Happy Family: ನಿಮ್ಮ ಅತ್ತೆ-ಮಾವಂದಿರ ಜೊತೆ ಸದಾ ಖುಷಿ ಖುಷಿಯಾಗಿರ್ಬೇಕಾ? ಈ ಟಿಪ್ಸ್ ಫಾಲೋ ಮಾಡಿ

ನಿಮ್ಮ ಗಂಡನ ತಾಯಿ-ತಂದೆಯೊಂದಿಗಿನ ನಿಮ್ಮ ಸಂಬಂಧವು ಯುದ್ಧಭೂಮಿಯಂತೆ ಇದ್ದರೆ, ಅದರಲ್ಲಿ ಬೇರೆಯವರು ನಿಮ್ಮ ಸಂತೋಷದ ಭಾಗವನ್ನು ವಶಪಡಿಸಿಕೊಳ್ಳಲು ಬಯಸುತ್ತಾರೆ. ಅವರೊಂದಿಗೆ ಆರೋಗ್ಯಕರ ಬಂಧವನ್ನು ಬೆಳೆಸಲು ಕೆಲವು ಮಾರ್ಗಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ. ಅವುಗಳನ್ನು ತಿಳಿಯಲು ಈ ಲೇಖನವನ್ನು ಒಮ್ಮೆ ಓದಿ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ನಿಮ್ಮ ಅತ್ತೆ- ಮಾವಂದಿರ (Mother-in-law and Father-in-law) ಜೊತೆ ಸಂಬಂಧವನ್ನು ಹೇಗೆ ಸುಧಾರಿಸುವುದು? ಈ ಸರಳ (Simple) ಮತ್ತು ಜೀವನ ಉತ್ತಮಗೊಳಿಸುವ ಸಲಹೆಗಳು ಕುಟುಂಬ (Family) ಸಂಬಂಧಗಳನ್ನು (Relationship) ಸುಧಾರಿಸಲು ನಿಮಗೆ ಸಹಾಯ ಮಾಡುತ್ತದೆ ಎಂದು ನಾವು ಭಾವಿಸುತ್ತೇವೆ. ನಿಮ್ಮ ಗಂಡನ (Husband) ತಾಯಿ-ತಂದೆಯೊಂದಿಗಿನ ನಿಮ್ಮ ಸಂಬಂಧವು ಯುದ್ಧಭೂಮಿಯಂತೆ ಇದ್ದರೆ, ಅದರಲ್ಲಿ ಬೇರೆಯವರು ನಿಮ್ಮ ಸಂತೋಷದ (Happy) ಭಾಗವನ್ನು ವಶಪಡಿಸಿಕೊಳ್ಳಲು ಬಯಸುತ್ತಾರೆ. ಅವರೊಂದಿಗೆ ಆರೋಗ್ಯಕರ ಬಂಧವನ್ನು (Healthy Bond) ಬೆಳೆಸಲು ಕೆಲವು ಮಾರ್ಗಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ. ಅವುಗಳನ್ನು ತಿಳಿಯಲು ಈ ಲೇಖನವನ್ನು ಒಮ್ಮೆ ಓದಿ.

ನಿಮ್ಮ ಅತ್ತೆ-ಮಾವಂದಿರ ಜೊತೆ ಆರೋಗ್ಯಕರ ಬಂಧವನ್ನು ಬೆಳೆಸಲು 10 ಮಾರ್ಗಗಳಿವು:
1) ನಿಮ್ಮ ಗಂಡನ ಮನೆಯ ಸಂಸ್ಕೃತಿ ತಿಳಿಯಿರಿ
ಇದು ಅತ್ತೆ ಮಾವಂದಿರ ಜೊತೆ ಉತ್ತಮ ಸಂಬಂಧ ರೂಢಿಸಿಕೊಳ್ಳಲು ಅವರ ಮನೆ ಸಂಸ್ಕೃತಿ ತಿಳಿಯುವುದು ಪ್ರಮುಖ ಅಂಶ ಎಂದು ಹೇಳಬಹುದು. ತಮ್ಮ ಅತ್ತೆ ಅಥವಾ ಮಾವನೊಂದಿಗೆ ಹೊಂದಿಕೊಳ್ಳಲು ಕಲಿಯುವುದು ನಿಮ್ಮ ಮಾನಸಿಕ ಆರೋಗ್ಯಕ್ಕೆ ಮುಖ್ಯವಾಗಿದೆ.

2) ನಿಮ್ಮ ಮದುವೆ ಸಂಬಂಧಕ್ಕೆ ಆದ್ಯತೆ ನೀಡಿ
ನೀವು ಮದುವೆಯಾದ ನಂತರ, ನಿಮ್ಮ ಸಂಗಾತಿ ಮತ್ತು ಮಕ್ಕಳು ಮತ್ತು ನಿಮ್ಮ ಅತ್ತೆ-ಮಾವ ನಿಮಗೆ ಮೊದಲ ಆದ್ಯತೆಯಾಗಬೇಕು. ಅವರ ಇಷ್ಟ-ಕಷ್ಟಗಳನ್ನು ತಿಳಿದು ಅದರಂತೆ ನಡೆದರೆ ನೀವು ಅವರಿಗೆ ಪ್ರೀತಿ ಪಾತ್ರರಾಗಿ, ಅವರ ಜೊತೆ ಉತ್ತಮ ಸಂಬಂಧ ಹೊಂದಲು ಸಹಾಯ ಆಗುತ್ತದೆ.

3) ನಿಮ್ಮ ಸಂಬಂಧಗಳಿಗೆ ಒಂದು ಗಡಿ ನಿರ್ಮಿಸಿ
ಸಂಬಂಧಗಳಲ್ಲಿ ಈ ಗಡಿಗಳು ತುಂಬಾನೇ ಮುಖ್ಯ. ಏಕೆಂದರೆ ಯಾವುದನ್ನು ಯಾವ ಸಮಯದಲ್ಲಿ ಕೇಳಬೇಕು ಹೇಳಬೇಕು, ಏನು ಮಾತಾಡಬೇಕು ಎಂಬುದಕ್ಕೆ ಈ ಗಡಿ ತುಂಬಾ ಮುಖ್ಯವಾಗಿರುತ್ತದೆ.

ಇದನ್ನೂ ಓದಿ: Anklet Benefits: ಕಾಲ್ಗೆಜ್ಜೆ ಅಲಂಕಾರಕ್ಕೆ ಮಾತ್ರ ಅಲ್ಲ, ಆರೋಗ್ಯಕ್ಕೂ ಉತ್ತಮ - ಎಷ್ಟೆಲ್ಲಾ ಪ್ರಯೋಜನವಿದೆ ನೋಡಿ

4) ನಿಮ್ಮ ಸಂಬಂಧಗಳಲ್ಲಿ ಯಾವುದೇ ನಿರೀಕ್ಷೆ ಇಟ್ಟುಕೊಳ್ಳಬೇಡಿ
ಹೌದು, ಯಾವುದೇ ಸಂಬಂಧವಿರಲಿ, ಅಲ್ಲಿ ನೀರಿಕ್ಷೆಗಳಿದ್ದರೆ ಆ ಸಂಬಂಧ ಬಹಳ ಸಮಯ ಉಳಿಯಲಾರದು. ನಮ್ಮಿಂದ ಮತ್ತು ನಮ್ಮ ಸಂಬಂಧಿಕರಿಂದ ನಾವು ಕಡಿಮೆ ಬೇಡಿಕೆಗಳು ಮತ್ತು ನಿರೀಕ್ಷೆಗಳನ್ನು ಹೊಂದಿದ್ದರೆ, ಮುಂದೆ ನಿರಾಶೆ ಆಗುವ ಸಾಧ್ಯತೆಗಳು ಕೂಡ ಕಡಿಮೆ ಇರುತ್ತವೆ.

5) ನಿಮ್ಮ ಅತ್ತೆ-ಮಾವನವರನ್ನು ನಿಮ್ಮ ಪೋಷಕರಂತೆ ಪ್ರೀತಿಸಿ
ಇದು ಬಹಳ ಮುಖ್ಯ ಆಗಿದೆ. ಏಕೆಂದರೆ ಅವರು ನಿಮ್ಮ ಪತಿ ಅಥವಾ ಪತ್ನಿಯ ಪೋಷಕರು. ಮುಂದೆ ನಿಮ್ಮ ಮಕ್ಕಳ ಅಜ್ಜ-ಅಜ್ಜಿಯರು ಆಗುತ್ತಾರೆ. ಆ ಕಾರಣಕ್ಕೆ ಆದರೂ ನೀವು ಅವರನ್ನು ಪ್ರೀತಿಸಿ.

6) ನಿಮ್ಮ ಯೋಚನೆಯೇ ಸರಿ ಎನ್ನಬೇಡಿ
ಯಾವಾಗಲೂ ನಾವು ಮಾಡಿದ್ದೇ ಸರಿ ಎಂಬ ಮನೋಭಾವ ಖಂಡಿತ ಬೇಡ. ನಿಮ್ಮ ಅತ್ತೆ ಮಾವ ಅವರ ಅಭಿಪ್ರಾಯಗಳಿಗೂ ಸ್ವಲ್ಪ ಕಿವಿಯಾಗಿ. ಇದರಿಂದ ನಿಮ್ಮ ಮತ್ತು ಅವರ ನಡುವೆ ಯಾವುದೇ ಮನಸ್ತಾಪಗಳು ಬೆಳೆಯುವುದಿಲ್ಲ.

7) ವಸ್ತುನಿಷ್ಠವಾಗಿರಿ
ನಿಮ್ಮ ಅತ್ತೆ ಅಥವಾ ಮಾವನವರನ್ನು ವಸ್ತುನಿಷ್ಠವಾಗಿ ನೋಡುವುದು ಎಂದರೆ ಅವರಿಗೆ ದ್ರೋಹ ಮಾಡುವುದು ಅಥವಾ ಅಗೌರವಿಸುವುದು ಎಂದರ್ಥವಲ್ಲ. ಈ ವಸ್ತುನಿಷ್ಠತೆ ಗುಣ ನಿಮಗೆ ಖಂಡಿತವಾಗಿಯೂ ಸಹಾಯ ಮಾಡುತ್ತದೆ.

ಇದನ್ನೂ ಓದಿ:  Sneha Saree: ಗೌರಿ ಹಬ್ಬಕ್ಕೆ ಟ್ರೆಡಿಷನಲ್​ ಆಗಿ ರೆಡಿ ಆಗೋ ಚಿಂತೆ ಬಿಡಿ, ನಟಿ ಸ್ನೇಹ ಈ ಲುಕ್ ನೀವೂ ಟ್ರೈ ಮಾಡಿ

8) ನಿಮ್ಮ ಮಿತಿಗಳನ್ನು ಅರ್ಥಮಾಡಿಕೊಳ್ಳಿ
ನಿಮ್ಮ ಮತ್ತು ನಿಮ್ಮ‌ ಅತ್ತೆ-ಮಾವನವರ ಇತಿ-ಮಿತಿಗಳನ್ನು ಕೂಲಂಕುಷವಾಗಿ ಪರಿಶೀಲಿಸಿ, ಅವುಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಿ. ಇದರಿಂದ ನಿಮ್ಮ ಅವರ ಸಂಬಂಧ ಉತ್ತಮಗೊಳ್ಳುತ್ತದೆ.

9) ಪ್ರಾಮಾಣಿಕರಾಗಿರಿ
ನೀವು ನಿಮ್ಮ ಅತ್ತೆ-ಮಾವನವರಿಗೆ ಯಾವುದೇ ಸಂದರ್ಭದಲ್ಲೂ ಸುಳ್ಳು ಹೇಳುವುದು, ಅಪ್ರಾಮಾಣಿಕತೆ ತೋರಿಸುವುದು ಮಾಡಬಾರದು. ಪ್ರಾಮಾಣಿಕತೆ ಪ್ರತಿ ಸಂದರ್ಭದಲ್ಲೂ ಬಹು ಮುಖ್ಯವಾಗಿರುತ್ತದೆ.

10) ಮೆಚ್ಚುಗೆಗಾಗಿ ಕೆಲಸ ಮಾಡಬೇಡಿ
ನೀವು ಯಾವಾಗಲೂ ನಿಮ್ಮ ಅತ್ತೆ-ಮಾವನವರು ನಿಮ್ಮನ್ನು ಮೆಚ್ಚಬೇಕು ಎಂದು ಯಾವುದೋ ಭ್ರಮೆಯಲ್ಲಿ ಇರಬೇಡಿ.

ಅಂತಿಮವಾಗಿ ಯಾವುದೇ ಸಂಬಂಧ ಇರಲಿ ಅದನ್ನು ಅತ್ಯಂತ ಜಾಗರೂಕತೆಯಿಂದ ನೋಡಿಕೊಳ್ಳಬೇಕಾದುದು ಅತಿ ಅಗತ್ಯ. ಅದಕ್ಕೆ ಅಷ್ಟೆ ತಾಳ್ಮೆ ಕೂಡ ಮುಖ್ಯ.
Published by:Ashwini Prabhu
First published: