Watermelon Benefits: ವ್ಯಾಯಾಮದ ನಂತ್ರ ಕಲ್ಲಂಗಡಿ ಹಣ್ಣು ಯಾಕೆ ಬೆಸ್ಟ್? ವಾಟರ್​ಮೆಲನ್ ಅದ್ಭುತ ಆರೋಗ್ಯ ಗುಣಗಳಿವು

ಹಣ್ಣುಗಳಲ್ಲಿ ಹಲವಾರು ವಿಧದ ಹಣ್ಣುಗಳು ನಮಗೆ ಋತುವಿಗೆ ಅನುಗುಣವಾಗಿ ಲಭ್ಯವಾಗುವುದು. ಕಲ್ಲಂಗಡಿಯು ಹೆಚ್ಚಿನ ಪ್ರಮಾಣದ ನೀರಿನ ಅಂಶವನ್ನು ಹೊಂದಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಹಣ್ಣುಗಳಲ್ಲಿ ಹಲವಾರು ವಿಧದ ಹಣ್ಣುಗಳು ನಮಗೆ ಋತುವಿಗೆ ಅನುಗುಣವಾಗಿ ಲಭ್ಯವಾಗುವುದು. ಕಲ್ಲಂಗಡಿಯು ಹೆಚ್ಚಿನ ಪ್ರಮಾಣದ ನೀರಿನ ಅಂಶವನ್ನು ಹೊಂದಿದೆ, ಇದರರ್ಥ ಪ್ರಾಯೋಗಿಕವಾಗಿ ನೀವು ಕಡಿಮೆ ಕ್ಯಾಲೊರಿಗಳನ್ನು ಸೇವಿಸುವುದರೊಂದಿಗೆ ಉತ್ತಮ ಪ್ರಮಾಣದ ಆಹಾರವನ್ನು ಸೇವಿಸುತ್ತಿದ್ದೀರಿ ಎಂದರ್ಥ. ಇತರ ಹಣ್ಣು ತರಕಾರಿಗಳಿಗಿಂತ ಲೈಕೊಪಿನ್ ಹೆಚ್ಚಾಗಿರುವ ಕಲ್ಲಂಗಡಿ (Watermelon) ಕೊಬ್ಬು ಮುಕ್ತ ನೈಸರ್ಗಿಕ ಕೊಡುಗೆಯಾಗಿದೆ. ಕೊಲೆಸ್ಟ್ರಾಲ್ (Cholesterol) ಅಂಶವಿಲ್ಲದ ದೇಹಕ್ಕೆ ಶಕ್ತಿಯನ್ನು ಒದಗಿಸುವ ವಿಟಮಿನ್ (Vitamin) ಭರಿತ ಹಣ್ಣಾದ ಕಲ್ಲಂಗಡಿ ಬೇಸಿಗೆಯ ಬೇಗೆಯನ್ನು ಕಳೆಯುವಲ್ಲಿ ಸಹಕಾರಿ. ಕಲ್ಲಂಗಡಿ ಬಾಯಾರಿಕೆಯನ್ನು ಮಾತ್ರ ತೀರಿಸದೆ ರೋಗಗಳ ವಿರುದ್ಧ ಹೋರಾಡುವ ಗುಣವನ್ನು ಹೇರಳವಾಗಿಸಿಕೊಂಡ ಸಮೃದ್ಧ ಹಣ್ಣು( Fruit). ಇದಲ್ಲದೆ, ಇದರಿಂದ ಸಿಗುವ ಇತರ ಪ್ರಯೋಜನಗಳೇನು ಎಂಬುದನ್ನು ತಿಳಿಯೋಣ.

    ಜೀರ್ಣಾಂಗ ವ್ಯವಸ್ಥೆಯು ಬಲವಾಗಿರುತ್ತದೆ

    ಕಲ್ಲಂಗಡಿ ಸೇವನೆಯಿಂದ ಜೀರ್ಣಾಂಗ ವ್ಯವಸ್ಥೆ ಬಲಗೊಳ್ಳುತ್ತದೆ. ಈ ಹಣ್ಣಿನಲ್ಲಿ ಸಾಕಷ್ಟು ನೀರಿದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಅದನ್ನು ಸೇವಿಸಿದಾಗ, ನಿಮ್ಮ ಜೀರ್ಣಾಂಗ ವ್ಯವಸ್ಥೆಯು ಸಹ ಬಲವಾಗಿರುತ್ತದೆ. ನಿಮಗೆ ಯಾವುದೇ ರೀತಿಯ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಇದ್ದರೆ, ಬೇಸಿಗೆಯಲ್ಲಿ ಈ ಹಣ್ಣನ್ನು ಖಂಡಿತವಾಗಿ ಸೇವಿಸಿ.

    ಕಲ್ಲಂಗಡಿ ಸೇವನೆ ತೂಕ ಇಳಿಸಲು ಸಹಕಾರಿ

    100 ಗ್ರಾಂ ಕಲ್ಲಂಗಡಿ ಹಣ್ಣಿನಲ್ಲಿ ಕೇವಲ 30 ಕ್ಯಾಲರಿ ಮಾತ್ರ ಇದೆ. ಇದು ಬಾಯಾರಿಕೆ ಹಾಗೂ ಹಸಿವು ಕಡಿಮೆ ಮಾಡುವುದು. ಇದರಲ್ಲಿ ಉನ್ನತ ಮಟ್ಟದ ಅರ್ಜಿನೈನ್ ಎನ್ನುವ ಅಮಿನೋ ಆಮ್ಲವಿದ್ದು, ಇದು ಹೊಟ್ಟೆಯ ಭಾಗದಲ್ಲಿನ ಕೊಬ್ಬನ್ನು ಶೇ.60ರಷ್ಟು ಕಡಿಮೆ ಮಾಡುವುದು ಹಾಗೂ ತೂಕ ಇಳಿಸಲು ಇದು ಸಹಕಾರಿ. ಶೇ.90ರಷ್ಟು ನೀರಿನಾಂಶ ಹೊಂದಿರುವ ಇದು ಹೊಟ್ಟೆಯು ತುಂಬಿರುವಂತೆ ಮಾಡುವುದು ಹಾಗೂ ಅತಿಯಾಗಿ ತಿನ್ನದಂತೆ ತಡೆಯುವುದು.

    ಇದನ್ನೂ ಓದಿ: Pineapple Side Effects: ಅತಿಯಾಗಿ ಅನಾನಸ್​ ತಿಂದ್ರೆ ಈ ಆರೋಗ್ಯ ಸಮಸ್ಯೆಗಳು ತಪ್ಪಿದಲ್ಲ

    ನಿರ್ಜಲೀಕರಣ ಸಮಸ್ಯೆಯಿಂದ ಪರಿಹಾರ

    ಬಾಯಿಯ ಶುಷ್ಕತೆಯಿಂದ ನಿಮ್ಮನ್ನು ತಡೆಯುತ್ತದೆ ಮತ್ತು ಹೃದಯರಕ್ತನಾಳದ ಆರೋಗ್ಯಕ್ಕೆ ಒಳ್ಳೆಯದು. ಅಷ್ಟೇ ಅಲ್ಲ, ಇದು ನಿಮ್ಮ ದೇಹವನ್ನು ಶುದ್ಧೀಕರಿಸುತ್ತದೆ ಮತ್ತು ನಿಮ್ಮ ಚರ್ಮವನ್ನು ಆರೋಗ್ಯಕರವಾಗಿರಿಸುತ್ತದೆ. ಈ ಆರೋಗ್ಯಕರ ಹಣ್ಣು 92% ನೀರನ್ನು ಒಳಗೊಂಡಿರುತ್ತದೆ. ಈ ಹಣ್ಣು ನಿಮ್ಮ ನಿರ್ಜಲೀಕರಣವನ್ನು ನಿಗ್ರಹಿಸುವ ಸಾಮರ್ಥ್ಯವನ್ನು ಹೊಂದಿದೆ. ಕಲ್ಲಂಗಡಿ ಸೇವನೆಯಿಂದ ದೇಹವು ಹೆಚ್ಚಾಗಿ ಹೈಡ್ರೇಟೆಡ್ ಆಗಿರಲು ಸಹಾಯ ಮಾಡುತ್ತದೆ.

    ವ್ಯಾಯಾಮ ಬಳಿಕ ಅದ್ಭುತ ಪಾನೀಯ

    ವ್ಯಾಯಾಮದ ಬಳಿಕ ಒಂದು ಲೋಟ ಕಲ್ಲಂಗಡಿ ಜ್ಯೂಸ್ ಕುಡಿಯಿರಿ. ವ್ಯಾಯಾಮದ ಬಳಿಕ ಒಂದು ಲೋಟ ಕಲ್ಲಂಗಡಿ ಜ್ಯೂಸ್ ಸೇವನೆ ಮಾಡಿದರೆ ಅದು ತುಂಬಾ ಲಾಭಕಾರಿ ಆಗಿರುವುದು. ವ್ಯಾಯಾಮದ ಬಳಿಕ ಚಯಾಪಚಯ ವೃದ್ಧಿಸಲು ಹಾಗೂ ಸ್ನಾಯುಗಳು ಚೇತರಿಕೆಗೆ ಇದರಲ್ಲಿ ಇರುವಂತಹ ಅಮಿನೋ ಆಮ್ಲವು ಸಹಕಾರಿ. ನಾರಿನಾಂಶವು ಇದರಲ್ಲಿದ್ದು, ಪದೇ ಪದೇ ಹಸಿವಾಗುವುದನ್ನು ಇದು ತಡೆಯುವುದು ಮತ್ತು ಸರಿಯಾದ ಆಹಾರ ಸೇವನೆ ಮಾಡಲು ಸಹಕಾರಿ.

    ಕಲ್ಲಂಗಡಿಯು ಸ್ನಾಯುಗಳಲ್ಲಿನ ಊತದಿಂದ ಪರಿಹಾರ

    ವ್ಯಾಯಾಮದ ಬಳಿಕ ಸ್ನಾಯುಗಳಲ್ಲಿ ಊತ, ನೊವು ಕಾಣಿಸುವುದು ಸಹಜ. ಇದರ ನಿವಾರಣೆ ಮಾಡಲು ಹಾಗೂ ದೇಹವನ್ನು ಉತ್ತಮ ಸ್ಥಿತಿಯಲ್ಲಿ ಇಡಲು ಕಲ್ಲಂಗಡಿಯು ಸಹಕಾರಿ. ವ್ಯಾಯಾಮದ ಬಳಿಕ ಒಂದು ಲೋಟ ಕಲ್ಲಂಗಡಿ ಜ್ಯೂಸ್ ಕುಡಿದರೆ ಅದರಲ್ಲಿನ ಆಂಟಿಆಕ್ಸಿಡೆಂಟ್ ಗಳು ಸ್ನಾಯುಗಳಲ್ಲಿನ ಪ್ರೋಟೀನ್ ವೃದ್ಧಿಸುವುದು ಮತ್ತು ಅಥ್ಲೆಟಿಕ್ ಗಳಲ್ಲಿ ಇದು ಪ್ರದರ್ಶನ ಉತ್ತಮಪಡಿಸುವುದು.

    ಇದನ್ನೂ ಓದಿ: Sesame Seeds Benefits: ಎಳ್ಳನ್ನು ಪ್ರತಿದಿನ ತಿಂದ್ರೆ ಈ ಎಲ್ಲಾ ಸಮಸ್ಯೆಗಳು ಮಾಯವಾಗುತ್ತಂತೆ

    ಮೂತ್ರಕೋಶದ ಉರಿಯೂತ  ಶಮನಕಾರಿ

    ಮೂತ್ರಕೋಶದ ಉರಿಯೂತದ ಸಮಸ್ಯೆಯನ್ನು ಇದು ನಿವಾರಣೆ ಮಾಡುವುದು. ಮೂತ್ರಕೋಶದ ಉರಿಯೂತ ಸಮಸ್ಯೆಯನ್ನು ಹೊಂದಿದ್ದರೆ ಆಗ ಕಲ್ಲಂಗಡಿ ಬೀಜ ಸೇವನೆಯು ತುಂಬಾ ಸಹಕಾರಿ ಆಗಿರುವುದು. ಇದರಲ್ಲಿ ಆಂಟಿಆಕ್ಸಿಡೆಂಟ್ ಮತ್ತು ಉರಿಯೂತ ಶಮನಕಾರಿ ಗುಣಗಳು ಇವೆ.

    ವಿಟಮಿನ್-ಸಿ ಕಲ್ಲಂಗಡಿಯಲ್ಲಿ ಸಮೃದ್ಧವಾಗಿದೆ

    ವಿಟಮಿನ್-ಎ ಮೂಳೆಗಳನ್ನು ಬಲಪಡಿಸುತ್ತದೆ ಎಂದು ಹೇಳಲಾಗುತ್ತದೆ. ವಿಟಮಿನ್-ಸಿ ಕಲ್ಲಂಗಡಿಯಲ್ಲಿ ಸಮೃದ್ಧವಾಗಿದೆ, ಇದು ಮೂಳೆಗಳಿಗೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಇದರಲ್ಲಿರುವ ಲೈಕೋಪೀನ್ ಮೂಳೆ ಮುರಿತದ ಸಾಧ್ಯತೆಯನ್ನು ತಡೆಯುತ್ತದೆ.
    Published by:Swathi Nayak
    First published: