ಪಾರ್ಶ್ವವಾಯು ಬಗ್ಗೆ ಮುನ್ನೆಚ್ಚರಿಕೆ ವಹಿಸದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ

news18
Updated:September 25, 2018, 12:10 PM IST
ಪಾರ್ಶ್ವವಾಯು ಬಗ್ಗೆ ಮುನ್ನೆಚ್ಚರಿಕೆ ವಹಿಸದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ
news18
Updated: September 25, 2018, 12:10 PM IST
-ನ್ಯೂಸ್ 18 ಕನ್ನಡ

ಆಧುನಿಕ ಜೀವನ ಶೈಲಿಯ ಜಂಜಾಟದ ಸಮಸ್ಯೆಗಳಲ್ಲಿ ಸ್ಟ್ರೋಕ್ ಕೂಡ ಒಂದು. ಸಾಮಾನ್ಯವಾಗಿ ಹೃದಯದ ಸಮಸ್ಯೆ, ರಕ್ತದೊತ್ತಡ, ವಯಸ್ಸಾದವರಲ್ಲಿ ಸ್ಟ್ರೋಕ್ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಪ್ರತಿ ದಿನ 35 ನಿಮಿಷಗಳ ಕಾಲ ವ್ಯಾಯಾಮ ಮಾಡುವುದರಿಂದ ಇಂತಹ ಅಪಾಯವನ್ನು ತಡೆಗಟ್ಟಬಹುದು ಎಂದು ಸಂಶೋಧಕರು ಕಂಡು ಹಿಡಿದಿದ್ದಾರೆ. ಪ್ರತಿನಿತ್ಯ 35 ನಿಮಿಷ ಅಥವಾ ವಾರಕ್ಕೆ ಎರಡರಿಂದ ಮೂರು ಗಂಟೆಗಳ ತನಕ ಈಜು, ವಾಕಿಂಗ್ ಮತ್ತು ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಪಾರ್ಶ್ವವಾಯು ಅಥವಾ ಸ್ಟ್ರೋಕ್ ಉಂಟಾಗುವ ಅಪಾಯದ ತೀವ್ರತೆಯನ್ನು ಕಡಿಮೆ ಮಾಡಿಕೊಳ್ಳಬಹುದು ಎಂದು ಅಧ್ಯಯನದಿಂದ ತಿಳಿದು ಬಂದಿದೆ.

ಪಾರ್ಶ್ವವಾಯು ಇತ್ತೀಚಿನ ಗಂಭೀರ ಸಮಸ್ಯೆಗಳಲ್ಲಿ ಒಂದಾಗಿದ್ದು, ಇದರಿಂದಾಗಿ ವ್ಯಕ್ತಿಯು ತನ್ನ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಾನೆ. ಇಂತಹ ತೊಂದರೆಗಳನ್ನು ನಿಯಂತ್ರಿಸುವ ಮಾರ್ಗಗಳನ್ನು ಈ ಅಧ್ಯಯನದಿಂದ ಕಂಡುಕೊಳ್ಳಲಾಗಿದೆ ಎಂದು ಸ್ವೀಡನ್​ನ ಗೋಥೆನ್ಬರ್ಗ್ ವಿಶ್ವವಿದ್ಯಾಲಯದ ಸಂಶೋಧಕಿ ಕ್ಯಾಥರಿನಾ ತಿಳಿಸಿದ್ದಾರೆ.

ವ್ಯಾಯಾಮ ಮಾಡುವುದರಿಂದ ಅನೇಕ ವಿಧಗಳಲ್ಲಿ ಆರೋಗ್ಯವನ್ನು ಪಡೆದುಕೊಳ್ಳಬಹುದು. ಅದೇ ರೀತಿ ಪ್ರತಿ ವಾರ ಸಣ್ಣ ಪ್ರಮಾಣದಲ್ಲಿ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಸ್ಟ್ರೋಕ್ ಅಪಾಯದ ತೀವ್ರತೆಯನ್ನು ಕಡಿಮೆ ಮಾಡಬಹುದು. ಇದರಿಂದ ಸಮಸ್ಯೆಯಿಂದ ಮುಕ್ತಿ ಪಡೆಯಬಹುದಲ್ಲದೆ ಉತ್ತಮ ಆರೋಗ್ಯವನ್ನು ತಮ್ಮದಾಗಿಸಿಕೊಳ್ಳಬಹುದು ಎಂದು ಅಧ್ಯಯನದಿಂದ ಸಾಬೀತಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಈ ಸಂಶೋಧನೆಗಾಗಿ 73 ವಯಸ್ಸಿನ 925 ಮಂದಿ ಸ್ಟ್ರೋಕ್ ಪೀಡಿತರನ್ನು ಪರಿಶೀಲಿಸಲಾಗಿತ್ತು. ಇದರಲ್ಲಿ 481 ಮಂದಿ ಯಾವುದೇ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರಲಿಲ್ಲ. ಇವರಲ್ಲಿ ಶೇ.73ರಷ್ಟು ಮಂದಿಯು ಪಾರ್ಶ್ವವಾಯುಗೆ ತುತ್ತಾಗಿದ್ದರು. ಅಲ್ಲದೆ ಕಡಿಮೆ ಪ್ರಮಾಣದ ವ್ಯಾಯಾಮದಲ್ಲಿ ತೊಡಗಿಸಿಕೊಂಡಿದ್ದ 384 ಮಂದಿಯಲ್ಲಿ ಶೇ.85ರಷ್ಟು ಜನರು ಕೆಳ ಮಟ್ಟದ ಸ್ಟ್ರೋಕ್ ಸಮಸ್ಯೆಗೆ ಒಳಗಾಗಿದ್ದರು ಎಂದು ಅಧ್ಯಯನ ತಂಡ ತಿಳಿಸಿದೆ.

ದೈನಂದಿನ ಚಟುವಟಿಕೆಯಿಂದ ಮಾತ್ರ ಸ್ಟ್ರೋಕ್ ಸಮಸ್ಯೆಯನ್ನು ಹೋಗಲಾಡಿಸಬಹುದು ಎಂದು ಹೇಳಲಾಗುವುದಿಲ್ಲ. ಆದರೆ ವ್ಯಾಯಾಮವು ಮೆದುಳಿನ ಮೇಲೆ ಪರಿಣಾಮ ಬೀರುವುದರಿಂದ ಸ್ಟ್ರೋಕ್ ಸಮಸ್ಯೆ ಅಪಾಯದ ತೀವ್ರತೆಯನ್ನು ಕಡಿಮೆಯಾಗಲಿದೆ ಎಂಬುದಕ್ಕೆ ಈ ಹೊಸ ಅಧ್ಯಯನ ಸಾಕ್ಷಿ ಎಂದು ಸಂಶೋಧಕಿ ಕ್ಯಾಥರಿನಾ ತಿಳಿಸಿದ್ದಾರೆ.
First published:September 25, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...