ಹೆಚ್ಚು ವರ್ಷ ಬದುಕಬೇಕೇ?: ಅದರಲ್ಲೂ ನೀವು ಮದ್ಯಪಾನಿಗಳಾಗಿದ್ದರೆ ಈ ಸ್ಟೋರಿ ಓದಿ

news18
Updated:October 8, 2018, 12:50 PM IST
ಹೆಚ್ಚು ವರ್ಷ ಬದುಕಬೇಕೇ?: ಅದರಲ್ಲೂ ನೀವು ಮದ್ಯಪಾನಿಗಳಾಗಿದ್ದರೆ ಈ ಸ್ಟೋರಿ ಓದಿ
ಪ್ರಾತಿನಿಧಿಕ ಚಿತ್ರ
  • News18
  • Last Updated: October 8, 2018, 12:50 PM IST
  • Share this:
-ನ್ಯೂಸ್ 18 ಕನ್ನಡ

ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ 100 ವರ್ಷ ಸುಖವಾಗಿ ಬಾಳಬೇಕೆಂಬ ಆಸೆಯಿರುತ್ತದೆ. ಹೀಗಾಗಿಯೇ ನಮ್ಮ ಸಮಾಜದಲ್ಲಿ ಹಿರಿಯರು ಆಶೀರ್ವದಿಸುವಾಗ ನೂರು ವರ್ಷ ಚೆನ್ನಾಗಿ ಬಾಳಿ ಎಂದು ಹಾರೈಸುತ್ತಾರೆ. ಆದರೆ ಇತ್ತೀಚಿನ ಜೀವನ ಶೈಲಿಯಲ್ಲಿ ನೂರು ವರ್ಷ ಆರೋಗ್ಯವಾಗಿರುವುದು ದೂರದ ಮಾತು. ಆದರೂ ಒಂದಷ್ಟು ಹೆಚ್ಚು ವರ್ಷ ಬದುಕಲು ಏನು ಮಾಡಬೇಕೆಂದು  ಸಂಶೋಧಕರು ಕಂಡು ಹಿಡಿದಿದ್ದಾರೆ. ಇದಕ್ಕಾಗಿ ಮಾಡಬೇಕಾದ ಮೊದಲ ಕೆಲಸವೆಂದರೆ ಆಲ್ಕೋಹಾಲ್​ನಿಂದ ದೂರವಿರುವುದು.

ಹೌದು,ಪ್ರತಿನಿತ್ಯ ಒಂದು ಗ್ಲಾಸ್​ ವೈನ್ ಸೇವಿಸಿದರೂ ಸಾವಿನ ಕದ ತಟ್ಟುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಹೊಸ ಅಧ್ಯಯನದಿಂದ ತಿಳಿದು ಬಂದಿದೆ. ದಿನನಿತ್ಯ ವೈನ್​ ಸೇವಿಸುವವರಲ್ಲಿ ಶೇ.20ರಷ್ಟು ಬೇಗ ಸಾವು ಸಂಭವಿಸುವ ಸಾಧ್ಯತೆಯಿದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಅಮೆರಿಕದ ಮೆಡಿಸಿನ್ ವಾಷಿಂಗ್ಟನ್​ ಯೂನಿವರ್ಸಿಟಿ ಸ್ಕೂಲ್ ಆಫ್ ಮೆಡಿಸಿನ್ ಸಂಶೋಧಕರು ಈ ಹೊಸ ಸಂಶೋಧನೆ ನಡೆಸಿದ್ದು, ದಿನನಿತ್ಯ ವೈನ್​ ಕುಡಿಯುವುದರಿಂದ ಹೃದ್ರೋಗ, ಮಧುಮೇಹ ಮತ್ತು ಕ್ಯಾನ್ಸರ್ ಸೇರಿದಂತೆ ಹಲವು ರೋಗಗಳ ಅಪಾಯವನ್ನು ಹೆಚ್ಚಾಗುವ ಸಾಧ್ಯತೆ ಕೂಡ ಇದೆ ಎಂದು ತಿಳಿಸಿದ್ದಾರೆ.

ಈ ಹಿಂದೆ ಮದ್ಯಪ್ರಿಯರು ದಿನಕ್ಕೆ ಒಂದು ಅಥವಾ ಎರಡು ಪೆಗ್​​ಗಳನ್ನು ತೆಗೆದುಕೊಂಡರೆ ಯಾವುದೇ ತೊಂದರೆಯಿಲ್ಲ ಎಂದು ಕೆಲ ಅಧ್ಯಯನಗಳು ತಿಳಿಸಿದ್ದವು. ಆದರೆ ಈಗ ಪ್ರತಿನಿತ್ಯ ಒಂದು ಗ್ಲಾಸ್ ಕುಡಿದರೂ ಮರಣದ ಅಪಾಯವಿರುವುದು ತಿಳಿದು ಬಂದಿದೆ ಎಂದು ಮನೋವೈದ್ಯಶಾಸ್ತ್ರ ಲೇಖಕ ಸಾರಾ ಎಂ.ಹಾರ್ಟ್ಜ್​ ಹೇಳಿದ್ದಾರೆ.

ಹಾಗೆಯೇ ವಾರದ ನಾಲ್ಕು ದಿನಗಳಲ್ಲಿ ಒಂದು ಅಥವಾ ಎರಡು ಡ್ರಿಂಕ್ಸ್​ ಸೇವಿಸಿದರೆ ಹೃದಯರಕ್ತನಾಳದ ಖಾಯಿಲೆಯನ್ನು ದೂರ ಮಾಡಬಹುದು ಹೇಳಲಾಗಿದೆ. ಆದರೆ ಪ್ರತಿನಿತ್ಯ ಇದರ ಅಳತೆ ಮೀರಿದರೆ ಕ್ಯಾನ್ಸರ್ ಸೇರಿದಂತೆ ಹಲವು ರೋಗಗಳ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಅವರು ತಿಳಿಸಿದ್ದಾರೆ.

ಇದನ್ನು ಓದಿ: ಈ ಜಾಕೆಟ್ ಧರಿಸಿದರೆ ನೀವೂ ಕೂಡ 'ಐರನ್ ಮ್ಯಾನ್'​ನಂತೆ ಹಾರಬಹುದು

18-85 ವಯಸ್ಸಿನ 340,668 ಮಂದಿಯನ್ನು ಈ ಸಂಶೋಧನೆಗಾಗಿ ಬಳಸಿಕೊಳ್ಳಲಾಗಿತ್ತು.  ಅಲ್ಲದೆ 40-60 ವಯಸ್ಸಿನ ಅಂತರದ 93,653 ವ್ಯಕ್ತಿಗಳನ್ನು ಈ ಅಧ್ಯಯನಕ್ಕಾಗಿ ಪ್ರತ್ಯೇಕ ಪರೀಕ್ಷಿಸಲಾಗಿತ್ತು. ಈ ವೇಳೆ ಹಿರಿಯರು ಈಗಾಗಲೇ ಸಾವಿನ ಅಪಾಯದಲ್ಲಿರುವುದು ಕಂಡು ಬಂದಿದ್ದು, ಮತ್ತಷ್ಟು ಮಂದಿ 20ರ ದಶಕದಲ್ಲಿ ಸಾವನ್ನು ಎದುರಿಸಲಿದ್ದಾರೆ. ಹಾಗೆಯೇ ಪ್ರತಿನಿತ್ಯ ಕುಡಿಯುವವರಲ್ಲಿ ಶೇ.20ರಷ್ಟು ಮುಂಚಿತವಾಗಿ ಸಾವು ಎದುರಾಗುವ ಸಾಧ್ಯತೆಯಿದೆ ಎಂಬುದು ಸಾಬೀತಾಗಿದೆ. ಆಲ್ಕೋಹಾಲ್ ಸೇವನೆಯ ನಿರ್ದಿಷ್ಟ ಮಟ್ಟದ ಕುರಿತಾದ ಇತ್ತೀಚಿನ ಅಧ್ಯಯನವನ್ನು ಕೇಂದ್ರೀಕರಿಸಿ ಈ ಹೊಸ ಅಧ್ಯಯನ ನಡೆಸಲಾಗಿದೆ ಎಂದು ಸಂಶೋಧಕ ಹಾರ್ಟ್ಜ್​ ತಿಳಿಸಿದ್ದಾರೆ.
First published:October 8, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading