Study: ವಿಟಮಿನ್ ಸಪ್ಲಿಮೆಂಟ್‌ ಹೆಚ್ಚು ತೆಗೆದುಕೊಂಡ್ರೆ ಕ್ಯಾನ್ಸರ್ ಕಟ್ಟಿಟ್ಟ ಬುತ್ತಿ!

ವಿಟಮಿನ್ ಹಾಗೂ ಖನಿಜಯುಕ್ತ ಸಪ್ಲಿಮೆಂಟ್‌ಗಳು ಅದೆಷ್ಟೋ ಅಡ್ಡಪರಿಣಾಮಗಳನ್ನು ಒಳಗೊಂಡಿದ್ದರೂ ನಾವು ಅದನ್ನು ನಿರ್ಲಕ್ಷಿಸಿ ಸಪ್ಲಿಮೆಂಟ್‌ಗಳನ್ನು ತೆಗೆದುಕೊಳ್ಳುತ್ತೇವೆ. ವೈದ್ಯರನ್ನು ಸಂಪರ್ಕಿಸದೆಯೇ ಪರಿಶೀಲನೆ ನಡೆಸದೆಯೇ ಸಪ್ಲಿಮೆಂಟ್‌ಗಳನ್ನು ತೆಗೆದುಕೊಳ್ಳುತ್ತೇವೆ. ಸಪ್ಲಿಮೆಂಟ್‌ಗಳಿಂದ ದೇಹಕ್ಕಾಗುವ ಅಡ್ಡಪರಿಣಾಮಗಳೇನು? ವೈದ್ಯರ ಸಲಹೆ ಏಕೆ ಮುಖ್ಯ ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿದುಕೊಳ್ಳೋಣ. 

ವಿಟಮಿನ್ ಸಪ್ಲಿಮೆಂಟ್‌

ವಿಟಮಿನ್ ಸಪ್ಲಿಮೆಂಟ್‌

  • Share this:
ವೈದ್ಯರ ಸಲಹೆ ಇಲ್ಲದೆಯೇ ವಿಟಮಿನ್ ಹಾಗೂ ಖನಿಜಯುಕ್ತ ಸಪ್ಲಿಮೆಂಟ್ (Supplement) ಮಾತ್ರೆಗಳನ್ನು ತೆಗೆದುಕೊಳ್ಳುವ ಎಷ್ಟೋ ಜನರು ನಮ್ಮೊಂದಿಗಿದ್ದಾರೆ. ಸಪ್ಲಿಮೆಂಟ್‌ಗಳ ಜಗತ್ತಿಗೆ ನಾವು ಹಳಬರೇನಲ್ಲ. ಈ ಸಪ್ಲಿಮೆಂಟ್‌ಗಳು ಅದೆಷ್ಟೋ ಅಡ್ಡಪರಿಣಾಮಗಳನ್ನು (Side effects) ಒಳಗೊಂಡಿದ್ದರೂ ನಾವು ಅದನ್ನು ನಿರ್ಲಕ್ಷಿಸಿ ಸಪ್ಲಿಮೆಂಟ್‌ಗಳನ್ನು ತೆಗೆದುಕೊಳ್ಳುತ್ತೇವೆ. ಸಪ್ಲಿಮೆಂಟ್‌ಗಳ ಮೇಲೆ ಎಷ್ಟು ಅವಲಂಬಿತರಾಗಿದ್ದೇವೆ ಎಂದರೆ ವೈದ್ಯರನ್ನು ಸಂಪರ್ಕಿಸದೆಯೇ ಪರಿಶೀಲನೆ ನಡೆಸದೆಯೇ ಸಪ್ಲಿಮೆಂಟ್‌ಗಳನ್ನು ತೆಗೆದುಕೊಳ್ಳುತ್ತೇವೆ. ಸಪ್ಲಿಮೆಂಟ್‌ಗಳಿಂದ ದೇಹಕ್ಕಾಗುವ ಅಡ್ಡಪರಿಣಾಮಗಳೇನು? ವೈದ್ಯರ (Doctors) ಸಲಹೆ ಏಕೆ ಮುಖ್ಯ ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿದುಕೊಳ್ಳೋಣ. ವಿಟಮಿನ್ ಸಪ್ಲಿಮೆಂಟ್‌ಗಳು ಕ್ಯಾನ್ಸರ್‌ಗಿರುವ (Cancer) ಅಡ್ಡಪರಿಣಾಮಗಳನ್ನು ಉಂಟುಮಾಡುತ್ತವೆ ಎಂಬುದು ಅಧ್ಯಯನಗಳಿಂದ ತಿಳಿದು ಬಂದಿದೆ. 

ಅಧ್ಯಯನವು ಏನು ಹೇಳುತ್ತದೆ
BMJ ನಲ್ಲಿ ಪ್ರಕಟವಾದ ಅಧ್ಯಯನ ವಿಮರ್ಶೆಯು ವಿಟಮಿನ್ ಸಪ್ಲಿಮೆಂಟ್‌ಗಳೊಂದಿಗೆ ಸಂಬಂಧಿಸಿದ ಕ್ಯಾನ್ಸರ್ ಅಪಾಯಗಳನ್ನು ಚರ್ಚಿಸಿದೆ. ಸಪ್ಲಿಮೆಂಟ್‌ಗಳು ಬೀಟಾ ಕ್ಯಾರೋಟಿನ್ ಹಾಗೂ ವಿಟಮಿನ್ ಎ ಸಂಯೋಜನೆಯನ್ನು ಒಳಗೊಂಡಿರುವುದರಿಂದ ಶ್ವಾಸಕೋಶದ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. ಧೂಮಪಾನಿಗಳಲ್ಲಿ ಕ್ಯಾನ್ಸರ್ ಅಪಾಯ 18% ಹೆಚ್ಚಿದ್ದರೆ ಸಪ್ಲಿಮೆಂಟ್ ತೆಗೆದುಕೊಳ್ಳುವವರಲ್ಲಿ ಈ ಅಪಾಯ 28% ಅಧಿಕವಾಗಿರುತ್ತದೆ ಎಂಬುದು ಅಧ್ಯಯನಗಳು ತಿಳಿಸಿವೆ.

ಸೆಲೆನಿಯಮ್ ಮತ್ತು ವಿಟಮಿನ್ ಇ ಕ್ಯಾನ್ಸರ್ ತಡೆಗಟ್ಟುವಿಕೆ ಪ್ರಯೋಗವು ವಿಟಮಿನ್ ಇ (400 IU/ದಿನ) ಸಪ್ಲಿಮೆಂಟ್ ಪುರುಷರಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್ ಅಪಾಯದಲ್ಲಿ 17% ಹೆಚ್ಚಳವನ್ನು ಉಲ್ಲೇಖಿಸಿದೆ ಎಂಬುದು ಮತ್ತೊಂದು ಅಧ್ಯಯನದಿಂದ ತಿಳಿದು ಬಂದಿದೆ.

ಬೇರೆ ಯಾವ ಮಾಹಿತಿಗಳನ್ನು ಅಧ್ಯಯನವು ತಿಳಿಸಿದೆ
ಕ್ಯಾನ್ಸರ್ ಮಾತ್ರವಲ್ಲದೆ, ಇತರ ಆರೋಗ್ಯ ತೊಡಕುಗಳ ಅಪಾಯವನ್ನು ಹೆಚ್ಚಿಸುವಲ್ಲಿ ಸಪ್ಲಿಮೆಂಟ್‌ಗಳ ಪರಿಣಾಮವನ್ನು ಅಧ್ಯಯನ ವಿಮರ್ಶೆಯು ಚರ್ಚಿಸಿದೆ.

ಇದನ್ನೂ ಓದಿ: Common Sleep Disorders: ದಿನಕ್ಕೆ 7 ಗಂಟೆ ನಿದ್ರೆ ಮಾಡಿದರೂ ಸಾಕಾಗ್ತಿಲ್ವಾ? ಈ ಸಮಸ್ಯೆಗೆ ಚಿಕಿತ್ಸೆ ಏನು?

ವಿಟಮಿನ್ ಡಿ ಹಾಗೂ ಕ್ಯಾಲ್ಸಿಯಂ ಸಪ್ಲಿಮೆಂಟ್‌ಗಳನ್ನು ವಯಸ್ಸಾದವರಿಗೆ ಮೂಳೆಗಳ ಬಲ ಹೆಚ್ಚಿಸಲು ತೆಗೆದುಕೊಳ್ಳುವಂತೆ ಸೂಚಿಸಲಾಗುತ್ತದೆ. ವಿಶ್ಲೇಷಣೆಯ ಪ್ರಕಾರ ವಿಟಮಿನ್ ಡಿ ಅಥವಾ ಕ್ಯಾಲ್ಸಿಯಂ ಸಪ್ಲಿಮೆಂಟ್ ಅನ್ನು ಮಾತ್ರವೇ ತೆಗೆದುಕೊಳ್ಳುವುದು ಸೊಂಟದ ಮುರಿತದ ಅಪಾಯವನ್ನು ತಗ್ಗಿಸಲಿಲ್ಲ ಅಂತೆಯೇ ವಿಟಮಿನ್ ಡಿ ಅನ್ನು ಮಾತ್ರವೇ ತೆಗೆದುಕೊಳ್ಳುವುದು ಮುರಿತವನ್ನು ಕಡಿಮೆ ಮಾಡಲಿಲ್ಲ ಬದಲಿಗೆ ಇವೆರಡನ್ನೂ ಜೊತೆಯಾಗಿ ತೆಗೆದುಕೊಳ್ಳುವುದು ಸೊಂಟದ ಮುರಿತ ಸೇರಿದಂತೆ ವಯಸ್ಸಾದವರಲ್ಲಿ ಕಂಡುಬರುವ ಎಲ್ಲಾ ಬಗೆಯ ಮುರಿತಗಳನ್ನು ಕಡಿಮೆ ಮಾಡಿದೆ ಎಂಬುದು ಅಧ್ಯಯನಗಳು ತಿಳಿಸಿವೆ.

ಈ ಎರಡೂ ಸಪ್ಲಿಮೆಂಟ್‌ಗಳ ಮಿತಿಮೀರಿದ ಸೇವನೆಯು ಅಪಾಯವನ್ನುಂಟು ಮಾಡುವುದರ ಜೊತೆಗೆ ಆಹಾರ ಮತ್ತು ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಯ ಮತ್ತು ನೈಸರ್ಗಿಕ ಸೇವನೆಯನ್ನು ಖಚಿತಪಡಿಸಿಕೊಳ್ಳಲು ಅಧ್ಯಯನವು ಸೂಚಿಸುತ್ತದೆ. ಹೃದಯರಕ್ತನಾಳದ ಅಪಾಯವನ್ನು ಕಡಿಮೆ ಮಾಡಲು ಉತ್ಕರ್ಷಣ ನಿರೋಧಕ ಸಪ್ಲಿಮೆಂಟ್‌ಗಳ ಬಳಕೆಯನ್ನು ಬೆಂಬಲಿಸುವ ಯಾವುದೇ ಸ್ಥಿರವಾದ ಪುರಾವೆಗಳು ಕಂಡುಬಂದಿಲ್ಲ ಎಂಬುದು ಅಧ್ಯಯನಗಳಿಂದ ತಿಳಿದು ಬಂದಿದೆ.

ವಿಟಮಿನ್ ಡಿ ಹಾಗೂ ಕ್ಯಾಲ್ಸಿಯಂ ಮಿಶ್ರವಾಗಿರುವ ಸಪ್ಲಿಮೆಂಟ್‌ಗಳು ಸ್ಟ್ರೋಕ್‌ಗೆ ಕಾರಣವೇ?
ಅಪಧಮನಿಗಳಲ್ಲಿ ಕೊಬ್ಬಿನ ಪದಾರ್ಥಗಳು ನಿರ್ಮಾಣಗೊಂಡಾಗ ಸಂಭವಿಸುವ ಅಪಧಮನಿ ಕಾಠಿಣ್ಯ ಸ್ಥಿತಿಯು ವಿಟಮಿನ್ ಡಿ ಮತ್ತು ಕ್ಯಾಲ್ಸಿಯಂ ಸಪ್ಲಿಮೆಂಟ್‌ಗಳ ಸೇವನೆಯಿಂದ ಉಂಟಾಗುವ ಸಾಧ್ಯತೆ ಇದೆ ಎಂಬುದು ಅಧ್ಯಯನವು ಸೂಚಿಸಿದೆ.

ಆನಲ್ಸ್ ಆಫ್ ಇಂಟರ್ನಲ್ ಮೆಡಿಸಿನ್ ಜರ್ನಲ್‌ನಲ್ಲಿ ಪ್ರಕಟವಾದ 2019 ರ ಅಧ್ಯಯನವು ಸುಮಾರು ಒಂದು ಮಿಲಿಯನ್ ಜನರನ್ನು ಒಳಗೊಂಡಿದ್ದ 277 ಯಾದೃಚ್ಛಿಕ ನಿಯಂತ್ರಿತ ಪ್ರಯೋಗಗಳ ಆಧಾರದ ಮೇಲೆ ಪಾರ್ಶ್ವವಾಯು ಮತ್ತು ಸಪ್ಲಿಮೆಂಟ್‌ಗಳ ನಡುವಿನ ಸಂಪರ್ಕವನ್ನು ಕಂಡುಹಿಡಿದಿದೆ. ವಿಟಮಿನ್ ಡಿ ಮತ್ತು ಕ್ಯಾಲ್ಸಿಯಂನ ಸಪ್ಲಿಮೆಂಟ್‌ಗಳು ಪಾರ್ಶ್ವವಾಯು ಅಪಾಯವನ್ನು 17% ದಷ್ಟು ಹೆಚ್ಚಿಸುತ್ತವೆ ಎಂದು ಅಧ್ಯಯನವು ಕಂಡುಹಿಡಿದಿದೆ.

ಸಾಮಾನ್ಯ ವಿಟಮಿನ್, ಮಿನರಲ್ ಸಪ್ಲಿಮೆಂಟ್‌ಗಳು
ವಿಟಮಿನ್ ಬಿ 12, ವಿಟಮಿನ್ ಡಿ, ಕ್ಯಾಲ್ಸಿಯಂ, ಫೋಲಿಕ್ ಆಮ್ಲ, ವಿಟಮಿನ್ ಸಿ, ವಿಟಮಿನ್ ಇ, ಸತು, ಮೆಲಟೋನಿನ್, ಮೀನಿನ ಎಣ್ಣೆಗೆ ಸಾಮಾನ್ಯವಾಗಿ ಬಳಸುವ ವಿಟಮಿನ್ ಸಪ್ಲಿಮೆಂಟ್‌ಗಳಾಗಿವೆ. ಇವುಗಳ ಸೇವೆಯು ಯಾವುದೇ ಅಡ್ಡಪರಿಣಾಮಗಳನ್ನುಂಟು ಮಾಡುವುದಿಲ್ಲವೆಂದು ಭಾವಿಸಿ ಅನೇಕರು ವೈದ್ಯರನ್ನು ಸಂಪರ್ಕಿಸದೆಯೇ ಇವುಗಳನ್ನು ಆಹಾರದಲ್ಲಿ ಸೇವಿಸುತ್ತಾರೆ. ಆದರೆ ಸಪ್ಲಿಮೆಂಟ್‌ಗಳ ಅತಿಯಾದ ಸೇವನೆಯು ಅಪಾಯಗಳಿಗೆ ಆಹ್ವಾನವಾಗಿದೆ. ಈ ಮಾತ್ರೆಗಳ ಸೇವನೆಯನ್ನು ಯಾವಾಗ ನಿಲ್ಲಿಸಬೇಕು ಎಂಬುದನ್ನು ವೈದ್ಯರು ಮಾತ್ರವೇ ಸಲಹೆ ನೀಡಬಲ್ಲರು. ಹಾಗಾಗಿ ವೈದ್ಯರ ಸಮಾಲೋಚನೆ ಅತೀ ಅಗತ್ಯವಾದುದು.

ಇದನ್ನೂ ಓದಿ:  Tattoo ಪ್ರಿಯರೇ ಹುಷಾರ್! ಹಚ್ಚೆ ಹಾಕಲು ಬಳಸುವ ಇಂಕ್​ನಿಂದ ಕ್ಯಾನ್ಸರ್ ಅಪಾಯ!

ನಾವು ನಿತ್ಯವೂ ಸೇವಿಸುವ ಆಹಾರಗಳಿಂದಲೇ ದೇಹಕ್ಕೆ ಬೇಕಾಗಿರುವ ವಿಟಮಿನ್‌ಗಳು ಹಾಗೂ ಖನಿಜಗಳ ಪೂರೈಕೆಯಾಗುತ್ತದೆ. ಇವುಗಳು ಸಣ್ಣ ಪ್ರಮಾಣದಲ್ಲಿ ಸಾಕಾಗುವುದರಿಂದ ಸಪ್ಲಿಮೆಂಟ್‌ಗಳ ಅಗತ್ಯವಿರುವುದಿಲ್ಲ. ದೇಹವು ಪೌಷ್ಟಿಕಾಂಶವನ್ನು ಹೀರಿಕೊಳ್ಳುವುದಿಲ್ಲ ಎಂದಾದಲ್ಲಿ ರಕ್ತ ಪರೀಕ್ಷೆಯನ್ನು ಮಾಡಿಸಿಕೊಂಡು ಕಾರಣವನ್ನು ಕಂಡುಹಿಡಿಯುವುದು ಉತ್ತಮ. ವೈದ್ಯರ ಸಲಹೆ ಸೂಚನೆಗಳನ್ನು ಪಡೆದ ನಂತರವೇ ಸಪ್ಲಿಮೆಂಟ್‌ಗಳ ಸೇವನೆಯನ್ನು ಮಾಡುವುದು ಸೂಕ್ತ.
Published by:Ashwini Prabhu
First published: