Hair Care: ನಿಮ್ಮ ಕೂದಲು ವೇಗವಾಗಿ ಬೆಳೆಯಬೇಕಾ? ಹಾಗಿದ್ರೆ ಕೇಶ ವಿನ್ಯಾಸಕ ತಜ್ಞರು ಹೇಳುವ ಈ ಟಿಪ್ಸ್ ಫಾಲೋ ಮಾಡಿ

“ನೀವು ವೇಗವಾಗಿ ಕೂದಲು ಬೆಳೆಸಬೇಕು ಎಂದು ನಿರ್ಧರಿಸಿದ ಕ್ಷಣದಿಂದ ನೀವು ನಿಮ್ಮ ಕೂದಲನ್ನು ನಿಜವಾಗಿಯೂ ಚೆನ್ನಾಗಿ ನೋಡಿಕೊಳ್ಳಲು ಆರಂಭಿಸಬೇಕು” ಎಂದು ಕೇಶ ವಿನ್ಯಾಸಕಿ ಮಾರ್ಕ್‌ ಟೌನ್ಸೆಂಡ್‌ ಹೇಳಿದರು. ಉದ್ದ ಮತ್ತು ದಟ್ಟವಾದ ಕೂದಲು ಬೆಳೆಯುವುದಕ್ಕೆ ಯಾವುದೇ ಅನ್ಯ ಮಾರ್ಗವಿಲ್ಲ. ಪ್ರತಿದಿನ ಕೂದಲ ಆರೈಕೆ ಬಗ್ಗೆ ವಿಶೇಷವಾದ ಗಮನ ಕೊಡಲೇಬೇಕು.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಇತ್ತಿಚೀಗೆ ಆಧುನಿಕ ಜೀವನಶೈಲಿಯಿಂದ (Lifestyle) ಮನುಷ್ಯನಿಗೆ ಅನೇಕ ಆರೋಗ್ಯ ಮತ್ತು ಚರ್ಮದ ಸಮಸ್ಯೆಗಳು (Skin Problem) ಕಾಡುತ್ತಲೇ ಇರುತ್ತವೆ. ಅದರಲ್ಲೂ ಕೂದಲು ಉದುರುವಿಕೆ ಸಮಸ್ಯೆಅಂತೂ ಮಗುವಿನಿಂದ ಹಿಡಿದು ವಯಸ್ಸಾದವರ ತನಕ ಕಾಡುತ್ತಲೇ ಇದೆ. ಕೂದಲು ಉದುರುವಿಕೆ (Hair Fall) ಮುಂದುವರಿದ ಭಾಗವಾಗಿ ಈ ಬೊಕ್ಕ ತಲೆ ಸಮಸ್ಯೆ, ಕೂದಲು ಬಿಳಿಯಾಗುವುದು ಹೀಗೆ ನೂರೆಂಟು ಸಮಸ್ಯೆಗಳು ಕಾಡುತ್ತಲೇ ಇರುತ್ತವೆ. ಈ ಸಮಸ್ಯೆಗಳಿಗೆ ಪರಿಹಾರವೇ ಇಲ್ಲ ಎಂದು ನೀವು ನಮ್ಮನ್ನು ಕೇಳಿದರೆ , ಇವತ್ತು ನಾವು ನಮ್ಮ ಲೇಖನದಲ್ಲಿ ಕೂದಲು ವೇಗವಾಗಿ ಬೆಳೆಯುವುದಕ್ಕೆ (Hair Growth) ಕೇಶ ತಜ್ಞರ ಬಳಿ ಸಲಹೆಗಳನ್ನು ಕೇಳಿ ನಿಮಗೆ ತಿಳಿಸುವ ಪ್ರಯತ್ನ ಮಾಡುತ್ತಿದ್ದೇವೆ.

ಹಾಗಿದ್ರೆ ನಿಮ್ಮ ಕೂದಲನ್ನು ವೇಗವಾಗಿ ಬೆಳೆಸುವುದು ಹೇಗೆ ಎಂದು ನಿಮಗೆ ಆಶ್ಚರ್ಯವಾಗುತ್ತಿದ್ದರೆ, ಖಂಡಿತವಾಗಲೂ ನೀವು ವೇಗವಾಗಿ ನಿಮ್ಮ ಕೂದಲನ್ನು ಬೆಳೆಸಬಹುದು. ಆದ್ರೆ ನೀವು ಸ್ವಲ್ಪ ತಾಳ್ಮೆ ಮತ್ತು ಪ್ರಯತ್ನ ಮಾಡಲೇಬೇಕು. “ನೀವು ವೇಗವಾಗಿ ಕೂದಲು ಬೆಳೆಸಬೇಕು ಎಂದು ನಿರ್ಧರಿಸಿದ ಕ್ಷಣದಿಂದ ನೀವು ನಿಮ್ಮ ಕೂದಲನ್ನು ನಿಜವಾಗಿಯೂ ಚೆನ್ನಾಗಿ ನೋಡಿಕೊಳ್ಳಲು ಆರಂಭಿಸಬೇಕು” ಎಂದು ಕೇಶ ವಿನ್ಯಾಸಕಿ ಮಾರ್ಕ್‌ ಟೌನ್ಸೆಂಡ್‌ ಹೇಳಿದರು. ಉದ್ದ ಮತ್ತು ದಟ್ಟವಾದ ಕೂದಲು ಬೆಳೆಯುವುದಕ್ಕೆ ಯಾವುದೇ ಅನ್ಯ ಮಾರ್ಗವಿಲ್ಲ. ಪ್ರತಿದಿನ ಕೂದಲ ಆರೈಕೆ ಬಗ್ಗೆ ವಿಶೇಷವಾದ ಗಮನ ಕೊಡಲೇಬೇಕು.

ಹಾಗಿದ್ರೆ ಕೂದಲು ಬೇಗವಾಗಿ ಬೆಳೆಯಲು ತಜ್ಞರು ನೀಡಿರುವ ಆ 7 ಸಲಹೆಗಳು ಇಲ್ಲಿವೆ:
1. ನಿಯಮಿತ ಕೂದಲ ಆರೈಕೆ ಬಗ್ಗೆ ಗಮನವಿರಲಿ
ನೀವು ದಿನಾಲು ಹೊರಗಡೆ ಓಡಾಡುವವರು ಆಗಿದ್ದರೆ ಆಗಾಗ ಕೂದಲಿನಲ್ಲಿ ಇರುವ ಧೂಳನ್ನು ಸ್ವಚ್ಛಗೊಳಿಸುವುದರ ಬಗ್ಗೆ ಗಮನ ಕೊಡಿ. ವರ್ಷಕ್ಕೆ ಮೂರು ಸಲವಾದರೂ ಕೂದಲು ತುಂಡಾಗಿರುವುದನ್ನು ಸರಿ ಪಡಿಸಿಕೊಳ್ಳಿ. ಸ್ಪ್ಲಿಟ್-ಎಂಡ್ ಆರೋಗ್ಯ ಚಿಕಿತ್ಸೆ ಪಡೆದುಕೊಳ್ಳಿ. ಇದರಿಂದ ನಿಮ್ಮ ಕೂದಲು ಉದ್ದವಾಗಿ ಬೆಳೆಯಲು ಸಹಾಯಕವಾಗುತ್ತದೆ. ಇದಕ್ಕೆ ಸಹಾಯಕಾರಿಯಾಗಲೆಂದು ಸ್ಟ್ರೆಂಥನಿಂಗ್ ಟ್ರೀಟ್‌ಮೆಂಟ್ ಆಯಿಲ್ ಮತ್ತು ಅಮಿಕಾಸ್ ದಿ ಕ್ಲೋಸರ್ ಇನ್‌ಸ್ಟಂಟ್ ಸ್ಪ್ಲಿಟ್-ಎಂಡ್ ಹೇರ್ ರಿಪೇರ್ ಕ್ರೀಮ್ ಅನ್ನು ಬಳಸಬಹುದು ಎಂದು ಕೇಶ ವಿನ್ಯಾಸಕಿ ಹೇಳಿದರು.

2. ನಿಮ್ಮ ಕೂದಲನ್ನು ಪೋಷಿಸಿ
ನಿಮ್ಮ ಕೂದಲ ನೆತ್ತಿಯು ವಯಸ್ಸಾದಂತೆ ತುಂಬಾ ದುರ್ಬಲವಾಗುತ್ತದೆ ಮತ್ತು ಆರೋಗ್ಯಕರ ಕೂದಲಿನ ಬೆಳವಣಿಗೆಗೆ ಸಹಾಯಕವಾಗಲು ಉತ್ತಮ ಪರಿಸರದ ಅಗತ್ಯ ಖಂಡಿತ ಇದೆ. ನಿಮ್ಮ ಕೂದಲ ನೆತ್ತಿಯ ಕಾಳಜಿ ವಹಿಸುವುದು ಕೂಡ ಅಷ್ಟೇ ಮುಖ್ಯ ಎಂದು ಕೇಶ ವಿಜ್ಞಾನ ತಜ್ಞ ಮತ್ತು ಕೇಶ ಆರೈಕೆಯ ಬ್ರ್ಯಾಂಡ್ ಬೆಟರ್ ನಾಟ್ ಯಂಗರ್‌ನ ಮುಖ್ಯ ವೈಜ್ಞಾನಿಕ ಅಧಿಕಾರಿ ಡೆಬ್ರಾ ಲಿನ್, Ph.D. ಹೇಳಿದರು. ಸೂಪರ್‌ಚಾರ್ಜ್ಡ್ ಲೀವ್-ಆನ್ ಇದು ಕೂದಲ ನೆತ್ತಿಯ ಸೀರಮ್ ಆಗಿದೆ. ಸೂಪರ್‌ಪವರ್ ಹೇರ್ ಮತ್ತು ಸ್ಕಾಲ್ಪ್ ಫೋರ್ಟಿಫೈಯಿಂಗ್ ಸೀರಮ್ ಇವುಗಳನ್ನು ಬಳಸಿ ನಿಮ್ಮ ಕೂದಲ ಆರೈಕೆ ಮಾಡಿ.

3. ವಾರಕ್ಕೊಮ್ಮೆ ನಿಮ್ಮ ಕೂದಲಿಗೆ ಕಂಡೀಷನಿಂಗ್ ಚಿಕಿತ್ಸೆ ಮಾಡಿಸಿಕೊಳ್ಳಿ
ನಿಮ್ಮ ಕೂದಲು ಸರಿಯಾಗಿ ಬೆಳೆಯಬೇಕೆಂದರೆ ಈ ಚಿಕಿತ್ಸೆಯನ್ನು ನೀವು ಅನುಸರಿಸಲೇ ಬೇಕು. ವಾರಕ್ಕೊಮ್ಮೆ ಕೂದಲಿಗೆ ಕಂಡಿಷನಿಂಗ್‌ ಮಾಡುವುದರಿಂದ ಬುಡದಿಂದ ಕೂದಲು ಗಟ್ಟಿಯಾಗಿ ವೇಗವಾಗಿ ಬೆಳೆಯಲು ಸಹಾಯವಾಗುತ್ತವೆ. ರೆಡ್‌ಕೆನ್‌ನ ವೆಲ್ವೆಟ್ ಜೆಲಾಟಿನ್ 07 ಮತ್ತು ಕಂಪನಿಯ ಆಲ್ ಸಾಫ್ಟ್ ಅರ್ಗಾನ್-6 ಮಲ್ಟಿ-ಕೇರ್ ಆಯಿಲ್‌ನ ಕಾಕ್‌ಟೈಲ್ ಆಯಿಲ್‌ ಕೂದಲು ಕಂಡಿಷನಿಂಗ್‌ ಮಾಡಲು ಮತ್ತು ವೇಗವಾಗಿ ಬೆಳೆಯಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: Skin Care Tips: ಗರ್ಭಿಣಿಯರಿಗೆ ತ್ವಚೆಯ ಆರೈಕೆ ಮಾಡುವ ಸರಳ ಮತ್ತು ಪರಿಣಾಮಕಾರಿ ಟಿಪ್ಸ್ ಹೇಳಿದ ನಟಿ ಕರಿಷ್ಮಾ ಕಪೂರ್

3. ನಿಮ್ಮ ಕೂದಲನ್ನು ಸೂಕ್ಷ್ಮವಾಗಿ ಸ್ವಚ್ಛಗೊಳಿಸಿ
ನೀವು ನಿಮ್ಮ ಕೂದಲನ್ನು ಸ್ವಚ್ಛಗೊಳಿಸುತ್ತೀರಿ ಅಂದರೆ ನೀವು ಉತ್ತಮ ಶ್ಯಾಂಪೂವನ್ನು ಬಳಸಲೇಬೇಕು. ಶ್ಯಾಂಪೂ ಮತ್ತು ಕಂಡಿಷನರ್‌ ಆಯ್ಕೆ ಮಾಡುವಾಗ ಉತ್ತಮವಾದುದನ್ನೇ ಆಯ್ಕೆ ಮಾಡಿ. ಆಗಾಗ ನೆತ್ತಿ ಮಸಾಜ್‌ ಮಾಡಿಸಿಕೊಳ್ಳುತ್ತೀರಿ. ಇದರಿಂದಲೂ ನಿಮ್ಮ ಕೂದಲು ವೇಗವಾಗಿ ಬೆಳೆಯುತ್ತದೆ.

4. ಆಹಾರ ಬಗ್ಗೆ ಎಚ್ಚರವಿರಲಿ
ನೀವು ವೇಗವಾಗಿ ಮತ್ತು ಆರೋಗ್ಯಯುತ ಕೂದಲು ಪಡೆಯಬೇಕೆಂದು ಯೋಚಿಸುತ್ತಿದ್ದರೆ, ನೀವು ನಿಮ್ಮ ಆಹಾರದ ಕಡೆ ಗಮನ ಕೊಡಲೇ ಬೇಕು. ನಿಮ್ಮ ಆಹಾರದಲ್ಲಿ ಸಾಕಷ್ಟು ಪ್ರೋಟಿನ್‌, ವಿಟಮಿನ್‌ಗಳು, ಇತರೆ ಖನಿಜಾಂಶಗಳು ಇರುವ ಆಗೆ ನೋಡಿಕೊಳ್ಳಿ.

5. ಸಪ್ಲಿಮೆಂಟ್‌ಗಳನ್ನು ತೆಗೆದುಕೊಳ್ಳಿ
ಪೂರಕವಾದ ಆಹಾರ ದೊರಕದೇ ಹೋದರೆ ಕೆಲವು ಸಪ್ಲಿಮೆಂಟ್‌ಗಳನ್ನು ತೆಗೆದುಕೊಳ್ಳುವುದು ಉತ್ತಮ. ಇತ್ತಿಚಿಗೆ ಕೂದಲ ಬೆಳವಣಿಗೆ ಮಾರುಕಟ್ಟೆಯಲ್ಲಿ ಆಪಲ್‌ ವಿನೆಗರ್‌ ಗಮ್ಮಿಗಳು ಬಂದಿವೆ. ಅವುಗಳನ್ನು ಕೇಶ ತಜ್ಞರ ಸಲಹೆ ಮೇರೆಗೆ ಇವುಗಳನ್ನು ಅನುಸರಿಸಬೇಕಾಗುತ್ತದೆ.

6. ಮಲಗುವುದಕ್ಕೆ ರೇಷ್ಮೆ ದಿಂಬನ್ನು ಬಳಸಿ
ನೀವು ನಿಮ್ಮ ನಿದ್ದೆಗೆ ಹತ್ತಿ ದಿಂಬು ಬಳಸುವ ಬದಲು ರೇಷ್ಮೆ ದಿಂಬನ್ನು ಬಳಸಿ. ಏಕೆಂದರೆ ಹತ್ತಿ ದಿಂಬು ನಿಮ್ಮ ಕೂದಲಿನ ತೇವಾಂಶವನ್ನು ಹೀರಿಕೊಂಡು ಬಿಡುತ್ತದೆ. ರೇಷ್ಮೆ ದಿಂಬು ನಿಮ್ಮ ಕೂದಲಿನ ತೇವಾಂಶವನ್ನು ಹೀರಿಕೊಳ್ಳುವುದಿಲ್ಲ.ಇದರಿಂದ ನಿಮ್ಮ ಕೂದಲು ವೇಗವಾಗಿ ಬೆಳೆಯಲು ಸಹಾಯಕವಾಗುತ್ತದೆ.

ಇದನ್ನೂ ಓದಿ:  Bhringraj Oil Benefits: ಕೂದಲಿನ ಆರೋಗ್ಯಕ್ಕೆ ಭೃಂಗರಾಜ ಎಣ್ಣೆ! ಇದು ನಿಜಕ್ಕೂ ಸಹಕಾರಿಯೇ?

ಅಂತಿಮವಾಗಿ ಕೂದಲು ವೇಗವಾಗಿ ಬೆಳೆಯಲು ಯಾವುದೇ ಪರ್ಯಾಯ ವಿಧಾನಗಳು ಇಲ್ಲ. ಅದಕ್ಕೆ ನಿಮ್ಮ ತಾಳ್ಮೆ ಮತ್ತು ಪ್ರಯತ್ನದ ಜೊತೆ ಉತ್ತಮ ಆಹಾರ, ನಿದ್ದೆ, ಸಾಕಷ್ಟು ನೀರು ಕುಡಿಯುವುದರ ಜೊತೆ ಯಾವುದೇ ಆತಂಕವಿಲ್ಲದೆ ಇದ್ದರೆ ಕೂದಲು ಸೊಂಪಾಗಿ ಬೆಳೆದೆ ಬೆಳೆಯುತ್ತವೆ.
Published by:Ashwini Prabhu
First published: