Dengue Fever Signs: ನಿಮಗೆ ಬಂದಿರೋದು ಡೆಂಗ್ಯೂ ಜ್ವರನಾ? ಇದರ ಲಕ್ಷಣಗಳ ಬಗ್ಗೆ ತಿಳಿದುಕೊಳ್ಳಿ

ಡೆಂಗ್ಯೂ

ಡೆಂಗ್ಯೂ

Dengue Fever: ಸೊಳ್ಳೆಗಳು ನಾವು ಒಂದು ಕಡೆ ಕುಳಿತು ಆರಾಮಾಗಿ ಏನೋ ಕೆಲಸ ಮಾಡಿಕೊಳ್ಳುತ್ತಿದ್ದಾಗ, ನಮ್ಮ ಕಿವಿಯ ಹತ್ತಿರ ಬಂದು ಗುಂಯ್ ಅಂತ ಕಿರಿಕಿರಿ ಅನ್ನಿಸುವ ಶಬ್ದ ಮಾಡುತ್ತಾ ನಮ್ಮ ಸುತ್ತಲೂ ಸುತ್ತುವ ಮತ್ತು ಅದನ್ನು ಹೊಡೆಯಲು ಹೋದರೂ ಕೈಗೆ ಸಿಗದೇ ತಪ್ಪಿಸಿಕೊಳ್ಳುವ ಈ ಚಿಕ್ಕ ಕೀಟ ಮಾಡುವ ಅವಾಂತರ ಮಾತ್ರ ತುಂಬಾನೇ ದೊಡ್ಡದು ಮತ್ತು ಕೆಲವೊಮ್ಮೆ ಇದು ಮಾರಣಾಂತಿಕ ಸಹ ಆಗಬಹುದು.

ಮುಂದೆ ಓದಿ ...
  • Share this:

ಮಳೆಗಾಲ ಬಂತೆಂದರೆ ಸಾಕು, ಜ್ವರ (Fever) ಮಾತ್ರ ತುಂಬಾನೇ ಸುದ್ದಿಯಲ್ಲಿರುತ್ತದೆ ಅಂತ ಹೇಳಬಹುದು. ಹೌದು.. ನೀವು ಸರಿಯಾಗಿ ಊಹಿಸಿದ್ದೀರಿ, ನಾವು ಈ ಸೊಳ್ಳೆಗಳ ಕಡಿತದಿಂದ ಬರುವ ಡೆಂಗ್ಯೂ ಜ್ವರದ (Dengue Fever) ಬಗ್ಗೆನೆ ಮಾತಾಡುತ್ತಿದ್ದೇವೆ. ಈ ಸೊಳ್ಳೆಗಳು (Mosquito) ನಾವು ಒಂದು ಕಡೆ ಕುಳಿತು ಆರಾಮಾಗಿ ಏನೋ ಕೆಲಸ ಮಾಡಿಕೊಳ್ಳುತ್ತಿದ್ದಾಗ, ನಮ್ಮ ಕಿವಿಯ ಹತ್ತಿರ ಬಂದು ಗುಂಯ್ ಅಂತ ಕಿರಿಕಿರಿ ಅನ್ನಿಸುವ ಶಬ್ದ ಮಾಡುತ್ತಾ ನಮ್ಮ ಸುತ್ತಲೂ ಸುತ್ತುವ ಮತ್ತು ಅದನ್ನು ಹೊಡೆಯಲು ಹೋದರೂ ಕೈಗೆ ಸಿಗದೇ ತಪ್ಪಿಸಿಕೊಳ್ಳುವ ಈ ಚಿಕ್ಕ ಕೀಟ ಮಾಡುವ ಅವಾಂತರ ಮಾತ್ರ ತುಂಬಾನೇ ದೊಡ್ಡದು ಮತ್ತು ಕೆಲವೊಮ್ಮೆ ಇದು ಮಾರಣಾಂತಿಕ (Deadly) ಸಹ ಆಗಬಹುದು.


ಸೊಳ್ಳೆ ಕಡಿತದಿಂದ ಯಾವೆಲ್ಲಾ ಕಾಯಿಲೆಗಳು ಬರುತ್ತವೆ?
ಸೊಳ್ಳೆ ಕಡಿತದಿಂದ ಉಂಟಾಗುವ ತುರಿಕೆ ಸಾಕಷ್ಟು ಅಸ್ವಸ್ಥತೆಗೆ ಕಾರಣವಾಗಬಹುದು. ಇದು ಡೆಂಗ್ಯೂ, ಮಲೇರಿಯಾ, ಝಿಕಾ ವೈರಸ್ ಮತ್ತು ಚಿಕನ್ ಗುನ್ಯಾದಂತಹ ಕೆಲವು ಮಾರಣಾಂತಿಕ ಕಾಯಿಲೆಗಳನ್ನು ತಂದೊಡ್ಡುತ್ತದೆ. ಡೆಂಗ್ಯೂ ಜ್ವರವು ಹೆಚ್ಚಾಗಿ ಉಷ್ಣವಲಯದ ಮತ್ತು ಉಪೋಷ್ಣವಲಯದ ಪ್ರದೇಶಗಳಲ್ಲಿ ಕಂಡುಬರುವ ಒಂದು ಕಾಯಿಲೆಯಾಗಿದೆ. ಸೋಂಕಿತ ಈಡಿಸ್ ಸೊಳ್ಳೆಯ ಕಡಿತದಿಂದ ಇದು ಉಂಟಾಗುತ್ತದೆ.


ಈ ಸೊಳ್ಳೆಯಿಂದ ಹರಡುವ ಕಾಯಿಲೆಯ ರೋಗಲಕ್ಷಣಗಳು ಸೌಮ್ಯದಿಂದ ತೀವ್ರವಾಗಿರಬಹುದು. ಈ ರೋಗದ ಸೌಮ್ಯ ಸ್ಥಿತಿಯನ್ನು ಡೆಂಗ್ಯೂ ಜ್ವರ ಎಂದು ಕರೆಯಲಾಗುತ್ತದೆ, ಅದೇ ಕಾಯಿಲೆಯು ಮಾರಣಾಂತಿಕ ರೋಗದ ರೂಪವನ್ನು ತೆಗೆದುಕೊಂಡಾಗ ಅದನ್ನು ಡೆಂಗ್ಯೂ ಶಾಕ್ ಸಿಂಡ್ರೋಮ್ ಮತ್ತು ಡೆಂಗ್ಯೂ ಹೆಮರಾಜಿಕ್ ಫೀವರ್ ಎಂದು ಕರೆಯಲಾಗುತ್ತದೆ. ಈ ಸ್ಥಿತಿಯು ಒಬ್ಬ ವ್ಯಕ್ತಿಯ ಆರೋಗ್ಯದ ಮೇಲೆ ಎಷ್ಟರ ಮಟ್ಟಿಗೆ ಪರಿಣಾಮ ಬೀರುತ್ತದೆಯೆಂದರೆ, ಸೋಂಕಿತ ವ್ಯಕ್ತಿಗೆ ಆಸ್ಪತ್ರೆಗೆ ದಾಖಲಾಗುವುದು ಮತ್ತು ವಿಶೇಷ ವೈದ್ಯಕೀಯ ಆರೈಕೆಯ ಅಗತ್ಯವಿರುತ್ತದೆ.


ಇಂತಹ ಸ್ಥಿತಿಯನ್ನು ದೂರವಿರಿಸಲು ಡೆಂಗ್ಯೂ ಜ್ವರದ ರೋಗಲಕ್ಷಣಗಳನ್ನು ಗಮನಿಸಬೇಕು ಮತ್ತು ಸಾಧ್ಯವಾದಷ್ಟು ಬೇಗ ಅದನ್ನು ಪತ್ತೆ ಹಚ್ಚುವುದು ಬಹಳ ಮುಖ್ಯವಾಗುತ್ತದೆ. ಇದರಿಂದ ರೋಗಿಗೆ ಸಕಾಲಿಕ ಚಿಕಿತ್ಸೆ ನೀಡಬಹುದು. ಡೆಂಗ್ಯೂ ಜ್ವರವನ್ನು ಪತ್ತೆ ಹಚ್ಚಲು ಸಹಾಯ ಮಾಡುವ ಡೆಂಗ್ಯೂ ಜ್ವರದ 7 ಎಚ್ಚರಿಕೆಯ ಲಕ್ಷಣಗಳನ್ನು ನಾವು ತಿಳಿದುಕೊಳ್ಳೋಣ.


ಡೆಂಗ್ಯೂ ಜ್ವರದ ಎಚ್ಚರಿಕೆಯ ಲಕ್ಷಣಗಳು
ಡೆಂಗ್ಯೂ, ಸೊಳ್ಳೆಯಿಂದ ಹರಡುವ ಕಾಯಿಲೆಯಾಗಿದ್ದು, ಅದು ಎಷ್ಟು ಮಾರಣಾಂತಿಕವಾಗಬಹುದು ಎಂದರೆ ಅದು ವ್ಯಕ್ತಿಯ ಜೀವವನ್ನು ಸಹ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಈ ರೋಗ ಮತ್ತು ಅದರ ರೋಗಲಕ್ಷಣಗಳ ಬಗ್ಗೆ ಡಾ. ತೃಪ್ತಿ ಗಿಲಾಡಾ ಅವರು ಏನು ಹೇಳುತ್ತಾರೆ ಅಂತ ಕೇಳೋಣ. "ಪ್ರಾಮಾಣಿಕವಾಗಿ ಹೇಳುವುದಾದರೆ ಡೆಂಗ್ಯೂಗೆ ಕೆಲವು ವಿಶಿಷ್ಟ ರೋಗಲಕ್ಷಣಗಳು ಇದ್ದಿದ್ದರೆ ಅದು ಚೆನ್ನಾಗಿರುತ್ತಿತ್ತು, ಇದು ಅನಾರೋಗ್ಯದ ಮೊದಲ ಎರಡು ದಿನಗಳಲ್ಲಿ ಒಬ್ಬ ವ್ಯಕ್ತಿಯು ಡೆಂಗ್ಯೂನಿಂದ ಬಳಲುತ್ತಿದ್ದಾನೆ ಎಂದು ನಮಗೆ ತಿಳಿಸಬಹುದು".


ಇದನ್ನೂ ಓದಿ: Schizophrenia: ಏನಿದು ಸ್ಕಿಜೋಫ್ರೆನಿಯಾ? ಇಂಚಿಂಚೂ ವಿವರ ಇಲ್ಲಿದೆ ನೋಡಿ


ಡೆಂಗ್ಯೂವಿನ ರೋಗಲಕ್ಷಣಗಳು ಮಳೆಗಾಲದಲ್ಲಿ ಜನರು ಅನುಭವಿಸುವ ತೀವ್ರ ಜ್ವರದ ಕಾಯಿಲೆಯಂತೆಯೇ ಇರುತ್ತವೆ. ಡೆಂಗ್ಯೂವಿನ ಕೆಲವು ಸಾಮಾನ್ಯ ರೋಗಲಕ್ಷಣಗಳನ್ನು ಜ್ವರ, ಮೈಕೈ ನೋವು, ತಲೆನೋವು, ಬೆನ್ನುನೋವು ಇತ್ಯಾದಿ ಎಂದು ಅರ್ಥಮಾಡಿಕೊಳ್ಳಬಹುದು. ಹೆಚ್ಚಿನ ಸಂದರ್ಭಗಳಲ್ಲಿ ಜನರು ಈ ರೋಗಲಕ್ಷಣಗಳಿಂದ ಬಳಲುತ್ತಾರೆ, ಅದು ಸುಮಾರು 5 ರಿಂದ 7 ದಿನಗಳವರೆಗೆ ಇರುತ್ತದೆ.


ಇದು ಯಕೃತ್ತು, ಮೂತ್ರಪಿಂಡ ಮತ್ತು ಕೆಲವೊಮ್ಮೆ ಉಸಿರಾಟದ ತೊಂದರೆಯಂತಹ ಇತರ ಕೆಲವು ಲಕ್ಷಣಗಳನ್ನು ಸಹ ಒಳಗೊಂಡಿರಬಹುದು. ಈ ಸಂಕೀರ್ಣ ಡೆಂಗ್ಯೂನ ಶೇಕಡಾವಾರು ಪ್ರಮಾಣವು ಕೇವಲ 1 ಪ್ರತಿಶತದಷ್ಟಿದೆ. ಇದು ಡೆಂಗ್ಯೂ ನ ಪ್ರಾಥಮಿಕ ಹಂತ ಅಂತ ಹೇಳಬಹುದು. ಇನ್ನೂ ದ್ವಿತೀಯ ಹಂತದ ಡೆಂಗ್ಯೂ ಬಗ್ಗೆ ಮಾತನಾಡುವುದಾದರೆ, ಇದು ಡೆಂಗ್ಯೂ ಕಾಯಿಲೆಯ ಎರಡನೇ ಎಪಿಸೋಡ್ ಆಗಿದೆ. ದ್ವಿತೀಯಕ ಡೆಂಗ್ಯೂನ ಚಿಹ್ನೆಗಳು ಪ್ರಾಥಮಿಕ ಡೆಂಗ್ಯೂವಿನ ಚಿಹ್ನೆಗಳನ್ನು ಹೋಲುತ್ತವೆ ಆದರೆ, ಈ ಜನರು ಗಂಭೀರ ಡೆಂಗ್ಯೂ ಅಥವಾ ಡೆಂಗ್ಯೂ ಶಾಕ್ ಸಿಂಡ್ರೋಮ್ ನಿಂದ ಬಳಲುತ್ತಾರೆ. ಈ ಸಂದರ್ಭದಲ್ಲಿ ರಕ್ತದೊತ್ತಡವು ಕಡಿಮೆಯಾಗುತ್ತದೆ, ರಕ್ತಸ್ರಾವವಾಗುತ್ತದೆ ಮತ್ತು ಪ್ಲೇಟ್ಲೆಟ್ ಎಣಿಕೆಯಲ್ಲಿ ಕುಸಿತ ಸಹ ಉಂಟಾಗುತ್ತದೆ.


ಆಂಟಿವೈರಲ್ ನಂತಹ ಡೆಂಗ್ಯೂಗೆ ಯಾವುದೇ ನಿರ್ದಿಷ್ಟ ಚಿಕಿತ್ಸೆ ಲಭ್ಯವಿಲ್ಲದ ಕಾರಣ ಸಂಬಂಧಿಸಿದ ಅನಾರೋಗ್ಯವು ಡೆಂಗ್ಯೂ ಆಗಿದೆಯೇ ಎಂದು ನೋಡಲು ರೋಗನಿರ್ಣಯವು ಮುಖ್ಯವಾಗಿದೆ. ಡೆಂಗ್ಯೂ ಅಥವಾ ಇನ್ನಾವುದೇ ರೋಗದ ಸಂದರ್ಭದಲ್ಲಿ ಹೈಡ್ರೇಟ್ ಆಗಿರುವುದು ಒಳ್ಳೆಯದು, ಏಕೆಂದರೆ ದೇಹವು ನಿರ್ಜಲೀಕರಣಗೊಂಡಾಗ ತೀವ್ರವಾದ ಡೆಂಗ್ಯೂ ಇನ್ನೂ ಹೆಚ್ಚು ಜಟಿಲವಾಗುತ್ತದೆ.


ಡೆಂಗ್ಯೂ ಜ್ವರದ 7 ಎಚ್ಚರಿಕೆಯ ಚಿಹ್ನೆಗಳು ಮತ್ತು ಅವುಗಳಿಗೆ ತಜ್ಞರ ಸಲಹೆಗಳು


  • ಜ್ವರ
    ಡೆಂಗ್ಯೂ ಜ್ವರದಲ್ಲಿ ಸಾಮಾನ್ಯವಾಗಿ ಸೊಳ್ಳೆ ಕಚ್ಚಿದ 7 ದಿನಗಳ ಒಳಗೆ ರೋಗಲಕ್ಷಣಗಳು ಕಂಡು ಬರುತ್ತವೆ. ಪ್ರಾಥಮಿಕ ಡೆಂಗ್ಯೂ ಸಂದರ್ಭದಲ್ಲಿ, ರೋಗಲಕ್ಷಣಗಳು 5 ರಿಂದ 7 ದಿನಗಳಲ್ಲಿ ಸ್ವಯಂ ಆಗಿ ಹೋಗಬಹುದು.


ಇದನ್ನೂ ಓದಿ: Constipation Remedy: ಈ ಆಹಾರಗಳಿಂದ ನೀವು ದೂರವಿದ್ರೆ ಮಲಬದ್ಧತೆ ಸಮಸ್ಯೆ ಹತ್ತಿರಕ್ಕೂ ಸುಳಿಯಲ್ಲ


ಡೆಂಗ್ಯೂ ಜ್ವರಕ್ಕೆ ಎರಡನೇ ಅತಿ ಹೆಚ್ಚು ರೋಗನಿರ್ಣಯದ ಕಾರಣವಾಗಿರುವುದರಿಂದ, ಸೊಳ್ಳೆಯಿಂದ ಕಚ್ಚಲ್ಪಟ್ಟ ನಂತರ ವ್ಯಕ್ತಿಯು ಹೆಚ್ಚಿನ ಜ್ವರಕ್ಕೆ ಒಳಗಾಗಬಹುದು. ಡೆಂಗ್ಯೂನಿಂದಾಗಿ ಒಬ್ಬ ವ್ಯಕ್ತಿಯು ಜ್ವರದಿಂದ ಬಳಲುತ್ತಿದ್ದರೆ ಆಗ ತಾಪಮಾನವು 104 ಡಿಗ್ರಿ ಫ್ಯಾರನ್ ಹೀಟ್ ನಷ್ಟು ಹೆಚ್ಚಾಗಿರುತ್ತದೆ ಮತ್ತು ಇದರೊಂದಿಗೆ ಮೈಕೈ ನೋವು, ತಲೆನೋವು, ವಾಕರಿಕೆ ಮತ್ತು ದದ್ದುಗಳು ಸಹ ಶುರುವಾಗುತ್ತವೆ.


  • ಒಸಡುಗಳಲ್ಲಿ ರಕ್ತಸ್ರಾವ
    ಡೆಂಗ್ಯೂ ಜ್ವರವು ರಕ್ತ ಮತ್ತು ರಕ್ತವನ್ನು ರೂಪಿಸುವ ಅಂಗದ ಅಸ್ವಸ್ಥತೆಗಳೊಂದಿಗೆ ಸಂಬಂಧಿಸಿದೆ, ಎಂದರೆ ಒಬ್ಬ ವ್ಯಕ್ತಿಯು ಡೆಂಗ್ಯೂ ನಿಂದ ಬಳಲುತ್ತಿದ್ದರೆ ಒಸಡುಗಳಲ್ಲಿ ರಕ್ತಸ್ರಾವ ಶುರುವಾಗುತ್ತದೆ. ಈ ಸ್ಥಿತಿಯು ಸಾಮಾನ್ಯವಾಗಿ ಅನಾರೋಗ್ಯದ ಮೂರನೇ ದಿನದಿಂದ ಕಾಣಿಸಿಕೊಳ್ಳುತ್ತದೆ. ಈ ರಕ್ತಸ್ರಾವಕ್ಕೆ ದಂತವೈದ್ಯರು ಚಿಕಿತ್ಸೆ ನೀಡಬಹುದಾದರೂ, ಈ ರಕ್ತಸ್ರಾವ ಒಸಡುಗಳು ಸಾಕಷ್ಟು ಅಸ್ವಸ್ಥತೆಯನ್ನು ಉಂಟು ಮಾಡಬಹುದು.



  • ತಲೆನೋವು
    ಸೊಳ್ಳೆ ಕಡಿತದಿಂದ ಉಂಟಾಗುವ ಈ ಅನಾರೋಗ್ಯವು ನಿಮ್ಮ ಚರ್ಮದಲ್ಲಿ ತುರಿಕೆ ಅಥವಾ ಒಸಡಿನ ರಕ್ತಸ್ರಾವವಲ್ಲದೆ, ನಿಮ್ಮ ತಲೆಯ ಮೇಲೂ ಸಹ ಇದು ಪರಿಣಾಮ ಬೀರುವ ಸಾಧ್ಯತೆಯಿದೆ.


ಡೆಂಗ್ಯೂನಿಂದ ಉಂಟಾಗುವ ತೀವ್ರ ತಲೆನೋವು ಸಾಮಾನ್ಯವಾಗಿ ಹೆಚ್ಚಿನ ಜ್ವರದೊಂದಿಗೆ ಇರುತ್ತದೆ. ಇದಲ್ಲದೆ ಕ್ಲಾಸಿಕ್ ಡೆಂಗ್ಯೂ ರೋಗನಿರ್ಣಯಗೊಂಡ ರೋಗಿಗಳು ಡೆಂಗ್ಯೂ ರಕ್ತಸ್ರಾವ ಜ್ವರದಿಂದ ಬಳಲುತ್ತಿರುವ ರೋಗಿಗಳಲ್ಲಿ ಅಥವಾ ಡೆಂಗ್ಯೂ ಶಾಕ್ ಸಿಂಡ್ರೋಮ್ ನಿಂದ ಬಳಲುತ್ತಿರುವ ರೋಗಿಗಳಿಗೆ ಹೋಲಿಸಿದರೆ ಹೆಚ್ಚು ತೀವ್ರವಾದ ತಲೆನೋವನ್ನು ಹೊಂದಿರುತ್ತಾರೆ.

  • ಕಡಿಮೆ ರಕ್ತದೊತ್ತಡ
    ಡೆಂಗ್ಯೂ ಜ್ವರವನ್ನು ಸೈಲೆಂಟ್ ಕಿಲ್ಲರ್ ಎಂದೂ ಕರೆಯಲಾಗುತ್ತದೆ, ಏಕೆಂದರೆ ಅದು ಉಂಟು ಮಾಡುವ ಇತರ ಅಸ್ವಸ್ಥತೆಗಳಲ್ಲಿ ರಕ್ತದೊತ್ತಡದಲ್ಲಿ ತ್ವರಿತ ಕುಸಿತವು ಸಹ ಒಂದಾಗಿದೆ.


ಡೆಂಗ್ಯೂ ಕಾಯಿಲೆಯನ್ನು ನಿರ್ವಹಿಸಲು, ರೋಗಿಯ ರಕ್ತದೊತ್ತಡವನ್ನು ನಿಯಮಿತ ಮಧ್ಯಂತರಗಳಲ್ಲಿ ಮೇಲ್ವಿಚಾರಣೆ ಮಾಡುವುದು ಬಹಳ ಮುಖ್ಯ. ಕಡಿಮೆ ರಕ್ತದೊತ್ತಡವು ದೇಹದ ಅಂಗಾಂಶಗಳಿಗೆ ಕಡಿಮೆ ರಕ್ತದ ಪೂರೈಕೆಗೆ ಕಾರಣವಾಗುತ್ತದೆ, ಇದು ಅಂತಿಮವಾಗಿ ಹೃದಯ, ಯಕೃತ್ತು, ಮೂತ್ರಪಿಂಡ ಮತ್ತು ಮೆದುಳಿನಂತಹ ಪ್ರಮುಖ ಅಂಗಗಳ ಹಾನಿಗೆ ಕಾರಣವಾಗಬಹುದು.

  • ಪ್ಲೇಟ್ಲೆಟ್ ಎಣಿಕೆಯಲ್ಲಿ ಕುಸಿತ
    ಡೆಂಗ್ಯೂ ಜ್ವರ ಎಂದರೆ, ಜನರ ತಲೆಗೆ ಬರುವ ವಿಚಾರ ಎಂದರೆ ಪ್ಲೇಟ್ಲೆಟ್ ಗಳ ಎಣಿಕೆಯಲ್ಲಿ ಕುಸಿತವಾಗುವುದು, ಇದು ಮತ್ತಷ್ಟು ಹೆಚ್ಚು ಸಂಕೀರ್ಣತೆಗಳಿಗೆ ಕಾರಣವಾಗಬಹುದು.


ಒಬ್ಬ ವ್ಯಕ್ತಿಗೆ ಪ್ರತಿ ಮಿಲಿ ಲೀಟರ್ ರಕ್ತಕ್ಕೆ ಸುಮಾರು 1500000 ದಿಂದ 250000 ಪ್ಲೇಟ್ಲೆಟ್ ಗಳ ಅಗತ್ಯವಿದ್ದರೆ, ಅದು ಸುಮಾರು 100000 ಪ್ಲೇಟ್ಲೆಟ್ ಪ್ರತಿ ಮಿಲಿ ಲೀಟರ್ ಗೆ ಕುಸಿಯುತ್ತದೆ. ಈ ಪ್ಲೇಟ್ಲೆಟ್ ಎಣಿಕೆಯಲ್ಲಿ ಕಂಡು ಬರುವ ಕುಸಿತವು ಒಸಡುಗಳಲ್ಲಿ ರಕ್ತಸ್ರಾವ, ಮಲದಲ್ಲಿ ರಕ್ತದ ಕುರುಹುಗಳಿಗೆ ಕಾರಣವಾಗಬಹುದು.

  • ಮೈಕೈ ನೋವು
    ಡೆಂಗ್ಯೂ ಜ್ವರವು ಮೂಲಭೂತವಾಗಿ ನಿಮ್ಮ ಇಡೀ ದೇಹದ ಮೇಲೆ ಪರಿಣಾಮ ಬೀರಬಹುದು ಮತ್ತು ಇಡೀ ದೇಹದ ನೋವಿಗೆ ಕಾರಣವಾಗಬಹುದು. ಈ ದೇಹದ ನೋವು ಬೆನ್ನು ಮತ್ತು ದೇಹದ ಇತರ ಕೀಲುಗಳು ಮತ್ತು ಸ್ನಾಯುಗಳ ಮೇಲೆ ಪರಿಣಾಮ ಬೀರುತ್ತದೆ, ಇದು ಸಾಮಾನ್ಯವಾಗಿ ಹೆಚ್ಚಿನ ಜ್ವರದೊಂದಿಗೆ ಇರುತ್ತದೆ. ದೇಹದ ನೋವು ನಿಮ್ಮನ್ನು ದುರ್ಬಲಗೊಳಿಸುತ್ತದೆ ಮತ್ತು ರೋಗಿಗೆ ಎದ್ದು ಓಡಾಡಲು ಸಹ ಕಷ್ಟವಾಗಬಹುದು.


ಇದನ್ನೂ ಓದಿ:  Metallic Taste Remedy: ನಾಲಿಗೆ ಕೆಟ್ಟು ಹೋಗಿ, ಏನ್ ತಿಂದ್ರೂ ಸಪ್ಪೆ ಅನಿಸುತ್ತಾ? ಹಾಗಿದ್ರೆ ಈ ವಸ್ತು ತಿನ್ನಿ, ಎಲ್ಲವೂ ರುಚಿಯಾಗುತ್ತೆ!

  • ದದ್ದುಗಳು
    ಇತರ ಯಾವುದೇ ಸೊಳ್ಳೆ ಕಡಿತದಿಂದ ಉಂಟಾದ ಕಾಯಿಲೆಗಳಂತೆ, ಡೆಂಗ್ಯೂ ಜ್ವರವು ದದ್ದುಗಳು ಮತ್ತು ತುರಿಕೆಯೊಂದಿಗೆ ಬರುತ್ತದೆ. ಡೆಂಗ್ಯೂ ಕಾರಣದಿಂದಾಗಿ ದೇಹದ ಹೆಚ್ಚಿನ ಭಾಗಗಳ ಮೇಲೆ ಚಪ್ಪಟೆ ಕೆಂಪು ಬಣ್ಣದ ದದ್ದುಗಳು ಕಾಣಿಸಿಕೊಳ್ಳುತ್ತವೆ, ಇದನ್ನು ಕಾಯಿಲೆಯ ಎರಡನೇ ಅಥವಾ ಮೂರನೇ ದಿನದ ಆಸುಪಾಸಿನಲ್ಲಿ ಗಮನಿಸಬಹುದು.

top videos
    First published: