• Home
  • »
  • News
  • »
  • lifestyle
  • »
  • Weight Loss Tips: ನವರಾತ್ರಿಯಲ್ಲಿ ಉಪವಾಸ ಮಾಡುವವರು ಈ ರೀತಿ ಮಾಡಿದ್ರೆ ದೇಹ ತೂಕ ಇಳಿಸಿಕೊಳ್ಳಬಹುದು..!

Weight Loss Tips: ನವರಾತ್ರಿಯಲ್ಲಿ ಉಪವಾಸ ಮಾಡುವವರು ಈ ರೀತಿ ಮಾಡಿದ್ರೆ ದೇಹ ತೂಕ ಇಳಿಸಿಕೊಳ್ಳಬಹುದು..!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

How to lose weight: ಉಪವಾಸವನ್ನು ನಿರ್ದಿಷ್ಟ ರೀತಿಯಲ್ಲಿ ಅನುಸರಿಸಿದರೆ ತೂಕ ಇಳಿಸುವಲ್ಲಿ ಸಹಾಯ ಮಾಡಬಹುದು. ನವರಾತ್ರಿ ಉಪವಾಸಕ್ಕಾಗಿ ಕೆಲವು ಸಲಹೆಗಳು ಇಲ್ಲಿವೆ, ಅದು ತೂಕ ಇಳಿಸಿಕೊಳ್ಳಲು ಸಹ ಸಹಾಯ ಮಾಡುತ್ತದೆ

  • Share this:

    Dasara - Navaratri Fasting Tips: ನಾಡಹಬ್ಬ ದಸರಾ 9 ದಿನಗಳ ಸಂಭ್ರಮ. ಈ ಬಾರಿ ಹಬ್ಬವು ಅಕ್ಟೋಬರ್ 7ರಂದು ಆರಂಭವಾಗುತ್ತದೆ. ಈ ಹಬ್ಬವನ್ನು ಪ್ರತಿಯೊಬ್ಬರು ಭಕ್ತಿಯಿಂದ ಆಚರಿಸುತ್ತಾರೆ. ಕೆಲವರು ಈ ಹಬ್ಬದಲ್ಲಿ ಉಪವಾಸ ಕೈಗೊಳ್ಳುತ್ತಾರೆ. ಉಪವಾಸವು ದೇಹದ ಡಿಟಾಕ್ಸಿಫಿಕೇಶನ್‍ಗೆ ಸಹಾಯ ಮಾಡುತ್ತದೆ. ಉಪವಾಸದ ಕ್ರಮವು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರಬಹುದು. ಕೆಲವೊಮ್ಮೆ, ಉಪವಾಸ ಮಾಡುವವರು ನೀರನ್ನು ಮಾತ್ರ ತೆಗೆದುಕೊಳ್ಳುತ್ತಾರೆ. ಸಾಮಾನ್ಯವಾಗಿ ಉಪವಾಸದ ಅವಧಿಗೆ ನಿರ್ದಿಷ್ಟ ಆಹಾರವನ್ನು ಸೂಚಿಸಲಾಗುತ್ತದೆ. ಆಹಾರ ಪದಾರ್ಥಗಳು ಸಾಮಾನ್ಯವಾಗಿ ಸರಳವಾಗಿದ್ದರೂ ದೇಹದ ಮೂಲ ಪೋಷಕಾಂಶಗಳಿಂದ ಸಮೃದ್ಧವಾಗಿರಬೇಕು. ಉಪವಾಸವನ್ನು ನಿರ್ದಿಷ್ಟ ರೀತಿಯಲ್ಲಿ ಅನುಸರಿಸಿದರೆ ತೂಕ ಇಳಿಸುವಲ್ಲಿ ಸಹಾಯ ಮಾಡಬಹುದು. ನವರಾತ್ರಿ ಉಪವಾಸಕ್ಕಾಗಿ ಕೆಲವು ಸಲಹೆಗಳು ಇಲ್ಲಿವೆ, ಅದು ತೂಕ ಇಳಿಸಿಕೊಳ್ಳಲು ಸಹ ಸಹಾಯ ಮಾಡುತ್ತದೆ. Below are the diet tips to follow during Dasara festive season.


    1. ತರಕಾರಿ (Go Vegan):
    ದಸರಾ ಅವಧಿಯಲ್ಲಿ ಉಪವಾಸ ಕೈಗೊಳ್ಳುವವರು ಆಹಾರದಲ್ಲಿ ತರಕಾರಿ ಯಥೇಚ್ಛವಾಗಿರುವಂತೆ ನೋಡಿಕೊಳ್ಳಿ. ತರಕಾರಿಗಳು ಉಪವಾಸದ ಅವಧಿಯುದ್ದಕ್ಕೂ ದೇಹವನ್ನು ಪುನಶ್ಚೇತನಗೊಳಿಸುವ ಬಹಳಷ್ಟು ಪೋಷಕಾಂಶಗಳನ್ನು ಒಳಗೊಂಡಿವೆ. ಇದು ನಮಗೆ ಹೊಟ್ಟೆ ತುಂಬಿದ ಅನುಭವ ನೀಡುತ್ತದೆ ಮತ್ತು ಹಸಿ ತರಕಾರಿ ತಿನ್ನಲು ಸಾಧ್ಯವಾಗದಿದ್ರೆ ತರಕಾರಿಗಳೊಂದಿಗೆ ಸಲಾಡ್ ಅಥವಾ ಸೂಪ್ ತಯಾರಿಸಿ ಕುಡಿಯಬಹುದು.


    2. ಊಟ ಸ್ವಲ್ಪ ಸ್ವಲ್ಪವೇ ಇರಲಿ (Follow strict diet):
    ನವರಾತ್ರಿಯ ಸಮಯದಲ್ಲಿ ಮಧ್ಯಂತರ ಉಪವಾಸ ಅನುಸರಿಸುತ್ತಿದ್ದರೆ ನಿಮ್ಮ ಊಟ ಸ್ವಲ್ಪ ಪ್ರಮಾಣದಲ್ಲಿರಲಿ. ಪದೇ ಪದೇ ಮಧ್ಯಂತರದ ನಂತರ ಪೌಷ್ಠಿಕಾಂಶವುಳ್ಳ ಊಟವು ತೂಕ ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ಈ ರೀತಿಯಾಗಿ, ಉಪವಾಸದ ಸಮಯದಲ್ಲಿಯೂ ನೀವು ದಿನವಿಡೀ ಪೌಷ್ಟಿಕತೆ ಉಳಿಸಿಕೊಳ್ಳಬಹುದು ಮತ್ತು ಇದು ನಿಮಗೆ ಸುಸ್ಥಿರ ರೀತಿಯಲ್ಲಿ ತೂಕ ಇಳಿಸಲು ಸಹಾಯ ಮಾಡುತ್ತದೆ.


    ಇದನ್ನೂ ಓದಿ: Idli Tikki Recipe: ನಾರ್ಮಲ್ ಇಡ್ಲಿ ತಿಂದು ಬೋರಾಗಿದ್ಯಾ? ಮಿಕ್ಕ ಇಡ್ಲಿಯಿಂದ ಡಿಫರೆಂಟ್​ ಆಗಿ ‘ಇಡ್ಲಿ ಟಿಕ್ಕಿ‘ ಮಾಡಿ ನೋಡಿ..!


    3. ಕಡಿಮೆ ಕೊಬ್ಬಿನ ಆಹಾರಗಳಿಗೆ ಆದ್ಯತೆಯಿರಲಿ (Don't eat foods with fat):
    ಈ ವೇಳೆ ಕೆನೆಭರಿತ ಹಾಲು, ಚೀಸ್ ಈ ರೀತಿಯ ಹೆಚ್ಚು ಕೊಬ್ಬಿನಾಂಶ ಆಹಾರಗಳಿಂದ ದೂರ ಇರಿ. ಇದರ ಬದಲು ಬಾದಾಮಿ ಹಾಲು ಅಥವಾ ತೆಂಗಿನ ಕಾಯಿ ಹಾಲನ್ನು ಕುಡಿಯಿರಿ. ಇವು ನಿಮ್ಮ ದೇಹದಲ್ಲಿ ಅನವಶ್ಯಕವಾಗಿ ಕೊಬ್ಬು ಶೇಖರಣೆಯಾಗುವುದನ್ನು ತಡೆಯುತ್ತದೆ.


    4. ನೀರು ಕುಡಿಯಿರಿ (Drink more water):
    ನೀರು ನಿಮ್ಮ ದೇಹವನ್ನು ಸದಾ ತೇವಾಂಶಭರಿತವಾಗಿ ಇರಿಸಲು ಸಹಾಯ ಮಾಡುತ್ತದೆ. ಸೆಲ್ಯೂಲರ್ ಹಂತದಲ್ಲಿ ದೇಹವನ್ನು ನೀರು ಮರುಪೂರ್ಣಗೊಳಿಸಲು ಮತ್ತು ನಮ್ಮ ದೇಹದಿಂದ ಆಮ್ಲೀಯ ಅಂಶಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ. ಇದು ತೂಕ ನಷ್ಟಕ್ಕೂ ಕಾರಣವಾಗುತ್ತದೆ. ದೇಹ ಹೈಡ್ರೇಟ್ ಮಾಡಲು ಮತ್ತು ಉತ್ತಮ ರೀತಿಯಲ್ಲಿ ಸ್ವಚ್ಛಗೊಳಿಸಲು ಬೆಚ್ಚಗಿನ ನೀರನ್ನು ಕುಡಿಯಿರಿ.


    ಇದನ್ನೂ ಓದಿ: Health Tips: ಗರ್ಭಿಣಿಯರು ಈ ಹಣ್ಣುಗಳನ್ನು ಸೇವಿಸಬಾರದು: ಗರ್ಭಪಾತ ಆದೀತು ಜೋಕೆ..!


    5. ವ್ಯಾಯಾಮ ಮಾಡಿ (Exercise well):
    ದೀರ್ಘಕಾಲದವರೆಗೆ ದೇಹವನ್ನು ಸ್ಥಿರ ಸ್ಥಿತಿಯಲ್ಲಿಡುವುದರಿಂದ ದೇಹದಲ್ಲಿ ಕೊಬ್ಬು ಶೇಖರಣೆಗೆ ಕಾರಣವಾಗಬಹುದು. ಆದ್ದರಿಂದ, ತೂಕ ಇಳಿಸಿಕೊಳ್ಳಲು, ನಿಯಮಿತವಾದ ವ್ಯಾಯಾಮ ಮತ್ತು ದೈಹಿಕ ಚಟುವಟಿಕೆ ಮುಖ್ಯ. ಚಟುವಟಿಕೆಗಳು ಕೊಬ್ಬಿನ ಶೇಖರಣೆ ನಾಶ ಮಾಡಲು ಸಹಾಯ ಮಾಡುತ್ತದೆ ಮತ್ತು ದೇಹದಲ್ಲಿ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ. ಇದು ದೇಹದಲ್ಲಿ ಉತ್ತಮ ಚಯಾಪಚಯ ಚಟುವಟಿಕೆಗೆ ಕಾರಣವಾಗಬಹುದು. ಈ ಅಂಶವು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.

    Published by:Sharath Sharma Kalagaru
    First published: