• Home
  • »
  • News
  • »
  • lifestyle
  • »
  • Hair Care: ಕೂದಲ ಸಮಸ್ಯೆ ನಿವಾರಣೆಗೆ ವಾಲ್ನಟ್ಸ್ ಹೇರ್ ಮಾಸ್ಕ್ ಟ್ರೈ ಮಾಡಿ

Hair Care: ಕೂದಲ ಸಮಸ್ಯೆ ನಿವಾರಣೆಗೆ ವಾಲ್ನಟ್ಸ್ ಹೇರ್ ಮಾಸ್ಕ್ ಟ್ರೈ ಮಾಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕೂದಲಿನ ಸಮಸ್ಯೆ ತೊಡೆದು ಹಾಕಲು ನೀವು ನಿಮ್ಮ ಅಡುಗೆ ಮನೆಯಲ್ಲಿನ ಕೆಲವು ವಸ್ತುಗಳನ್ನು ಕೂದಲ ಆರೈಕೆಗೆ ಬಳಕೆ ಮಾಡಬಹುದು. ಹಲವು ಪೋಷಕಾಂಶಗಳಿಂದ ಸಮೃದ್ಧವಾಗಿರುವ ವಾಲ್ನಟ್ಸ್ ನಿಮ್ಮ ಕೂದಲಿಗೆ ಮ್ಯಾಜಿಕ್ ಫಲಿತಾಂಶ ನೀಡುತ್ತವೆ. ವಾಲ್ನಟ್ ಹೇರ್ ಮಾಸ್ಕ್ ಎಲ್ಲಾ ತರಹದ ಕೂದಲಿನ ಸಮಸ್ಯೆ ಪರಿಹಾರ ಮಾಡುತ್ತದೆ.

ಮುಂದೆ ಓದಿ ...
  • Share this:

    ಕೆಟ್ಟ ಜೀವನಶೈಲಿ (Bad Lifestyle), ಜಂಕ್ ಫುಡ್ (Junk Food), ಮಾಲಿನ್ಯ ಮತ್ತು ಬಿಸಿ ಉತ್ಪನ್ನಗಳ ಅತಿಯಾದ ಬಳಕೆ ಕೂದಲ ಆರೋಗ್ಯದ (Hair Health) ಮೇಲೆ ಅತ್ಯಂತ ಕೆಟ್ಟ ಪರಿಣಾಮ (Bad Effect) ಬೀರುತ್ತವೆ. ಹೀಗಾಗಿ ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವಿಕೆ, ಶುಷ್ಕತೆ ಮತ್ತು ಸುಕ್ಕುಗಟ್ಟಿದ ಕೂದಲು ಸಮಸ್ಯೆ ಸಾಕಷ್ಟು ಕಂಡು ಬರುತ್ತಿದೆ. ತುಂಬಾ ಜನರು ನೆತ್ತಿ ಬೋಳುತನ ಸಮಸ್ಯೆ ಅನುಭವಿಸುತ್ತಿದ್ದಾರೆ. ಈ ಸಮಸ್ಯೆ ತಪ್ಪಿಸಲು ಮಹಿಳೆಯರು ದುಬಾರಿ ಶಾಂಪೂ, ಸೀರಮ್ ಮತ್ತು ಇತರೆ ರಾಸಾಯನಿಕ ಭರಿತ ಉತ್ಪನ್ನಗಳನ್ನು ಬಳಕೆ ಮಾಡಿ, ಅವುಗಳಿಂದ ಯಾವುದೇ ಪ್ರಯೋಜನ ಸಿಗದೇ ಮತ್ತೆ ಬೇರೆ ಬ್ರ್ಯಾಂಡ್, ಬೇರೆ ಉತ್ಪನ್ನ ಖರೀದಿಸುತ್ತಾರೆ.


    ಕೂದಲ ಆರೈಕೆಗೆ ಮನೆಮದ್ದು ಮಾಡಿ


    ಆದರೆ ಇವೆಲ್ಲವೂ ಕೆಲವು ಫಲಿತಾಂಶ ನೀಡುವುದಿಲ್ಲ. ನಿಮ್ಮ ಸಮಸ್ಯೆ ಮಾತ್ರ ಹಾಗೇ ಉಳಿಯುತ್ತದೆ. ಈ ಮಧ್ಯೆ ಬೇರೆ ಬೇರೆ ಉತ್ಪನ್ನ ಬಳಸಲು ಹೋಗಿ ಇದ್ದ ಕೂದಲು ಹಾಳಾಗಿ ಹೋಗುತ್ತವೆ. ಅಂತಹ ವೇಳೆ, ನಿಮ್ಮ ಕೂದಲಿನ ಸಮಸ್ಯೆ ತೊಡೆದುಹಾಕಲು ನೀವು ನಿಮ್ಮ ಅಡುಗೆ ಮನೆಯಲ್ಲಿನ ಕೆಲವು ವಸ್ತುಗಳನ್ನು ಕೂದಲ ಆರೈಕೆಗೆ ಬಳಕೆ ಮಾಡಬಹುದು.


    ಹಲವು ಪೋಷಕಾಂಶಗಳಿಂದ ಸಮೃದ್ಧವಾಗಿರುವ ವಾಲ್ನಟ್ಸ್ ನಿಮ್ಮ ಕೂದಲಿಗೆ ಮ್ಯಾಜಿಕ್ ಫಲಿತಾಂಶ ನೀಡುತ್ತವೆ. ವಾಲ್ನಟ್ ಹೇರ್ ಮಾಸ್ಕ್ ನಿಮ್ಮ ಎಲ್ಲಾ ತರಹದ ಕೂದಲಿನ ಸಮಸ್ಯೆ ಪರಿಹಾರ ಮಾಡುತ್ತದೆ.


    ಇದನ್ನೂ ಓದಿ: ವಿಭಿನ್ನ ರುಚಿ ಹಾಗೂ ಆರೋಗ್ಯಕರ ಸೀತಾಫಲ ಹಣ್ಣು ಯಾವೆಲ್ಲಾ ಆರೋಗ್ಯ ಪ್ರಯೋಜನ ನೀಡುತ್ತದೆ?


    ವಾಲ್ನಟ್ಸ್ ಕೂದಲಿಗೆ ಹೇಗೆ ಪ್ರಯೋಜನಕಾರಿ?


    ಕೂದಲಿನಿಂದ ತಲೆಹೊಟ್ಟು ಕಡಿಮೆ ಮಾಡುತ್ತದೆ


    ಕೂದಲಿನಲ್ಲಿ ತೇವಾಂಶ ಉಳಿಸಲು ವಾಲ್ನಟ್ಸ್  ಸಹಕಾರಿ. ಇದು ಕೂದಲು ಶುಷ್ಕತೆ ಸಮಸ್ಯೆ ತೆಗೆದು ಹಾಕುತ್ತದೆ. ವಾಲ್ನಟ್ಸ್ ಕೂದಲು ಉದುರುವ ಸಮಸ್ಯೆ ನಿವಾರಿಸುತ್ತದೆ. ಇದರಿಂದ ಕೂದಲಿನ ಬೆಳವಣಿಗೆ ಉತ್ತಮ ಆಗುತ್ತದೆ. ವಾಲ್ನಟ್ಸ್ ಕೂದಲು ಸೀಳುವಿಕೆ ಸಮಸ್ಯೆ ಕಡಿಮೆ ಮಾಡುತ್ತದೆ.


    ಕೂದಲಿನ ಹೊಳಪು ಹೆಚ್ಚಿಸಲು ವಾಲ್ನಟ್ ಹೇರ್ ಮಾಸ್ಕ್


    ವಾಲ್ನಟ್ಸ್ ಹೇರ್ ಮಾಸ್ಕ್ ಬಳಸಿ ಕೂದಲಿನ ಸೌಂದರ್ಯ ಕಾಪಾಡಿ. ಇದು ಒಮೆಗಾ-3, ಒಮೆಗಾ-6, ಒಮೆಗಾ-9 ಕೊಬ್ಬಿನಾಮ್ಲ ಗುಣ ಹೊಂದಿದೆ. ಇದು ಕೂದಲನ್ನು ಬೇರಿನಿಂದ ತುದಿಯವರೆಗೆ ಬಲಪಡಿಸುತ್ತದೆ. ವಾಲ್ನಟ್ಸ್‌ನಲ್ಲಿರುವ ಒಮೆಗಾ-2 ಕೊಬ್ಬಿನಾಮ್ಲ ಕೂದಲಿನ ಪೋಷಣೆಗೆ ಕೆಲಸ ಮಾಡುತ್ತದೆ.


    ಮೊಸರು ಮತ್ತು ವಾಲ್ನಟ್ಸ್ ಹೇರ್ ಮಾಸ್ಕ್


    ಸುಮಾರು 12 ವಾಲ್ನಟ್ಸ್ ನ್ನು  ಒಂದು ಗಂಟೆ ನೀರಿನಲ್ಲಿ ನೆನೆಸಿಡಿ. ನಂತರ ಅವುಗಳನ್ನು ಮಿಕ್ಸರ್ ನಲ್ಲಿ ರುಬ್ಬಿರಿ. ಈಗ ಒಂದು ಬೌಲ್‌ ನಲ್ಲಿ ಐದು ಚಮಚ ಮೊಸರನ್ನು ತೆಗೆದುಕೊಂಡು ವಾಲ್ನಟ್ ಪೇಸ್ಟ್, ಒಂದು ಚಮಚ ನಿಂಬೆ ರಸ ಮತ್ತು ಒಂದು ಚಮಚ ರೋಸ್ ವಾಟರ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.


    ಬಳಸುವುದು ಹೇಗೆ?


    ಮೊದಲು ಕೂದಲನ್ನು ನೇರಗೊಳಿಸಿ ಮತ್ತು ಅದನ್ನು ಎರಡು ಭಾಗಗಳಾಗಿ ವಿಂಗಡಿಸಿ. ತಯಾರಾದ ಮಿಶ್ರಣವನ್ನು ಬೇರುಗಳಿಗೆ ಅನ್ವಯಿಸಿ. ಹೇರ್ ಮಾಸ್ಕ್ ನ್ನು ಸಂಪೂರ್ಣ ತಲೆಗೆ ಅನ್ವಯಿಸಿದ ನಂತರ ಐದು ನಿಮಿಷ ಮಸಾಜ್ ಮಾಡಿ.  ಒಂದು ಗಂಟೆ ಬಿಡಿ.


    ನಂತರ ಸರಳ ನೀರಿನಿಂದ ಕೂದಲನ್ನು ತೊಳೆಯಿರಿ. ಕೂದಲು ಒಣಗಿದ ನಂತರ ವಾಲ್ನಟ್ಸ್ ಎಣ್ಣೆಯಿಂದ ಮಸಾಜ್ ಮಾಡಿ. ಮತ್ತು ಮರುದಿನ ಸೌಮ್ಯ ಶಾಂಪೂ ಬಳಸಿ ಕೂದಲನ್ನು ತೊಳೆಯಿರಿ. ಈ ಹೇರ್ ಮಾಸ್ಕ್ ನ್ನು ವಾರಕ್ಕೊಮ್ಮೆ ಮಾಡಿ.


    ಇದನ್ನೂ ಓದಿ: ಮೂಳೆಗಳ ಸಮಸ್ಯೆ ಹಾಗೂ ಶೀತ ತಡೆಯಲು ಈ ಪದಾರ್ಥಗಳ ಸೇವನೆ ಪ್ರಯೋಜನಕಾರಿ!


    ಸಸ್ಯಜನ್ಯ ಎಣ್ಣೆ ಜೊತೆ ವಾಲ್ನಟ್ಸ್ ಹೇರ್ ಮಾಸ್ಕ್


    ಒಂದೂವರೆ ಕಪ್ ಸಸ್ಯಜನ್ಯ ಎಣ್ಣೆಯಲ್ಲಿ ಒಂದು ಸಂಪೂರ್ಣ ವಾಲ್ನಟ್ಸ್ ಹಾಕಿ ಮತ್ತು ಸುಮಾರು 15 ನಿಮಿಷ ಕುದಿಸಿ. ತಣ್ಣಗಾದ ನಂತರ ಫಿಲ್ಟರ್ ಮಾಡಿ, ಮಸಾಜ್ ಮಾಡಿ. ಎರಡು ಗಂಟೆ ನಂತರ ಸೌಮ್ಯ ಶಾಂಪೂ ಬಳಸಿ ಕೂದಲು ತೊಳೆಯಿರಿ. ಕೂದಲು ಚೆನ್ನಾಗಿ ಬೆಳೆಯುತ್ತದೆ.

    Published by:renukadariyannavar
    First published: