Weight Gain Tips: ದೇಹದ ತೂಕ ಹೆಚ್ಚಿಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದೀರಾ? ಹಾಗಾದ್ರೆ ಈ ಆಹಾರಗಳನ್ನು ಟ್ರೈ ಮಾಡಿ

Muscle: ಆರೋಗ್ಯಯುತವಾಗಿ, ಯಾವುದೇ ಬೊಜ್ಜು ಹೆಚ್ಚಿಸಿಕೊಳ್ಳದೆ ದೇಹದ ತೂಕ ಹೆಚ್ಚು ಮಾಡುವುದು ಸುಲಭವಲ್ಲ.  

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಸಾಮಾನ್ಯವಾಗಿ ತೂಕವನ್ನು ಇಳಿಸಿಕೊಳ್ಳಲು ಜನರು ಶತಪ್ರಯತ್ನಗಳನ್ನು ಮಾಡುತ್ತಾರೆ, ಆದರೆ ಕೆಲವರು ತೂಕವನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನ ಮಾಡುತ್ತಾರೆ. ತೂಕ ಇಳಿಸುವ ಹಾಗೆಯೇ ತೂಕ ಹೆಚ್ಚಿಸಿಕೊಳ್ಳುವುದು ಮತ್ತು ಸ್ನಾಯುಬಲವನ್ನು ಹೆಚ್ಚಿಸುವುದು ಬಹಳ ಕಷ್ಟಕರವಾದ ವಿಚಾರ. ದೇಹದ ತೂಕ ಹೆಚ್ಚಿಸುವುದು ಬಹಳ ಸುಲಭ ಎಂದು ಅನಿಸಬಹುದು, ಆದರೆ ಆರೋಗ್ಯಯುತವಾಗಿ, ಯಾವುದೇ ಬೊಜ್ಜು ಹೆಚ್ಚಿಸಿಕೊಳ್ಳದೆ ದೇಹದ ತೂಕ ಹೆಚ್ಚು ಮಾಡುವುದು ಸುಲಭವಲ್ಲ.  ಆದರೆ ನಿಮ್ಮ ದೈನಂದಿನ ಆಹಾರ ಕ್ರಮದಲ್ಲಿ  ಕೆಲವು ಆಹಾರ ಪದಾರ್ಥಗಳನ್ನು ಸೇರಿಸುವ ಮೂಲಕ, ನೀವು ಆರೋಗ್ಯಕರ ರೀತಿಯಲ್ಲಿ ಪರಿಣಾಮಕಾರಿಯಾಗಿ ತೂಕವನ್ನು ಹೆಚ್ಚು ಮಾಡಿಕೊಳ್ಳಬಹುದು.

ನಿಮಗೆ ತೂಕ ಹೆಚ್ಚಿಸಲು ಸಹಾಯ ಮಾಡುವ ಆಹಾರಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ.

ಮನೆಯಲ್ಲಿ ತಯಾರಿಸಿದ ಪ್ರೋಟೀನ್ ಸ್ಮೂಥಿಗಳು: ಮನೆಯಲ್ಲಿ ತಯಾರಿಸಿದ ಪ್ರೋಟೀನ್ ಸ್ಮೂಥಿಗಳನ್ನು ಸೇವನೆ ಮಾಡುವುದು  ತೂಕವನ್ನು ಪರಿಣಾಮಕಾರಿಯಾಗಿ  ಹೆಚ್ಚಿಸಲು ಆರಾಮದಾಯಕ ಮಾರ್ಗ ಎನ್ನಬಹುದು. ಸ್ಮೂಥಿಗಳು ಸುಮಾರು 600 ಕ್ಯಾಲೊರಿಗಳನ್ನು ಹೆಚ್ಚಿನ ಪ್ರಮಾಣದ ಪ್ರೋಟೀನ್, ಖನಿಜಗಳು ಮತ್ತು ವಿಟಮಿನ್‌ಗಳನ್ನು  ನೀಡುವುದರಿಂದ ಯಾವುದೇ ಅಡ್ಡಪರಿಣಾಮವಿಲ್ಲದೆ ದೇಹದ ತೂಕ ಹೆಚ್ಚಿಸಿಕೊಳ್ಳಬಹುದು.

ಅಕ್ಕಿ: ಅಕ್ಕಿ ಬೇಯಿಸುವುದು ಸುಲಭ, ಜೀರ್ಣ ಕೂಡ ಸುಲಭವಾಗಿ ಆಗುತ್ತದೆ.  ಅಲ್ಲದೇ, ಇದು ಕಡಿಮೆ ತೂಕದ ಕಾರ್ಬ್ಗಳನ್ನು ಹೊಂದಿದ್ದು, ನಿಮಗೆ ತೂಕ ಹೆಚ್ಚಿಸಲು ಸಹಾಯ ಮಾಡುತ್ತದೆ. ಸುಮಾರು 158 ಗ್ರಾಂ ಬೇಯಿಸಿದ ಬಿಳಿ ಅಕ್ಕಿಯು 44 ಗ್ರಾಂ ಕಾರ್ಬೋಹೈಡ್ರೇಟ್‌ಗಳ ಜೊತೆಗೆ 204 ಕ್ಯಾಲೊರಿಗಳನ್ನು ದೇಹಕ್ಕೆ ಒದಗಿಸುತ್ತದೆ.

ಡ್ರೈ ಫ್ರೂಟ್ಸ್  ಮತ್ತು ಬೆಣ್ಣೆ: ಸುಮಾರು 1/4 ಕಪ್ ಬಾದಾಮಿಯಲ್ಲಿ 170 ಕ್ಯಾಲೋರಿಗಳು, 6 ಗ್ರಾಂ ಪ್ರೋಟೀನ್, 4 ಗ್ರಾಂ ಫೈಬರ್ ಮತ್ತು 15 ಗ್ರಾಂ ಆರೋಗ್ಯಕರ ಕೊಬ್ಬುಗಳಿವೆ.  ಈ ಅಂಶಗಳು ನೀವು ತೂಕವನ್ನು ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ. ಹಾಗು ನಿಯಮಿತವಾಗಿ ಬೆಣ್ಣೆಯ ಸೇವನೆ ಮಾಡುವುದು  ತೂಕ ಹೆಚ್ಚಿಸುವಲ್ಲಿ  ಪ್ರಮುಖ ಪಾತ್ರ ವಹಿಸುತ್ತದೆ. ನೀವು ಸೇವಿಸುವ ಆಹಾರಗಳಲ್ಲಿ ಸಾಧ್ಯವಾದಷ್ಟು ಬೆಣ್ಣೆಯನ್ನು ಸೇರಿಸಿ.

ಇದನ್ನೂ ಓದಿ: ಬಾಳೆಎಲೆಯಲ್ಲಿ ಆಹಾರ ಸೇವನೆ ಮಾಡುವುದು ಎಷ್ಟು ಪ್ರಯೋಜಕಾರಿ ಗೊತ್ತಾ?

ಕೆಂಪು ಮಾಂಸ: ಕೆಂಪು ಮಾಂಸವನ್ನು ಸ್ನಾಯು- ಬೆಳವಣಿಗೆಗೆ ಸಹಾಯ ಮಾಡುವ ಅತ್ಯುತ್ತಮ  ಆಹಾರ ಪದಾರ್ಥವೆಂದು ಪರಿಗಣಿಸಲಾಗಿದೆ. ಇದರಲ್ಲಿ ಹೆಚ್ಚಿನ  ಲ್ಯೂಸಿನ್ ತುಂಬಿದ್ದು, ಸ್ನಾಯುಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ.  ಕೆಂಪು ಮಾಂಸದಲ್ಲಿ ಇರುವ ಅಮೈನೋ ಆಸಿಡ್ ಸ್ನಾಯು ಪ್ರೋಟೀನ್ ಸಂಶ್ಲೇಷಣೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.

ಆಲೂಗಡ್ಡೆ: ಆಲೂಗಡ್ಡೆಯಿಂದ ತಯಾರಿಸಿದ ಆಹಾರಗಳು ಕ್ಯಾಲೊರಿಗಳನ್ನು  ಹೆಚ್ಚಿಸಲು ಸುಲಭವಾದ ಮಾರ್ಗವಾಗಿದೆ. ಪ್ರತಿದಿನ ಆಲೂಗೆಡ್ಡೆ ಆಹಾರಗಳನ್ನು ಸೇವಿಸುವುದು ಪೋಷಕಾಂಶಗಳು ಮತ್ತು ನಾರಿನ ಸೇವನೆಯನ್ನು ಹೆಚ್ಚಿಸಲು ಪರಿಣಾಮಕಾರಿಯಾಗುತ್ತದೆ. ನಿಮ್ಮ ಸ್ನಾಯು ಗ್ಲೈಕೊಜೆನ್ ಸ್ಟೋರ್‌ಗಳನ್ನು ಹೆಚ್ಚು ಮಾಡುತ್ತದೆ.

ಚೀಸ್: ಚೀಸ್ ನಲ್ಲಿ ಪ್ರೋಟೀನ್ ಮತ್ತು  ಆರೋಗ್ಯಕರ ಕೊಬ್ಬುಗಳು ತುಂಬಿವೆ. ನೀವು ನಿಯಮಿತವಾಗಿ  ಚೀಸ್ ಸೇರಿಸಿ ಆಹಾರಗಳನ್ನು ಸೇವಿಸಿದರೆ  ರುಚಿಯನ್ನು ಹೆಚ್ಚಿಸುತ್ತದೆ ಜೊತೆಗೆ ಅಗತ್ಯವಿರುವ ಕ್ಯಾಲೊರಿಗಳನ್ನು ಒದಗಿಸುವ ಮೂಲಕ ದೇಹದ ತೂಕವನ್ನು ಹೆಚ್ಚು ಮಾಡುತ್ತದೆ.

ಯೋಗರ್ಟ್ ಮತ್ತು ಹಾಲು: ಯೋಗರ್ಟ್ ಮತ್ತು ಹಾಲನ್ನು ಸೇವಿಸುವುದಕ್ಕಿಂತ ಉತ್ತಮವಾದ ಆಹಾರ ದೇಹದ ತೂಕ ಹೆಚ್ಚಿಸಲು ಬೇರೆ ಯಾವುದೂ ಇಲ್ಲ. ಯೋಗರ್ಟ್ ಮತ್ತು ಹಾಲು ಉತ್ತಮವಾದ ಪೌಷ್ಟಿಕಾಂಶಗಳನ್ನು ಹೇರಳವಾಗಿ ಹೊಂದಿದ್ದು, ಪ್ರೋಟೀನ್, ಆರೋಗ್ಯಕರ ಕೊಬ್ಬು ಮತ್ತು ಕಾರ್ಬೋಹೈಡ್ರೇಟ್‌ಗಳನ್ನು ಸಮತೋಲಿತವಾಗಿ ಹೊಂದಿದೆ. ಇದು ನಿಮ್ಮ ದೇಹದ ತೂಕವನ್ನು ಆರೋಗ್ಯಕರವಾಗಿ ಹೆಚ್ಚಿಸುತ್ತದೆ.

ದೇಹದ ತೂಕವನ್ನು ಹೆಚ್ಚು ಮಾಡಿಕೊಳ್ಳಲು , ದೈನಂದಿನ ವ್ಯಾಯಾಮಕ್ಕಿಂತ ಹೆಚ್ಚು ಕ್ಯಾಲೊರಿ ಇರುವ ಆಹಾರಗಳನ್ನು  ನಿರಂತರವಾಗಿ ತಿನ್ನುವುದು ಸಹ ಮುಖ್ಯವಾಗಿದೆ. ಆದರೆ ಸ್ನಾಯು ಬೆಳವಣಿಗೆಗೆ ಹಾಗೂ ಆರೋಗ್ಯಕರ ತೂಕ ಹೆಚ್ಚಿಸಿಕೊಳ್ಳಲು ತೂಕ ಎತ್ತುವ ವ್ಯಾಯಾಮ ಮಾಡಬೇಕು.
Published by:Sandhya M
First published: