• Home
  • »
  • News
  • »
  • lifestyle
  • »
  • Puffy Eyes And Face: ಬೆಳಗ್ಗೆ ಎದ್ದಾಗ ಕಣ್ಣಿನ ಕೆಳಗೆ ಮತ್ತು ಮುಖ ಊದಿರುತ್ತಾ? ಹೀಗೆ ಮಾಡಿ ನೋಡಿ

Puffy Eyes And Face: ಬೆಳಗ್ಗೆ ಎದ್ದಾಗ ಕಣ್ಣಿನ ಕೆಳಗೆ ಮತ್ತು ಮುಖ ಊದಿರುತ್ತಾ? ಹೀಗೆ ಮಾಡಿ ನೋಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಆಯುರ್ವೇದಾಚಾರ್ಯ ಅಲ್ಕಾ ವಿಜಯನ್ ಅವರು ದಿನವೂ ಬೆಳಗ್ಗೆ ಕಣ್ಣಿನ ಕೆಳಗೆ ಊತ ಮತ್ತು ಮುಖ ಊದಿಕೊಂಡ ಸಮಸ್ಯೆಗೆ ಸಂಬಂಧಿಸಿದ ಮಾಹಿತಿ ಶೇರ್ ಮಾಡಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಶೇರ್ ಮಾಡಿರುವ ಅವರು ಮುಖದ ಈ ರೀತಿಯ ಊತಕ್ಕೆ ಕಾರಣ ಏನು ಎಂಬುದನ್ನು ತಿಳಿಸಿದ್ದಾರೆ.

  • Share this:

    ಬೆಳಗ್ಗೆ (Morning) ಎದ್ದಾಗ ಸ್ವಲ್ಪ ಮುಖವು (Face) ಊದಿಕೊಂಡಂತೆ ಕಾಣುತ್ತದೆ. ಬೆಳ್ಳಂಬೆಳಗ್ಗೆ ಎದ್ದಾಗ ಮುಖವನ್ನು ಕನ್ನಡಿಯಲ್ಲಿ (Mirror) ನೋಡಿಕೊಂಡಾಗ ಬೆಚ್ಚಿ ಬೀಳುತ್ತೀರಾ? ಬೆಳಗ್ಗೆ ಬೇಗ ಎದ್ದಾಗ ನಿಮ್ಮ ಕಣ್ಣುಗಳ (Eyes) ಕೆಳಗೆ ಊತ (Swelling) ಇರುತ್ತದೆಯೇ? ಇದು ಒಂದು ದಿನ ಉಂಟಾದರೆ ಓಕೆ. ಆದ್ರೆ ದಿನವೂ ಹೀಗೆ ಆಗುತ್ತಿದ್ದರೆ ಅಥವಾ ಈ ಚಕ್ರವು ಕೆಲವು ದಿನಗಳವರೆಗೆ ನಿರಂತರವಾಗಿ ಮುಂದುವರಿದರೆ ನೀವು ವಿಶೇಷ ರೀತಿಯ ಸಮಸ್ಯೆ ಎದುರಿಸುತ್ತಿದ್ದೀರಿ ಎಂದು ತಿಳಿದುಕೊಳ್ಳಿ. ಆದರೆ ಚಿಂತೆ ಬೇಡ. ಈ ಸಮಸ್ಯೆಯನ್ನು ನಿಭಾಯಿಸಲು ದೀರ್ಘ ಚಿಕಿತ್ಸೆ ಅಗತ್ಯವಿಲ್ಲ. ಬದಲಿಗೆ ಬೆಳಗ್ಗೆ ಕಷಾಯ ಕುಡಿಯುವ ಮೂಲಕ ನೀವು ಕೆಲವೇ ದಿನಗಳಲ್ಲಿ ಪ್ರತಿದಿನ ಬೆಳಿಗ್ಗೆ ಕಣ್ಣಿನ ಕೆಳಗೆ ಉಂಟಾಗುವ ಈ ಊತವನ್ನು ಹೋಗಲಾಡಿಸುತ್ತದೆ.


    ಕಣ್ಣಿನ ಕೆಳಗೆ ಊತ ಮತ್ತು ಮುಖ ಊದಿಕೊಂಡ ಸಮಸ್ಯೆ


    ಆಯುರ್ವೇದಾಚಾರ್ಯ ಅಲ್ಕಾ ವಿಜಯನ್ ಅವರು, ದಿನವೂ ಬೆಳಗ್ಗೆ ಕಣ್ಣಿನ ಕೆಳಗೆ ಊತ ಮತ್ತು ಮುಖ ಊದಿಕೊಂಡ ಸಮಸ್ಯೆಗೆ ಸಂಬಂಧಿಸಿದ ಮಾಹಿತಿ ಶೇರ್ ಮಾಡಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಶೇರ್ ಮಾಡಿರುವ ಅವರು, ಮುಖದ ಈ ರೀತಿಯ ಊತಕ್ಕೆ ಕಾರಣ ಏನು ಎಂಬುದನ್ನು ತಿಳಿಸಿದ್ದಾರೆ.


    ಈ ರೀತಿಯ ಊತ ನಿಭಾಯಿಸಲು ಕಷಾಯ ಕುಡಿಯುವ ಬಗ್ಗೆ ಮಾಹಿತಿ ನೀಡಿದ್ದಾರೆ. ಊತ ಏಕೆ ಉಂಟಾಗುತ್ತದೆ ಮತ್ತು ಅದನ್ನು ತೊಡೆದು ಹಾಕುವ ಮಾರ್ಗದ ಬಗ್ಗೆ ತಿಳಿಸಿದ್ದಾರೆ.


    ಇದನ್ನೂ ಓದಿ: ವಿಟಮಿನ್ ಡಿ ಮತ್ತು ಕ್ಯಾಲ್ಸಿಯಂ ಬೇಕು ಎಂದರೆ ಈ ಆಹಾರಗಳನ್ನು ಸೇವಿಸಿ


    ಕಣ್ಣುಗಳ ಕೆಳಗೆ ಊತಕ್ಕೆ ಕಾರಣ ಏನು?


    ಕಣ್ಣುಗಳ ಕೆಳಗೆ ಪಫಿನೆಸ್ ಅಥವಾ ಊತ ಕಾಣಿಸಿಕೊಳ್ಳುವ ಸ್ಥಿತಿಯನ್ನು ಮೈಕ್ಸೋಡೆಮಾ ಎಂದು ಕರೆಯುತ್ತಾರೆ. ಡಾ. ಅಲ್ಕಾ ವಿಜಯನ್ ಅವರ ಪ್ರಕಾರ, ಹೈಪೋಥೈರಾಯ್ಡಿಸಂಗೆ ಸರಿಯಾಗಿ ಚಿಕಿತ್ಸೆ ನೀಡದೇ ಹೋದಾಗ ಈ ರೀತಿ ಕಣ್ಣುಗಳ ಕೆಳಗೆ ಊತದ ದೂರು ಹೆಚ್ಚುತ್ತ ಹೋಗುತ್ತದೆ.


    ಸಮಯಕ್ಕೆ ಸರಿಯಾಗಿ ಚಿಕಿತ್ಸೆ ತೆಗೆದುಕೊಳ್ಳದದೇ ಹೋದರೆ ಅಥವಾ ಔಷಧ ಡೋಸೇಜ್ ಅನ್ನು ಪೂರ್ಣಗೊಳಿಸದ ಕಾರಣ ಈ ಸಮಸ್ಯೆ ದೀರ್ಘ ಕಾಲ ಇರುತ್ತದೆ.


    ಹೈಪೋಥೈರಾಯ್ಡಿಸಂ ಲಕ್ಷಣಗಳು


    ಕಣ್ಣುಗಳ ಕೆಳಗೆ ಊತ ಹೊರತುಪಡಿಸಿ ಈ ಸಮಸ್ಯೆಯ ಹಲವು ಲಕ್ಷಣಗಳು ಇವೆ. ಇದ್ದಕ್ಕಿದ್ದಂತೆ ಹೆಚ್ಚು ಆಯಾಸ ಅನುಭವಿಸಲು ಪ್ರಾರಂಭಿಸಿದರೆ ಅಥವಾ ಹೆಚ್ಚು ಶೀತ ಅನುಭವಿಸಿದರೆ, ನಿಮ್ಮ ಚರ್ಮವು ಮೊದಲಿಗಿಂತ ಹೆಚ್ಚು ಒಣಗಲು ಪ್ರಾರಂಭಿಸಿದರೆ,


    ಒರಟುತನ, ತೂಕ ಹೆಚ್ಚಾಗುವುದು, ಸ್ನಾಯು ನೋವು ಕೂಡ ಇದರ ಸಂಕೇತ ಆಗಿರಬಹುದು. ಮುಖದ ಹೊರತಾಗಿ ಕೀಲುಗಳಲ್ಲಿ ಬಿಗಿತ ಮತ್ತು ಊತವೂ ಉಂಟಾಗಬಹುದು.


    ಹೈಪೋಥೈರಾಯ್ಡಿಸಂ ಗೆ ಕಾರಣಗಳು


    ಹೈಪೋಥೈರಾಯ್ಡಿಸಂ ಇದು ಹಾರ್ಮೋನುಗಳ ವ್ಯವಸ್ಥೆಯ ಮೇಲೆ ನೇರ ಪರಿಣಾಮ ಬೀರುತ್ತದೆ. ಕ್ಯಾನ್ಸರ ಗೆ ವಿಕಿರಣ ಚಿಕಿತ್ಸೆ, ಅತಿಯಾದ ಅಯೋಡಿನ್ ಸೇವನೆ, ಯಾವುದೇ ಹಠಾತ್ ಗಂಭೀರ ಕಾಯಿಲೆಗೆ ತುತ್ತಾಗುವುದು ಕಾರಣ ಆಗುತ್ತದೆ.


    ಈ ಕಷಾಯವನ್ನು ಪ್ರತಿದಿನ ಸೇವಿಸಿ


    ಹೈಪೋಥೈರಾಯ್ಡಿಸಂ ನ್ನು ಎದುರಿಸಲು ವಿಶೇಷ ಕಷಾಯ ಕುಡಿಯಲು ಡಾ. ಅಲ್ಕಾ ವಿಜಯನ್ ಸಲಹೆ ನೀಡಿದ್ದಾರೆ. ಈ ಕಷಾಯ ಮಾಡಲು ಬೇಕಾಗುವ ಪದಾರ್ಥಗಳು ಬನ್ ಪುಡಿಯ ಒಂದು ಚಮಚ, ಮೂರು ಪಿಂಚ್ ಒಣ ಶುಂಠಿ, ಮೂರು ಕಪ್ ನೀರು.


    ಈ ಎಲ್ಲಾ ಪದಾರ್ಥಗಳ ಮಿಶ್ರಣ ಮಾಡಿ ಮತ್ತು ಮಡ್ಡಿ ಉರಿಯಲ್ಲಿ ಬೆಚ್ಚಗಾಗಿಸಿ. ನೀರು ಒಂದು ಕಪ್‌ಗೆ ಕುದಿಯುವವರೆಗೆ ಬೇಯಿಸಿ. ಮೂರು ವಾರಗಳ ಕಾಲ ಖಾಲಿ ಹೊಟ್ಟೆಯಲ್ಲಿ ಬೆಳಿಗ್ಗೆ ಈ ಕಷಾಯ ಕುಡಿಯಿರಿ.


    ಇದನ್ನೂ ಓದಿ: ಚಿಕ್ಕ ವಯಸ್ಸಿನಲ್ಲೇ ಕಾಡುವ ಕಣ್ಣಿನ ಅಸ್ವಸ್ಥತೆ ದೂರ ಮಾಡಲು ಈ ಪದಾರ್ಥಗಳನ್ನು ಸೇವಿಸಿ!


    ಬಕ್ವೀಟ್ ಪೌಡರ್ ತಯಾರಿಸುವುದು ಹೇಗೆ?


    ಗೋಖ್ರು ಅಥವಾ ಗೋಕ್ಷುರ್ ಒಂದು ವಿಶೇಷ ರೀತಿಯ ಔಷಧೀಯ ಸಸ್ಯ. ಇದನ್ನು ಟ್ರಿಬುಲಸ್ ಟೆರೆಸ್ಟ್ರಿಸ್ ಎಂದೂ ಕರೆಯುತ್ತಾರೆ. ಇದು ಹಸಿರು ಮುಳ್ಳಿನ ಸುತ್ತಿನ ಹಣ್ಣುಗಳನ್ನು ಹೊಂದಿದೆ. ಈ ಹಣ್ಣುಗಳನ್ನು ನೆರಳಿನಲ್ಲಿ ಒಣಗಿಸಿ ಪುಡಿ ಮಾಡಿ ಸೇವನೆ ಮಾಡ್ತಾರೆ.

    Published by:renukadariyannavar
    First published: