Sleeping Problem: ಸರಿಯಾಗಿ ನಿದ್ರೆ ಬರ್ತಿಲ್ವ? ಹಾಗಾದ್ರೆ ಮಲಗುವ ಮುನ್ನ ಇವುಗಳನ್ನು ತಿನ್ನಿ

Health Care: ಎಷ್ಟೋ ಜನರಿಗೆ ರಾತ್ರಿ ನಿದ್ರೆಗೆ ಜಾರಲು ತುಂಬಾನೇ ಸಮಯ ತೆಗೆದುಕೊಳ್ಳುತ್ತದೆ. ಅದೇ ಕೆಲವರಿಗೆ ಹಾಸಿಗೆ ಮೇಲೆ ಕಾಲು ಚಾಚಿದರೆ ಸಾಕು ನಿದ್ರೆ ಬಂದೇ ಬಿಡುತ್ತದೆ. ವಿಶೇಷವಾಗಿ ನಿದ್ರೆಯ ಸಮಸ್ಯೆಗಳೊಂದಿಗೆ ಹೋರಾಡುವವರಿಗೆ ಇದು ತುಂಬಾನೇ ಪ್ರಯಾಸಕರ ಕೆಲಸವಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ದಿನವಿಡೀ ತುಂಬಾನೇ ಕೆಲಸ (Work) ಮಾಡಿ ಸುಸ್ತಾದರೆ, ರಾತ್ರಿ ನಾವು ಹಾಸಿಗೆಯ (Bed)  ಮೇಲೆ ಮಲಗಲು ಹೋದ ಕೆಲವೇ ನಿಮಿಷಗಳಲ್ಲಿಯೇ ನಮಗೆ ನಿದ್ರೆ (Sleep)  ಬರುತ್ತದೆ. ಅದೇ ನಾವು ದಿನವಿಡೀ ತುಂಬಾ ಬಿಡುವಿನ ಸಮಯವನ್ನು ಹೊಂದಿದ್ದು, ಮಧ್ಯೆ ಮಧ್ಯೆ ಸ್ವಲ್ಪ ಸಮಯ ವಿಶ್ರಾಂತಿ ತೆಗೆದುಕೊಂಡಿದ್ದರೆ, ರಾತ್ರಿ ಮಲಗಲು (Night Sleep)  ಹಾಸಿಗೆಗೆ ಹೋದರೂ ಸಹ ಎಷ್ಟೋ ಹೊತ್ತಿನವರೆಗೆ ನಿದ್ರೆ ಬರುವುದೇ ಇಲ್ಲ. ಅದರಲ್ಲೂ ಮಧ್ಯಾಹ್ನದ ಹೊತ್ತಿನಲ್ಲಿ ಮಲಗಿದರಂತೂ ಮುಗಿದೇ ಹೋಯ್ತು, ರಾತ್ರಿ ನಿದ್ರೆ ಬರುವುದು ತುಂಬಾನೇ ಕಷ್ಟ.

ಎಷ್ಟೋ ಜನರಿಗೆ ರಾತ್ರಿ ನಿದ್ರೆಗೆ ಜಾರಲು ತುಂಬಾನೇ ಸಮಯ ತೆಗೆದುಕೊಳ್ಳುತ್ತದೆ. ಅದೇ ಕೆಲವರಿಗೆ ಹಾಸಿಗೆ ಮೇಲೆ ಕಾಲು ಚಾಚಿದರೆ ಸಾಕು ನಿದ್ರೆ ಬಂದೇ ಬಿಡುತ್ತದೆ. ವಿಶೇಷವಾಗಿ ನಿದ್ರೆಯ ಸಮಸ್ಯೆಗಳೊಂದಿಗೆ ಹೋರಾಡುವವರಿಗೆ ಇದು ತುಂಬಾನೇ ಪ್ರಯಾಸಕರ ಕೆಲಸವಾಗಿದೆ. ಆತಂಕ, ಖಿನ್ನತೆ, ಕೆಲಸದ ಒತ್ತಡ ಹೀಗೆ ಅನೇಕ ವಿಷಯಗಳು ರಾತ್ರಿ ಸಮಯದಲ್ಲಿ ನಮ್ಮ ನಿದ್ರೆಯ ಗುಣಮಟ್ಟದ ಮೇಲೆ ಪರಿಣಾಮ ಬೀರುವುದನ್ನು ನಾವು ನೋಡುತ್ತೇವೆ. ಪೌಷ್ಟಿಕ ತಜ್ಞೆ ಕನಿಕಾ ಮಲ್ಹೋತ್ರಾ ಅವರು ಹಾಸಿಗೆಗೆ ಹೋದ ತಕ್ಷಣವೇ ನಿದ್ರೆಗೆ ಜಾರುವಂತೆ ಮಾಡುವ ಕೆಲವು ಆಹಾರ ಪದಾರ್ಥಗಳನ್ನು ಸೂಚಿಸಿದ್ದಾರೆ ನೋಡಿ.

"ನಿಮ್ಮ ನಿದ್ರೆ ಮಾಡುವ ಕೋಣೆಯ ವಾತಾವರಣ ಮತ್ತು ದೈನಂದಿನ ದಿನಚರಿ ಇವೆರಡೂ ನಿಮ್ಮ ನಿದ್ರೆಯ ಮೇಲೆ ಪರಿಣಾಮ ಬೀರುತ್ತವೆ ಎಂದು ಹೇಳಬಹುದು. ಉತ್ತಮ ನಿದ್ರೆ ಪ್ರತಿಯೊಬ್ಬರ ಯೋಗಕ್ಷೇಮವನ್ನು ಸರಿಯಾದ ರೀತಿಯಲ್ಲಿ ಕಾಪಾಡುತ್ತದೆ. ಕೆಲವು ಆಹಾರಗಳು ಮತ್ತು ಪಾನೀಯಗಳು ನಿದ್ರೆಯನ್ನು ಉತ್ತೇಜಿಸುವ ಗುಣಲಕ್ಷಣಗಳನ್ನು ಹೊಂದಿರುವುದರಿಂದ, ಉತ್ತಮ ನಿದ್ರೆಯನ್ನು ಉತ್ತೇಜಿಸಲು ನೀವು ನಿಮ್ಮ ಆಹಾರದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವುದು ಒಳ್ಳೆಯದು" ಎಂದು ಪೌಷ್ಟಿಕ ತಜ್ಞೆ ಕನಿಕಾ ಮಲ್ಹೋತ್ರಾ ಅವರು ಹೇಳುತ್ತಾರೆ.

"ನೀವು ರಾತ್ರಿ ಹೊತ್ತಿನಲ್ಲಿ ಯಾವ ರೀತಿಯ ಆಹಾರ ಸೇವಿಸುತ್ತಿದ್ದೀರಿ ಎಂಬುದು ತುಂಬಾನೇ ಮುಖ್ಯವಾಗುತ್ತದೆ. ರಾತ್ರಿ ಹೊತ್ತಿನಲ್ಲಿ ನೀವು ಮಾಡುವ ಊಟವು ನೀವು ನಿದ್ರೆಗೆ ಹೋಗುವ ಎರಡರಿಂದ ಮೂರು ಗಂಟೆಗಳ ಕಾಲ ಮೊದಲು ಆಗಬೇಕು" ಎಂದು ಪೌಷ್ಟಿಕ ತಜ್ಞೆ ಹೇಳುತ್ತಾರೆ.

ಇದನ್ನೂ ಓದಿ: ಜಯನಗರದ ಬೆಸ್ಟ್​ ಬಫೆಟ್​ ರೆಸ್ಟೊರೆಂಟ್​ಗಳಿವು - ಆ ಕಡೆ ಹೋದ್ರೆ ಮಿಸ್​ ಮಾಡ್ದೇ ಹೋಗಿ

1. ಮಖಾನಾ: ಪ್ರತಿದಿನ ಮಲಗುವ ಸಮಯದಲ್ಲಿ ಒಂದು ಲೋಟ ಹಾಲಿನಲ್ಲಿ ಕುದಿಸಿದ ಮಖಾನಾವನ್ನು ಹಾಕಿಕೊಂಡು ಸೇವಿಸುವುದರಿಂದ ನಿದ್ರೆಯ ವಿಧಾನವನ್ನು ಸುಧಾರಿಸಲು ಮತ್ತು ನಿದ್ರೆಯ ಅಸ್ವಸ್ಥತೆಯನ್ನು ಸರಿಪಡಿಸಲು ಸಹಾಯ ಮಾಡುತ್ತದೆ. ಇದು ನರ-ಪ್ರಚೋದಕ ಗುಣಲಕ್ಷಣಗಳನ್ನು ಹೊಂದಿದೆ, ಇದು ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುವ ಮೂಲಕ ನಿದ್ರೆಯನ್ನು ಪ್ರಚೋದಿಸಲು ಸಹಾಯ ಮಾಡುತ್ತದೆ.

2. ಬಾದಾಮಿ: ಬಾದಾಮಿ ನಿದ್ರೆಯ ಗುಣಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಏಕೆಂದರೆ ಬಾದಾಮಿ ಮೆಲಟೋನಿನ್ ಹಾರ್ಮೋನಿನ ಮೂಲವಾಗಿದೆ. ಮೆಲಟೋನಿನ್ ನಿಮ್ಮ ನಿದ್ರೆಯ ಚಕ್ರವನ್ನು ನಿಯಂತ್ರಿಸುತ್ತದೆ ಮತ್ತು ಉತ್ತಮ ನಿದ್ರೆಗೆ ತಯಾರಾಗಲು ನಿಮ್ಮ ದೇಹವನ್ನು ಸಂಕೇತಿಸುತ್ತದೆ.

3. ಕ್ಯಾಮೊಮೈಲ್ ಮತ್ತು ಮಲ್ಲಿಗೆ ಚಹಾ: ಕ್ಯಾಮೊಮೈಲ್ ಅಥವಾ ಮಲ್ಲಿಗೆ ಚಹಾವನ್ನು ಕುಡಿಯುವುದರಿಂದ ನಿಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು, ಆತಂಕ ಮತ್ತು ಖಿನ್ನತೆಯನ್ನು ಕಡಿಮೆ ಮಾಡಬಹುದು ಮತ್ತು ಚರ್ಮದ ಆರೋಗ್ಯವನ್ನು ಸುಧಾರಿಸಬಹುದು. ಇದಲ್ಲದೆ, ಕ್ಯಾಮೊಮೈಲ್ ಚಹಾವು ನಿದ್ರೆಯ ಗುಣಮಟ್ಟವನ್ನು ಸುಧಾರಿಸುವ ಕೆಲವು ವಿಶಿಷ್ಟ ಗುಣಲಕ್ಷಣಗಳನ್ನು ಸಹ ಹೊಂದಿದೆ.

ಇದನ್ನೂ ಓದಿ: ಕರೋನ ವೈರಸ್ ಮಧ್ಯೆ ಮಕ್ಕಳಲ್ಲಿ ಮತ್ತೊಂದು ನಿಗೂಢ ಕಾಯಿಲೆ

4. ಡಾರ್ಕ್ ಚಾಕೊಲೇಟ್: ಡಾರ್ಕ್ ಚಾಕೊಲೇಟ್‌ಗಳು ಅತ್ಯುತ್ತಮ ನಿದ್ರೆಯನ್ನು ಪ್ರಚೋದಿಸುವ ಆಹಾರಗಳಲ್ಲಿ ಒಂದಾಗಿದೆ. ನೀವು ಮಲಗುವ ಮುಂಚೆ ಡಾರ್ಕ್ ಚಾಕೊಲೇಟ್‌ಗಳನ್ನು ಸೇವಿಸುವುದು ಒಳ್ಳೆಯದು, ಏಕೆಂದರೆ ಇದು ಸೆರೊಟೋನಿನ್ ಅನ್ನು ಹೊಂದಿರುತ್ತವೆ, ಇದು ನಿಮ್ಮ ಮನಸ್ಸು ಮತ್ತು ನರವ್ಯೂಹವನ್ನು ಸಂಪೂರ್ಣವಾಗಿ ಶಾಂತಗೊಳಿಸುತ್ತದೆ ಮತ್ತು ಮಗುವಿನಂತೆ ನಿದ್ರೆ ಮಾಡಲು ನಿಮಗೆ ಸಹಾಯ ಮಾಡುತ್ತದೆ.
Published by:Sandhya M
First published: