ನಿಮ್ಮ ಸಂಗಾತಿಯೊಂದಿಗೆ ಹಸಿಬಿಸಿ ವಿಡಿಯೋ ನೋಡುವುದನ್ನು ತಪ್ಪಿಸಬೇಡಿ.. ಕಾರಣ ಇಲ್ಲಿದೆ!

ಇಂಥ ಮುಖ್ಯ ವಿಷಯದ ಬಗ್ಗೆ ಸಾಧಾರಣವಾಗಿ ಯುವಕರು ಅಸಡ್ಡೆ ತೋರುತ್ತಾರೆ. ಆದರೆ ಈ ಬಗ್ಗೆ ಗಮನ ಹರಿಸಿದರೆ ನಿಮ್ಮ ಕೋಣೆಗೆ ಕಾಮನಬಿಲ್ಲು ಇಳಿದು ಬರೋದು ಗ್ಯಾರೆಂಟಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಸೆಕ್ಸ್​​​ ಪ್ರತಿಯೊಬ್ಬರ ಜೀವನದಲ್ಲಿ ತುಂಬಾ ಕುತೂಹಲಗಳಿಗೆ ಎಡೆ ಮಾಡುವ ವಿಷಯ. ದೇಹದ ಎಲ್ಲ ಅಗತ್ಯಗಳಂತೆ ಲೈಂಗಿಕತೆ ಕೂಡ ಮುಖ್ಯ. ನಿಮ್ಮ ಲವರ್​, ಪಾರ್ಟನರ್​, ಸಂಗಾತಿಯ ಜೊತೆ ಇದೊಂದು ವಿಷಯ ಮುಕ್ತವಾಗಿದ್ದರೆ ನಿಮ್ಮ ಲೈಂಗಿಕ ಜೀವನ ಸುಖಮಯ. ಆದರೆ ಇದರಲ್ಲಿ ಅಪಸ್ವರಗಳು ಕಂಡು ಬಂದರೆ ರಾತ್ರಿಗಳೆಲ್ಲಾ ನೀರಸ. ಲೈಂಗಿಕ ಜೀವನ ಚನ್ನಾಗಿರಬೇಕಾದರೆ ಆಸಕ್ತಿಯ ಜೊತೆಜೊತೆಗೆ ಕೆಲವೊಂದು ವಿಧಾನಗಳನ್ನೂ ಅನುಸರಿಸಬೇಕು. ಇದು ಡಿಜಿಟಲ್​​ ಯುಗ. ಎಲ್ಲವೂ ಬೆರಳ ತುದಿಯಲ್ಲಿರುವ ಮೊಬೈಲ್​ನಲ್ಲೇ ಲಭ್ಯ. ಇದನ್ನು ನಿಮ್ಮ ಸೆಕ್ಸ್​​​ ಲೈಫ್​​​ಗೆ ಬೇಕಾದಂತೆ ಬಳಸಿಕೊಳ್ಳಬಹುದು.

  ರೊಮ್ಯಾನ್ಸ್​​-ಸೆಕ್ಸ್​ ಬಗ್ಗೆ ಅಂತರ್ಜಾಲದಲ್ಲಿ ದಂಡಿಯಾಗಿ ಮಾಹಿತಿ, ವಿಡಿಯೋಗಳು ಸಿಗುತ್ತೆ. ಹಾಗಂತ ಸಿಕ್ಕಿದೆನ್ನೆಲ್ಲಾ ನೋಡಿದ್ರೆ ತಲೆ ಕೆಡೋದು ಗ್ಯಾರಂಟಿ. ಯಾವುದನ್ನು, ಯಾವಾಗ, ಯಾರೊಂದಿಗೆ ನೋಡಬೇಕು ಅನ್ನೋ ಕಾಮನ್​ ಸೆನ್ಸ್​​​ ಇರಬೇಕು. ಸೆಕ್ಸ್​ ವಿಡಿಯೋಗಳನ್ನಷ್ಟೇ ನೋಡುವುದು ಅಷ್ಟೊಂದು ಸೂಕ್ತವಲ್ಲ. ಯುವತಿಯರು ಸೆಕ್ಸ್​​ಗಿಂತ ಫೋರ್​ಪ್ಲೇ (ಮುದ್ದಾಟ)ವನ್ನು ಹೆಚ್ಚಾಗಿ ಇಷ್ಟಪಡುತ್ತಾರೆ. ಇಂಥ ಮುಖ್ಯ ವಿಷಯದ ಬಗ್ಗೆ ಸಾಧಾರಣವಾಗಿ ಯುವಕರು ಅಸಡ್ಡೆ ತೋರುತ್ತಾರೆ. ಆದರೆ ಈ ಬಗ್ಗೆ ಗಮನ ಹರಿಸಿದರೆ ನಿಮ್ಮ ಕೋಣೆಗೆ ಕಾಮನಬಿಲ್ಲು ಇಳಿದು ಬರೋದು ಗ್ಯಾರೆಂಟಿ.

  ಇದನ್ನು ಓದಿ: ದಾಂಪತ್ಯದ ರಸಘಳಿಗೆಗೆ ಮತ್ತಷ್ಟು ಜೀವ ತುಂಬುತ್ತದೆ ಕೊಹಿನೂರ್ ಪಾನ್.. ಆದರೆ ಒಂದು ಕಂಡೀಷನ್!

  ಚಳಿಗಾಲದ ಸಂಜೆ, ತಂಪಾದ ರಾತ್ರಿಗಳನ್ನು ಬೇಗನೇ ಮುಗಿಸಿ ಬಿಡುವುದಕ್ಕಿಂತ ಗಂಟೆಗಟ್ಟಲೇ ಜೊತೆಯಾಗಿ ಕಾಲ ಕಳೆಯುವುದು ನಿಮ್ಮ ಸಂಬಂಧವನ್ನು ಮತ್ತಷ್ಟು ಸುಮಧುರವಾಗಿಸುತ್ತದೆ. ಅದಕ್ಕೆ ಅತ್ಯುತ್ತಮ ಆಯ್ಕೆ ಹಸಿಬಿಸಿ ದೃಶ್ಯಗಳು ಇಲ್ಲವೇ ಪೋರ್ನ್​​ ವಿಡಿಯೋಗಳು.

  ಇವುಗಳನ್ನು ಇಬ್ಬರು ಒಟ್ಟಿಗೆ ನೋಡುವುದರಿಂದ ಲೈಂಗಿಕ ಜೀವನ ಮತ್ತಷ್ಟು ಚನ್ನಾಗಿರುತ್ತದೆ ಎಂದು ಹಲವು ಸಂಶೋಧನೆಗಳೇ ಹೇಳಿವೆ. ಹಸಿಬಿಸಿ ದೃಶ್ಯಗಳನ್ನು ನೋಡುವುದನ್ನು ಒಬ್ಬರ ಮೇಲೊಬ್ಬರು ಹೇರುವುದಕ್ಕಿಂತ ಸಮಾನ ಮನಸ್ಕರಾಗಿ ನೋಡುವುದು ಉತ್ತಮ.

  ಸಂಗಾತಿಯೊಡನೆ ಮುಕ್ತವಾಗಿ ಬೆರೆಯುವ ಮುನ್ನ ಇಬ್ಬರೂ ಒಟ್ಟಿಗೆ ಇಂತಹ ದೃಶ್ಯ ನೋಡುವುದರಿಂದ ನಡುವಿನ ಬಿಗುಮಾನ  ಕೂಡ  ಹೋಗಲಿದೆ. ಕೆಲವೊಮ್ಮೆ ಹೇಗೆ ಮೂವ್​ ಆಗಬೇಕು ಎಂಬುದು ತೋಚುವುದಿಲ್ಲ. ಇಬ್ಬರಲ್ಲೂ ಮುಜುಗರ ಇರತ್ತೆ ಅದು ಕೂಡ ಇದರಿಂದ ದೂರವಾಗುತ್ತೆ. ಒಟ್ಟಿಗೆ ವಿಡಿಯೋ ನೋಡುವುದರಿಂದ ನಿಮ್ಮ ಸೆಕ್ಸ್​​ ಜೀವನಕ್ಕೆ ಹೊಸ ಹುರುಪು ತರಬಹುದು.
  First published: