ಜನರು (People) ಕೈಯಲ್ಲಿ (Hand) ಸ್ಮಾರ್ಟ್ ಫೋನ್ (Smart Phone) ಇಟ್ಟುಕೊಂಡಿದ್ದರೂ ಸಹ ಮನೆಗೆ (Home) ಬಂದ ಕೂಡಲೇ ಮೊದಲು ಚಿತ್ತ ಹೊರಳೋದು ಟಿವಿಯತ್ತ (TV). ತಮ್ಮ ಫೋನ್‌ಗಳನ್ನು ಜೇಬಿಗಿರಿಸಿ, ಟಿವಿಯನ್ನೇ ನೋಡುತ್ತಾ ಸೋಫಾದ (Sofa) ಮೇಲೆ ಕುಳಿತು ಬಿಡುವ ರೂಢಿ ತುಂಬಾ ಜನರಿಗೆ ಇರುತ್ತದೆ. ಆಫೀಸ್, ಕೆಲಸ ಹಾಗೂ ಇತರೆ ಕಡೆಗಳಿಂದ ಬಂದ ಕೂಡಲೇ ಟಿವಿ ಆನ್ ಮಾಡಿ, ಟೀ, ಸ್ನಾಕ್ ಸವಿಯುತ್ತಾ ಕುಳಿತು ಬಿಡುತ್ತಾರೆ. ಗಂಟೆಗಟ್ಟಲೇ ಸಿನಿಮಾ, ಹಾಡು, ಹಾಸ್ಯ, ಧಾರಾವಾಹಿ ಹೀಗೆ ಅನೇಕ ಕಾರ್ಯಕ್ರಮಗಳನ್ನು ನೋಡುತ್ತಾರೆ. ಟಿವಿ ನೋಡುವುದು ಜನರ ಜೀವನದ ಪ್ರಮುಖ ಭಾಗವಾಗಿದೆ.
ದೀರ್ಘ ಕಾಲ ಟಿವಿ ನೋಡುವುದು ಹೃದಯಕ್ಕೆ ಹಾನಿಕರ
ಆದರೆ ನೀವು ದೀರ್ಘ ಕಾಲ ಟಿವಿ ನೋಡುತ್ತಿದ್ದರೆ, ಅದು ಪರಿಧಮನಿಯ ಹೃದಯ ಕಾಯಿಲೆಯ ಅಪಾಯ ಹೆಚ್ಚಿಸುತ್ತದೆ. ಇತ್ತೀಚೆಗೆ ಸಂಶೋಧನೆಯೊಂದು ಮುನ್ನೆಲೆಗೆ ಬಂದಿದೆ. ಅದರ ಪ್ರಕಾರ ಹೆಚ್ಚು ಹೊತ್ತು ಟಿವಿ ನೋಡುವುದು ಹೃದಯ ಸಂಬಂಧಿ ಸಮಸ್ಯೆಗೆ ಕಾರಣವಾಗುತ್ತಂತೆ.
ಬೇರೆ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದು ನಿಮ್ಮ ಹೃದ್ರೋಗದ ಅಪಾಯ ತಡೆಯಬಹುದು ಎಂದು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿದ ಅಧ್ಯಯನ ಹೇಳಿದೆ.
ಇದನ್ನೂ ಓದಿ: ಬಾದಾಮಿ ತಿಂದು ಸಿಪ್ಪೆ ಎಸೆಯೋ ಮುನ್ನ ಅದರ ಪ್ರಯೋಜನ ತಿಳಿಯಿರಿ!
ಟಿವಿ ನೋಡುವ ಅಭ್ಯಾಸವನ್ನು ಒಂದು ಗಂಟೆಗೆ ಸೀಮಿತಗೊಳಿಸಿ
ಟಿವಿ ನೋಡುವ ಅಭ್ಯಾಸವನ್ನು ಕೇವಲ ಒಂದು ಗಂಟೆಗೆ ಮಾತ್ರ ಸೀಮಿತಗೊಳಿಸಬೇಕು ಎಂದು ಸಂಶೋಧಕರು ಸೂಚನೆ ನೀಡಿದ್ದಾರೆ. ನೀವು ಒಂದೇ ಸ್ಥಳದಲ್ಲಿ ದೀರ್ಘ ಕಾಲ ಕುಳಿತು ಟಿವಿ ನೋಡುವುದು ಪರಿಧಮನಿಯ ಹೃದಯ ಕಾಯಿಲೆಯ ಅಪಾಯ ಶೇಕಡಾ 16 ರಷ್ಟು ಹೆಚ್ಚಿಸುತ್ತದೆ.
ಪರಿಧಮನಿಯ ಅಪಧಮನಿಗಳಲ್ಲಿ ಕೊಬ್ಬು ಸಂಗ್ರಹವಾಗಲು ಪ್ರಾರಂಭಿಸಿದರೆ ಹೃದಯಾಘಾತ ಸಂಭವಿಸುತ್ತದೆ. ಹೀಗಾಗಿ ಪರಿಧಮನಿಯ ಅಪಧಮನಿಗಳು ತುಂಬಾ ಹಿಗ್ಗಲು ಪ್ರಾರಂಭಿಸುತ್ತವೆ. ಇದು ಹೃದಯಕ್ಕೆ ರಕ್ತ ಪೂರೈಕೆಯನ್ನು ಕಡಿಮೆ ಮಾಡುತ್ತದೆ.
ಟಿವಿ ವೀಕ್ಷಣೆಯ ಸಮಯ ಕಡಿಮೆ ಮಾಡಿ ಆರೋಗ್ಯ ಕಾಪಾಡಿಕೊಳ್ಳಿ
ಈ ಸಂಶೋಧನೆಯ ಲೇಖಕರಾದ ಡಾ. ಯೋಂಗ್‌ವಾಂಗ್ ಪ್ರಕಾರ, ಟಿವಿ ವೀಕ್ಷಣೆಯ ಸಮಯವನ್ನು ಕಡಿಮೆ ಮಾಡುವುದು ಪರಿಧಮನಿಯ ಹೃದಯ ಕಾಯಿಲೆ ಸೇರಿದಂತೆ ಅನೇಕ ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಕಡಿಮೆ ಮಾಡುತ್ತದೆ.
ಈ ಸಂಶೋಧನೆಯನ್ನು BMC ಮೆಡಿಸಿನ್ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ. ಇದರಲ್ಲಿ 40 ರಿಂದ 69 ವರ್ಷ ವಯಸ್ಸಿನ ಸುಮಾರು 3 ಲಕ್ಷ ಬಿಳಿ ಬ್ರಿಟಿಷ್ ಜನರ ಡೇಟಾವನ್ನು ಸಂಗ್ರಹ ಮಾಡಲಾಗಿದೆ. ಈ ಎಲ್ಲಾ ಜನರು ಯುಕೆ ಬಯೋಬ್ಯಾಂಕ್ ಅಧ್ಯಯನದ ಭಾಗವಾಗಿದ್ದರು.
ಆಗಾಗ ಎದ್ದು ಸ್ಟ್ರೆಚಿಂಗ್ ಮಾಡಬೇಕು
ಅಧ್ಯಯನದಲ್ಲಿ ಸೇರಿಸಲಾದ ಈ ಜನರಲ್ಲಿ ಯಾರಿಗೂ ಪರಿಧಮನಿಯ ಹೃದಯ ಕಾಯಿಲೆ ಅಥವಾ ಸ್ಟ್ರೋಕ್ ಸಮಸ್ಯೆ ಇರಲಿಲ್ಲ. ಕೇಂಬ್ರಿಡ್ಜ್ ಸಂಶೋಧಕರ ಪ್ರಕಾರ, ಸಾಕಷ್ಟು ಟಿವಿ ವೀಕ್ಷಿಸಿದಾಗ, ಇದು ಪರಿಧಮನಿಯ ಹೃದಯ ಕಾಯಿಲೆಯ ಅಪಾಯವನ್ನು ಗಮನಾರ್ಹವಾಗಿ ಹೆಚ್ಚಿಸಿದೆ. ಜನರು ಟಿವಿ ನೋಡುವ ರೂಢಿ ಬಿಡದಿದ್ದರೆ ಆಗಾಗ ಎದ್ದು ಸ್ಟ್ರೆಚಿಂಗ್ ಮಾಡಬೇಕು ಎಂದು ಹೇಳಿದ್ದಾರೆ.
ಚಿಪ್ಸ್ ಅಥವಾ ಚಾಕೊಲೇಟ್‌ಗಳಂತಹ ತಿಂಡಿ ಸೇವಿಸುತ್ತಾ ಟಿವಿ ನೋಡಬಾರದು. ಕೆಲವು ವರ್ಷಗಳ ಹಿಂದೆ, ಯುನೈಟೆಡ್ ಸ್ಟೇಟ್ಸ್ ಗವರ್ನಮೆಂಟ್ ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ಪ್ರಕಟಿಸಿದ ವೀಕ್ಷಣಾ ಅಧ್ಯಯನ, ಟಿವಿ ನೋಡುಗರ ಹೃದ್ರೋಗ ಅಪಾಯ ಹೆಚ್ಚಿದೆ ಎಂದು ಹೇಳಿತ್ತು.
ಇದನ್ನೂ ಓದಿ: ನೀವು ಬಳಸುವ ಟೂತ್ ಪೇಸ್ಟ್ ನಿಮ್ಮ ಹಲ್ಲುಗಳಿಗೆ ಎಷ್ಟು ಉತ್ತಮ ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ
ಪರಿಧಮನಿಯ ಹೃದಯ ಕಾಯಿಲೆಯ ಸಾಮಾನ್ಯ ಲಕ್ಷಣ, ನೋವು ಮತ್ತು ಉಸಿರಾಟದ ತೊಂದರೆ. ಇದು ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯ ಹೆಚ್ಚು ಮಾಡುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ