Shaving or Waxing: ನಿಮಗೆ ಯಾವುದು ಸೂಕ್ತ? ಇಲ್ಲಿದೆ ನೋಡಿ

ಕೆಲವರಿಗೆ ಯಾವುದೇ ನೋವು ನೀಡದ ಶೇವಿಂಗ್ ಇಷ್ಟವಾದರೆ, ಇನ್ನು ಕೆಲವರಿಗೆ ಕೂದಲನ್ನು ಬುಡದಿಂದಲೇ ಕಿತ್ತು ತೆಗೆಯುವ ವ್ಯಾಕ್ಸಿಂಗ್ ಇಷ್ಟ. ಆದರೆ ಇವೆರಡರಲ್ಲಿ ನಿಮ್ಮ ಚರ್ಮಕ್ಕೆ ನಿಜಕ್ಕೂ ಸರಿ ಹೊಂದುವ ವಿಧಾನ ಯಾವುದು? ಅದನ್ನು ತಿಳಿದುಕೊಳ್ಳಬೇಕಾದರೆ ಮೊದಲು ನೀವು ಶೇವಿಂಗ್ ಮತ್ತು ವ್ಯಾಕ್ಸಿಂಗ್ ವಿಧಾನಗಳ ಅನುಕೂಲ ಮತ್ತು ಅನಾನುಕೂಲತೆಗಳ ಬಗ್ಗೆ ತಿಳಿದುಕೊಳ್ಳಬೇಕು. ಆ ಕುರಿತು ಇಲ್ಲಿದೆ ಒಂದಿಷ್ಟು ಮಾಹಿತಿ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ದೇಹದ ಮೇಲಿನ ಬೇಡದ ಕೂದಲುಗಳಿಂದ (Hair) ಮುಕ್ತಿ ಪಡೆಯಲು ಸಾಮಾನ್ಯವಾಗಿ ಅನುಸರಿಸುವ ವಿಧಾನವೆಂದರೆ ವ್ಯಾಕ್ಸಿಂಗ್ (Waxing) ಮತ್ತು ಶೇವಿಂಗ್ (Shaving). ಆದರೆ, ಜನರು ಈ ಎರಡೂ ವಿಧಾನಗಳಲ್ಲಿನ ಅನುಕೂಲತೆ ಮತ್ತು ಅನಾನುಕೂಲತೆಗಳ ಬಗ್ಗೆ ಸರಿಯಾಗಿ ತಿಳಿದುಕೊಳ್ಳದೆಯೇ, ತಮಗಾಗಿ ಯಾವ ವಿಧಾನವನ್ನು ಆಯ್ಕೆ ಮಾಡಿಕೊಳ್ಳುವುದು ಎಂಬ ಗೊಂದಲದಲ್ಲಿ ಇರುತ್ತಾರೆ. ಕೆಲವರಿಗೆ ಯಾವುದೇ ನೋವು ನೀಡದ ಶೇವಿಂಗ್ ಇಷ್ಟವಾದರೆ, ಇನ್ನು ಕೆಲವರಿಗೆ ಕೂದಲನ್ನು ಬುಡದಿಂದಲೇ ಕಿತ್ತು ತೆಗೆಯುವ ವ್ಯಾಕ್ಸಿಂಗ್ ಇಷ್ಟ. ಆದರೆ ಇವೆರಡರಲ್ಲಿ ನಿಮ್ಮ ಚರ್ಮಕ್ಕೆ (Skin) ನಿಜಕ್ಕೂ ಸರಿ ಹೊಂದುವ ವಿಧಾನ ಯಾವುದು? ಅದನ್ನು ತಿಳಿದುಕೊಳ್ಳಬೇಕಾದರೆ ಮೊದಲು ನೀವು ಶೇವಿಂಗ್ ಮತ್ತು ವ್ಯಾಕ್ಸಿಂಗ್ ವಿಧಾನಗಳ ಅನುಕೂಲ ಮತ್ತು ಅನಾನುಕೂಲತೆಗಳ ಬಗ್ಗೆ ತಿಳಿದುಕೊಳ್ಳಬೇಕು. ಆ ಕುರಿತು ಇಲ್ಲಿದೆ ಒಂದಿಷ್ಟು ಮಾಹಿತಿ.

ವ್ಯಾಕ್ಸಿಂಗ್‍ನ ಅನುಕೂಲಗಳು :
1. ವ್ಯಾಕ್ಸಿಂಗ್ ಚರ್ಮವನ್ನು ಎಕ್ಸ್ ಫೋಲಿಯೇಟ್ ಮಾಡುತ್ತದೆ.
2. ಶೇವಿಂಗ್‍ಗೆ ಹೋಲಿಸಿದರೆ, ವ್ಯಾಕ್ಸಿಂಗ್ ದೀರ್ಘಾವಧಿಯ (3-4 ವಾರಗಳು) ಫಲಿತಾಂಶ ನೀಡುತ್ತದೆ.
3. ನಿಯಮಿತವಾಗಿ ವ್ಯಾಕ್ಸಿಂಗ್ ಮಾಡಿದಾಗ ಚರ್ಮವು ಮೃದುವಾದಂತ ಅನುಭವವನ್ನು ಪಡೆಯಬಹುದು ಮತ್ತು ಕೊನೆಗೆ ಕೂದಲು ಕೂಡ ತೆಳುವಾಗಿ ಬೆಳೆಯಲು ಆರಂಭವಾಗಬಹುದು.

ಇದನ್ನೂ ಓದಿ: Weight Loss: ತೂಕ ಇಳಿಸಲು ಆಯುರ್ವೇದದ ಸಿಂಪಲ್ ಟಿಪ್ಸ್ ಫಾಲೋ ಮಾಡಿ

ಶೇವಿಂಗ್‍ನ ಅನುಕೂಲಗಳು :
1. ವ್ಯಾಕ್ಸ್ ಗೆ ಹೋಲಿಸಿದರೆ, ರೇಜರ್ ಮತ್ತು ಶೇವಿಂಗ್ ಕ್ರೀಂಗಳು ಅಗ್ಗವಾಗಿರುತ್ತವೆ, ಹಾಗಾಗಿ ಶೇವಿಂಗ್ ಬಜೆಟ್ ಸ್ನೇಹಿ ಎಂದು ಕೂಡ ಪರಿಗಣಿಸಲ್ಪಡುತ್ತದೆ.
2. ಶೇವಿಂಗ್ ಮಾಡುವಾಗ ಕೂದಲನ್ನು ಬೇರಿನಿಂದಲೇ ಕಿತ್ತು ತೆಗೆಯುವುದಿಲ್ಲ, ಹಾಗಾಗಿ, ಶೇವಿಂಗ್ ಮಾಡುವಾಗ ಯಾವುದೇ ರೀತಿ ನೋವನ್ನು ಅನುಭವಿಸಬೇಕಿಲ್ಲ.
3. ಶೇವಿಂಗ್ ಮಾಡಲು ಹೆಚ್ಚು ಶ್ರಮದ ಅಗತ್ಯವಿಲ್ಲ ಮತ್ತು ಹೆಚ್ಚು ಸಮಯವೂ ತಗಲುವುದಿಲ್ಲ. ನಾವು ಮನೆಯಲ್ಲಿ ದಿನನಿತ್ಯದ ಕೆಲಸಗಳ ಹೇಗೆ ಮಾಡಿಕೊಳ್ಳುತ್ತೇವೆ , ಹಾಗೆಯೇ ಶೇವಿಂಗನ್ನು ಕೂಡ ಮಾಡಿಕೊಳ್ಳಬಹುದು.

ವ್ಯಾಕ್ಸಿಂಗ್‍ನ ಅನಾನುಕೂಲಗಳು :
1. ಚರ್ಮದೊಳಗೆ ಬೆಳೆದ ಕೂದಲನ್ನು ತೆಗೆಯುವಾಗ ನೋವಾಗುತ್ತದೆ, ಒಂದು ರೀತಿಯ ಅನಾನುಕೂಲತೆ ಉಂಟಾಗುತ್ತದೆ. ಚರ್ಮ ಕೆಂಪಾಗುತ್ತದೆ. ಹೇರ್ ಫಾಲಿಕಲ್‍ಗಳಲ್ಲಿ ಉರಿಯೂತ ಉಂಟಾಗುತ್ತದೆ ಮತ್ತು ಕಿರಿಕಿರಿಯ ಅನುಭವವಾಗುತ್ತದೆ.
2. ವ್ಯಾಕ್ಸ್ ಮಾಡಬೇಕು ಎಂದರೆ, ನೀವು ಮೊದಲು ನಿಮ್ಮ ಕೂದಲಿನ ಉದ್ದವನ್ನು ಪರಿಗಣಿಸಬೇಕಾಗುತ್ತದೆ.
3. ವ್ಯಾಕ್ಸ್ ಸಹಾಯದಿಂದ ಮುಖದ ಮೇಲಿನ ಕೂದಲನ್ನು ತೆಗೆದು ಹಾಕುವುದರಿಂದ , ಚರ್ಮದ ಕಲೆ ಮತ್ತು ಸೋಂಕು ಕೂಡ ಉಂಟಾಗಬಹುದು.
4. ವ್ಯಾಕ್ಸಿಂಗ್ ಮಾಡುವಾಗ ತುಂಬಾ ನೋವಾಗುತ್ತದೆ ಮತ್ತು ಒಂದು ವೇಳೆ ನೀವು ವ್ಯಾಕ್ಸ್ ಮಾಡುವಾಗ ಎಚ್ಚರಿಕೆ ವಹಿಸದೇ ಇದ್ದರೆ, ಬಿಸಿ ವ್ಯಾಕ್ಸ್ ನ ಕಾರಣದಿಂದ ಮುಖದ ಚರ್ಮ ಸುಟ್ಟು ಹೋಗುವ ಸಾಧ್ಯತೆ ಇದೆ.

ಇದನ್ನೂ ಓದಿ: Health Tips: ಮಳೆಗಾಲದಲ್ಲಿ ಕಾಡುವ ಶೀತ, ಕೆಮ್ಮಿಗೆ 5 ಪವರ್​ಫುಲ್ ಮನೆಮದ್ದುಗಳು

ಶೇವಿಂಗ್‍ನ ಅನಾನುಕೂಲಗಳು :
1. ಶೇವಿಂಗ್ ಬ್ಲೇಡ್‍ಗಳ ಕಾರಣದಿಂದ ಚರ್ಮಕ್ಕೆ ಕಿರಿಕಿರಿ ಮತ್ತು ಗಾಯಗಳು ಉಂಟಾಗಬಹುದು.
2. ವ್ಯಾಕ್ಸಿಂಗ್‍ಗೆ ಹೋಲಿಸಿದರೆ, ಶೇವಿಂಗ್ ಫಲಿತಾಂಶ ಕಡಿಮೆ ದಿನಗಳವರೆಗೆ ಇರುತ್ತದೆ. ಅಂದರೆ 1 ರಿಂದ 3 ದಿನಗಳವರೆಗೆ ಇರಬಹುದು ಅಷ್ಟೆ.
3. ಅದು ಇನ್‍ಗ್ರೋನ್ ಕೂದಲಿಗೆ ಕಾರಣ ಆಗಬಹುದು. ಶೇವಿಂಗ್, ರೇಜರ್ ಗಾಯಗಳು, ತುರಿಕೆ ಮತ್ತು ಹೇರ್ ಫಾಲಿಕ್‍ಗಳಲ್ಲಿನ ಉರಿಯೂತಕ್ಕೆ ಕೂಡ ಕಾರಣವಾಗಬಹುದು.

ಶೇವಿಂಗ್ ಇರಲಿ ಅಥವಾ ವ್ಯಾಕ್ಸ್ ಮಾಡುವುದಿರಲಿ, ಮುಖದ ಮೇಲಿನ ಬೇಡದ ಕೂದಲಿನಿಂದ ಮುಕ್ತಿ ಪಡೆಯುವ ಈ ಎರಡೂ ವಿಧಾನಗಳು ತಮ್ಮದೇ ಆದ ಅನುಕೂಲ ಮತ್ತು ಅನಾನುಕೂಲತೆಗಳನ್ನು ಹೊಂದಿವೆ. ಕೆಲವೊಂದು ಅಡ್ಡ ಪರಿಣಾಮಗಳು, ಶೇವಿಂಗ್ ಅಥವಾ ವ್ಯಾಕ್ಸಿಂಗ್ ಮಾಡಿಕೊಳ್ಳುವ ವ್ಯಕ್ತಿ ಮತ್ತು ಅವರ ಚರ್ಮದ ಸಂವೇದನಾಶೀಲ ಗುಣವನ್ನು ಅವಲಂಬಿಸಿರುತ್ತದೆ. ನಿಮ್ಮ ಚರ್ಮಕ್ಕೆ ಯಾವ ರೀತಿಯ ವಿಧಾನ ಸರಿ ಹೊಂದುತ್ತದೆ ಎಂಬುದರ ಬಗ್ಗೆ ನಿಮಗೆ ಇನ್ನೂ ಕೂಡ ಗೊಂದಲ ಇದ್ದರೆ, ಶೇವಿಂಗ್ ಮತ್ತು ವ್ಯಾಕ್ಸಿಂಗ್ ಎರಡನ್ನೂ ಪ್ರಯತ್ನಿಸಿ ನೋಡಿ.
Published by:Ashwini Prabhu
First published: