• Home
  • »
  • News
  • »
  • lifestyle
  • »
  • Early Morning Wakeup: ಬೆಳಗ್ಗೆ ಬೇಗ ಏಳಲು ಆಯುರ್ವೇದ ತಜ್ಞರ ಸಿಂಪಲ್ ಸಲಹೆ ಹೀಗಿದೆ!

Early Morning Wakeup: ಬೆಳಗ್ಗೆ ಬೇಗ ಏಳಲು ಆಯುರ್ವೇದ ತಜ್ಞರ ಸಿಂಪಲ್ ಸಲಹೆ ಹೀಗಿದೆ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಉತ್ತಮ ನಿದ್ದೆ ಪಡೆಯಲು ಆಯುರ್ವೇದ ಕೆಲವು ಟಿಪ್ಸ್ ಹೇಳುತ್ತದೆ. ಅದರಲ್ಲಿ ಮೊದಲನೆಯದು ಎಲ್ಲರಿಗೂ ಗೊತ್ತಿರುವಂತೆ ರಾತ್ರಿ ಬೇಗ ಮಲಗಿ ಬೆಳಗ್ಗೆ ಬೇಗ ಏಳುವುದು. ಇದು ಮುಖ್ಯವಾದ ಮತ್ತು ಒಳ್ಳೆಯ ಅಭ್ಯಾಸ ಆಗಿದೆ. ಈ ಅಭ್ಯಾಸ ಫಾಲೋ ಮಾಡುವುದು ಕೆಲವರಿಗೆ ತುಂಬಾ ಕಷ್ಟದ ಕೆಲಸ ಆಗಿದೆ.

  • Share this:

    ಸದೃಢ ಆರೋಗ್ಯಕ್ಕೆ (Health) ಉತ್ತಮವಾಗಿ ಎಂಟು ಗಂಟೆಯ (Hours) ನಿದ್ದೆ (Sleep) ಹೊಂದುವುದು ತುಂಬಾ ಮುಖ್ಯ. ನಿಯಮಿತವಾಗಿ ದಿನವೂ ಎಂಟು ಗಂಟೆ ನಿದ್ದೆ ಹೊಂದುವುದು ಎಷ್ಟು ಅಗತ್ಯವೋ, ಅಷ್ಟೇ ಬೆಳಗ್ಗೆ ಬೇಗ ಏಳುವುದು (Early Morning Wakeup) ತುಂಬಾ ಮುಖ್ಯ ಆಗಿದೆ. ದಿನವೂ ಬೆಳಗ್ಗೆ ಬೇಗ ಏಳ್ಬೇಕು ಅಂತಾ ಟೈಂ ಟೇಬಲ್ (Time Table) ಹಾಕಿಕೊಳ್ತೀವಿ. ಆದ್ರೆ ಅದನ್ನ ಫಾಲೋ ಮಾಡೋಕೆ ಸಾಧ್ಯವಾಗದೇ ಅರ್ಧಕ್ಕೆ ಬಿಟ್ಟು ಬಿಡ್ತೀವಿ. ಮತ್ತು ಉತ್ತಮ ನಿದ್ದೆ ಪಡೆಯಲು ಆಯುರ್ವೇದ ಕೆಲವು ಟಿಪ್ಸ್ ಹೇಳುತ್ತದೆ. ಅದರಲ್ಲಿ ಮೊದಲನೆಯದು ಎಲ್ಲರಿಗೂ ಗೊತ್ತಿರುವಂತೆ ರಾತ್ರಿ ಬೇಗ ಮಲಗಿ, ಬೆಳಗ್ಗೆ ಬೇಗ ಏಳುವುದು. ಇದು ಮುಖ್ಯವಾದ ಮತ್ತು ಒಳ್ಳೆಯ ಅಭ್ಯಾಸ ಆಗಿದೆ.


    ರಾತ್ರಿ ಬೇಗ ಮಲಗಿ, ಬೆಳಗ್ಗೆ ಬೇಗ ಏಳುವ ಅಭ್ಯಾಸ


    ರಾತ್ರಿ ಬೇಗ ಮಲಗಿ, ಬೆಳಗ್ಗೆ ಬೇಗ ಏಳುವ ಈ ಅಭ್ಯಾಸ ಫಾಲೋ ಮಾಡುವುದು ಕೆಲವರಿಗೆ ತುಂಬಾ ಕಷ್ಟದ ಕೆಲಸ ಆಗಿದೆ. ಯಾಕಂದ್ರೆ ತಡರಾತ್ರಿಯವರೆಗಿನ ಕೆಲಸದ ಒತ್ತಡದಿಂದ ಕೆಲವರು ಬೆಳಗ್ಗೆ ಬೇಗ ಏಳಲು ಸಾಧ್ಯ ಆಗಲ್ಲ. ಇನ್ನು ಕೆಲವರು ತಡರಾತ್ರಿಯವರೆಗೆ ಮೊಬೈಲ್ ನೋಡುತ್ತಾ ಕಾಲ ಕಳೆಯುತ್ತಾರೆ. ಅಂಥವರು ಬೆಳಗ್ಗೆ ಬೇಗ ಏಳಲು ಸಾಧ್ಯ ಆಗಲ್ಲ.


    ಅನಾರೋಗ್ಯಕರ ಜೀವನಶೈಲಿ, ವ್ಯಾಯಾಮ ಮಾಡದಿರುವುದು ಮತ್ತು ಒತ್ತಡ ಹಾಗೂ ಇತರೆ ಕಾರಣಗಳಿಂದಾಗಿ ಜನರು ಬೇಗನೆ ಮಲಗಿ, ಬೇಗ ಎದ್ದೇಳಲು ಸಾಧ್ಯ ಆಗುವುದಿಲ್ಲ. ವೈದ್ಯಕೀಯ ವಿಜ್ಞಾನದಲ್ಲಿ ಇದನ್ನು ಅಸಹಜ ಸಿರ್ಕಾಡಿಯನ್ ರಿದಮ್‌ ನಲ್ಲಿ ಉಂಟಾಗುವ ಅಡಚಣೆ ಎಂದು ಕರೆಯಲಾಗುತ್ತದೆ.


    ಇದನ್ನೂ ಓದಿ: ದೇಹಕ್ಕೆ ಕ್ಯಾಲ್ಸಿಯಂ ಯಾಕೆ ಬೇಕು? ಯಾವ ಪದಾರ್ಥಗಳು ಮೂಳೆಗಳನ್ನು ಬಲಿಷ್ಠಗೊಳಿಸುತ್ತವೆ?


    ಮುಂಜಾನೆ ಬೇಗ ಏಳುವುದು ಹೇಗೆ?  


    ನೀವು ತುಂಬಾ ದಿನದಿಂದ ಬೆಳಗ್ಗೆ ಬೇಗ ಏಳಲು ಪ್ಲಾನ್ ಮಾಡಿ, ಫಾಲೋ ಮಾಡಲು ಸಾಧ್ಯ ಆಗಿಲ್ಲ ಎಂದಾದರೆ ನಿಮಗಾಗಿ ಇಲ್ಲಿವೆ ಕೆಲವು ಟ್ರಿಕ್ಸ್. ಇವುಗಳನ್ನು ಫಾಲೋ ಮಾಡಿದರೆ ನಂತರ ನೀವು ಬೆಳಿಗ್ಗೆ ಬೇಗ ಎದ್ದೇಳಲು ಸಾಧ್ಯ ಆಗುತ್ತದೆ. ಈ ಟ್ರಿಕ್ ಸಾಮಾನ್ಯ ಟ್ರಿಕ್ ಅಲ್ಲ.  ಇದು ಆಯುರ್ವೇದ ಟ್ರಿಕ್ ಆಗಿದೆ.


    ಇದು ನಿಮ್ಮ ದೇಹದ ಗಡಿಯಾರ ಸುಧಾರಿಸುತ್ತದೆ. ರಾತ್ರಿ ಮಲಗಲು ಉತ್ತಮ ಸಮಯವನ್ನು ಡಾ.ವರ ಲಕ್ಷ್ಮಿ ಹೇಳಿದ್ದಾರೆ. ಮುಂಜಾನೆ ಬೇಗ ಏಳಲು ಸಹಾಯ ಮಾಡುವ ಈ ಆಯುರ್ವೇದ ಸಲಹೆಗಳ ಬಗ್ಗೆ ನಾವು ಇಲ್ಲಿ ನೋಡೋಣ.


    ಪಿತ್ತ ಅವಧಿಯ ಮೊದಲು ಮಲಗಬೇಕು


    ಆಯುರ್ವೇದದ ಪ್ರಕಾರ, ಪ್ರತಿ ರಾತ್ರಿ ಪಿತ್ತ ಕಾಲದ ಮೊದಲು ಮಲಗಬೇಕು ಎಂದು ಆಯುರ್ವೇದ ತಜ್ಞರು ಹೇಳಿದ್ದಾರೆ. ಈ ಸಮಯ ರಾತ್ರಿ 11 ಗಂಟೆಯಿಂದ ರಾತ್ರಿ 2 ಗಂಟೆಯವರೆಗೆ ಇರುತ್ತದೆ. ಈ ಸಮಯವು ನಿಮ್ಮ ಮೆದುಳಿಗೆ ಹೆಚ್ಚಿನ ಶಕ್ತಿ ಬೇಕಾಗುವ ಸಮಯ ಆಗಿದೆ. ಅದಕ್ಕಾಗಿ ನೀವು ಯಾವುದೇ ಸಂದರ್ಭದಲ್ಲಿ 11 ಗಂಟೆಯ ಮೊದಲು ಮಲಗಬೇಕು. ಮತ್ತು ಎಲೆಕ್ಟ್ರಾನಿಕ್ ಗ್ಯಾಜೆಟ್‌ ಬಳಕೆ ನಿಲ್ಲಿಸಬೇಕು.


    ಮಲಗುವ ಮುನ್ನ ನಾನು ಏನು ಮಾಡಬೇಕು?


    ಗಾಢ ನಿದ್ರೆಗೆ ರಾತ್ರಿ ಮಲಗುವ ಮುನ್ನ ಏನು ಮಾಡಬೇಕು? ಎಂಬ ಪ್ರಶ್ನೆಗೆ ಆಯುರ್ವೇದ ತಜ್ಞರು ವಿವರವಾದ ಉತ್ತರ ನೀಡಿದ್ದಾರೆ. ಅವರ ಪ್ರಕಾರ, ಮಲಗುವ ಒಂದು ಅಥವಾ ಎರಡು ಗಂಟೆಗಳ ಮೊದಲು ಆ ಕೆಲಸ ಮಾಡಿದರೆ ಅದು ಮನಸ್ಸಿಗೆ ಸಂತೋಷ ಮತ್ತು ಶಾಂತಿ ನೀಡುತ್ತದೆ.


    ಸಂಜೆ 6 ಗಂಟೆಯ ನಂತರ ಏನು ಮಾಡಬೇಕು


    ರಾತ್ರಿ ನೀರಿನ ವಿಶ್ರಾಂತಿ ಶಬ್ದ ಆಲಿಸುವುದು, ಜಾಗರೂಕ ಪುಸ್ತಕ ಓದುವುದು ಮತ್ತು ಕೃತಜ್ಞತೆಯ ಜರ್ನಲ್ ಅನ್ನು ಓದುವುದು ಉತ್ತಮ ಅಭ್ಯಾಸ ಆಗಿದೆ.


    ಆಳವಾದ ನಿದ್ರೆಗೆ ಸೂರ್ಯನ ಬೆಳಕು ಅಗತ್ಯ


    ಸೂರ್ಯನ ಬೆಳಕನ್ನು ತೆಗೆದುಕೊಳ್ಳಿ. ಇದು ದೇಹದ ಸಿರ್ಕಾಡಿಯನ್ ಲಯವನ್ನು ಸುಧಾರಿಸುತ್ತದೆ. ಮತ್ತು ರಾತ್ರಿಯಲ್ಲಿ ಸಕಾಲಿಕ ನಿದ್ರೆ ಪಡೆಯಲು ಸಹಾಯ ಮಾಡುತ್ತದೆ. ಬೆಳಿಗ್ಗೆ 10 ರಿಂದ 20 ನಿಮಿಷಗಳ ಕಾಲ ಬಿಸಿಲಿನಲ್ಲಿ ನಡೆಯಿರಿ. ಅಥವಾ ಮನೆಯ ಕಿಟಕಿ ಮತ್ತು ಬಾಗಿಲು ತೆರೆಯಿರಿ.


    ನೀವು ಲೈಟ್-ಅಪ್ ಅಲಾರಾಂ ಗಡಿಯಾರ ಅಥವಾ ಲೈಟ್-ಅಪ್ ಬಾಕ್ಸ್ ಸಹ ಇದಕ್ಕೆ ಬಳಸಬಹುದು. ಬೆಳಗಿನ ದಿನಚರಿ ಬಗ್ಗೆ ಗಮನ ಹರಿಸುವುದು ತುಂಬಾ ಮುಖ್ಯ.


    ಇದನ್ನೂ ಓದಿ: ಮಧುಮೇಹ ನಿಯಂತ್ರಣಕ್ಕೆ ಯಾವ ಗಿಡಮೂಲಿಕೆ ಸೂಕ್ತ? ಇಲ್ಲಿದೆ ಮಾಹಿತಿ


    ಬೆಳಿಗ್ಗೆ ದಿನಚರಿಯಲ್ಲಿ ವ್ಯಾಯಾಮ ಮಾಡಿ. ಅಲಾರಾಂ ಗಡಿಯಾರವನ್ನು ಮಲಗುವ ಕೋಣೆಯಿಂದ ಹೊರಗಿಡಿ. ಬೆಳಿಗ್ಗೆ ಲಘು ಮತ್ತು ಆರೋಗ್ಯಕರ ಉಪಹಾರ ಸೇವಿಸಿ.

    Published by:renukadariyannavar
    First published: