Relationship Tips: ನಿಮ್ಮ ಸಂಗಾತಿ ಸಂಬಂಧದಲ್ಲಿ ಆಸಕ್ತಿ ಕಳೆದುಕೊಂಡಿದ್ದಾರೆ ಎಂದು ತಿಳಿಯುವುದು ಹೇಗೆ?

Love: ಇನ್ನು ನಿಮ್ಮ ಸಂಬಂಧದಲ್ಲಿ ಸಂತೋಷ ಸಿಗುತ್ತಿಲ್ಲವಾ? ನಿಮಗೆ ನಿಮ್ಮ ಸಂಗಾತಿ ಇತ್ತೀಚಿನ ದಿನಗಳಲ್ಲಿ ದೂರವಾಗುತ್ತಿದ್ದಾರೆ ಎಂದು ಅನಿಸುತ್ತಿದೆಯಾ?  ಅಥವಾ ನಿಮ್ಮ ಮೇಲೆ ಅವರಿಗಿರುವ ಕಾಳಜಿ ಕಡಿಮೆಯಾಗಿದೆ ಅಂತ ಅನಿಸುತ್ತಿದೆಯಾ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಒಂದು ಸಂಬಂಧದ ಬುನಾದಿ ನಂಬಿಕೆ ಮತ್ತು ಇಬ್ಬರ ನಡುವಿನ ಬಾಂಧವ್ಯ. ಹಾಗೆಯೆ ಸಂಬಂಧ ಹೆಚ್ಚು ದಿನಗಳ ಕಾಲ ಉಳಿಯಬೇಕು ಎಂದರೆ ಇಬ್ಬರ ನಡುವಿನ ಸಂವಹನ ಅಂದರೆ ಮಾತು ಮುಖ್ಯವಾಗುತ್ತದೆ. ಇಬ್ಬರ ನಡುವೆ ಯಾವುದೇ ಮಾತು ಕತೆ ಇಲ್ಲದೆ ಒಬ್ಬರಿಗೊಬ್ಬರು ಬದುಕಿದರೆ ಆ ಸಂಬಂಧಕ್ಕೆ ಅರ್ಥವೇ ಇಲ್ಲ.  ಸಂಗಾತಿ ಏನು ಹೇಳುತ್ತಿದ್ದಾರೆ ಮತ್ತು ಯಾವ ವಿಷಯದಲ್ಲಿ ಹೇಳುತ್ತಿದ್ದಾರೆ ಎಂಬುದನ್ನು ಕೇಳಿಸಿಕೊಳ್ಳುವ ತಾಳ್ಮೆ ಇಬ್ಬರಿಗೂ ಇರಬೇಕು. ಸಂಬಂಧದ ಮಧ್ಯೆ ನಿರ್ಲಕ್ಷತೆ ಬಂದಾಗ, ಆ ಸಂಬಂಧ ಹೆಚ್ಚು ದಿನ ಬಾಳಿಕೆ ಬರುವುದಿಲ್ಲ.

ಇನ್ನು ನಿಮ್ಮ ಸಂಬಂಧದಲ್ಲಿ ಸಂತೋಷ ಸಿಗುತ್ತಿಲ್ಲವ? ನಿಮಗೆ ನಿಮ್ಮ ಸಂಗಾತಿ ಇತ್ತೀಚಿನ ದಿನಗಳಲ್ಲಿ ದೂರವಾಗುತ್ತಿದ್ದಾರೆ ಎಂದು ಅನಿಸುತ್ತಿದೆಯಾ?  ಅಥವಾ ನಿಮ್ಮ ಮೇಲೆ ಅವರಿಗಿರುವ ಕಾಳಜಿ ಕಡಿಮೆಯಾಗಿದೆ ಅಂತ ಅನಿಸುತ್ತಿದೆಯಾ?  ಈ ಸಂದರ್ಭವನ್ನು ಹೇಗೆ ಉತ್ತಮವಾಗಿ ನಿಭಾಯಿಸಬೇಕು ಎಂಬುದನ್ನು ನಿರ್ಧರಿಸುವ ಮೊದಲೇ ನಿಜಕ್ಕೂ ನಿಮ್ಮ ಸಂಗಾತಿ ಸಂಬಂಧದಲ್ಲಿ ಆಸಕ್ತಿ ಕಳೆದುಕೊಂಡಿದ್ದಾರೆಯೇ ಎಂದು ಮೊದಲು ತಿಳಿದುಕೊಳ್ಳಿ. ಹೇಗೆ ತಿಳಿದುಕೊಳ್ಳಬೇಕು ಎಂಬುದು ಇಲ್ಲಿದೆ.

ಮದುವೆಯಾದ ಹೊಸದರಲ್ಲಿ ಪ್ರತಿಯೊಬ್ಬರಿಗೂ ತಮ್ಮ ಸಂಗಾತಿ ಹೆಚ್ಚು ಪ್ರೀತಿ ಮಾಡಬೇಕು, ತಮಗಾಗಿ ವಿಶೇಷವಾಗಿ ಏನಾದರು ಮಾಡಬೇಕು ಎಂಬ ಬಯಕೆ ಇರುತ್ತದೆ. ಹೊಸತರಲ್ಲಿ ಎಲ್ಲವು ಸರಿಯಿರುತ್ತದೆ. ದಿನ ಕಳೆದಂತೆ ಸಂಗಾತಿಯ ನಡುವಳಿಕೆಯಲ್ಲಿ ಸಣ್ಣ ಸಣ್ಣ ಬದಲಾವಣೆಗಳಾಗುತ್ತದೆ. ನಿಮಗಾಗಿ ನಿಮ್ಮ ಸಂಗಾತಿ  ಯಾವುದೇ ರೀತಿಯ ಶ್ರಮ ತೆಗೆದುಕೊಳ್ಳಲು ಸಿದ್ಧರಿರುವುದಿಲ್ಲ. ಮೊದಲಿನ ರೀತಿ ನಿಮ್ಮೊಂದಿಗೆ ಬೆರೆಯುವುದಿಲ್ಲ.

ಇದನ್ನೂ ಓದಿ: ಮಕ್ಕಳ IQ ಮಟ್ಟ ಹೆಚ್ಚಿಸುವುದು ಹೇಗೆ? ಇಲ್ಲಿವೆ 8 ಉಪಾಯಗಳು

ಇನ್ನು ಮದುವೆಯಾಗಿರದಿದ್ದಲ್ಲಿ ನಿಮ್ಮ ಸಂಗಾತಿ ನಿಮ್ಮಿಂದ ದೂರವಿರುತ್ತಾರೆ. ಸಂಬಂಧದ ಆರಂಭದಲ್ಲಿ ನಿಮ್ಮ ಪ್ರತಿಯೊಂದು ಮೆಸೇಜ್​ಗಳಿಗೆ ಉತ್ತರ ನೀಡುತ್ತಾರೆ, ಆದರೆ ಯಾವಾಗ ಆಸಕ್ತಿ ಕಳೆದುಕೊಳ್ಳುತ್ತಾರೋ ಆಗ ನಿಮ್ಮ 10 ಮೆಸೇಜ್​ಗೆ 1 ಉತ್ತರ ನೀಡುತ್ತಾರೆ. ಮೊದ ಮೊದಲು ನೀವಿಬ್ಬರೂ ದಿನಕ್ಕೆ ಹಲವಾರು ಬಾರಿ  ಮಾತನಾಡುತ್ತಿರುತ್ತೀರಾ, ಆದರೆ ನಂತರ ನಿಮ್ಮ ಕರೆಯನ್ನು ಸ್ವೀಕರಿಸುವುದನ್ನ ಕಡಿಮೆ  ಮಾಡುತ್ತಾರೆ.

ನಿಮ್ಮ ಸಂಗಾತಿಗೆ ನಿಮ್ಮ ಮಾತುಗಳಲ್ಲಿ ಯಾವುದೇ ಆಸಕ್ತಿ ಇರುವುದಿಲ್ಲ. ನೀವು ಅವರೊಂದಿಗೆ ಮಾತನಾಡುತ್ತಿರುವಾಗ ಅದನ್ನು ಕೇಳಿಸಿಕೊಳ್ಳುವುದಿಲ್ಲ. ಅವರ ಗಮನ ಬೇರೆ ಗಡೆ ಇರುತ್ತದೆ.  ಕೇವಲ ತಮ್ಮ ಲೋಕದಲ್ಲಿ ಅಥವಾ ತನಗೆ ಇಷ್ಟ ಬಂದ ಹಾಗೆ ಇರಲು ಬಯಸುತ್ತಾರೆ.

ಸಂಬಂಧದಲ್ಲಿ, ಭಾವನಾತ್ಮಕ ಅನ್ಯೋನ್ಯತೆಯು ದೈಹಿಕ ಅನ್ಯೋನ್ಯತೆಗಿಂತ ಮುಖ್ಯ. ಆದರೆ ನಿಮ್ಮ ಸಂಬಂಧದಲ್ಲಿ ಸಂಗಾತಿ ಭಾವನಾತ್ಮಕವಾಗಿ ನಿಮ್ಮಿಂದ ದೂರವಾದರೆ ಅವರಿಗೆ ಸಂಬಂಧದಲ್ಲಿ ಆಸಕ್ತಿ ಇಲ್ಲ ಎಂದು ಅರ್ಥ. ನಿಮ ಸಂತೋಷ ಮತ್ತು ನೋವಿನಲ್ಲಿ ಜೊತೆಯಾಗುತ್ತಿದ್ದ ಸಂಗಾತಿ, ಈಗ ಯಾವುದರ ಬಗ್ಗೆಯೂ ತಲೆ ಕೆಡಿಸಿಕೊಳ್ಳುವುದಿಲ್ಲ ಎನ್ನುವುದು ನಿಮ್ಮ ಸಂಬಂಧದ ಕೊನೆಯ ಹಂತ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.

 
Published by:Sandhya M
First published: