Breakfast Recipe: ಬೆಳಗಿನ ತಿಂಡಿಗೆ ಟ್ರೈ ಮಾಡಿ ಸೂಪರ್ ಟೇಸ್ಟಿ ಬ್ರೆಡ್ ದೋಸೆ

Bread Dosa: ಎಷ್ಟೆಲ್ಲಾ ವಿಧದ ದೋಸೆ ಮಾಡಬಹುದು ಎಂಬುದು ಏಣಿಸಲು ಸಾಧ್ಯವಿಲ್ಲ. ಹೌದು, ನೀವು ಹೆಚ್ಚು ಮಸಾಲೆ ದೋಸೆ, ಸೆಟ್​ ದೋಸೆ, ಈರುಳ್ಳಿ ದೋಸೆ ಮಾಡುತ್ತೇವೆ. ಆದರೆ ಇನ್ನೂ ಹೆಚ್ಚಿನ ದೋಸೆ ಇದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ದಕ್ಷಿಣ ಭಾರತದ(South Indian) ಭಕ್ಷ್ಯಗಳು (Foods)ವಿಭಿನ್ನ ಪಾಕ ಪದ್ಧತಿಯನ್ನು(Food ) ಹೊಂದಿದ್ದು, ಬೇರೆ ಬೇರೆ ಮಸಾಲೆ ಪದಾರ್ಥಗಳ ಮಿಶ್ರಣವನ್ನು ಬಳಸಿಕೊಂಡು ಮಾಡಲಾಗುತ್ತದೆ. ಆದ್ದರಿಂದ ಭಕ್ಷ್ಯಗಳ ರುಚಿಯೇ (Very Tasty) ಬೇರೆ. ಇಲ್ಲಿ ಅನೇಕ ಭಕ್ಷ್ಯಗಳನ್ನು ತುಂಬಾನೇ ತ್ವರಿತವಾಗಿ ಮತ್ತು ಸುಲಭವಾಗಿ (Quick and Easy) ತಯಾರಿಸಿಕೊಳ್ಳಬಹುದಾಗಿದೆ. ದಕ್ಷಿಣ ಭಾರತದ ಸಂಸ್ಕೃತಿಯಷ್ಟೇ ಶ್ರೀಮಂತವಾಗಿರುವ ಪಾಕ ಪದ್ಧತಿಯು ಪರಿಮಳಯುಕ್ತ ಮತ್ತು ರುಚಿಕರ. ನಾವು ಬೆಳಗಿನ ತಿಂಡಿ ವಿಭಿನ್ನ ವಾಗಿ ಹೇಗೆ ಮಾಡುವುದು ಅಂತ ಯೋಚನೆ ಮಾಡುವುದು ಸಹಜ. ಆದರೆ ಅದಕ್ಕೆ ಉತ್ತರ ನಮ್ಮ ಪಾಕವಿಧಾನದಲ್ಲಿದೆ. ಉದಾಹರಣೆಗೆ ದೋಸೆ. ಎಷ್ಟೆಲ್ಲಾ ವಿಧದ ದೋಸೆ ಮಾಡಬಹುದು ಎಂಬುದು ಏಣಿಸಲು ಸಾಧ್ಯವಿಲ್ಲ. ಹೌದು, ನೀವು ಹೆಚ್ಚು ಮಸಾಲೆ ದೋಸೆ, ಸೆಟ್​ ದೋಸೆ(Set Dosa), ಈರುಳ್ಳಿ ದೋಸೆ(onion Dosa) ಮಾಡುತ್ತೇವೆ. ಆದರೆ ಇನ್ನೂ ಹೆಚ್ಚಿನ ದೋಸೆ ಇದೆ. ದೋಸೆಯಲ್ಲಿ ನಾವು ಯಾವುದೇ ರೀತಿಯ ಹೊಸ ಪ್ರಯತ್ನವನ್ನು ಮಾಡಬಹುದು. ಹಾಗೆಯೇ ನೀವು ಬ್ರೆಡ್ ದೋಸೆ(Bread Dosa) ಟ್ರೈ ಮಾಡಿದ್ದೀರಾ? ಅರೇ ಇದೇನು ಅಂತೀರಾ ಇಲ್ಲಿದೆ ನೋಡಿ.

ಬ್ರೆಡ್ ದೋಸೆಯನ್ನು ತಯಾರು ಮಾಡುವುದು ಹೇಗೆ ಎಂಬುದು ಇಲ್ಲಿದೆ.

ಬ್ರೆಡ್​ ದೋಸೆ ಮಾಡಲು ಬೇಕಾಗುವ ಸಾಮಾಗ್ರಿಗಳು

ಬ್ರೆಡ್ ಸ್ಲೈಸ್ - 10

ರವೆ- 1/2 ಕಪ್

ಮೊಸರು - 1/2 ಕಪ್

ಅಕ್ಕಿ ಹುಡಿ - 1 1/2 ಚಮಚ

ಉಪ್ಪು ರುಚಿಗೆ ತಕ್ಕಷ್ಟು

ಒಗ್ಗರಣೆಗೆ

ಎಣ್ಣೆ - 2 ಚಮಚ

ಜೀರಿಗೆ - 1/4 ನೇ ಚಮಚ

ಸಾಸಿವೆ - 1/2 ಕಪ್

ಉದ್ದಿನ ಬೇಳೆ - 1/2 ಚಮಚ

ಇದನ್ನೂ ಓದಿ: ಸೇಮ್ ಇಡ್ಲಿ ಮಾಡಿ ಬೋರ್ ಆಗಿದ್ರೆ ಮಸಾಲೆ ಗೋಲಿ ಇಡ್ಲಿ ಟ್ರೈ ಮಾಡಿ

ಕರಿಬೇವಿನೆಸಳು - 2-3 (ಸಣ್ಣದಾಗಿ ಹೆಚ್ಚಿದ್ದು)

ಹಸಿಮೆಣಸು - 2 (ಸಣ್ಣದಾಗಿ ಹೆಚ್ಚಿದ್ದು)

ಈರುಳ್ಳಿ - 1 (ಸಣ್ಣದಾಗಿ ಹೆಚ್ಚಿದ್ದು)

ಶುಂಠಿ - 1/2 ಇಂಚು ತುಂಡುಮಾಡಿದ್ದು (ಸಣ್ಣದಾಗಿ ಕತ್ತರಿಸಿದ್ದು)

ಬ್ರೆಡ್ ದೋಸೆ ಮಾಡುವ ವಿಧಾನ

ಬ್ರೆಡ್‌ನ ಕಂದು ಭಾಗವನ್ನು ಕತ್ತರಿಸಿ ತೆಗೆಯಿರಿ, ನಂತರ ನೀರಿನಲ್ಲಿ 2 ನಿಮಿಷಗಳಷ್ಟು ಕಾಲ ಎಲ್ಲಾ ಬ್ರೆಡ್ ತುಂಡುಗಳನ್ನು ನೆನೆಸಿಡಿ, ಜೊತೆಗೆ ರವೆ, ಅಕ್ಕಿ ಹಿಟ್ಟು ಮತ್ತು ನೀರನ್ನು ಸೇರಿಸಿಕೊಂಡು ದಪ್ಪನೆಯ ಹಿಟ್ಟನ್ನು ರೆಡಿ ಮಾಡಿ ಇಟ್ಟುಕೊಳ್ಳಿ. ಸ್ವಲ್ಪ ಸಮಯದ ನಂತರ ನೀರಿನಿಂದ ಬ್ರೆಡ್ ತುಂಡುಗಳನ್ನು ಹೊರತೆಗೆದು ಅವುಗಳನ್ನು ಚೆನ್ನಾಗಿ ಪುಡಿಮಾಡಿಕೊಳ್ಳಿ ಮತ್ತು ಸ್ವಲ್ಪ ಮೆತ್ತಗೆ ಮಾಡಿ.

ಪುಡಿ ಮಾಡಿದ ಬ್ರೆಡ್ ಅನ್ನು ಹಿಟ್ಟಿಗೆ ಸೇರಿಸಿ ಚನ್ನಾಗಿ ಮಿಶ್ರಣ ಮಾಡಿ ಮತ್ತು ಇದಕ್ಕೆ ಮೊಸರನ್ನು  ಸೇರಿಸಿ ಕಲಸಿ. ನಂತರ ಎಲ್ಲಾ ಸಾಮಾಗ್ರಿಗಳನ್ನು ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ. ಇಷ್ಟೆಲ್ಲಾ ಆದ ನಂತರ ಮಿಕ್ಸಿಗೆ ಎಲ್ಲವನ್ನೂ ಹಾಕಿ ರುಬ್ಬಿಕೊಳ್ಳಿ.

ಇನ್ನು ಹಿಟ್ಟನ್ನು ರುಬ್ಬಿಕೊಳ್ಳುವಾಗ  ಅದರಲ್ಲಿ ಯಾವುದೇ ಗಂಟು ಇರಬಾರದು. ಅದು ದೋಸೆ ಹಿಟ್ಟನ್ನು ಹಾಳು ಮಾಡುತ್ತದೆ. ಹಾಗಾಗಿ ಗಂಟು ಇಲ್ಲದಂತೆ ರುಬ್ಬಿಕೊಳ್ಳಿ. .ಈಗ ಸ್ವಚ್ಛವಾದ ಪಾತ್ರೆಗೆ ಹಿಟ್ಟನ್ನು ಹಾಕಿ ಇಟ್ಟುಕೊಳ್ಳಿ.

ನಂತರ ಒಂದು ಬಾಣಲೆಯನ್ನು ತೆಗೆದುಕೊಂಡು ಎಣ್ಣೆಯನ್ನು ಹಾಕಿ ಕಾಯಿಸಿ. ಎಣ್ಣೆ ಕಾದ ನಂತರ ಅದಕ್ಕೆ ಜೀರಿಗೆ, ಸಾಸಿವೆ,ಉದ್ದಿನ ಬೇಳೆ, ಕರಿಬೇವಿನೆಸಳು, ಈರುಳ್ಳಿ, ಶುಂಠಿ ಮತ್ತು ಹಸಿಮೆಣಸನ್ನು ಹಾಕಿ ಬಾಣಲೆಯಲ್ಲಿ ಹುರಿಯಿರಿ. ಹಾಗೆಯೇ ಈರುಳ್ಳಿ ಕಂದು ಬಣ್ಣಕ್ಕೆ ಬರುವ ತನಕ ಫ್ರೈ ಮಾಡಿ. ನಂತರ ಗ್ಯಾಸ್ ಆಫ್ ಮಾಡಿ.

ಈಗ ಒಂದು ತವಾ ತೆಗೆದುಕೊಂಡು ಅದನ್ನು ಬಿಸಿಮಾಡಿ. ತವಾ ಕಾದ ನಂತರ ತವಾಕ್ಕೆ ಎಣ್ಣೆಯನ್ನು ಹಾಕಿ ಮತ್ತು ಸ್ವಚ್ಛ ಬಟ್ಟೆಯಿಂದ ಒರೆಸಿ. ನಂತರ ಒಗ್ಗರಣೆಯನ್ನು ಹಿಟ್ಟಿಗೆ ಹಾಕಿ ಮತ್ತು ಎಲ್ಲವನ್ನೂ ಚನ್ನಾಗಿ ಮಿಶ್ರಣ ಮಾಡಿ.

ಇದನ್ನೂ ಓದಿ: ಪೂರಿಯಷ್ಟೇ ರುಚಿಕರ ಈ ಪತ್ತರಿ - ಮಾಡೋದು ಎಷ್ಟು ಸುಲಭ ನೋಡಿ

ಈಗ ಸೌಟನ್ನು ಬಳಸಿಕೊಂಡು ತವಾದ ಮೇಲೆ ಹಿಟ್ಟನ್ನು ಸುರಿಯಿರಿ. ದೋಸೆಯ ಮಧ್ಯಭಾಗಕ್ಕೆ ಸ್ವಲ್ಪ ಎಣ್ಣೆಯನ್ನು ಹಾಕಿ ನಂತರ 2-3 ನಿಮಿಷಗಳಷ್ಟು ಕಾಲ ಕಾಯಿರಿ. ದೋಸೆ ಚೆನ್ನಾಗಿ ಬೇಯಲಿ. ದೋಸೆಯ ಎರಡೂ ಭಾಗವನ್ನು ಚೆನ್ನಾಗಿ ಬೇಯಿಸಿದರೆ ರುಚಿ ರುಚಿಯಾದ ಬ್ರೆಡ್ ದೋಸೆ ರೆಡಿ.
Published by:Sandhya M
First published: