• Home
  • »
  • News
  • »
  • lifestyle
  • »
  • Mental Health: ಆತ್ಮಹತ್ಯಾ ನಡವಳಿಕೆಯ ಎಚ್ಚರಿಕೆ ಚಿಹ್ನೆಗಳಿವು, ಈ ಎಲ್ಲಾ ಲಕ್ಷಣಗಳು ಕಂಡ್ರೆ ಎಚ್ಚೆತ್ತುಕೊಳ್ಳಿ

Mental Health: ಆತ್ಮಹತ್ಯಾ ನಡವಳಿಕೆಯ ಎಚ್ಚರಿಕೆ ಚಿಹ್ನೆಗಳಿವು, ಈ ಎಲ್ಲಾ ಲಕ್ಷಣಗಳು ಕಂಡ್ರೆ ಎಚ್ಚೆತ್ತುಕೊಳ್ಳಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Warning Signs of Suicidal Behavior: ಆತ್ಮಹತ್ಯೆ ಅನ್ನುವುದು ಯಾರು ಬೇಕಾದರೂ ಆ ತಕ್ಷಣಕ್ಕೆ ತೆಗೆದುಕೊಳ್ಳಬಹುದು ನಿರ್ಧಾರವಾಗಿದೆ. ನಾವೇ ಎಷ್ಟೋ ಬಾರಿ ಮಾತಾಡಿರುತ್ತೇವೆ, ಆ ಮನುಷ್ಯ ಸೂಸೈಡ್‌ ಮಾಡಿಕೊಂಡ್ರಾ, ಹೇಗೆ ಸಾಧ್ಯ ಅಂತಾ. ಹೀಗಾಗಿ ಈ ಅನುಭವದ ಬಗ್ಗೆ ತಿಳುವಳಿಕೆ ಮುಖ್ಯವಾಗಿದೆ.

ಮುಂದೆ ಓದಿ ...
  • Share this:

ವಿಶ್ವದಾದ್ಯಂತ (World) ಪ್ರತಿ ವರ್ಷ ಸುಮಾರು 800,000 ಜನರು ಆತ್ಮಹತ್ಯೆಯಿಂದ ಸಾಯುತ್ತಾರೆ. 2021ರಲ್ಲಿ 164,033 ಭಾರತೀಯರು (Indians) ಆತ್ಮಹತ್ಯೆ (Suicide)  ಮಾಡಿಕೊಂಡಿದ್ದಾರೆ ಎಂಬುದಾಗಿ ಅಂಕಿಅಂಶಗಳು ಹೇಳುತ್ತಿವೆ. ಆತ್ಮಹತ್ಯೆ ಪ್ರಕರಣಗಳು ಕಳೆದ ಒಂದು ವರ್ಷದಲ್ಲಿ 7.2 ಏರಿಕೆ ಕಂಡಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ. 6.2 ಏರಿಕೆ ಕಂಡಿದೆ. ಮಕ್ಕಳಿಂದ ಹಿಡಿದು ವಯಸ್ಕರವರೆಗೆ ವಿಶ್ವದಾದ್ಯಂತ ಈ ಸೂಸೈಡ್‌ ಪ್ರಕರಣಗಳು ಗಮನಾರ್ಹವಾಗಿ ಹೆಚ್ಚಾಗಿದೆ. ವೃತ್ತಿಪರ, ವೃತ್ತಿ, ಹಿಂದೆ, ಖಿನ್ನತೆ, ಸಂಬಂಧದಲ್ಲಿ ಪ್ರತ್ಯೇಕತೆ,ಆರ್ಥಿಕ ನಷ್ಟ, ಮಾನಸಿಕ ಸಮಸ್ಯೆ (Mental Health)  ಹೀಗೆ ಹತ್ತಾರು ಸಮಸ್ಯೆಗಳ ಕಾರಣದಿಂದಾಗಿ ಬೇಸತ್ತು ಅಂತಿಮವಾಗಿ ಜನ ಆತ್ಮಹತ್ಯೆಗೆ ಶರಣಾಗುತ್ತಾರೆ.


ಆತ್ಮಹತ್ಯೆ ಮಾನಸಿಕ ಸಮಸ್ಯೆಯಲ್ಲ
ತಜ್ಞರು ಹೇಳುವ ಪ್ರಕಾರ ಆತ್ಮಹತ್ಯೆಯು ಮಾನಸಿಕ ಸಮಸ್ಯೆಯಲ್ಲ ಆದರೆ ಪ್ರಮುಖ ಖಿನ್ನತೆ, ಬೈಪೋಲಾರ್ ಡಿಸಾರ್ಡರ್, ಪೋಸ್ಟ್‌ಟ್ರಾಮಾಟಿಕ್ ಸ್ಟ್ರೆಸ್ ಡಿಸಾರ್ಡರ್, ಆಂತರಿಕ ವ್ಯಕ್ತಿತ್ವ ಸಮಸ್ಯೆ, ಸ್ಕಿಜೋಫ್ರೇನಿಯಾ, ಆತಂಕದ ಅಸ್ವಸ್ಥತೆಗಳನ್ನು ಒಳಗೊಂಡಿರುವ ಚಿಕಿತ್ಸೆ ನೀಡಬಹುದಾದ ಮಾನಸಿಕ ಅಸ್ವಸ್ಥತೆಗಳ ಗಂಭೀರ ಸಂಭಾವ್ಯ ಪರಿಣಾಮವಾಗಿದೆ.


ಆತ್ಮಹತ್ಯೆ ಅನ್ನುವುದು ಯಾರು ಬೇಕಾದರೂ ಆ ತಕ್ಷಣಕ್ಕೆ ತೆಗೆದುಕೊಳ್ಳಬಹುದು ನಿರ್ಧಾರವಾಗಿದೆ. ನಾವೇ ಎಷ್ಟೋ ಬಾರಿ ಮಾತಾಡಿರುತ್ತೇವೆ, ಆ ಮನುಷ್ಯ ಸೂಸೈಡ್‌ ಮಾಡಿಕೊಂಡ್ರಾ, ಹೇಗೆ ಸಾಧ್ಯ ಅಂತಾ. ಹೀಗಾಗಿ ಈ ಅನುಭವದ ಬಗ್ಗೆ ತಿಳುವಳಿಕೆ ಮುಖ್ಯವಾಗಿದೆ. ಕಷ್ಟದ ಸಮಯವನ್ನು ಎದುರಿಸುತ್ತಿರುವವರಿಗೆ, ತಿಳಿದಿರುವವರು ಸಹಾಯ ಮಾಡುವುದು ಆತ್ಮಹತ್ಯೆ ಕಲ್ಪನೆ ಅಥವಾ ಪ್ರಯತ್ನಗಳಿಂದ ದೂರವಾಗಿಸಬಹುದು.


ಖಿನ್ನತೆಯ ಪರಿಣಾಮ ಈ ಆತ್ಮಹತ್ಯಾ ಆಲೋಚನೆ ಆಗಿರುವುದರಿಂದ, ಅಂತಹ ವ್ಯಕ್ತಿಗಳ ಜೊತೆ ನಿರಂತರ ಸಂವಹನ ಈ ಕೆಟ್ಟ ನಿರ್ಧಾರದಿಂದ ಅವರನ್ನು ತಪ್ಪಿಸಬಹುದಾದ ಸೂಕ್ತ ಕ್ರಮ. ಸಹಾಯದ ಅಗತ್ಯವಿರುವ ಯಾರನ್ನಾದರೂ ಗುರುತಿಸಲು ಮಾನಸಿಕ ಆರೋಗ್ಯ ಸಮಸ್ಯೆಗಳ ಎಚ್ಚರಿಕೆ ಚಿಹ್ನೆಗಳಿಗೆ ಗಮನ ನೀಡಬೆಕು.
ಹಾಗಾದರೆ ಆತ್ಮಹತ್ಯಾ ನಡವಳಿಕೆಯನ್ನು ಗುರುತಿಸುವುದು ಹೇಗೆ, ಅವರನ್ನು ಆ ಆಲೋಚನೆಯಿಂದ ಹೊರತರುವುದು ಹೇಗೆ ಎಂಬುದನ್ನು ನಾವಿಲ್ಲಿ ನೋಡೋಣ.


ಆತ್ಮಹತ್ಯೆ ಎಚ್ಚರಿಕೆ ಚಿಹ್ನೆಗಳು
- ದೀರ್ಘಕಾಲದ ದುಃಖ, ಮನಸ್ಥಿತಿ ಬದಲಾವಣೆಗಳು ಮತ್ತು ಅನಿರೀಕ್ಷಿತ ಕೋಪ.
- ಹತಾಶತೆ : ಭವಿಷ್ಯದ ಬಗ್ಗೆ ಆಳವಾದ ಹತಾಶೆಯ ಭಾವನೆ
- ನಿದ್ರೆಯ ತೊಂದರೆ ಅನುಭವಿಸುವುದು
- ಹಠಾತ್ ಶಾಂತತೆ- ಖಿನ್ನತೆ, ಕೋಪದ ನಂತರ ಇದ್ದಕ್ಕಿದ್ದಂತೆ ಶಾಂತವಾಗುವುದು ವ್ಯಕ್ತಿಯು ತಮ್ಮ ಜೀವನವನ್ನು ಕೊನೆಗೊಳಿಸಲು ನಿರ್ಧರಿಸಿದ್ದಾರೆ ಎಂಬುದರ ಸಂಕೇತವಾಗಿದೆ.
- ಒಬ್ಬರೇ ಇರುವುದು: ಒಂಟಿಯಾಗಿರಲು ಆಯ್ಕೆ ಮಾಡುವುದು ಮತ್ತು ಸ್ನೇಹಿತರು ಅಥವಾ ಸಾಮಾಜಿಕ ಚಟುವಟಿಕೆಗಳನ್ನು ತಪ್ಪಿಸುವುದು ಸೂಸೈಡ್‌ನ ಸಂಭವನೀಯ ಲಕ್ಷಣಗಳಾಗಿವೆ, ಇದು ಆತ್ಮಹತ್ಯೆಗೆ ಪ್ರಮುಖ ಕಾರಣವಾಗಿದೆ. ವ್ಯಕ್ತಿಯು ಇಷ್ಟ ಪಡುತ್ತಿದ್ದ ಕೆಲಸಗಳಲ್ಲಿ ಆಸಕ್ತಿ ಕಳೆದುಕೊಂಡಿರುವುದು ಏನೋ ಸರಿ ಇಲ್ಲ ಎಂಬುದರ ಸಂಕೇತವಾಗಿದೆ.
- ವ್ಯಕ್ತಿತ್ವ ಅಥವಾ ನೋಟದಲ್ಲಿನ ಬದಲಾವಣೆಗಳು: ಆತ್ಮಹತ್ಯೆ ಬಗ್ಗೆ ಯೋಚಿಸುತ್ತಿರುವ ವ್ಯಕ್ತಿಯು ವರ್ತನೆ ಅಥವಾ ನಡವಳಿಕೆಯಲ್ಲಿ ಬದಲಾವಣೆಯನ್ನು ತೋರಬಹುದು.
- ಅಪಾಯಕಾರಿ ಅಥವಾ ಸ್ವಯಂ-ಹಾನಿಕಾರಕ ನಡವಳಿಕೆ. ಅಜಾಗರೂಕ ಚಾಲನೆ, ಅಸುರಕ್ಷಿತ ಲೈಂಗಿಕತೆ, ಮತ್ತು ಮಾದಕ ದ್ರವ್ಯಗಳು ಅಥವಾ ಮದ್ಯದ ಹೆಚ್ಚಿದ ಬಳಕೆಯಂತಹ ಸಂಭಾವ್ಯ ಅಪಾಯಕಾರಿ ನಡವಳಿಕೆಯು ವ್ಯಕ್ತಿಯು ಇನ್ನು ಮುಂದೆ ತಮ್ಮ ಜೀವನವನ್ನು ಗೌರವಿಸುವುದಿಲ್ಲ ಎಂದು ಸೂಚಿಸುತ್ತದೆ.


- ಇತ್ತೀಚಿನ ಆಘಾತ ಅಥವಾ ಜೀವನ ಬಿಕ್ಕಟ್ಟು. ಪ್ರಮುಖ ಜೀವನ ಬಿಕ್ಕಟ್ಟುಗಳು ಆತ್ಮಹತ್ಯೆ ಪ್ರಯತ್ನವನ್ನು ಪ್ರಚೋದಿಸಬಹುದು. ಅವರ ಪ್ರೀತಿಪಾತ್ರರೂ ಅಗಲಿದಾಗ ಅವರ ದುಃಖ, ಖಿನ್ನತೆಯೂ ಕೂಡ ಆತ್ಮಹತ್ಯೆಗೆ ಕುಮ್ಮಕ್ಕು ನೀಡಬಹುದು.


ಇದನ್ನೂ ಓದಿ: ಜಗಳ ದೊಡ್ಡದಾಗುವ ಮುನ್ನ ನಿಲ್ಲಿಸಲು ಇಷ್ಟು ಮಾಡಿ ಸಾಕು


ಆತ್ಮಹತ್ಯೆಯನ್ನು ತಡೆಯಬಹುದೇ?
ಆತ್ಮಹತ್ಯೆಯನ್ನು ಖಚಿತವಾಗಿ ತಡೆಯಲು ಸಾಧ್ಯವಿಲ್ಲ, ಆದರೆ ಸಮಯೋಚಿತ ಮಧ್ಯಸ್ಥಿಕೆಯಿಂದ ಅಪಾಯಗಳನ್ನು ಕಡಿಮೆ ಮಾಡಬಹುದು. ಆತ್ಮಹತ್ಯೆಯನ್ನು ತಡೆಗಟ್ಟಲು ಉತ್ತಮ ಮಾರ್ಗವೆಂದರೆ ಅಪಾಯಕಾರಿ ಅಂಶಗಳನ್ನು ತಿಳಿದುಕೊಳ್ಳುವುದು, ಖಿನ್ನತೆ ಮತ್ತು ಇತರ ಮಾನಸಿಕ ಅಸ್ವಸ್ಥತೆಗಳ ಚಿಹ್ನೆಗಳ ಬಗ್ಗೆ ಜಾಗರೂಕರಾಗಿರುವುದು, ಆತ್ಮಹತ್ಯೆಯ ಎಚ್ಚರಿಕೆಯ ಚಿಹ್ನೆಗಳನ್ನು ಗುರುತಿಸುವುದು ಪ್ರಮುಖವಾಗಿದೆ.


ಒಬ್ಬರಲ್ಲಿ ಆತ್ಮಹತ್ಯೆಯ ಎಚ್ಚರಿಕೆಯ ಚಿಹ್ನೆಗಳು ಕಂಡು ಬಂದರೆ ಏನು ಮಾಡಬೇಕು?
* ಆತ್ಮಹತ್ಯಾ ನಡವಳಿಕೆಯನ್ನು ಗುರುತಿಸಿ, ಅವರ ಖಿನ್ನತೆ, ನೋವನ್ನು ಆಲಿಸಿ ಅದರಿಂದ ಅವರನ್ನು ಹೊರ ತರುವ ಪ್ರಯತ್ನ ಮಾಡಿ
* ಇಂತಹ ಅನುಭವದಿಂದ ಬಳಲುತ್ತಿರುವ ವ್ಯಕ್ತಿಯನ್ನು ಏಕಾಂಗಿಯಾಗಿರಲು ಮಾತ್ರ ಬಿಡಬೇಡಿ. ಸಾಧ್ಯವಾದರೆ, ಸ್ನೇಹಿತರು ಅಥವಾ ಇತರ ಕುಟುಂಬ ಸದಸ್ಯರು ಯಾರಾದರೂ ಅವರ ಜೊತೆ ಇರಿ.


* ಚೂಪಾದ ವಸ್ತುಗಳು ಅಥವಾ ವ್ಯಕ್ತಿಯು ತಮ್ಮನ್ನು ತಾವು ನೋಯಿಸಿಕೊಳ್ಳಲು ಬಳಸಬಹುದಾದ ವಸ್ತುಗಳನ್ನು ಅವರಿಂದ ದೂರವಿಡಿ.
* ವ್ಯಕ್ತಿಯು ಈಗಾಗಲೇ ಮನೋವೈದ್ಯಕೀಯ ಚಿಕಿತ್ಸೆಯಲ್ಲಿದ್ದರೆ, ಮಾರ್ಗದರ್ಶನ ಮತ್ತು ಸಹಾಯಕ್ಕಾಗಿ ವೈದ್ಯರು ಅಥವಾ ಚಿಕಿತ್ಸಕರನ್ನು ಸಂಪರ್ಕಿಸಲು ಅವರಿಗೆ ಸಹಾಯ ಮಾಡಿ


ಇದನ್ನೂ ಓದಿ: 32 ವರ್ಷಗಳಲ್ಲಿ ಈ ದಂಪತಿ ಒಮ್ಮೆಯೂ ಜಗಳವಾಡಿಲ್ವಂತೆ, ಹೆತ್ತವರ ದಾಂಪತ್ಯದ ಗುಟ್ಟು ಬಿಚ್ಚಿಟ್ಟ ಮಗಳು


* ನಿಮ್ಮ ಸ್ಥಳೀಯ ಆತ್ಮಹತ್ಯೆ ತಡೆಗಟ್ಟುವಿಕೆ ಹಾಟ್‌ಲೈನ್ ಅಥವಾ ಮಾದಕ ವ್ಯಸನ ಮತ್ತು ಮಾನಸಿಕ ಆರೋಗ್ಯ (SAMHSA) ಇಂತಹಾ ಸಲಹ ಕೇಂದ್ರಗಳಿಗೆ ಕರೆ ಮಾಡಿ ಸಲಹೆ ಪಡೆಯಿರಿ

Published by:Sandhya M
First published: