• Home
  • »
  • News
  • »
  • lifestyle
  • »
  • Mysuru Silk Saree: ರಾಷ್ಟ್ರಪತಿ ದ್ರೌಪದಿ ಮುರ್ಮು ಉಟ್ಟಿದ್ದ ಮೈಸೂರು ಸಿಲ್ಕ್ ಸೀರೆ ಬೆಲೆ ಎಷ್ಟು? ನೀವೂ ಖರೀದಿಸ್ಬೇಕು ಅಂದ್ರೆ ಹೀಗೆ ಮಾಡಿ

Mysuru Silk Saree: ರಾಷ್ಟ್ರಪತಿ ದ್ರೌಪದಿ ಮುರ್ಮು ಉಟ್ಟಿದ್ದ ಮೈಸೂರು ಸಿಲ್ಕ್ ಸೀರೆ ಬೆಲೆ ಎಷ್ಟು? ನೀವೂ ಖರೀದಿಸ್ಬೇಕು ಅಂದ್ರೆ ಹೀಗೆ ಮಾಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Mysuru Silk Saree Like President Draupadi Murmu: ಶತಮಾನ ಪೂರೈಸಿ ಮುನ್ನುಗ್ಗುತ್ತಿರುವ ರೇಷ್ಮೆ ಕಾರ್ಖಾನೆ ಈಗ ತಿಂಗಳಿಗೆ 32,000 ಮೀಟರ್ ರೇಷ್ಮೆಯನ್ನು ನೇಯ್ದು ಗುಣಮಟ್ಟದ ಸೀರೆಯನ್ನು ಉತ್ಪಾದಿಸುತ್ತಿದೆ. ಇನ್ನು ಮೈಸೂರು ಸಿಲ್ಕ್ ಸೀರೆಯು ಹಲವು ರೀತಿಯ ವಿಶೇಷತೆಗಳನ್ನು ಹೊಂದಿದೆ.

ಮುಂದೆ ಓದಿ ...
  • Share this:

ಮೈಸೂರು ದಸರಾಗೆ (Mysuru Dasara) ವಿಜೃಂಭಣೆಯಿಂದ ಚಾಲನೆ ನೀಡಲಾಗಿದೆ. ದೇಶದ ಮೊದಲ ಪ್ರಜೆ ರಾಷ್ಟ್ರಪತಿ ದ್ರೌಪದಿ ಮುರ್ಮು (draupadi murmu) ಇಂದು ಚಾಲನೆ ನೀಡಿದ್ದು, ಸದ್ಯ ಅವರು ಉಟ್ಟಿರುವ ಸೀರೆ (Saree) ಮೇಲೆ ಎಲ್ಲರ ಕಣ್ಣು ಬಿದ್ದಿದೆ. ಹೌದು, ಮುರ್ಮು ಅವರಿಗೆ ದಸರಾ ಉದ್ಘಾಟನೆಗೆ ಆಹ್ವಾನ ನೀಡಲು ಹೋಗಿದ್ದು, ಸಚಿವರು ಹಾಗೂ ಸಂಸದರು ನೀಡಿದ್ದ, ಬಿಳಿ ಹಾಗೂ ಚಕ್ಸ್​ ಸೀರೆಯನ್ನು ಉಟ್ಟು ಬಂದಿದ್ದು, ಇದರ ಬೆಲೆ ಹಾಗೂ ಡಿಸೈನ್​ ಬಗ್ಗೆ ಚರ್ಚೆ ನಡೆಯುತ್ತಿದೆ. ನೀವೂ ಸಹ ಈ ಸೀರೆ ಎಲ್ಲಿ ಖರೀದಿಸಬಹುದು, ಹೇಗೆ ಎಲ್ಲಾ ಮಾಹಿತಿ ಇಲ್ಲಿದೆ. 


ಇಂದು ರಾಷ್ಟ್ರಪತಿ ಮುರ್ಮು ಅವರು, ಬಿಳಿ ಹಾಗೂ ಗೋಲ್ಡನ್ ಬಾರ್ಡ್​ ಜೊತೆ ಚಕ್ಸ್​ ಇದ್ದ ಸೀರೆ ಉಟ್ಟಿದ್ದು, ಅದಕ್ಕೆ ಗೋಲ್ಡನ್ ಕಲರ್ ಬ್ಲೌಸ್ ಹಾಕಿದ್ದಾರೆ. ಇದು ಮೈಸೂರು ಸಿಲ್ಕ್​ ಸೀರೆ (Mysuru Silk). ಹೌದು, ಮೈಸೂರು ದಸರಾ ಉದ್ಘಾಟನೆಗೆ, ಚೆಂದದ ಮೈಸೂರು ಸಿಲ್ಕ್ ಸೀರೆಯನ್ನೇ ಉಟ್ಟು ಬಂದಿದ್ದರು.
ಮೈಸೂರು ಸಿಲ್ಕ್ ಸೀರೆ ಇತಿಹಾಸ


ಮೈಸೂರು ಸಿಲ್ಕ್ ಸೀರೆ ಎಂದರೆ ಎಲ್ಲರ ಕಣ್ಣು ಅರಳುತ್ತದೆ. ನೋಡಲು ಮಾತ್ರ ಈ ಸೀರೆ ಸುಂದರವಲ್ಲ, ಅದಕ್ಕೆ ಬಹಳ ಮಹತ್ವ ಸಹ ಇದೆ.  ಈ ಸೀರೆಯ ಆರಂಭವಾಗಿದ್ದು, ಕ್ರಿಸ್ತಶಕ 1780-1790ರ ಸಮಯದಲ್ಲಿ. ಆಗ ಟಿಪ್ಪು ಸುಲ್ತಾನನ ಆಳ್ವಿಕೆ ಸಮಯ. ಆದರೆ ಸ್ವಲ್ಪ ಸಮಯದ ನಂತರ ವಿದೇಶಗಳಿಂದ ಆಮದಾಗುವ ವಿವಿಧ ರೇಶ್ಮೆ ಹಾಗೂ ರೆಯಾನ್‌ ಬಟ್ಟೆಗಳ ಆದ್ಯತೆಯ ಕಾರಣದಿಂದ ಮೈಸೂರು ಸಿಲ್ಕ್ ನ ತಯಾರಿ ಹಾಗೂ ಜನಪ್ರಿಯತೆ ಕಡಿಮೆಯಾಗಿತ್ತು.
ನಂತರ ಮತ್ತೆ ಮೈಸೂರು ಅರಸರ ಆಳ್ವಿಕೆಯ ಸಮಯದಲ್ಲಿ  ಜನಪ್ರಿಯತೆಯನ್ನು ಮರಳಿ ಪಡೆದ ಸೀರೆ, ಮತ್ತೆ ಉತ್ತುಂಗ ತಲುಪಿ, ಇಂದಿಗೂ ಅದೇ ಬೇಡಿಕೆ ಉಳಿಸಿಕೊಂಡು ಬಂದಿದೆ. “ಮೈಸೂರು ಸಿಲ್ಕ್ ಫ್ಯಾಕ್ಟರಿ’ 1912ರಲ್ಲಿ  ಆರಂಭವಾಗಿ 1932ರ ಸಮಯಕ್ಕೆ ಹೆಚ್ಚು ಬೇಡಿಕೆ ಪಡೆಯಿತು. ಆದರೆ ಅದಕ್ಕೂ ಮೊದಲೇ, ಮಹಾರಾಜರು 32 ಹ್ಯಾಂಡ್‌ಲೂಮ್‌ಗಳನ್ನು ಸ್ವಿಜರ್‌ಲ್ಯಾಂಡ್‌ನಿಂದ ಆಮದು ಮಾಡಿಸಿದ್ದರು.
ಸೀರೆಯ ಉತ್ಪನ್ನ ಆರಂಭ ಮಾಡಿದ ಸಮಯದಲ್ಲಿ ಮೈಸೂರು ಸಿಲ್ಕ್ ಸೀರೆಯ ತಯಾರಿ ಕೇವಲ ರಾಜಮನೆತನದ ಬಳಕೆಗಾಗಿ ಮೀಸಲಿಡಬೇಕಿತ್ತು.ನಂತರ ರಾಜ್ಯಾಡಳಿತದ ಪ್ರಧಾನವಾಗಿರುವ ಅಧಿಕಾರಿಗಳು ಮೈಸೂರು ಸಿಲ್ಕ್ ಸೀರೆಗಳನ್ನು ಬಲಸಲು ಪ್ರಾರಂಭಿಸಿದರು. ಸ್ವತಂತ್ರ ಬಂದ ನಂತರ ಕರ್ನಾಟಕ ಸಿಲ್ಕ್ ಇಂಡಸ್ಟ್ರೀಸ್‌ ಕಾರ್ಪೊರೇಶನ್‌ (KSIC) ಹೆಸರಿನಲ್ಲಿ 1980ರಲ್ಲಿ ಆಧುನಿಕ ತಂತ್ರಜ್ಞಾನದೊಂದಿಗೆ, ಮತ್ತೆ ಆರಂಭಿಸಿ, ಫುಲ್ ಜನಪ್ರಿಯತೆ ಪಡೆಯಿತು.
115 ಬಗೆಯ 300ಕ್ಕೂ ಸೀರೆಗಳ ಮಾದರಿ


ಶತಮಾನ ಪೂರೈಸಿ ಮುನ್ನುಗ್ಗುತ್ತಿರುವ ರೇಷ್ಮೆ ಕಾರ್ಖಾನೆ ಈಗ ತಿಂಗಳಿಗೆ 32,000 ಮೀಟರ್ ರೇಷ್ಮೆಯನ್ನು ನೇಯ್ದು ಗುಣಮಟ್ಟದ ಸೀರೆಯನ್ನು ಉತ್ಪಾದಿಸುತ್ತಿದೆ. ಇನ್ನು ಮೈಸೂರು ಸಿಲ್ಕ್ ಸೀರೆಯು ಹಲವು ರೀತಿಯ ವಿಶೇಷತೆಗಳನ್ನು ಹೊಂದಿದೆ.ಇದನ್ನೂ ಓದಿ: ಹಬ್ಬದ 9 ದಿನ ಈ ಬಣ್ಣದ ಬಟ್ಟೆಗಳನ್ನು ಹಾಕಿದ್ರೆ ಬಹಳ ಒಳ್ಳೆಯದಂತೆ
ಈ ಸೀರೆಯ ಜರಿ ಮಾಸದೆ, ಹೊಚ್ಚ ಹೊಸದಂತೆ ಕಾಣುವುದು ವಿಶೇಷವಾಗಿದ್ದು, ಇಲ್ಲಿ ಕುಸುರಿ ವಿನ್ಯಾಸ ಸೀರೆ, ದೊಡ್ಡ ಬುಟ್ಟಾ ಪಲ್ಲು ಸೀರೆ, ಶ್ರೀಮಂತ ಪಲ್ಲು ಸೀರೆ, ಜವಾರ್ ಅಂಚಿನ ಸೀರೆ, ಸಣ್ಣ ಮಾವಿನ ಸೀರೆ, ಜರಿ ಪ್ರಿಂಟೆಡ್ ಸೀರೆ, ಟಿಶ್ಯೂ ಸೀರೆ ಸಾಂಪ್ರದಾಯಿಕ ಜರಿ ಸೀರೆ ಹೀಗೆ 115 ಬಗೆಯ 300ಕ್ಕೂ ಹೆಚ್ಚು ವರ್ಣರಂಜಿತ ಮಾದರಿಯ ಸೀರೆಗಳು ಇಲ್ಲಿ ತಯಾರಾಗುತ್ತಿದೆ.


ಇದನ್ನೂ ಓದಿ: ಗ್ರೇಟ್​ ಇಂಡಿಯನ್ ಫೆಸ್ಟಿವಲ್​, ಕೈಗೆಟಕೋ ದರದಲ್ಲಿ ಸೂಪರ್ ಟ್ರೆಡಿಷನಲ್ ಡ್ರೆಸ್​ ನೀವೂ ಖರೀದಿಸಿ


ಸದ್ಯ ದ್ರೌಪದಿ ಮುರ್ಮು ಧರಿಸಿರುವ ಸೀರೆಯನ್ನು ನೀವು ಈ ಲಿಂಕ್ ಮೂಲಕ ಖರೀದಿಸಬಹುದು. ಇದರ ಬೆಲೆ 81568 ರೂಪಾಯಿ.  ಮೈಸೂರು ಸಿಲ್ಕ್ ಸೀರೆಗಳು ಶ್ರೀಮಂತ ಮತ್ತು ಸಾಂಪ್ರದಾಯಿಕ  ಅದರ ಹಗುರವಾದ ಸೊಬಗು ಮಾತ್ರವಲ್ಲದೆ ರೇಷ್ಮೆ ಮತ್ತು ಚಿನ್ನದ ಝರಿಗಳ ಶುದ್ಧತೆಗಾಗಿ ಹೆಚ್ಚು ಬೇಡಿಕೆಯಿದೆ. ಹಾಗೆಯೇ ಇದೆ ಬೆಲೆ ಸಹ ಸ್ವಲ್ಪ ದುಬಾರಿ ಎನ್ನಬಹುದು.

Published by:Sandhya M
First published: