Breakfast Recipe: ಬೆಳಗಿನ ಗಡಿಬಿಡಿಯಲ್ಲಿ ಕೇವಲ 10 ನಿಮಿಷದಲ್ಲಿ ತಯಾರಿಸಿ ಈ ಘಮ ಘಮಿಸುವ ಟೊಮ್ಯಾಟೋ ಬಾತ್

Tomato Bath Recipe: ಇನ್ನು ಕರ್ನಾಟಕದಲ್ಲಿ ಟೊಮ್ಯಾಟೋ ಬಾತ್ ಅನ್ನು ಎರೆಡು ವಿಧದಲ್ಲಿ ತಯಾರಿಸಲಾಗುತ್ತದೆ. ಒಂದು ಮಸಾಲೆಗಳನ್ನು ಅರೆದು ಮಾಡಲಾಗುತ್ತದೆ ಮತ್ತೊಂದು ಹಾಗೆಯೇ ಮಸಾಲೆ ಪುಡಿಗಳನ್ನು ಬಳಸಿ ಮಾಡುತ್ತಾರೆ. ಕೇವಲ 10 ನಿಮಿಷದಲ್ಲಿ ಮಸಾಲೆಗಳನ್ನು ಅರೆದು ರುಚಿ ರುಚಿಯಾದ ಟೊಮ್ಯಾಟೋ ಬಾತ್ ಮಾಡೋದು ಹೇಗೆ ಎಂಬುದು ಇಲ್ಲಿದೆ. 

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಟೊಮ್ಯಾಟೋ ಬಾತ್(Tomato Bath) ಅಥವಾ ಟೊಮ್ಯಾಟೋ ಅನ್ನವನ್ನು ಬೆಳಗಿನ ತಿಂಡಿಗೆ(Breakfast) ಅಥವಾ ಮಧ್ಯಾಹ್ನದ ಊಟಕ್ಕೆ ತಯಾರಿಸಲಾಗುವ ಕರ್ನಾಟಕದ ಒಂದು ಜನಪ್ರಿಯ ಅಡುಗೆಗಳಲ್ಲಿ ಒಂದು. ಇದನ್ನು ಮಕ್ಕಳು ಸಹ ಬಹಳ ಇಷ್ಟಪಡುತ್ತಾರೆ. ಇದೊಂದು ರುಚಿಕರ ಮತ್ತು ಆರೋಗ್ಯವಾದ ಅಡುಗೆಯಾಗಿದ್ದು, ಇದನ್ನು ಯಾವ ಸಮಯದಲ್ಲಿ ಬೇಕಾದರೂ ತಿನ್ನಬಹುದು. ಈ ಟೊಮ್ಯಾಟೋ ಬಾತ್ ಹೆಚ್ಚಿನದಾಗಿ ಬೆಂಗಳೂರು ಮೈಸೂರು(Bengaluru- Mysuru) ಪ್ರದೇಶದಲ್ಲಿ ಮಾಡಲಾಗುತ್ತದೆ. ಅಕ್ಕಿ, ಈರುಳ್ಳಿ, ಟೊಮ್ಯಾಟೋ ಮತ್ತು ಮಸಾಲೆ ಪದಾರ್ಥಗಳನ್ನು ಇದನ್ನು ತಯಾರಿಸಲಾಗುತ್ತದೆ.  

ಇನ್ನು ಕರ್ನಾಟಕದಲ್ಲಿ ಟೊಮ್ಯಾಟೋ ಬಾತ್ ಅನ್ನು ಎರೆಡು ವಿಧದಲ್ಲಿ ತಯಾರಿಸಲಾಗುತ್ತದೆ. ಒಂದು ಮಸಾಲೆಗಳನ್ನು ಅರೆದು ಮಾಡಲಾಗುತ್ತದೆ ಮತ್ತೊಂದು ಹಾಗೆಯೇ ಮಸಾಲೆ ಪುಡಿಗಳನ್ನು ಬಳಸಿ ಮಾಡುತ್ತಾರೆ. ಕೇವಲ 10 ನಿಮಿಷದಲ್ಲಿ ಮಸಾಲೆಗಳನ್ನು ಅರೆದು ರುಚಿ ರುಚಿಯಾದ ಟೊಮ್ಯಾಟೋ ಬಾತ್ ಮಾಡೋದು ಹೇಗೆ ಎಂಬುದು ಇಲ್ಲಿದೆ.

ಬೇಕಾಗುವ ಸಾಮಾಗ್ರಿಗಳು : 

ತುಪ್ಪ 2 ದೊಡ್ಡ ಚಮಚ

ಪುಲಾವ್ ಎಲೆ-  2 ಎಲೆಗಳು

ಚಕ್ಕೆ - 2 ಸಣ್ಣ ತುಂಡುಗಳು

ಲವಂಗ - 4 ತುಂಡುಗಳು

ಏಲಕ್ಕಿ  - 2  ಈರುಳ್ಳಿ  1 ಸಣ್ಣಗೆ ಹೆಚ್ಚಿದ್ದು

ಶುಂಠಿ -ಬೆಳ್ಳುಳ್ಳಿ ಪೇಸ್ಟ್ - ಅರ್ಧ ಚಮಚ

ನೆನೆಸಿದ ಒಣ ಬಟಾಣಿ -ಅರ್ಧ ಕಪ್

ಗೋಡಂಬಿ - 1 ದೊಡ್ಡ ಚಮಚ

ಸೀಳಿದ ಹಸಿ ಮೆಣಸಿನ ಕಾಯಿ - 2

ಟೊಮೇಟೊ - 2 ದೊಡ್ಡದ್ದು

ಅರಶಿನ ಪುಡಿ - ಸ್ವಲ್ಪ

ಉಪ್ಪು -ರುಚಿಗೆ ತಕ್ಕಷ್ಟು

ಇದನ್ನೂ ಓದಿ: ಕೇವಲ 10 ನಿಮಿಷದಲ್ಲಿ ರೆಡಿಯಾಗುತ್ತೆ ಈ ರುಚಿ ರುಚಿಯಾದ ಮಸಾಲ ರೈಸ್ - ಮಾಡೋದು ಹೇಗೆ ? ಇಲ್ಲಿದೆ

ಅಚ್ಚ ಖಾರದ ಪುಡಿ - ಅರ್ಧ ಚಮಚ

ಹೆಚ್ಚಿದ ಪುದಿನ ಎಲೆ - 5 ಎಲೆಗಳು

ಹೆಚ್ಚಿದ ಕೊತ್ತಂಬರಿ ಸೊಪ್ಪು - 3 ದೊಡ್ಡ ಚಮಚ

ನೆನೆಸಿದ ಬಾಸಮತಿ ಅಕ್ಕಿ - 1 ಕಪ್

ನೀರು - 2 ಕಪ್

ಮಾಡುವ ವಿಧಾನ: 

ಒಂದು ಕಪ್ ಬಾಸ್ಮತಿ ಅಕ್ಕಿಯನ್ನು ಕೆಲ ನಿಮಿಷಗಳ ಕಾಲ ತೊಳೆದು ನೀರಿನಲ್ಲಿ ನೆನೆಸಿಡಿ. ನಂತರ ಪ್ರೆಶರ್ ಕುಕ್ಕರ್ನಲ್ಲಿ 2 ಚಮಚ ತುಪ್ಪವನ್ನು ಹಾಕಿ ಬಿಸಿ ಮಾಡಿ ಅದಕ್ಕೆ 2 ಪಲಾವ್ ಎಲೆಗಳು, 2 ಸಣ್ಣ ಚಕ್ಕೆ ತುಂಡುಗಳನ್ನು ಹಾಗೂ 2 ಏಲಕ್ಕಿ ಮತ್ತು 2 ಲವಂಗ ಸೇರಿಸಿ ಹುರಿದುಕೊಳ್ಳಿ. ಅವುಗಳು ಕಂದು ಬಣ್ಣಕ್ಕೆ ತಿರುಗಿ ಪರಿಮಳ ಬರಲು ಆರಂಭಿಸುವ ತನಕ ಹುರಿದು ನಂತರ ಅದಕ್ಕೆ ಸಣ್ಣದಾಗಿ ಹೆಚ್ಚಿಕೊಂಡ ಈರುಳ್ಳಿಗಳನ್ನು ಹಾಕಿ ಚನ್ನಾಗಿ ಮಿಶ್ರಣ ಮಾಡಿ ಹುರಿಯಿರಿ.

ನಂತರ ಅರ್ಥ ಚಮಚ ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಹಸಿ ವಾಸನೆ ಹೋಗುವವರೆಗೂ ಚನ್ನಾಗಿ ಹುರಿಯಬೇಕು. ಹಾಗೆಯೇ ಮೊದಲೇ ಹಾಕಿದ ಈರುಳ್ಳಿ ಸಹ ಚನ್ನಾಗಿ ಬಾಡುವಂತೆ ಹುರಿಯಿರಿ. ಈಗ ಇದಕ್ಕೆ ಅರ್ದ ಕಪ್ ಹಸಿ ಬಟಾಣಿ ಸೇರಿಸಿ. ಇದನ್ನು ಮಾಡುವುದನ್ನ ಮೊದಲೇ ನಿರ್ಧರಿಸಿದ್ದರೆ ರಾತ್ರಿಯಿಡಿ ಬಟಾಣಿ ನೆನೆಸಿ ಬಳಸಬಹುದು.

ಈಗ 2 ಚಮಚ ಗೋಡಂಬಿ ಬೀಜಗಳನ್ನು ಸೇರಿಸಿ, ಮಧ್ಯಮ ಉರಿಯಲ್ಲಿ  ಸುಮಾರು 2 ರಿಂದ 3 ನಿಮಿಷಗಳ ಕಾಲ ಬಟಾಣಿ ಮತ್ತು ಗೋಡಂಬಿಯನ್ನು ಚನ್ನಾಗಿ ಹುರಿಯಿರಿ. ನಂತರ ಹಸಿ ಮೆಣಸಿನ ಕಾಯಿಯನ್ನು ಸೇರಿಸಿ, ಅದಕ್ಕೆ 2 ದೊಡ್ಡ ಟೊಮ್ಯಾಟೊಗಳನ್ನು ಸಣ್ಣಗೆ ಕತ್ತರಿಸಿಕೊಂಡು ಚನ್ನಾಗಿ ಹುರಿಯಿರಿ. ಹಾಗೆಯೇ ಅರ್ಧ ಚಿಟಿಕೆ ಅರಿಶಿನವನ್ನು ಸಹ ಇದಕ್ಕೆ ಸೇರಿಸಬಹುದು.

ಇದಲ್ಲದೆ ಮೆಣಸಿನ ಪುಡಿ, ಉಪ್ಪು, 5 ಕತ್ತರಿಸಿದ ಪುದಿನ ಎಲೆಗಳು, 3 ಚಮಚ ಸಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ 2 ಕಪ್ ನೀರನ್ನು ಹಾಕಿ ಚನ್ನಾಗಿ ಕುದಿಸಿ, ನೀರು ಕುದಿಯಲು ಪ್ರಾರಂಭಿಸಿದ ನಂತರ ಅದಕ್ಕೆ ನೆನಸಿದ ಅಕ್ಕಿಯನ್ನು ಹಾಕಿ ಚನ್ನಾಗಿ ಮಿಶ್ರಣ ಮಾಡಿ.

ಇದನ್ನೂ ಓದಿ: 10 ನಿಮಿಷದಲ್ಲಿ ರೆಡಿಯಾಗುತ್ತೆ ಈ ಗೋಧಿ ದೋಸೆ- ಬೆಳಗಿನ ಗಡಿಬಿಡಿಗೆ ಇದು ಬೆಸ್ಟ್

ಒಂದೆರಡು ವಿಷಲ್ ಬರುವವರೆಗೆ ದೊಡ್ಡ ಉರಿಯಲ್ಲಿ ಬೇಯಿಸಿ. ನಂತರ ಬಿಸಿ ಬಿಸಿಯಾಗಿ ಟೊಮ್ಯಾಟೊ ಮೊಸರು ಗೊಜ್ಜಿನ ಜೊತೆ ಸೇವಿಸಿ.
Published by:Sandhya M
First published: