ತೂಕ ಇಳಿಕೆ (Weight Loss) ಮಾಡಿಕೊಂಡು ಬಳುಕುವ ಬಳ್ಳಿಯಂತೆ ಕಾಣಬೇಕು ಎನ್ನುವುದು ಪ್ರತಿಯೊಬ್ಬರ ಕನಸು (Dream).. ಹೀಗಾಗಿ ಕೆಲವರು ತೂಕ ಇಳಿಕೆಗೆ ಮಾಡದ ಪ್ರಯತ್ನಗಳೇ ಇಲ್ಲ.. ಬೆಳ್ಳಂ ಬೆಳಗ್ಗೆ ಎದ್ದು ವ್ಯಾಯಾಮ (Exercise) ಮಾಡುವುದರಿಂದ ಹಿಡಿದು ಊಟ ಹಾಗೂ ತಿಂಡಿಯಲ್ಲಿಯೂ (Food) ಕಟ್ಟು ನಿಟ್ಟಾದ ನಿಯಮ ಅನುಸರಿಸುವುದರ ಜೊತೆಗೆ, ಎಲ್ಲಾ ರೀತಿಯಲ್ಲೂ ತೂಕ ಇಳಿಸಲು ನಾನಾ ಪ್ರಯತ್ನಗಳನ್ನ ಮಾಡ್ತಾರೆ. ಆದ್ರೆ ಇದು ಫಲ ಕೊಡುವುದು ಬಹುತೇಕ ಕಷ್ಟಕರ.. ಹೀಗಾಗಿಯೇ ಮನೆಯಲ್ಲಿಯೇ (Home) ಸಿಗುವ ಹಣ್ಣು (Fruit), ತರಕಾರಿಗಳು (Vegetables) ತೂಕ ಇಳಿಕೆ ಮಾಡಿಕೊಳ್ಳಲು ಸಹಾಯಕಾವಾಗಿವೆ.. ಅದ್ರಲ್ಲೂ ಮನೆಯಲ್ಲಿ ಪ್ರತಿನಿತ್ಯ ಅಡುಗೆಗೆ ಬಳಸುವ ಒಂದೊಂದು ವಸ್ತುಗಳು, ಆರೋಗ್ಯ ಕಾಪಾಡಿಕೊಳ್ಳಲು ಸಹಾಯಕವಾಗುವುದರ ಜೊತೆಗೆ, ನೈಸರ್ಗಿಕವಾಗಿ ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತವೆ. ಈ ರೀತಿ ಮನೆಯಲ್ಲಿಯೇ ಸಿಗುವ ದಾಲ್ಚಿನಿ ಮನೆಯಲ್ಲಿಯೇ ತೂಕ ಇಳಿಸಿಕೊಳ್ಳುವುದರ ಜೊತೆಗೆ ಆರೋಗ್ಯ ಕಾಪಾಡಲು ಸಹಾಯಕ.
ಅಡುಗೆ ಮನೆಯಲ್ಲಿರುವ ದಾಲ್ಚಿನಿಯಲ್ಲಿದೆ ಔಷಧೀಯ ಗುಣ
ಗರಂ ಮಸಾಲೆಯಿಂದ ಹಿಡಿದು ಹೆಚ್ಚಿನ ಮಸಾಲೆಗಳಲ್ಲಿ ಸಾಮಾನ್ಯವಾಗಿ ಬಳಸುವಂತಹ ಸುಗಂಧಿತ ಹಾಗೂ ರುಚಿಕರವಾದ ದಾಲ್ಚಿನಿಯು ಹಲವಾರು ರೀತಿಯ ಆರೋಗ್ಯ ಗುಣಗಳನ್ನು ಹೊಂದಿದೆ. ಇದರ ಸೇವನೆ ಮಾಡಿದರೆ, ಅದರಿಂದ ದೇಹಕ್ಕೆ ಹಲವಾರು ರೀತಿಯ ಲಾಭಗಳು ಸಿಗುವುದು. ದಾಲ್ಚಿನ್ನಿಯಲ್ಲಿ ಹಲವಾರು ವಿಧದ ವಿಟಮಿನ್ ಗಳು ಹಾಗೂ ಖನಿಜಾಂಶಗಳು ಇವೆ. ಇದನ್ನು ಬಳಸಿಕೊಂಡರೆ ಅದು ತುಂಬಾ ಲಾಭಕಾರಿ ಆಗಿರುವುದು.ಇನ್ನೂ ದಾಲ್ಚಿನ್ನಿ ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹ ಸಹಾಯ ಮಾಡುತ್ತದೆ. ಅಧ್ಯಯನದ ಪ್ರಕಾರ, ದಾಲ್ಚಿನ್ನಿ ಯಕೃತ್ತಿನ ಮತ್ತು ಸೀರಮ್ ಲಿಪಿಡ್ ಗಳ ಮಟ್ಟ ಕಡಿಮೆ ಮಾಡುತ್ತದೆ ಈ ಗುಣಲಕ್ಷಣಗಳಿಂದಾಗಿ ದಾಲ್ಚಿನ್ನಿಯನ್ನು ಸಾವಿರಾರು ವರ್ಷಗಳಿಂದ ಅನೇಕ ಕಾಯಿಲೆಗಳನ್ನು ಗುಣಪಡಿಸಲು ಬಳಸಲಾಗುತ್ತದೆ. ಹೀಗಾಗಿ ಇವುಗಳನ್ನ ದಾಲ್ಚಿನಿ ಜೊತೆಗೆ ಸೇರಿಸಿಕೊಂಡು ಸೇವನೆ ಮಾಡುವುದರಿಂದ ತೂಕ ಆದಷ್ಟು ಬೇಗ ಇಳಿಯಲಿದೆ.
1) ದಾಲ್ಚಿನಿ ಹಾಗೂ ನಿಂಬೆ, ಜೇನುತುಪ್ಪದ ಟೀ: ಜೇನು ತುಪ್ಪ ತೂಕ ಮತ್ತು ಇಳಿಕೆಗೆ ಸಹಕಾರಿ. ಅದೇ ರೀತಿ ದಾಲ್ಚಿನಿ ಕೂಡ ತೂಕ ಇಳಿಕೆಗೆ ನೆರವಾಗುವುದು.. ಹೀಗಾಗಿ ದಾಲ್ಚಿನಿ ಮತ್ತು ಜೇನು ತುಪ್ಪದ ಟೀ ತಯಾರು ಮಾಡುವುದರಿಂದ ಇನ್ನೂ ವೇಗವಾಗಿ ತೂಕ ಇಳಿಕೆ ಮಾಡಿಕೊಳ್ಳಬಹುದು.
ಇದನ್ನೂ ಓದಿ: ಜೇನುತುಪ್ಪಕ್ಕೆ ಇದನ್ನು ಬೆರೆಸಿ ತಿಂದರೆ ಬಿಕ್ಕಳಿಕೆ ಕೂಡಲೇ ನಿಲ್ಲುತ್ತದೆ!
2) ದಾಲ್ಚಿನಿ ಹಾಗೂ ಆಪಲ್ ಸೈಡರ್ ವಿನೆಗರ್: ದಾಲ್ಚಿನಿಯೊಂದಿಗೆ ಆಪಲ್ ಸೈರ್ ವಿನೆಗರ್ ಬೆರಸಿ ಕುಡಿಯುವುದಿಂದ ತೂಕ ಇಳಿಕೆ ಮಾತ್ರವಲ್ಲ ಅನೇಕ ಆರೋಗ್ಯ ಸುಧಾರಣೆಯ ಪ್ರಯೋಜನಗಳು ಇವೆ. ಮಧುಮೇಹ ಸಮಸ್ಯೆ ಸೈನುಟಿಸ್, ಚರ್ಮ ಮತ್ತು ಗಂಟಲಿನ ಸಮಸ್ಯೆಗಳು ದಾಲ್ಚಿನಿ ಹಾಗೂ ಆಪಲ್ ಸೈಡರ್ ವಿನೆಗರ್ ಮಿಶ್ರಣ ಕುಡಿಯುವುದರಿಂದ ಬೇಗ ನಿವಾರಣೆ ಆಗಲಿದೆ.
3) ದಾಲ್ಚಿನಿ, ನಿಂಬೆ, ಪುದೀನಾ ಡಿಟಾಕ್ಸ್ ವಾಟರ್: ದಾಲ್ಚಿನಿ ತೊಗಟೆಯನ್ನ ರಾತ್ರಿಯಿಡಿ ನೀರಿನಲ್ಲಿ ನೆನೆಸಿಟ್ಟು ಅದಕ್ಕೆ ಶುದ್ಧವಾದ ನೀರು ಬೆರೆಸಿ, ಪುದೀನಾ ಹಾಗೂ ನಿಂಬೆ ಹಣ್ಣಿನ ತುಂಡುಗಳನ್ನ ಸೇರಿಸುವ ಮೂಲಕ ಡಿಟಾಕ್ಸ್ ವಾಟರ್ ತಯಾರು ಮಾಡಿಕೊಳ್ಳಬಹುದು.. ಈ ಡಿಟಾಕ್ಸ್ ವಾಟರ್ ತೂಕ ಇಳಿಕೆಯ ಜೊತೆಗೆ ಕರುಳಿನ ತೊಂದರೆಗಳು, ಚರ್ಮದ ತೊಂದರೆಗಳು, ಅಲರ್ಜಿ, ಕೆಮ್ಮು ಮತ್ತು ಶೀತಗಳಿಗೆ ಮದ್ದಾಗಿ ಸಹಾಯವಾಗಲಿದೆ.
4) ದಾಲ್ಚಿನಿ ಹಾಗೂ ಓಟ್ಸ್ ಬ್ರೇಕ್ ಫಾಸ್ಟ್ : ಓಟ್ಸ್ ಸಾಮಾನ್ಯವಾಗಿ ತೂಕ ಇಳಿಕೆ ಮಾಡಲು ಬಯಸುವವರು ಪ್ರತಿನಿತ್ಯ ತಪ್ಪದೆ ಸೇವನೆ ಮಾಡುವ ಆಹಾರ. ಓಟ್ಸ್ ಜೊತೆಗೆ ಬಾಳೆಹಣ್ಣು ಹಾಗೂ ಕೊಬ್ಬು ರಹಿತ ಹಾಲು ಕೂಡ ತೂಕ ಇಳಿಕೆಗೆ ಸಹಾಯ ಮಾಡುತ್ತವೆ. ಇವುಗಳನ್ನ ಮಿಶ್ರಣ ಮಾಡಿ ಕೊಂಚ ದಾಲ್ಚಿನಿ ಸೇರಿಸಿ ಸೇವನೆ ಮಾಡುವುದು ಬಹು ಉಪಯೋಗಿ. ಅದ್ರಲ್ಲೂ ಬಾಳೆಹಣ್ಣಿನಲ್ಲಿ ಪೊಟ್ಯಾಶಿಯಮ್ ,ಓಟ್ಸ್ ನಲ್ಲಿ ನಾರಿನಂಶ ಇರುತ್ತದೆ.ಪೋಷಕಾಂಶಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಹಾಗೆಯೇ ಕಿಬ್ಬೊಟ್ಟೆಯ ಕೊಬ್ಬನ್ನು ಕಡಿಮೆ ಮಾಡುತ್ತದೆ.
ಇದನ್ನೂ ಓದಿ: ದೇಹದ ತೂಕ ಜಾಸ್ತಿ ಇರೋದ್ರಿಂದ ಮಕ್ಕಳಾಗ್ತಿಲ್ವಾ? ಆಯುರ್ವೇದದಲ್ಲಿ ಇದಕ್ಕಿದೆ ಪರಿಹಾರ, ತಜ್ಞರು ವಿವರಿಸಿದ್ದಾರೆ
5) ದಾಲ್ಚಿನಿ ಹಾಗೂ ಅರಿಶಿನದ ಹಾಲು: ಅರಿಶಿನದ ಹಾಲಿಗೆ ಚಿಟಿಕೆ ದಾಲ್ಚಿನಿ ಪುಡಿ ಸೇವನೆ ಮಾಡಿ ಪ್ರತಿನಿತ್ಯ ಮಲಗುವ ಮುನ್ನ ಕುಡಿಯುವುದರಿಂದ ಹಲವಾರು ಲಾಭಗಳಿವೆಅರಿಶಿನವು ಉತ್ಕರ್ಷಣ ನಿರೋಧಕ, ಉರಿಯೂತದ ಮತ್ತು ಆಂಟಿಮೈಕ್ರೊಬಿಯಲ್ ಗುಣ ಲಕ್ಷಣಗಳನ್ನು ಹೊಂದಿದೆ. ಇದು ಕ್ಯಾನ್ಸರ್, ಬೊಜ್ಜು ಮತ್ತು ಹೃದಯರಕ್ತನಾಳದ ಕಾಯಿಲೆಗಳನ್ನು ತಡೆಯಲು ಸಹಾಯ ಮಾಡುತ್ತದೆ. ಹಾಲಿನಲ್ಲಿ ಕ್ಯಾಲ್ಸಿಯಂ, ವಿಟಮಿನ್ ಡಿ, ಪೊಟ್ಯಾಶಿಯಮ್, ಮೆಗ್ನೀಶಿಯಮ್, ರೈಬೋಫ್ಲಾವಿನ್ ಮತ್ತು ವಿಟಮಿನ್ ಬಿ 12 ಸಮೃದ್ಧವಾಗಿದೆ. ಇದು ಆಸ್ಟಿಯೊಪೊರೋಸಿಸ್ ತಡೆಯುತ್ತದೆ.. ನಿಮ್ಮ ಹಲ್ಲುಗಳನ್ನು ಬಲಪಡಿಸುತ್ತದೆ ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಮುಖ್ಯವಾಗಿ ತೂಕ ಇಳಿಕೆಗೆ ಸಹಾಯಕವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ