ರಕ್ತಹೀನತೆಯ ಸಮಸ್ಯೆಯೇ? ಹಾಗಿದ್ರೆ ನೀವು ಈ ಆಹಾರಗಳನ್ನು ಹೆಚ್ಚಾಗಿ ಸೇವಿಸಿ

ಕಿತ್ತಳೆ, ನಿಂಬೆ ಹಣ್ಣು, ಪಪಾಯ ಹಾಗೂ ಟೊಮೇಟೊ,ಕೋಸುಗಡ್ಡೆ ಮುಂತಾದ ತರಕಾರಿ, ಹಣ್ಣುಗಳನ್ನು ತಿನ್ನುವದರಿಂದ ರಕ್ತಹೀನತೆಯನ್ನು ತಡೆಯಬಹುದು. ಇಂತಹ ಆಹಾರಗಳನ್ನು ಸೇವಿಸುವುದರಿಂದ ದೇಹದಲ್ಲಿರುವ ರಕ್ತಕಣಗಳು ಕಬ್ಬಿಣಾಂಶವನ್ನು ಸುಲಭವಾಗಿ ಹೀರಿಕೊಳ್ಳತ್ತದೆ.

zahir | news18-kannada
Updated:August 6, 2019, 4:03 PM IST
ರಕ್ತಹೀನತೆಯ ಸಮಸ್ಯೆಯೇ? ಹಾಗಿದ್ರೆ ನೀವು ಈ ಆಹಾರಗಳನ್ನು ಹೆಚ್ಚಾಗಿ ಸೇವಿಸಿ
ಸಾಂದರ್ಭಿಕ ಚಿತ್ರ
  • Share this:
ವಿಶ್ವದಲ್ಲಿ ರಕ್ತಹೀನತೆಯ ತೊಂದರೆ ಹೊಸ ಸಮಸ್ಯೆಯಾಗಿ ಪರಿಣಮಿಸುತ್ತಿದೆ. ಭಾರತದಲ್ಲಿ ಶೇಕಡಾ 50-60 ರಷ್ಟುಮಹಿಳೆಯರು ಈ ರಕ್ತಹೀನತೆಯಿಂದ ಬಳಲುತ್ತಿದ್ದಾರೆ ಎಂಬ ಅಚ್ಚರಿ ಸರ್ವೆಯಿಂದ ಬಹಿರಂಗವಾಗಿದೆ. ಈ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿರುವುದು ಕೂಡ ಆತಂಕಕಾರಿ. ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸರ್ವೆ ಪ್ರಕಾರ, ಕರ್ನಾಟಕದ ನಗರ ಪ್ರದೇಶಗಳಲ್ಲಿ ಶೇ. 43ರಷ್ಟು ಸ್ತ್ರೀಯರು ಮತ್ತು ಗ್ರಾಮೀಣ ಪ್ರದೇೕಶಗಳಲ್ಲಿ ಶೇ. 46ರಷ್ಟು ಸ್ತ್ರೀಯರು ರಕ್ತಹೀನತೆ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಹಾಗೆಯೇ ಒಟ್ಟಾರೆ ಶೇ.50 ಕ್ಕಿಂತ ಹೆಚ್ಚಿನ ಮಂದಿ ಹಿಮೋಗ್ಲೊಬಿನ್ ಕೊರತೆಯಿಂದ ಬಳಲುತ್ತಿದ್ದಾರೆ.

ದೇಹದಲ್ಲಿ ರಕ್ತದ ಕೊರತೆಯಾದರೆ ಅನೇಕ ಸಮಸ್ಯೆಗಳು ತಲೆದೂರುತ್ತವೆ. ಇದು ಪೋಷಕಾಂಶಗಳ ಕೊರತೆ ಅಥವಾ ವಂಶ ಪಾರಂಪರ್ಯದ ಕಾರಣಗಳಿಂದ ಉಂಟಾಗಬಹುದು. ರಕ್ತದಲ್ಲಿ ಹಿಮೊಗ್ಲೊಬಿನ್ ಮಟ್ಟ ಕಡಿಮೆಯಾದರೆ ದಣಿವು, ನಿರಾಸಕ್ತಿ, ಆರೋಗ್ಯದಲ್ಲಿ ಏರು ಪೇರು ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಒಬ್ಬ ಆರೋಗ್ಯವಂತನ ದೇಹದಲ್ಲಿರುವ ರಕ್ತದಲ್ಲಿ ಹಿಮೋಗ್ಲೊಬಿನ್ ಪ್ರಮಾಣ 12.05ಗಿಂತ ಹೆಚ್ಚಿರಬೇಕು.

ನಾವು ಸೇವಿಸುವ ಪ್ರತಿನಿತ್ಯದ ಆಹಾರ ಕ್ರಮಗಳಿಂದಲೂ ಕೂಡ ರಕ್ತದಲ್ಲಿನ ಹಿಮೋಗ್ಲೊಬಿನ್​ನನ್ನು ಹೆಚ್ಚಿಸಿಕೊಳ್ಳಬಹುದು. ಈ ಮೂಲಕ ರಕ್ತಹೀನತೆಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಅಂತಹ ಕೆಲ ಆಹಾರಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ.

ಬೀಟ್​ ರೂಟ್​ :
ಬೀಟ್​ ರೂಟ್​ ಎನ್ನುವುದು ರಕ್ತಹೀನತೆಗೆ ಪರಿಣಾಮಕಾರಿ ಆಹಾರ. ಸಾಮಾನ್ಯ ರಕ್ತ ಕೊರತೆ ಉಂಟಾದರೆ ವೈದ್ಯರು ಕೂಡ ಮೊದಲು ಬೀಟ್ ರೂಟ್​ ಸೇವನೆಗೆ ಸಲಹೆ ನೀಡುತ್ತಾರೆ. ಇದರಲ್ಲಿ ಕಂಡು ಬರುವ ಕಬ್ಬಿಣಾಂಶ, ಫೋಲಿಕ್ ಆ್ಯಸಿಡ್, ಫೈಬರ್ ಮತ್ತು ಪೊಟಾಶಿಯಂ ಅಂಶಗಳು ದೇಹದಲ್ಲಿ ರಕ್ತವನ್ನು ಹೆಚ್ಚಿಸುತ್ತದೆ.

ದಾಳಿಂಬೆ :
ದಾಳಿಂಬೆ ತಿಂದರೆ ಶೀಘ್ರದಲ್ಲೇ ರಕ್ತಹೀನತೆಯ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಇದರಲ್ಲಿರುವ ಕಬ್ಬಿಣಾಂಶ, ಕ್ಯಾಲ್ಸಿಯಂ, ಪ್ರೋಟೀನ್, ಕಾರ್ಬೋಹೈಡ್ರೇಟ್​ಗಳು ಮತ್ತು ಫೈಬರ್ ಅಂಶಗಳು ಹಿಮೋಗ್ಲೊಬಿನ್ ಪ್ರಮಾಣವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.ನೆಲ್ಲಿಕಾಯಿ :
ವಿಟಮಿನ್​ ಸಿ ಸಮೃದ್ಧವಾಗಿರುವ ನೆಲ್ಲಿಕಾಯಿಗಳು ಕೂಡ ರಕ್ತಹೀನತೆಯ ಸಮಸ್ಯೆಗೆ ಪ್ರಮುಖ ಆಹಾರವಾಗಿದೆ. ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿ ಆಗಿರುವ ನೆಲ್ಲಿಕಾಯಿಯಲ್ಲಿ ಕ್ಯಾಲ್ಸಿಯಂ, ವಿಟಮಿನ್, ಕಬ್ಬಿಣಾಂಶ ಹೆಚ್ಚಾಗಿದ್ದು, ಇದನ್ನು ಪ್ರತಿನಿತ್ಯ ತಿಂದರೆ ರಕ್ತದ ಕೊರತೆಗೆ ಪರಿಹಾರ ಕಂಡುಕೊಳ್ಳಬಹುದು.

ಸೇಬು (ಆ್ಯಪಲ್) :
ಪ್ರತಿನಿತ್ಯ ಸೇಬನ್ನು ತಿನ್ನುವುದರಿಂದ ಹಿಮೋಗ್ಲೊಬಿನ್ ಮಟ್ಟವನ್ನು ಹೆಚ್ಚಿಸಬಹುದು. ಆ್ಯಪಲ್ ತಿನ್ನುವುದರಿಂದ ಆರೋಗ್ಯ ಕೂಡ ಉತ್ತಮಗೊಳ್ಳುತ್ತದೆ. ಇದರ ಸೇವನೆಯಿಂದ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೋಗಲಾಡಿಸಬಹುದು.

ಕಬ್ಬಿಣಾಂಶ ಇರುವ ಆಹಾರ:
ಕಬ್ಬಿಣಾಂಶವು ರಕ್ತ ಕಣಗಳ ಪ್ರಮುಖ ಭಾಗವಾಗಿದೆ. ಹೀಗಾಗಿ ಐರನ್​ಯುಕ್ತ ಆಹಾರಗಳನ್ನು ಸೇವಿಸಿದರೆ ಹಿಮೋಗ್ಲೊಬಿನ್ ಹೆಚ್ಚುತ್ತದೆ. ಇದಕ್ಕಾಗಿ ನೀವು ಸೇವಿಸುವ ದಿನನಿತ್ಯದ ಆಹಾರಗಳಲ್ಲಿ ಹಸಿರು ತರಕಾರಿ, ಸೊಪ್ಪುಗಳಾದ ಬಸಳೆ, ಮೆಂತ್ಯ ಸೊಪ್ಪು, ಸಬ್ಬಸಿಗೆ ಹಾಗೂ ಕೊತ್ತಂಬರಿ ಸೊಪ್ಪನ್ನು ಆಹಾರದಲ್ಲಿ ಬಳಕೆ ಮಾಡಿ. ಅದೇ ರೀತಿ ಬೀಟ್​ರೂಟ್​, ಮೊಟ್ಟೆ, ಕೋಳಿ ಮಾಂಸ, ದಾಳಿಂಬೆ ಹಣ್ಣು, ಸೇಬಿನ ಹಣ್ಣನ್ನು ಸಹ ತಿನ್ನಬಹುದು. ಹಾಗೆಯೇ ಹಾಲು, ಖರ್ಜೂರ, ಬೆಲ್ಲ, ಬಾದಾಮಿ ಹಾಗೂ ಒಣ ದ್ರಾಕ್ಷಿಯನ್ನು ಪ್ರತಿದಿನ ಸೇವಿಸುತ್ತಾ ಬಂದರೆ ಕಬ್ಬಿಣಾ೦ಶದ ಕೊರತೆಯನ್ನು ಹತೋಟಿಗೆ ತರಬಹುದು.

ವಿಟಮಿನ್ ಸಿ ಆಹಾರ:
ವಿಟಮಿನ್ ಸಿ ಹೆಚ್ಚಿರುವ ಆಹಾರಗಳನ್ನು ಸೇವಿಸುವುದರಿಂದ ಸಹ ರಕ್ತಹೀನತೆ ಸಮಸ್ಯೆಗೆ ಪರಿಹಾರ ಕಾಣಬಹುದು. ಸಿಟ್ರಸ್ ಅಂಶಗಳನ್ನು ಹೊಂದಿರುವ ಹಣ್ಣುಗಳಾದ ಕಿತ್ತಳೆ, ನಿಂಬೆ ಹಣ್ಣು, ಪಪಾಯ ಹಾಗೂ ಟೊಮೇಟೊ,ಕೋಸುಗಡ್ಡೆ ಮುಂತಾದ ತರಕಾರಿ, ಹಣ್ಣುಗಳನ್ನು ತಿನ್ನುವದರಿಂದ ರಕ್ತಹೀನತೆಯನ್ನು ತಡೆಯಬಹುದು. ಇಂತಹ ಆಹಾರಗಳನ್ನು ಸೇವಿಸುವುದರಿಂದ ದೇಹದಲ್ಲಿರುವ ರಕ್ತಕಣಗಳು ಕಬ್ಬಿಣಾಂಶವನ್ನು ಸುಲಭವಾಗಿ ಹೀರಿಕೊಳ್ಳತ್ತದೆ.

ಫೋಲಿಕ್ ಆಮ್ಲ:
ಫೋಲಿಕ್ ಆಮ್ಲ ಹೊಂದಿರುವ ಆಹಾರಗಳನ್ನು ಸೇವಿಸುವುದು ಕೂಡ ಉತ್ತಮ. ದೇಹದಲ್ಲಿ ಫೋಲಿಕ್ ಆಮ್ಲದ ಕೊರತೆಯಾದರೆ, ಅದು ಕ್ರಮೇಣ ಹೀಮೋಗ್ಲೋಬಿನ್ ಪ್ರಮಾಣವನ್ನು ಕುಂಠಿತವಾಗಿಸುತ್ತದೆ. ಮೊಳಕೆ ಹೊಡೆದ ಧಾನ್ಯಗಳು, ಬಟಾಣಿ, ಬಾಳೆಹಣ್ಣು, ಹಸಿರು ಸೊಪ್ಪಿನ ತರಕಾರಿ ಹಾಗೂ ಕೋಳಿಯ ಲಿವರ್​ ಮಾಂಸವನ್ನು ಆಹಾರದಲ್ಲಿ ಬಳಸುವುದರಿಂದ ಫೋಲಿಕ್ ಆಮ್ಲವನ್ನು ದೇಹದಲ್ಲಿ ನಿಯಂತ್ರಿಸಬಹುದು. ಇದರಿಂದ ಹಿಮೋಗ್ಲೊಬಿನ್ ಪ್ರಮಾಣ ಏರಿಕೆಯಾಗುತ್ತದೆ.
First published: August 6, 2019, 4:01 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading