟ್ರದ ಯುವಕರಲ್ಲಿ ಹೃದಯರಕ್ತನಾಳದ ಕಾಯಿಲೆಗಳ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿವೆ. ಭಾರತೀಯ ಪುರುಷರಲ್ಲಿ ಶೇಕಡಾ 50 ರಷ್ಟು ಹೃದಯಾಘಾತಗಳು 50 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಸಂಭವಿಸುತ್ತವೆ ಮತ್ತು ಭಾರತೀಯ ಪುರುಷರಲ್ಲಿ ಶೇಕಡಾ 25 ರಷ್ಟು ಹೃದಯಾಘಾತಗಳು 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಸಂಭವಿಸುತ್ತವೆ. ಭಾರತೀಯ ಮಹಿಳೆಯರು ಹೃದಯ ಸಂಬಂಧಿ ಕಾಯಿಲೆಗಳಿಂದ ಹೆಚ್ಚಿನ ಮರಣ ಪ್ರಮಾಣವನ್ನು ದಾಖಲಿಸಿದ್ದಾರೆ ಎಂದು ಅಂಕಿಅಂಶಗಳು ತಿಳಿಸುತ್ತವೆ.


ಹೃದಯ ಸಂಬಂಧಿ ಕಾಯಿಲೆಗಳಿಗೆ ಪ್ರಮುಖ ಕಾರಣಗಳನ್ನು ನೋಡುವುದಾದರೆ,
* ವೈಯಕ್ತಿಕ ಮತ್ತು ವೃತ್ತಿಪರ ಜೀವನದ ಒತ್ತಡ
* ಜೀವನ ಶೈಲಿ ಬದಲಾವಣೆ, ಆಹಾರದಲ್ಲಿ ಹೆಚ್ಚು ಉಪ್ಪು ಸೇವನೆ - ಈ ಕಾರಣಗಳು ಯುವ ಜನರಲ್ಲಿ ಅಧಿಕ ರಕ್ತದೊತ್ತಡಕ್ಕೆ ಕಾರಣವಾಗುತ್ತವೆ, ನಂತರ ಅವರು ಪರಿಧಮನಿಯ ಕಾಯಿಲೆಗಳಿಗೆ ತುತ್ತಾಗುತ್ತಾರೆ.
* ಅನಾರೋಗ್ಯಕರ ಆಹಾರ ಪದಾರ್ಥಗಳು ಮತ್ತು ಜಂಕ್ ಫುಡ್ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತವೆ, ಇದು ಕೂಡ ಹೃದಯ ಸಮಸ್ಯೆಗಳಿಗೆ ಕಾರಣವಾಗುತ್ತದೆ
* ಅಮೇರಿಕಾ ಮೂಲದ ಮೇಯೊ ಕ್ಲಿನಿಕ್ ನಡೆಸಿದ ಅಧ್ಯಯನವು ಅತಿಯಾದ ವ್ಯಾಯಾಮ ಕೂಡ ಹೃದಯಕ್ಕೆ ಕೆಟ್ಟದು ಎಂದು ಹೇಳಿದೆ. ಆಹಾರ ಪೂರಕಗಳ ಬಳಕೆ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಮಟ್ಟವನ್ನು ಹೆಚ್ಚಿಸುತ್ತದೆ. ಇದು ಹೃದಯರಕ್ತನಾಳದ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ ಎಂದಿದೆ.


ಇದನ್ನೂ ಓದಿ:ನಿದ್ರಾಹೀನತೆ ಬರೀ ಹೃದಯಕ್ಕೆ ಅಪಾಯ ಮಾತ್ರ ಅಲ್ಲ, ಟೈಪ್ 2 ಡಯಾಬಿಟಿಸ್​ಗೂ ಕಾರಣವಾಗುತ್ತೆ


* ಯುವಜನರಲ್ಲಿ ಹೃದಯ ಸಂಬಂಧಿ ಕಾಯಿಲೆಗಳಿಗೆ ಮಧುಮೇಹವೂ ಪ್ರಮುಖ ಕಾರಣ ಎಂದು ತಜ್ಞರು ಹೇಳುತ್ತಾರೆ. ಇತರ ದೇಶಗಳಿಗೆ ಹೋಲಿಸಿದರೆ ಭಾರತವು ಅತಿ ಹೆಚ್ಚು ಮಧುಮೇಹ ರೋಗಿಗಳನ್ನು ಹೊಂದಿದೆ ಎಂದು ಹೇಳಲಾಗುತ್ತದೆ. 2019 ರಲ್ಲಿ ಭಾರತವು 77 ಮಿಲಿಯನ್ ಮಧುಮೇಹ ರೋಗಿಗಳನ್ನು ಹೊಂದಿತ್ತು ಎಂದು ಅಂದಾಜಿಸಲಾಗಿದೆ. ಈ ಸಂಖ್ಯೆಯು 2045 ರ ವೇಳೆಗೆ 134 ಮಿಲಿಯನ್‌ಗಿಂತಲೂ ಹೆಚ್ಚಾಗುವ ನಿರೀಕ್ಷೆಯಿದೆ, ಈ ಮಧುಮೇಹ ಪ್ರಕರಣಗಳಲ್ಲಿ 57 ಪ್ರತಿಶತವು ರೋಗನಿರ್ಣಯಗೊಳ್ಳದೆ ನಿರ್ಲಕ್ಷ್ಯಕ್ಕೆ ಒಳಗಾಗುತ್ತವೆ.


ಅಪಾಯ ತಡೆಗಟ್ಟುವಿಕೆ
ಜೀವನಶೈಲಿ, ಆಹಾರ ಪದ್ಧತಿ ಮತ್ತು ನಿಯಮಿತ ದೈಹಿಕ ಚಟುವಟಿಕೆಗಳ ಮೂಲಕ ಹಾರ್ಟ್‌ ಅಟ್ಯಾಕ್‌ ನಂತಹ ಅಪಾಯಗಳನ್ನು ಕಡಿಮೆ ಮಾಡಬಹುದು ಎನ್ನುತ್ತಾರೆ ತಜ್ಞರು. ಹೌದು, ನೀವು ಸೇವಿಸುವ ಆಹಾರದಲ್ಲಿ ಸ್ಯಾಚುರೇಟೆಡ್ ಕೊಬ್ಬು ಮತ್ತು ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡಿ. ಕಾರ್ಬೋಹೈಡ್ರೇಟ್​ಗಳು, ಸಿಹಿತಿಂಡಿಗಳು ಮತ್ತು ಆಲ್ಕೋಹಾಲ್ ಸೇವಿಸುವುದನ್ನು ತಪ್ಪಿಸಿ. ತಾಜಾ ಹಣ್ಣುಗಳು ಮತ್ತು ತರಕಾರಿಗಳು, ಧಾನ್ಯಗಳು, ಬೇಳೆ ಕಾಳುಗಳು ಮತ್ತು ಒಣ - ಹಣ್ಣುಗಳನ್ನು ಸೇವಿಸಿ. ಮೊಟ್ಟೆಗಳನ್ನು ಸೇವಿಸಬಹುದು. ಡಾರ್ಕ್ ಮಾಂಸಕ್ಕಿಂತ (ಮಟನ್​ ​ನಂತಹ) ತೆಳ್ಳಗಿನ ಮಾಂಸಕ್ಕೆ (ಕೋಳಿಗಳಂತ) ಆದ್ಯತೆ ನೀಡಿ. ಅಡುಗೆಯಲ್ಲಿ ಬಳಸುವ ಎಣ್ಣೆ, ತುಪ್ಪ ಅಥವಾ ಬೆಣ್ಣೆಯ ಪ್ರಮಾಣವನ್ನು ಕಡಿಮೆ ಮಾಡಿ. ಏಕೆಂದರೆ ಅವುಗಳು ಸಾಕಷ್ಟು ಕೊಬ್ಬನ್ನು ಹೊಂದಿರುತ್ತವೆ.


ಇದನ್ನೂ ಓದಿ: ಅತಿಯಾಗಿ ಬೆನ್ನು ನೋವು ಕಾಡ್ತಿದ್ರೆ ನೆಗ್ಲೆಕ್ಟ್​ ಮಾಡ್ಬೇಡಿ, ಅದು ಹೃದಯಾಘಾತದ ಲಕ್ಷಣವಂತೆ

ನವದೆಹಲಿಯ ಗುರುಗ್ರಾಮ್ ಮತ್ತು ಫೋರ್ಟಿಸ್ ಆಸ್ಪತ್ರೆಯ ಫೋರ್ಟಿಸ್ ಮೆಮೋರಿಯಲ್ ರಿಸರ್ಚ್ ಇನ್ಸ್ಟಿಟ್ಯೂಟ್‌ನ ಅಧ್ಯಕ್ಷ ಡಾ ಟಿ ಕ್ಲೆರ್, "ಹೃದಯರೋಗವು ದೇಶದಲ್ಲಿ ಸೈಲೆಂಟ್‌ ಕಿಲ್ಲರ್‌ ಆಗಿದೆ. ಆದರೆ ಹೃದಯಕ್ಕೆ ಸಂಬಂಧಿಸಿದ ಅನೇಕ ತೊಡಕುಗಳನ್ನು ಗುಣಪಡಿಸಬಹುದು ಮತ್ತು ಚಿಕಿತ್ಸೆಯು ದೇಶದಲ್ಲಿ ಲಭ್ಯವಿದೆ. ಆರೋಗ್ಯಕರ ಹೃದಯ ಮತ್ತು ರೋಗ-ಮುಕ್ತ ಜೀವನಕ್ಕಾಗಿ ಜನರು ನಿಯಮಿತವಾಗಿ ವ್ಯಾಯಾಮ ಮಾಡಲು, ಉತ್ತಮ ನಿದ್ರೆ ಪಡೆಯಲು, ತಮ್ಮನ್ನು ತಾವು ಖಿನ್ನತೆಗೆ ಒಳಗಾಗಲು ಮತ್ತು ಮಿತವಾಗಿ ತಿನ್ನಲು ನಾನು ಶಿಫಾರಸು ಮಾಡುತ್ತೇವೆ" ಎಂದಿದ್ದಾರೆ.


ಪಂಚಕುಲದ ಪ್ಯಾರಾಸ್ ಆಸ್ಪತ್ರೆಗಳ ಕಾರ್ಡಿಯಾಕ್ ಸೈನ್ಸಸ್‌ನ ಅಧ್ಯಕ್ಷರಾದ ಡಾ.ಹರಿಂದರ್ ಕೆ ಬಾಲಿ ಅವರು ಇಂತಹ ಮಾರಣಾಂತಿಕ ಅಪಾಯ ತಡೆಗಟ್ಟಲು ಕಾಲಕಾಲಕ್ಕೆ ಹೃದಯದ ಮೌಲ್ಯಮಾಪನವನ್ನು ಮಾಡುವಂತೆ ಯುವ ವಯಸ್ಕರಿಗೆ ಹೇಳಿದ್ದಾರೆ.


ಭಾರತವನ್ನು ಬೆಚ್ಚಿ ಬೀಳಿಸಿದ ಹೃದಯಾಘಾತದ ಸಾವುಗಳು
ಹೃದಯ ಸಂಬಂಧಿ ಕಾಯಿಲೆಗಳಿಂದಾಗಿ ಸೆಲೆಬ್ರಿಟಿಗಳ ಇತ್ತೀಚಿನ ನಿಧನವು ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿದೆ ಎನ್ನಬಹುದು. ಜೊತೆ ಈ ಪ್ರಕರಣಗಳು ಜನರನ್ನು ಎಚ್ಚರಿಸಿವೆ.
ಅಕ್ಟೋಬರ್ 29 ರಂದು, ಕನ್ನಡದ ಸೂಪರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರು 46 ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ನಿಧನರಾದಾಗ ಭಾರತಕ್ಕೆ ಭಾರತವೇ ಸ್ತಬ್ಧವಾಗಿತ್ತು.


* ಕೆಲ ದಿನಗಳ ಹಿಂದಷ್ಟೇ ಖ್ಯಾತ ಹಾಸ್ಯನಟ ರಾಜು ಶ್ರೀವಾಸ್ತವ ಅವರು 58 ನೇ ವಯಸ್ಸಿನಲ್ಲಿ ಹೃದಯ ಸ್ತಂಭನದಿಂದ ಸೆಪ್ಟೆಂಬರ್ 21 ರಂದು ನಿಧನರಾದರು. ಜಿಮ್‌ನಲ್ಲಿ ವ್ಯಾಯಾಮ ಮಾಡುವಾಗ ಕುಸಿದು ಬಿದ್ದ ಶ್ರೀವಾಸ್ತವ ಅವರನ್ನು ಆಗಸ್ಟ್ 10 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು.


* ಸುಮಧುರ ಧ್ವನಿಗೆ ಹೆಸರುವಾಸಿಯಾದ ಗಾಯಕ ಕೆಕೆ, ಜೂನ್‌ನಲ್ಲಿ ಕೋಲ್ಕತ್ತಾದಲ್ಲಿ ವೇದಿಕೆಯಲ್ಲಿ ಲೈವ್‌ ಕಾರ್ಯಕ್ರಮ ನೀಡುತ್ತಿದ್ದಾಗಲೇ ಕುಸಿದುಬಿದ್ದರು ಮತ್ತು ಆಸ್ಪತ್ರೆಗೆ ಸಾಗಿಸಲಾಯಿತು ಮತ್ತು ಅಲ್ಲಿ ಅವರು ಕೊನೆಯುಸಿರೆಳೆದರು. ಅವರಿಗೆ 53 ವರ್ಷ ವಯಸ್ಸಾಗಿತ್ತು.


* ನಟ ಮತ್ತು ಬಿಗ್ ಬಾಸ್ ಸ್ಪರ್ಧಿ ಸಿದ್ಧಾರ್ಥ ಶುಕ್ಲಾ ಕಳೆದ ವರ್ಷ ಸೆಪ್ಟೆಂಬರ್ 2 ರಂದು ಹೃದಯಾಘಾತದಿಂದ ನಿಧನರಾದರು.

First published: