ಉಪ್ಪಿಗಿಂತ (Salt) ರುಚಿ (Taste) ಬೇರೆ ಇಲ್ಲ ಎನ್ನುವ ಗಾದೆ ಎಲ್ಲರೂ ಕೇಳಿರುತ್ತೇವೆ. ಆಹಾರ ಪದಾರ್ಥಗಳ ರುಚಿ ಹೆಚ್ಚಿಸಲು ಉಪ್ಪನ್ನು ಎಲ್ಲರೂ ಬಳಸುತ್ತಾರೆ. ಉಪ್ಪು ಇಲ್ಲದೇ, ಅಡುಗೆ ಮಾಡುವುದು ಅಸಾಧ್ಯ ಎನ್ನಬಹುದು. ಆದರೆ, ನಾವು ಅಡುಗೆ ಮಾಡುವಾಗ ಕೆಲವೊಮ್ಮೆ ಕಣ್ತಪ್ಪಿನಿಂದ ಆಹಾರದಲ್ಲಿ (food) ಉಪ್ಪು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಇದರಿಂದ ಆಹಾರದ ರುಚಿ ಹಾಳಾಗುವುದು ಮಾತ್ರವಲ್ಲದೇ, ನಮ್ಮ ಆರೋಗ್ಯಕ್ಕೆ ಸಹ ಅದು ಹಾನಿಕಾರಕ. ಉಪ್ಪು ಹೆಚ್ಚಾದಾಗ ಬಿಪಿ ಸಮಸ್ಯೆ (BP) ಇರುವವರಿಗೆ ಇನ್ನೂ ಅದು ಹೆಚ್ಚಾಗಬಹುದು. ಅಲ್ಲದೇ, ನೀವು ಅದೆಷ್ಟೇ ರುಚಿಯಾಗಿ ಅಡುಗೆ ಮಾಡಿದರೂ ಸಹ, ಒಂದು ಸ್ವಲ್ಪ ಉಪ್ಪು ಹೆಚ್ಚಾದರೂ ಸಹ ಅದು ಹಾಳಾಗುತ್ತದೆ. ಆದರೆ ನೀವು ಅಡುಗೆಯಲ್ಲಿ ಹೆಚ್ಚಾದ ಉಪ್ಪನ್ನ ಸರಿದೂಗಿಸಲು ಕೆಲ ಸುಲಭ ಮಾರ್ಗಗಳಿದೆ. ಆ ಮಾರ್ಗಗಳು ಯಾವುವು, ಉಪ್ಪು ಕಡಿಮೆಯಾಗಲು ಏನು ಮಾಡಬೇಕು ಎಂಬುದು ಇಲ್ಲಿದೆ.
ಹಸಿ ಆಲೂಗಡ್ಡೆ
ಈ ಆಲೂಗೆಡ್ಡೆಯಿಂದ ನೀವು ಆಹಾರದಲ್ಲಿ ಹೆಚ್ಚಾದ ಉಪ್ಪನ್ನ ಸರಿ ಮಾಡಬಹುದು ಎಂದು ಹಲವರು ಹೇಳಿರುವುದನ್ನ ಕೇಳಿರಬಹುದು. ಹೌದು, ಇದು ನಿಜಕ್ಕೂ ನಿಮಗೆ ಸಹಾಯ ಮಾಡುತ್ತದೆ. ಆಲೂಗೆಡ್ಡೆಯನ್ನು ನೀವು ಬೇಯಿಸುವ ಅಗತ್ಯವಿಲ್ಲ. ಈ ಆಲೂಗೆಡ್ಡೆಯನ್ನು 2 ರಿಂದ 3 ಹೋಳುಗಳಾಗಿ ಕತ್ತರಿಸಿ.
ಇದನ್ನು ಯಾವ ಆಹಾರದಲ್ಲಿ ಉಪ್ಪು ಹೆಚ್ಚಿದೆಯೋ, ಆ ಆಹಾರಕ್ಕೆ ಅದನ್ನು ಹಾಕಿ. ಆದರೆ ಆಲೂಗೆಡ್ಡೆ ಹಾಕುವಾಗ ಚೆನ್ನಾಗಿ ತೊಳೆದು ಸಿಪ್ಪೆ ಸುಲಿದು ಹಾಕಿ. ಇದು ನಿಮ್ಮ ಆಹಾರದಲ್ಲಿರುವ ಹೆಚ್ಚುವರಿ ಉಪ್ಪನ್ನು ಹೀರಿಕೊಳ್ಳುತ್ತದೆ. ಹಾಗೆಯೇ, ಈ ಆಲೂಗೆಡ್ಡೆಯನ್ನು ಕೇವಲ 20 ನಿಮಿಷಗಳ ಕಾಲ ಆಹಾರದ ಮೇಲೆ ಬಿಡಿ, ನಂತರ ತೆಗೆಯಿರಿ.
ಹಿಟ್ಟು
ಈ ಮೈದಾಹಿಟ್ಟು ಹೆಚ್ಚಿನ ಉಪ್ಪನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಹಲವಾರು ಜನರಿಗೆ ಗೊತ್ತಿಲ್ಲ. ನಿಮ್ಮ ಆಹಾರದ ಗಾತ್ರದ ಆಧಾರದ ಮೇಲೆ ಮೈದಾ ಹಿಟ್ಟಿನ ಸಣ್ಣ ಉಂಡೆಗಳನ್ನು ಮಾಡಿ, ಉಪ್ಪು ಹೆಚ್ಚಿರುವ ಆಹಾರದಲ್ಲಿ ಇದನ್ನು ಹಾಕಿ. ಹಾಗೆಯೇ, ಇದನ್ನು ಸಹ 20 ರಿಂದ 30 ನಿಮಿಷಗಳ ನಂತರ ತೆಗೆದುಬಿಡಿ.
ತಾಜಾ ಕೆನೆ
ಉಪ್ಪು ಸ್ವಲ್ಪ ಹೆಚ್ಚಾದರೂ ಸಹ ಅದನ್ನು ತಿನ್ನುವುದು ಅಸಾಧ್ಯ. ಹನಿಮ್ಮ ಆಹಾರದಲ್ಲಿ ಹೆಚ್ಚಿರುವ ಉಪ್ಪನ್ನ ಕಡಿಮೆ ಮಾಡಲು, ಹಾಲಿನ ಕೆನೆ ಅಥವಾ ಮೊಸರಿನ ಕೆನೆಯನ್ನು ಸೇರಿಸಬಹುದು. ನಿಮ್ಮ ಆಹಾರಕ್ಕೆ ಯಾವುದು ಸೂಕ್ತ ಎಂಬುದನ್ನ ನೋಡಿಕೊಳ್ಳಿ. ಕೆಲ ಆಹಾರಗಳಿಗೆ ಹಾಲು ಅಥವಾ ಮೊಸರು ಹಾಕಿದರೆ ರುಚಿ ಹಾಳಾಗುತ್ತದೆ. ಹಾಗಾಗಿ ಸರಿಯಾಗಿ ನೋಡಿಕೊಂಡು ಹಾಕಿದರೆ, ನಿಮ್ಮ ಆಹಾರದ ರುಚಿ ಸರಿಯಾಗುತ್ತದೆ.
ಬೇಯಿಸಿದ ಆಲೂಗೆಡ್ಡೆ
ಆಲೂಗಡ್ಡೆ ನಿಮ್ಮ ಆಹಾರದಲ್ಲಿ ಹೆಚ್ಚಾದ ಉಪ್ಪನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಎಲ್ಲರಿಗೂ ಗೊತ್ತಿದೆ. ಆದರೆ, ಹಸಿ ಆಲೂಗೆಡ್ಡೆ ಮಾತ್ರ ಉಪ್ಪು ಕಡಿಮೆ ಮಾಡುತ್ತದೆ ಎಂದು ಹಲವಾರು ಜನರು ತಿಳಿದುಕೊಂಡಿದ್ದಾರೆ. ಅದು ತಪ್ಪು, ನೀವೂ ಬೇಯಿಸಿದ ಆಲೂಗೆಡ್ಡೆಯನ್ನು ಸಹ ಉಪ್ಪು ಹೆಚ್ಚಾದ ಆಹಾರಕ್ಕೆ ಸೇರಿಸಿದರೆ, ರುಚಿ ಸರಿಯಾಗುತ್ತದೆ.
ಮೊಸರು
ನಿಮಗೆ ಮೊದಲೇ ಹೇಳಿದಂತೆ ಹಾಲಿನ ಕೆನೆ ಹಾಗೂ ಮೊಸರು ಹೇಗೆ ಹೆಚ್ಚಾದ ಉಪ್ಪಿನ ರುಚಿ ಸರಿದೂಗಿಸಲು ಸಹಾಯ ಮಾಡುತ್ತದೆ. ಹಾಗೆಯೇ, ಕೇವಲ ಮೊಸರು ಸಹ ಉಪ್ಪಿನ ರುಚಿ ಸರಿ ಮಾಡಲು ಸಹಕಾರಿ ಎಂದು ಸಾಬೀತಾಗಿದೆ. ಉಪ್ಪು ಹೆಚ್ಚಾದ ನಿಮ್ಮ ಆಹಾರಕ್ಕೆ ಮೊಸರು ಸೇರಿಸಿದರೆ ರುಚಿ ಹಾಳಾಗುವುದಿಲ್ಲ ಎಂದರೆ, ಅದಕ್ಕೆ 1 ಚಮಚ ಮೊಸರು ಸೇರಿಸಿ ಮತ್ತು 5 ನಿಮಿಷ ಬೇಯಿಸಿ. ಅದನ್ನು ಬೇಯಿಸಲು ಸಾಧ್ಯವಿಲ್ಲ ಎಂದರೆ, ಚೆನ್ನಾಗಿ ಮಿಕ್ಸ್ ಮಾಡಿ. ಈ ರೀತಿ ಮಾಡುವುದರಿಂದ ನಿಮ್ಮ ಆಹಾರದಲ್ಲಿ ಉಪ್ಪಿನ ಪ್ರಮಾಣವನ್ನು ಕಡಿಮೆ ಮಾಡುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ