Weight Loss: ಡಯಟ್‌ ಮಾಡದೆಯೇ ತೂಕ ಇಳಿಸಿಕೊಳ್ಳಬೇಕೇ? ಹಾಗಿದ್ರೆ ಈ ಟಿಪ್ಸ್ ಫಾಲೋ ಮಾಡಿ

ತೂಕ ಇಳಿಸಬೇಕು ಎಂಬ ಆಸೆ ಏನೋ ಮನಸ್ಸಲ್ಲಿದ್ದರೂ, ನಾಲಿಗೆ ಚಪಲ, ಅಚ್ಚುಮೆಚ್ಚಿನ ತಿನಿಸುಗಳನ್ನು ಮಿತಿಯಲ್ಲಿ ತಿನ್ನದೇ ಹೆಚ್ಚು ಸೇವಿಸಿ ಬೇಡದ ತೂಕಕ್ಕೆ ದಾರಿ ಮಾಡಿಕೊಡುತ್ತೇವೆ. ಕೆಲವರಿಗೆ ಡಯಟ್‌ ಅನುಸರಿಸುವುದು ಕಷ್ಟವಾಗುತ್ತದೆ. ಹಾಗಾದರೆ ಡಯೆಟ್‌ ಇಲ್ಲದೆನೇ ತೂಕ ಇಳಿಸಿಕೊಳ್ಳಲು ಸಾಧ್ಯವಿಲ್ಲವೇ? ಈ ನಿಮ್ಮ ಪ್ರಶ್ನೆಗೆ ಖಂಡಿತ ಇದೆ ಎಂದು ಉತ್ತರ ನೀಡುತ್ತದೆ ಈ ಲೇಖನ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:

ಸಣ್ಣ ಆಗಲು ಡಯಟ್‌ (Died) ಮತ್ತು ವ್ಯಾಯಾಮವೇ ಮೂಲ ಮಂತ್ರಗಳು. ನಮ್ಮ ಹೆಚ್ಚುವರಿ ತೂಕಕ್ಕೆ ಅನಾರೋಗ್ಯಕರ ಆಹಾರ, ಜಡ ಜೀವನ ಶೈಲಿ, ಒತ್ತಡ ಇವುಗಳೇ ಮುಖ್ಯ ಕಾರಣ. ತೂಕ ಇಳಿಸಬೇಕು (Weight Loss) ಎಂಬ ಆಸೆ ಏನೋ ಮನಸ್ಸಲ್ಲಿದ್ದರೂ, ನಾಲಿಗೆ ಚಪಲ, ಅಚ್ಚುಮೆಚ್ಚಿನ ತಿನಿಸುಗಳನ್ನು ಮಿತಿಯಲ್ಲಿ ತಿನ್ನದೇ ಹೆಚ್ಚು ಸೇವಿಸಿ ಬೇಡದ ತೂಕಕ್ಕೆ (Weight) ದಾರಿ ಮಾಡಿಕೊಡುತ್ತೇವೆ. ಕೆಲವರಿಗೆ ಡಯಟ್‌ ಅನುಸರಿಸುವುದು ಕಷ್ಟವಾಗುತ್ತದೆ. ಹಾಗಾದರೆ ಡಯೆಟ್‌ ಇಲ್ಲದೆನೇ ತೂಕ ಇಳಿಸಿಕೊಳ್ಳಲು ಸಾಧ್ಯವಿಲ್ಲವೇ? ಈ ನಿಮ್ಮ ಪ್ರಶ್ನೆಗೆ ಖಂಡಿತ ಇದೆ ಎಂದು ಉತ್ತರ ನೀಡುತ್ತದೆ ಈ ಲೇಖನ. ಹೌದು ಡಯಟ್‌ ಇಲ್ಲದೆನೂ ನೀವು ತೂಕ ಇಳಿಸಿಕೊಳ್ಳಬಹುದು, ಹೇಗೆ ಅಂತಿರಾ ಇಲ್ಲಿವೆ ನೋಡಿ ಅದಕ್ಕೆ ಸಂಬಂಧಿಸಿದ ಕೆಲ ಟಿಪ್ಸ್


ಆಹಾರ ಸೇವನೆಯ ಮೊದಲು ಬೆಳಿಗ್ಗೆ ಕಾರ್ಡಿಯೋ ಮಾಡಿ
ಓಟ, ಸೈಕ್ಲಿಂಗ್ ಅಥವಾ ಮೆಟ್ಟಿಲು ಹತ್ತುವಂತಹ ಹೃದಯರಕ್ತನಾಳದ ವ್ಯಾಯಾಮವು ನಿಮ್ಮ ದೇಹದ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಅಧ್ಯಯನವೊಂದರ ಪ್ರಕಾರ ಬೆಳಿಗ್ಗೆ ಕಾಲಿ ಹೊಟ್ಟೆಯಲ್ಲಿ ಕಾರ್ಡಿಯೋ ಮಾಡುವವರು ಮುಂಚಿತವಾಗಿ ಊಟ ಮಾಡಿದವರಿಗಿಂತ 20 ಪ್ರತಿಶತ ಹೆಚ್ಚು ಫ್ಯಾಟ್‌ ಅನ್ನು ಕಳೆದುಕೊಳ್ಳುತ್ತಾರೆ ಎಂದಿದೆ. ಹೀಗಾಗಿ ಬೆಳ್ಳಿಗೆ ತಿಂಡಿ ತಿನ್ನುವ ಮುನ್ನ ಸಣ್ಣ ಕಾರ್ಡಿಯೋ ವ್ಯಾಯಾಮಗಳನ್ನು ಮಾಡುವ ಅಭ್ಯಾಸ ರೂಢಿಸಿಕೊಳ್ಳಿ.


ಹೆಚ್ಚು ನಿದ್ರೆ ಮಾಡಿ
ತೂಕದ ಸಮತೋಲನಕ್ಕೆ ನಿದ್ರೆ ಅವಶ್ಯಕವಾಗಿದೆ. ನಿದ್ರೆಯ ಕೊರತೆ ಬೊಜ್ಜು ಸೇರಿ ಹಲವು ಅನಾರೋಗ್ಯಗಳಿಗೆ ಕಾರಣವಾಗಿದೆ. ನೀವು ಉತ್ತಮವಾಗಿ ನಿದ್ರಿಸುತ್ತಿದ್ದರೆ ನಿಮ್ಮ ತೂಕ ಸಹ ಒಂದೇ ರೀತಿಯಲ್ಲಿ ಸಾಗುತ್ತದೆ. ಆನಲ್ಸ್ ಆಫ್ ಇಂಟರ್ನಲ್ ಮೆಡಿಸಿನ್ ಜರ್ನಲ್‌ನಲ್ಲಿನ 2010 ರ ಅಧ್ಯಯನವು ಹೆಚ್ಚುವರಿ ಮೂರು ಗಂಟೆಗಳ ನಿದ್ರೆಯು ಒಂದು ರಾತ್ರಿ 400 ಕ್ಯಾಲೊರಿಗಳನ್ನು ಬರ್ನ್‌ ಮಾಡುತ್ತದೆ ಎಂದು ತಿಳಿಸಿದೆ.


ಹೆಚ್ಚೆಚ್ಚು ನೀರು ಸೇವನೆ
ಕಟ್ಟುನಿಟ್ಟಾದ ಆಹಾರಕ್ರಮವನ್ನು ಒಳಗೊಂಡಿರದ ತೂಕವನ್ನು ಕಳೆದುಕೊಳ್ಳುವ ಮತ್ತೊಂದು ಸಾಬೀತಾದ ಮಾರ್ಗವೆಂದರೆ ಹೆಚ್ಚು ನೀರು ಕುಡಿಯುವುದು. ಪ್ರತಿ ಊಟಕ್ಕೂ ಮೊದಲು 500 ಮಿಲಿ ನೀರು ಕುಡಿಯುವುದರಿಂದ ವೇಗವಾಗಿ ತೂಕ ಕಳೆದುಕೊಳ್ಳಬಹುದು ಎನ್ನುತ್ತವೆ ಸಂಶೋಧನೆಗಳು. ಹೆಚ್ಚಿನ ನೀರು ಸೇವನೆ ನಮ್ಮ ಚಯಾಪಚಯವನ್ನು ಹೆಚ್ಚಿಸಿ ಉತ್ತಮ ಆರೋಗ್ಯ ನೀಡುತ್ತದೆ. ನಿಮ್ಮ ಹಸಿವನ್ನು ಕಡಿಮೆ ಮಾಡಲು ಪ್ರತಿ ಊಟಕ್ಕೂ ಮೊದಲು ಅರ್ಧ ಲೀಟರ್ ನೀರು ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳಿ.


ಇದನ್ನೂ ಓದಿ:  Weight Loss: ಬರೋಬ್ಬರಿ 50 ಕೆಜಿ ತೂಕ ಇಳಿಸಿಕೊಂಡ 70 ವರ್ಷದ ಅಜ್ಜಿ, ಇದೇ ಇವರ ಸೀಕ್ರೆಟ್!

ಪ್ರೋಟೀನ್ ಸೇವಿಸಿ
ನಿಮ್ಮ ಪ್ರೋಟೀನ್ ಸೇವನೆಯನ್ನು ಹೆಚ್ಚಿಸುವುದು ನಿಮ್ಮ ಚಯಾಪಚಯವನ್ನು ಹೆಚ್ಚಿಸಲು ಮತ್ತು ಹೆಚ್ಚು ತೂಕವನ್ನು ಕಳೆದುಕೊಳ್ಳುವ ಅತ್ಯುತ್ತಮ ವಿಧಾನಗಳಲ್ಲಿ ಒಂದಾಗಿದೆ. ಪ್ರೋಟೀನ್‌ ಸೇವನೆಯು ನಿಮ್ಮ ಹಸಿವನ್ನು ಕಡಿಮೆ ಮಾಡುತ್ತದೆ ಮತ್ತು ಕಡಿಮೆ ಕ್ಯಾಲೊರಿಗಳನ್ನು ತಿನ್ನಲು ಸಹಾಯ ಮಾಡುತ್ತದೆ. ಜೊತೆಗೆ ಇದು ಹೆಚ್ಚು ಕೊಬ್ಬಿನ ನಷ್ಟಕ್ಕೂ ಕಾರಣವಾಗುತ್ತದೆ.


ಮಧ್ಯಂತರ ಉಪವಾಸವನ್ನು ಪ್ರಯತ್ನಿಸಿ
ಹೆಚ್ಚು ತೂಕ ಹೊಂದಿರುವವರು ಬೇಗ ಸಣ್ಣ ಆಗಲು ಇದೊಂದು ಅತ್ಯದ್ಭುತ ಮಾರ್ಗ. ಅಂದರೆ ಪ್ರತಿದಿನ, ಒಬ್ಬ ವ್ಯಕ್ತಿಯು 12-ಗಂಟೆಗಳ ಉಪವಾಸ ಮಾದರಿಯನ್ನು ಆರಿಸಿಕೊಂಡು ಅನುಸರಿಸಬೇಕು. ಕೆಲವು ಸಂಶೋಧಕರ ಪ್ರಕಾರ, 10 ರಿಂದ 16 ಗಂಟೆಗಳ ಕಾಲ ಉಪವಾಸ ಮಾಡುವುದರಿಂದ ದೇಹದಲ್ಲಿರುವ ಕೊಬ್ಬಿನ ಶೇಖರಣೆ ಶಕ್ತಿಯಾಗಿ ಪರಿವರ್ತನೆಯಾಗುತ್ತದೆ ಎಂದಿದ್ದಾರೆ. ಇದರ ಪರಿಣಾಮವಾಗಿ ನಿಮ್ಮ ಕೊಬ್ಬು ಕಡಿಮೆಯಾಗುತ್ತದೆ ಮತ್ತು ಅಂತಿಮವಾಗಿ ತೂಕವನ್ನು ಕಳೆದುಕೊಳ್ಳಬಹುದು.


ಒತ್ತಡ ಮತ್ತು ಆತಂಕವನ್ನು ತಪ್ಪಿಸಿ
ದೈನಂದಿನ ಒತ್ತಡ ಮತ್ತು ಹೆಚ್ಚಿನ ಆತಂಕದ ಮಟ್ಟಗಳು ತೂಕವನ್ನು ಕಳೆದುಕೊಳ್ಳಲು ಬಯಸುವವರ ಮೇಲೆ ಕೆಟ್ಟ ಪರಿಣಾಮ ಬೀರುವಂತದ್ದು . ಒತ್ತಡ ಮತ್ತು ಆತಂಕವು ನಿಮ್ಮ ಕಾರ್ಟಿಸೋಲ್ ಮಟ್ಟವನ್ನು ಹೆಚ್ಚಿಸುತ್ತದೆ, ಇದು ಹಸಿವು ಮತ್ತು ಆಹಾರದ ಕಡುಬಯಕೆಗಳನ್ನು ಹೆಚ್ಚಿಸುತ್ತದೆ. ಆಗ ನಮ್ಮ ಕೈ ಮತ್ತು ಬಾಯಿ ಬೇಡದ ಆಹಾರವನ್ನು ತಿನ್ನಲು ಬಯಸುತ್ತದೆ. ಇದರ ಪರಿಣಾಮವಾಗಿ ತೂಕ ಗಣನೀಯವಾಗಿ ಹೆಚ್ಚುತ್ತದೆ. ಹೀಗಾಗಿ ತೂಕಕ್ಕೆ ಕಾರಣವಾಗುವ ಒತ್ತಡ ಮತ್ತು ಆತಂಕಗಳಿಂದ ಆದಷ್ಟು ದೂರವಿರಬೇಕು.


ತೂಕವನ್ನು ಕಳೆದುಕೊಳ್ಳುವಾಗ ಒತ್ತಡವನ್ನು ಕಡಿಮೆ ಮಾಡಲು ವ್ಯಾಯಾಮ, ಉತ್ತಮ ನಿದ್ರೆ ಸೂಕ್ತ ಮಾರ್ಗವಾಗಿದೆ.


ಭಾರ ಎತ್ತಿ
ಡಯಟ್‌ ಮಾಡದೇ ತೂಕ ಇಳಿಸಿಕೊಳ್ಳಲು ಬಯಸುವವರು ಪ್ರತಿದಿನ ಭಾರವನ್ನು ಎತ್ತುವ ಅಭ್ಯಾಸ ಮಾಡಿಕೊಳ್ಳಬೇಕು. ಭಾರ ಎತ್ತುವುದು ಹೆಚ್ಚಿನ ಕ್ಯಾಲೋರಿಗಳನ್ನು ಕರಗಿಸಲು ಸಹಾಯ ಮಾಡುತ್ತದೆ.


ಇದನ್ನೂ ಓದಿ: Weight Loss Tips: ವ್ಯಾಯಾಮ ಮಾಡೋಕೆ ಟೈಮ್​ ಇಲ್ವಾ? ಈ 3 ಹ್ಯಾಕ್ಸ್​ ಟ್ರೈ ಮಾಡಿ

ವಿಟಮಿನ್ ಡಿ ಮಟ್ಟ ಹೆಚ್ಚಿಸಿ
ವಿವಿಧ ಜೀವಸತ್ವಗಳು ಮತ್ತು ಖನಿಜಗಳು ನಿಮ್ಮ ದೇಹವನ್ನು ನಿಯಂತ್ರಣದಲ್ಲಿಡಲು ಮತ್ತು ತೂಕ ನಷ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ, ಅದರಲ್ಲಿ ಒಂದು ವಿಟಮಿನ್ ಡಿ. ಅನೇಕ ಜನರು ವಿಟಮಿನ್ ಡಿ ಕೊರತೆಯಿಂದ ಬಳಲುತ್ತಿದ್ದಾರೆ, ಇದು ಸಾಮಾನ್ಯವಾಗಿ ಮೆಟಾಬಾಲಿಕ್ ಸಿಂಡ್ರೋಮ್, ಖಿನ್ನತೆ ಮತ್ತು ಆತಂಕಕ್ಕೆ ಕಾರಣವಾಗಬಹುದು, ಇವೆಲ್ಲವೂ ತೂಕ ಹೆಚ್ಚಾಗಲು ಕೊಡುಗೆ ನೀಡುತ್ತವೆ.

Published by:Ashwini Prabhu
First published: