• Home
  • »
  • News
  • »
  • lifestyle
  • »
  • Vitamin Deficiency: ವಿಟಮಿನ್‍ಗಳ ಕೊರತೆಗೆ ಕಾರಣಗಳಿವು, ನಿಮ್ಮಲ್ಲೂ ಈ ಸಮಸ್ಯೆ ಇದೆಯಾ?

Vitamin Deficiency: ವಿಟಮಿನ್‍ಗಳ ಕೊರತೆಗೆ ಕಾರಣಗಳಿವು, ನಿಮ್ಮಲ್ಲೂ ಈ ಸಮಸ್ಯೆ ಇದೆಯಾ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Vitamin Deficiency Causes: ಮನುಷ್ಯ ಅನುಭವಿಸುವ ಹಲವಾರು ವೈದ್ಯಕೀಯ ಸಮಸ್ಯೆಗಳು ಸಹ ವಿಟಮಿನ್‍ಗಳನ್ನು ಸರಿಯಾಗಿ ಹೀರಿಕೊಳ್ಳಲು ಮತ್ತು ಚಯಾಪಚಯಗೊಳಿಸಲು ಕಷ್ಟವಾಗುತ್ತದೆ. ಇದು ವಿಟಮಿನ್ ಕೊರತೆಗೆ ಕಾರಣವಾಗಬಹುದು.

  • Share this:

ದೇಹಕ್ಕೆ ಬೇಕಾದ ಅವಶ್ಯಕವಾದ ಪೋಷಕ (Vitamin) ತತ್ವಗಳಲ್ಲಿ ಒಂದಾಗಿದೆ ಜೀವಸತ್ವಗಳು. ಇವು ನೈಸರ್ಗಿಕ ಆಹಾರ ಪದಾರ್ಥಗಳಲ್ಲಿ ಅಲ್ಪ ಪ್ರಮಾಣದಲ್ಲಿ ಇರುವ ಸಾವಯವ ಪದಾರ್ಥಗಳಾಗಿವೆ. ಇದು ದೇಹಕ್ಕೆ ಎಷ್ಟು ಅವಶ್ಯಕ ಎಂದರೆ ಇದರ ಕೊರತೆಯಾದಾಗ ಅಥವಾ ಬೇಕಾಗಿದ್ದ ಪ್ರಮಾಣಕ್ಕಿಂತ ಅತಿ ಕಡಿಮೆ ಪ್ರಮಾಣದಲ್ಲಿ ಸಿಕ್ಕಾಗ ಮನುಷ್ಯ ಶಾರೀರಿಕವಾಗಿ ಕೆಲವು ಗಂಭೀರ ಆರೋಗ್ಯ (Health Problem)  ಸಮಸ್ಯೆಗಳಿಗೆ ಒಳಗಾಗಬೇಕಾಗುತ್ತದೆ. ವಿಟಮಿನ್ ಒಂದು ಸಾವಯವ ಸಂಯುಕ್ತವಾಗಿದ್ದು ಇಂಗಾಲವನ್ನು ಹೊಂದಿರುತ್ತದೆ. ವಿಟಮಿನ್ ಎಂಬುದು ದೇಹಕ್ಕೆ (Body) ಬೇಕಾದ ಅತ್ಯಗತ್ಯ ಪೋಷಕಾಂಶವಾಗಿರುವ ವಿಟಮಿನ್ ಗಳಲ್ಲಿ ವಿವಿಧ ಪ್ರಕಾರಗಳಿದ್ದು ಮನುಷ್ಯ ಸೇರಿದಂತೆ ಪ್ರತಿಯೊಂದು ಜೀವಿಗಳಿಗೂ ನಿರ್ದಿಷ್ಟ ವಿಟಮಿನ್ ನಿರ್ದಿಷ್ಟ ಪ್ರಮಾಣದಲ್ಲಿ ಬೇಕಾಗಿರುತ್ತದೆ ಎಂಬುದು ಈಗಾಗಲೇ ವೈದ್ಯಕೀಯ ವಿಜ್ಞಾನದಿಂದ ತಿಳಿದುಬಂದಿದೆ.  


ಪ್ರತಿಯೊಂದು ಜೀವಿಯು ವಿಭಿನ್ನ ವಿಟಮಿನ್ ಅವಶ್ಯಕತೆಗಳನ್ನು ಹೊಂದಿರುತ್ತದೆ. ಉದಾಹರಣೆಗೆ, ಮಾನವರಿಗೆ ವಿಟಮಿನ್ ಸಿ ಯ ಅಗತ್ಯವಿದ್ದು ಅವರು ಅದನ್ನು ತಾವು ಸೇವಿಸುವ ಆಹಾರದ ಮೂಲಕ ಅದನ್ನು ಪಡೆಯುತ್ತಾರೆ. ಅದೇ ನಾಯಿಗಳು ಅವುಗಳಿಗೆ ಅಗತ್ಯವಿರುವ ಎಲ್ಲಾ ವಿಟಮಿನ್ ಸಿ ಅನ್ನು ಅವು ತಾವಾಗಿಯೇ ತಮ್ಮ ಶರೀರದಲ್ಲಿ ಉತ್ಪಾದಿಸಿಕೊಳ್ಳುತ್ತವೆ. 


ಇನ್ನೊಂದು ಉದಾಹರಣೆ ಎಂದರೆ ಮಾನವರಿಗೆ ಬೇಕಾದ ವಿಟಮಿನ್ ಡಿ ಆಹಾರದಲ್ಲಿ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಲಭ್ಯವಿಲ್ಲ. ಸೂರ್ಯನ ಬೆಳಕಿಗೆ ಒಡ್ಡಿಕೊಂಡಾಗ ಮಾನವ ದೇಹವು ವಿಟಮಿನ್ ಡಿ ಅನ್ನು ಪಡೆಯುತ್ತದೆ ಮತ್ತು ಇದು ವಿಟಮಿನ್ ಡಿ ಯ ಅತ್ಯುತ್ತಮ ಮೂಲ ಕೂಡ ಹೌದು. 


ವಿಟಮಿನ್‍ ಮಾಡುವುದಾದರೂ ಏನು?


ಈಗಾಗಲೇ ಹೇಳಿರುವಂತೆ ವಿಟಮಿನ್ ಗಳಲ್ಲಿ ವಿವಿಧ ಪ್ರಕಾರಗಳಿದ್ದು ಅವು ದೇಹದಲ್ಲಿ ವಿಭಿನ್ನ ಪಾತ್ರಗಳನ್ನು ನಿರ್ವಹಿಸುತ್ತವೆ ಮತ್ತು ಆರೋಗ್ಯವಾಗಿರಲು ಒಬ್ಬ ವ್ಯಕ್ತಿಗೆ ಪ್ರತಿ ವಿಟಮಿನ್‌ನ ವಿಭಿನ್ನ ಪ್ರಮಾಣದ ಅಗತ್ಯವಿರುತ್ತದೆ.


ಈ ಕೆಳಗೆ ಹೆಸರಿಸಲಾಗಿರುವ ಪ್ರತಿಯೊಂದು ವಿಟಮಿನ್‍ಗಳು ದೇಹದಲ್ಲಿ ತಮ್ಮದೆ ಆದ ಪ್ರಮುಖ ಕೆಲಸವನ್ನು ಹೊಂದಿರುತ್ತವೆ ಹಾಗೂ ಆ ಕೆಲಸಕ್ಕಾಗಿ ಇಂತಿಷ್ಟೆ ಪ್ರಮಾಣದಲ್ಲಿ ವಿಟಮಿನ್ ಬೇಕಾಗಿರುತ್ತದೆ. ನೀವು ನಿರ್ದಿಷ್ಟ ವಿಟಮಿನ್ ಅನ್ನು ಸಾಕಷ್ಟು ಪ್ರಮಾಣದಲ್ಲಿ ಪಡೆಯದಿದ್ದಾಗ ವಿಟಮಿನ್ ಕೊರತೆ ಉಂಟಾಗುತ್ತದೆ. ವಿಟಮಿನ್ ಕೊರತೆಯು ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. 


ಸಾಕಷ್ಟು ಹಣ್ಣುಗಳು, ತರಕಾರಿಗಳು, ಬೀನ್ಸ್, ಮಸೂರ, ಧಾನ್ಯಗಳು ಮತ್ತು ಬಲವರ್ಧಿತ ಡೈರಿ ಆಹಾರಗಳನ್ನು ಸೇವಿಸದಿರುವುದು ಹೃದ್ರೋಗ, ಕ್ಯಾನ್ಸರ್ ಮತ್ತು ಕಳಪೆ ಮೂಳೆ ಆರೋಗ್ಯ (ಆಸ್ಟಿಯೊಪೊರೋಸಿಸ್) ಸೇರಿದಂತೆ ಆರೋಗ್ಯ ಸಮಸ್ಯೆಗಳು ಬರಲು ಕಾರಣವಾಗಬಹುದು. 


ನಮಗೆ ಅವಶ್ಯಕವಿರುವ ವಿಟಮಿನ್‍ಗಳು


ವಿಟಮಿನ್ A


ವಿಟಮಿನ್ D


ವಿಟಮಿನ್ E


ವಿಟಮಿನ್ K


ವಿಟಮಿನ್ C


ವಿಟಮಿನ್ B1 ಥಯಾಮೈನ್


ವಿಟಮಿನ್ B2 ರೈಬೋಫ್ಲೆವಿನ್


ವಿಟಮಿನ್ B3 ನಿಯಾಸಿನ್


ವಿಟಮಿನ್ B5 ಪ್ಯಾಂಟೋಥೆನಿಕ್ ಆಸಿಡ್


ವಿಟಮಿನ್ B6 ಪೈರೋಕ್ಸೈಡೈನ್


ವಿಟಮಿನ್ B7 ಬಯೋಟಿನ್


ವಿಟಮಿನ್ B9 ಫೋಲೇಟ್


ವಿಟಮಿನ್ B12 ಕೊಬಾಲಾಮಿನ್


ವಿಟಮಿನ್ ಕೊರತೆ ಉಂಟಾದಾಗ ಶಾರೀರಿಕವಾಗಿ ಅನೇಕ ಸಮಸ್ಯೆಗಳು ಉಂಟಾಗುತ್ತವೆ. ಮೊದಲೇ ಹೇಳಿದಂತೆ ವಿಟಮಿನ್ ಗಳು ಅತ್ಯಗತ್ಯವಾಗಿ ಬೇಕಾಗಿರುವ ಪೋಷಕಾಂಶಗಳಾಗಿವೆ ಹಾಗೂ ನಮ್ಮ ಶರೀರವು ತನ್ಮೂಲಕ ಎಲ್ಲ ಪ್ರಕ್ರಿಯೆಗಳನ್ನು ನಿರ್ವಹಿಸುತ್ತ ತನ್ನ ಕಾರ್ಯ ಮಾಡಬೇಕೆಂದರೆ ಅದಕ್ಕೆ ಹಲವಾರು ಬಾಹ್ಯ ಮೂಲಗಳಿಂದಲೂ ಸಹಕಾರ ಬೇಕಾಗಿರುವುದು ಅವಶ್ಯಕವಾಗಿರುತ್ತದೆ. ಇಂತಹ ಸಹಕಾರವನ್ನು ವಿಟಮಿನ್ ಗಳು ದೇಹಕ್ಕೆ ನೀಡುವುದರಿಂದ ನಮ್ಮ ದೇಹವು ಆರೋಗ್ಯಕರ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿರುತ್ತದೆ. ಇದರ ಕೊರತೆಯುಂಟಾದಾಗ ನಮ್ಮಲ್ಲಿ ಕಾಣಬಹುದಾದ ಕೆಲವು ಸಮಸ್ಯೆಗಳು ಹೀಗಿರಬಹುದು.




ಆಯಾಸ, 


ಕಡಿಮೆ ಶಕ್ತಿ


ಮೂಳೆ ಸಾಂದ್ರತೆಯ ನಷ್ಟ 


ಒಣ ಚರ್ಮ ಮತ್ತು ಕೂದಲು


ಖಿನ್ನತೆ


ಕಿರಿಕಿರಿ 


ಸುಲಭವಾಗಿ ಗಾಯಗೊಳ್ಳೂವುದು ಹಾಗೂ ರಕ್ತಸ್ರಾವ


ಸರಿಯಾಗಿ ಮಾಯದ ಗಾಯ (ದೀರ್ಘಕಾಲದವರೆಗೆ ಇರುತ್ತದೆ)


ಸೋಂಕುಗಳಿಗೆ ಸುಲಭವಾಗಿ ತುತ್ತಾಗುವುದು


ಚರ್ಮದ ಬಣ್ಣ ಬದಲಾವಣೆಗಳು (ಸಾಮಾನ್ಯವಾಗಿ ನಿಮ್ಮ ಚರ್ಮದ ಮೇಲೆ ಸಣ್ಣ, ಚಪ್ಪಟೆ, ತಿಳಿ ತೇಪೆಗಳು)


ಇದನ್ನೂ ಓದಿ: ಮಧುಮೇಹ ನಿಯಂತ್ರಣಕ್ಕೆ ಈ ಆಯುರ್ವೇದ ಆಹಾರಗಳು ಸಾಕು


ಹಾಗಾದರೆ ವಿಟಮಿನ್ ಕೊರತೆಗೆ ಕಾರಣಗಳೇನು?


ನಾವು ಸೇವಿಸುವ ಆಹಾರಗಳು


ಸಾಮಾನ್ಯವಾಗಿ, ವಿಟಮಿನ್ ಕೊರತೆ ಎಂಬುದು ನಾವು ಯಾವ ರೀತಿ ಹಾಗೂ ಏನು ಏನು ಆಹಾರ ಸೇವಿಸುತ್ತೇವೆ ಎಂಬುದರ ಮೇಲೆ ಹೆಚ್ಚು ಅವಲಂಬಿತವಾಗಿರುತದೆ. ಜೀವಸತ್ವಗಳು ಹೆಚ್ಚಾಗಿ ಹಣ್ಣುಗಳು, ತರಕಾರಿಗಳು, ಧಾನ್ಯಗಳು, ಮಾಂಸ, ಕೋಳಿ ಮತ್ತು ಸಮುದ್ರಾಹಾರದಲ್ಲಿ ಕಂಡುಬರುತ್ತವೆ. ಪ್ರತಿಯೊಂದು ವಿಟಮಿನ್ ಒಂದಕ್ಕಿಂತ ಹೆಚ್ಚು ವಿಧದ ಆಹಾರಗಳಲ್ಲಿ ಕಂಡುಬರುತ್ತದೆ, ಮತ್ತು ಕೆಲವು ಆಹಾರಗಳು ವಿಟಮಿನ್ ಗಳ ಕವಚ ಹೊಂದಿರುತ್ತದೆ. ಉದಾಹರಣೆಗೆ ಹಾಲು ಇದರಲ್ಲಿ ಮುಖ್ಯವಾಗಿ ಕ್ಯಾಲ್ಸಿಯಮ್ ಖನಿಜವಿರುತ್ತ್ದೆಯಾದರೂ ಇದು ವಿಟಮಿನ್ ಡಿ ಯ ಕವಚ ಹೊಂದಿರುತ್ತದೆ.  ಪಾಸ್ಟಾ, ಅಕ್ಕಿ ಮತ್ತು ಏಕದಳವನ್ನು ಹೆಚ್ಚಾಗಿ ವಿವಿಧ ಜೀವಸತ್ವಗಳಿಂದ ಕೂಡಿರುತ್ತವೆ. ಹಾಗಾಗಿ ನಾವು ಸೇವಿಸುವ ಆಹಾರ ಕ್ರಮದಲ್ಲಿ ಬದಲಾವಣೆಯಾದಾಗ ವಿಟಮಿನ್ ಕೊರತೆ ಕಾಣಿಸಬಹುದಾಗಿದೆ.


ವೈದ್ಯಕೀಯ ಸ್ಥಿತಿ


ಒಮ್ಮೊಮ್ಮೆ ನಾವು ಸಮತೋಲನವಾದ ಆಹಾರಗಳನ್ನೇ ತೆಗೆದುಕೊಳ್ಳುತ್ತಿರುತ್ತೇವೆ. ಎಲ್ಲ ರೀತಿಯ ಅವಶ್ಯಕ ವಿಟಮಿನ್ ಗಳು ಲಭಿಸುವಂತೆ ಸಮಗ್ರ ಪದಾರ್ಥಗಳನ್ನೂ ಸಹ ತಿನ್ನುತ್ತಿರುತ್ತೇವೆ. ಆದರೂ ವಿಟಮಿನ್ ಕೊರತೆಯನ್ನು ಅನುಭವಿಸಿದರೆ ಅದಕ್ಕೆ ನಮ್ಮ ವೈದ್ಯಕೀಯ ಸ್ಥಿತಿಯೇ ಪ್ರಮುಖ ಕಾರಣವಾಗಿರಬಹುದು. ಅಂದರೆ ದೇಹದಲ್ಲೇ ಇರುವ ಕೆಲವು ಅಂಗಾಂಗಗಳ ತೊಡಕಿನಿಂದಾಗಿ ಸರಿಯಾದ ಪ್ರಮಾಣದಲ್ಲಿ ಆಹಾರದಲ್ಲಿ ಲಭಿಸುವ ವಿಟಮಿನ್ ಗಳನ್ನು ಹೀರಿಕೊಳ್ಳಲು ಸಾಧ್ಯವಾಗದೆ ಇರಬಹುದು. 


ಡಯಟ್


ಅರೇ ಇದೇನಪ್ಪಾ ಡಯಟ್ ಕೂಡ ವಿಟಮಿನ್ ಕೊರತೆ ಉಂಟು ಮಡಬಹುದೆ..ಎಂದು ನಿಮಗೆ ಹೈರಾಣಾಗಿರಬಹುದು. ಆದರೆ, ಇದು ಸತ್ಯ, ಕೆಲವು ನಿರ್ದಿಷ್ಟ ಮಾಂಸಗಳು ವಿಟಮಿನ್ B12 ಗೆ ಮೂಲವಾಗಿದ್ದು ಡಯಟ್ ಅದೀಯಲ್ಲಿ ನಾವು ಮಾಂಸ ಸೇವಿಸದೆ ಇರುವ ಸಂದರ್ಭದಲ್ಲಿ ಇದು ದೊರೆಯದೇ ಇರಬಹುದು. 


ಗ್ಲುಟೆನ್ ಮುಕ್ತ ಆಹಾರಗಳು ಸಾಮಾನ್ಯವಾಗಿ ಧಾನ್ಯಗಳ ಸಾರವನ್ನು ಹೊಂದಿರುವುದಿಲ್ಲ. ಆದರೆ, ಧಾನ್ಯಗಳು ವಿಟಮಿನ್ ಗಳಿಂದ ಸಮೃದ್ಧವಾಗಿರುತ್ತವೆ. ಹಾಗಾಗಿ ನೀವು ಡೈರಿ ಮುಕ್ತ ಆಹಾರ ಸೇವಿಸುತ್ತಿದ್ದರೆ ನಿಮಗೆ ವಿಟಮಿನ್ ಕೊರತೆ ಉಂಟಾಗಬಹುದು.


ಬಿಸಿಲು ತಾಗದೆ ಇರುವುದು


ವಿಟಮಿನ್ ಡಿ ಎಂಬುದು ನಮಗೆ ನೇರವಾಗಿ ಸಿಗುವುದಿಲ್ಲ, ಬದಲಾಗಿ ನಮ್ಮ ಶರೀರಕ್ಕೆ ತಾಗುವ ಬಿಸಿಲಿನ ಕಿರಣಗಳಿಂದ ಶರೀರದೊಳಗೆ ಸಂಶ್ಲೇಷಣೆಗೊಂಡು ವಿಟಮಿನ್ ಡಿ ಉತ್ಪತ್ತಿಯಾಗುತ್ತಿರುತ್ತದೆ. ಹಾಗಾಗಿ ಬಿಸಿಲು ತಾಗದೆ ಇರುವುದೂ ಸಹ ವಿಟಮಿನ್ ಡಿ ಕೊರತೆಗೆ ಕಾರಣವಾಗಬಹುದು. ಶೈತ್ಯ ಪ್ರದೇಶಗಳಲ್ಲಿ ಅದರಲ್ಲೂ ವಿಶೇಶವಾಗಿ ಚಳಿಗಾಲದ ಸಂದರ್ಭದಲ್ಲಿ ಇದು ಸಾಮಾನ್ಯ ಸಮಸ್ಯೆಯಾಗಿರುತ್ತದೆ.  


ಅತಿಯಾದ ಮದ್ಯ ಸೇವನೆ ಹಾಗೂ ಸಿಗರೆಟ್ ಸೇದುವುದು


ವಿಟಮಿನ್ ಸಿ ಯು ಇದರಿಂದ ಕಡಿಮೆಯಾಗತೊಡಗುತ್ತದೆ. ಏಕೆಂದರೆ ಸಿಗರೆಟ್ ಸೇದುವಿಕೆ ದೇಹವು ವಿಟಮಿನ್ ಸಿಯನ್ನು ಹೀರಿಕೊಳ್ಳುವುದನ್ನು ಕುಗ್ಗಿಸುತ್ತದೆ.


ಆಹಾರ ಹೊತ್ತಿಸುವುದು


ಇದು ಸೋಜಿಗ ಎನಿಸಿದರೂ ಸತ್ಯ, ನಾವು ತಯಾರಿಸುವ ಆಹಾರವನ್ನು ಅತಿಯಾಗಿ ಬೇಯಿಸಿ ಅದು ಸುಟ್ಟು ಹೋಗುವಂತೆ ಮಾಡಿದಾಗ ಆ ಆಹಾರದಲ್ಲಿರುವ ವಿಟಮಿನ್ ಗಳು ಸಹ ನಾಶ ಹೊಂದಿರುತ್ತವೆ. 


ವೈದ್ಯಕೀಯ ಅನಾರೋಗ್ಯ


ಮನುಷ್ಯ ಅನುಭವಿಸುವ ಹಲವಾರು ವೈದ್ಯಕೀಯ ಸಮಸ್ಯೆಗಳು ಸಹ ವಿಟಮಿನ್‍ಗಳನ್ನು ಸರಿಯಾಗಿ ಹೀರಿಕೊಳ್ಳಲು ಮತ್ತು ಚಯಾಪಚಯಗೊಳಿಸಲು ಕಷ್ಟವಾಗುತ್ತದೆ. ಇದು ವಿಟಮಿನ್ ಕೊರತೆಗೆ ಕಾರಣವಾಗಬಹುದು.


ಇದನ್ನೂ ಓದಿ: ಪಟಾಕಿ ಹಚ್ಚುವ ಸಂಭ್ರಮದೊಳಗೆ ಪ್ರಾಣಿಗಳ ಬಗ್ಗೆಯೂ ಇರಲಿ ಎಚ್ಚರ, ಪೆಟ್ ಅನಿಮಲ್ಸ್ ಸೇಫ್ಟಿಗಾಗಿ ಹೀಗೆ ಮಾಡಿ


ವಿಟಮಿನ್ ಕೊರತೆ ಉಂಟಾಗಲು ಸಾಮಾನ್ಯ ವೈದ್ಯಕೀಯ ಕಾರಣಗಳು:


ಆಲ್ಕೊಹಾಲ್ ನಿಂದ ಉಂಟಾಗುವ ಯಕೃತ್ತಿನ ರೋಗ


ಯಕೃತ್ತಿನ ವೈಫಲ್ಯ


ಮೂತ್ರಪಿಂಡ ರೋಗ


ದೀರ್ಘಕಾಲದ ಅತಿಸಾರ


ಮಾಲಾಬ್ಸರ್ಪ್ಶನ್ ಸಿಂಡ್ರೋಮ್


ಗ್ಯಾಸ್ಟ್ರಿಕ್ ಬೈಪಾಸ್


ಉರಿಯೂತದ ಕರುಳಿನ ಕಾಯಿಲೆ 


ಕ್ರೋನ್ಸ್ ಕಾಯಿಲೆ


ಕೆರಳಿಸುವ ಕರುಳಿನ ಸಹಲಕ್ಷಣಗಳು


ವಿನಾಶಕಾರಿ ರಕ್ತಹೀನತೆ ಹೆಚ್ಚಿನ ಜನರಿಗೆ ಗೊಂದಲಮಯ ಪದವಾಗಿದೆ. ಇದು ಒಂದು ರೀತಿಯ ಸ್ವಯಂ ನಿರೋಧಕ ಕಾಯಿಲೆಯಾಗಿದ್ದು ಅದು ಸಣ್ಣ ಕರುಳಿನ ಮೇಲೆ ಪರಿಣಾಮ ಬೀರುತ್ತದೆ - ವಿಟಮಿನ್ ಬಿ 12 ಹೀರಿಕೊಳ್ಳುವಿಕೆಯನ್ನು ಕಡಿಮೆ ಮಾಡುತ್ತದೆ ಮತ್ತು ಅಂತಿಮವಾಗಿ ರಕ್ತಹೀನತೆಗೆ ಕಾರಣವಾಗುತ್ತದೆ

Published by:Sandhya M
First published: