ತೂಕ ನಿಯಂತ್ರಿಸಲು ವಾಕಿಂಗ್ ವೇಳೆ ಚ್ಯೂಯಿಂಗ್ ಗಮ್ ಜಗಿಯಿರಿ : ಅಧ್ಯಯನ

news18
Updated:May 30, 2018, 4:04 PM IST
ತೂಕ ನಿಯಂತ್ರಿಸಲು ವಾಕಿಂಗ್ ವೇಳೆ ಚ್ಯೂಯಿಂಗ್ ಗಮ್ ಜಗಿಯಿರಿ : ಅಧ್ಯಯನ
female runner tying shoe lace in a urban area
news18
Updated: May 30, 2018, 4:04 PM IST
ನ್ಯೂಸ್ 18 ಕನ್ನಡ

ಪ್ರತಿನಿತ್ಯ ದೇಹ ದಂಡಿಸಲು ನೀವು ವಾಕಿಂಗ್ ಮಾಡ್ತೀರಾ? ಹಾಗಿದ್ದರೆ ಚ್ಯೂಯಿಂಗ್ ಗಮ್ ಜಗಿಯುತ್ತಾ ವಾಕಿಂಗ್ ಮಾಡುವುದು ಉತ್ತಮ. ಹೀಗೆ ಹೇಳಿರುವುದು ಜಪಾನಿನ ಸಂಶೋಧಕರು. ವಾಕಿಂಗ್ ಮಾಡುವಾಗ ಚ್ಯೂಯಿಂಗ್ ಗಮ್ ಜಗಿಯುವುದರಿಂದ ಆರೋಗ್ಯ ವೃದ್ದಿಸಿಕೊಳ್ಳುತ್ತದೆ ಎಂದು ಹೊಸ ಸಂಶೋಧನೆಯಿಂದ ತಿಳಿದು ಬಂದಿದೆ.

ವಾಕಿಂಗ್ ಮಾಡುವಾಗ ಚ್ಯೂಯಿಂಗ್ ಜಗಿದರೆ ನೈಸರ್ಗಿಕವಾಗಿ ಹೃದಯ ಬಡಿತ ಹೆಚ್ಚಾಗುತ್ತದೆ. 21 ರಿಂದ 69 ವಯಸ್ಸಿನ 46 ಮಂದಿಯನ್ನು ಈ ಪ್ರಾಯೋಗಕ್ಕಾಗಿ ಪರೀಕ್ಷಿಸಲಾಗಿದ್ದು, ಈ ವೇಳೆ ಇವರ ಹೃದಯ ಬಡಿತವು ಉತ್ತಮಗೊಂಡಿರುವುದು ಸಾಬೀತಾಗಿದೆ.

ತೂಕವನ್ನು ನಿಯಂತ್ರಿಸಲು ವ್ಯಾಯಾಮ ಮಾಡುವಾಗ ಚ್ಯೂಯಿಂಗ್ ಗಮ್ ಜಗಿಯುವುದು ಪರಿಣಾಮಕಾರಿ ವಿಧಾನವಾಗಿದೆ. ಜಪಾನ್ ದೇಶದಲ್ಲಿ ವಾಕಿಂಗ್ ಹೋಗುವುದು ಸಾಮಾನ್ಯವಾಗಿದ್ದು, ಈ ಸಂಶೋಧನೆಯ ಫಲಿತಾಂಶ ವ್ಯಾಯಾಮ ಮಾಡುವವರಿಗೆ ಹೊಸ ಉತ್ಸಾಹ ನೀಡಲಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಎರಡು ತಂಡಗಳನ್ನು 15 ನಿಮಿಷಗಳ ಕಾಲ ವಾಕಿಂಗ್ ಮಾಡಿಸಿ ಈ ಅಧ್ಯಯನವನ್ನು ನಡೆಸಲಾಗಿತ್ತು. ಈ ವೇಳೆ ಚ್ಯೂಯಿಂಗ್ ಗಮ್ ಜಗಿಯುತ್ತಾ ವಾಕಿಂಗ್ ಮಾಡುವುದರಿಂದ ಹೃದಯ ಬಡಿತ ಮಾತ್ರವಲ್ಲದೆ, ದೇಹದ ಸಾಮರ್ಥ್ಯ ಸಹ ಹೆಚ್ಚಾಗುತ್ತದೆ ಎಂಬುದನ್ನು ಕಂಡುಕೊಳ್ಳಲಾಗಿದೆ.

ಮೂರು ಕಿಲೋಕ್ಯಾಲೋರಿ ಹೊಂದಿರುವ ಎರಡು ಚ್ಯೂಯಿಂಗ್ ಗಮ್ ಗೋಲಿಗಳನ್ನು ಮತ್ತು ಚ್ಯೂಯಿಂಗ್ ಗಮ್ ಪದಾರ್ಥಗಳನ್ನು ಒಳಗೊಂಡಿರುವ ಪುಡಿಯನ್ನು ನೀಡಿ ಈ ಅಧ್ಯಯನ ಮಾಡಲಾಗಿದೆ. ಈ ಪ್ರಯೋಗದಲ್ಲಿ ಭಾಗವಹಿಸಿದವರ ಹೃದಯ ಬಡಿತವನ್ನು ವಾಕಿಂಗ್ ಬಳಿಕ ಮತ್ತು ವಿಶ್ರಾಂತಿಯಲ್ಲಿರುವಾಗ ಎರಡು ಬಾರಿ ಅಳತೆ ಮಾಡಿಕೊಳ್ಳಲಾಗಿದೆ. ಅದರೊಂದಿಗೆ ಚಲಿಸಿದ ದೂರ, ವಾಕಿಂಗ್ ವೇಗ ಮತ್ತು ಒಟ್ಟಾರೆ ಹೆಜ್ಜೆಗಳ ಸಂಖ್ಯೆಗಳನ್ನು ಅಳತೆಯಲ್ಲಿ ಸೇರಿಸಿ ಫಲಿತಾಂಶವನ್ನು ಕಂಡು ಹಿಡಿಯಲಾಗಿದೆ.

ದೇಹದಲ್ಲಿರುವ ಬೊಜ್ಜನ್ನು ಕರಗಿಸದಿದ್ದರೆ ಹೃದ್ರೋಗ, ಪಾರ್ಶ್ವವಾಯು ಮತ್ತು ಮಧುಮೇಹ ಮುಂತಾದ ಅಪಾಯದ ರೋಗಗಳಿಗೆ ಕಾರಣವಾಗುತ್ತದೆ. ಸ್ಥೂಲಕಾಯವನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ದೈನಂದಿನ ವ್ಯಾಯಾಮ ಮತ್ತು ಚಿಕಿತ್ಸೆ ಅತ್ಯಗತ್ಯ. ವ್ಯಾಯಾಮ ಮಾಡುವಾಗ ಚ್ಯೂಯಿಂಗ್ ಗಮ್ ಜಗಿಯುವುದರಿಂದ ಆರೋಗ್ಯವು ಉತ್ತಮಗೊಳ್ಳುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.
First published:May 30, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ