ವಿಟಮಿನ್ ಡಿ ಆಹಾರ ನೀಡಿ ಮಕ್ಕಳಲ್ಲಿ ಕೊಲೆಸ್ಟ್ರಾಲ್​ ನಿಯಂತ್ರಿಸಿ

news18
Updated:June 11, 2018, 1:06 PM IST
ವಿಟಮಿನ್ ಡಿ ಆಹಾರ ನೀಡಿ ಮಕ್ಕಳಲ್ಲಿ ಕೊಲೆಸ್ಟ್ರಾಲ್​ ನಿಯಂತ್ರಿಸಿ
news18
Updated: June 11, 2018, 1:06 PM IST
-ನ್ಯೂಸ್ 18 ಕನ್ನಡ

ವಿಟಮಿನ್ ಡಿ ಸಮೃದ್ಧವಾಗಿರುವ ಆಹಾರ ಸೇವನೆಯಿಂದ ಮಕ್ಕಳಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆಗೊಳಿಸಿ, ಹೃದಯರಕ್ತನಾಳದ ಕಾಯಿಲೆಗಳನ್ನು ದೂರ ಮಾಡಬಹುದೆಂದು ಹೊಸ ಅಧ್ಯಯನ ತಿಳಿಸಿದೆ.

ದೇಹದಲ್ಲಿ 80 ನನೊಮೊಲ್ಸ್​ ಲೀಟರ್​ಗಿಂತ ಡಿ ವಿಟಮಿನ್ ಹೊಂದಿರುವ ಮಕ್ಕಳಲ್ಲಿ ಕಡಿಮೆ ಸಾಂದ್ರತೆಯ ಲಿಪೊಪ್ರೋಟೀನ್(LDL) ಅಂಶ ಕಂಡು ಬಂದಿದೆ. ಹಾಗೆಯೇ ವಿಟಮಿನ್ ಮಟ್ಟ 50 ನನೊಮೊಲ್ಸ್​ ಲೀಟರ್​ಗಿಂತ ಕಡಿಮೆ ಇರುವ ಮಕ್ಕಳಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಾಗಿರುವುದು ಸಂಶೋಧನೆಯಿಂದ ಸಾಬೀತಾಗಿದೆ.

ಈ ಅಧ್ಯಯನಕ್ಕಾಗಿ ಫಿನ್​ಲ್ಯಾಂಡ್​ ವಿಶ್ವವಿದ್ಯಾಲಯದ ಸಂಶೋಧಕರು 6 ಮತ್ತು 8 ವಯಸ್ಸಿನ ಒಳಗಿರುವ 500 ಮಕ್ಕಳನ್ನು ಪರೀಕ್ಷೆಗೊಳಪಡಿಸಿದ್ದರು.

ಈ ಅಧ್ಯಯನದಿಂದ ಮೂಳೆಯ ಬಲವರ್ಧನೆಗೆ ವಿಟಮಿನ್ ಡಿ ಅತ್ಯಗತ್ಯ ಎಂದು ತಿಳಿದು ಬಂದಿದೆ. ಅಲ್ಲದೇ ದೇಹದಲ್ಲಿ ಸೆರಮ್ ಮಟ್ಟ ಕಡಿಮೆಯಾದರೆ ಅಸ್ಟಿಯೋಮೆಲಸಿಯಾ ಮತ್ತು ಅಸ್ಟಿಯೋಪೆನಿಯಾಗಳ ಅಪಾಯವನ್ನು ಹೆಚ್ಚಿಸುತ್ತದೆ ಎಂದೂ ಸಂಶೋಧಕರು ತಿಳಿಸಿದ್ದಾರೆ.

ಹಲವಾರು ದೇಶಗಳಲ್ಲಿ ವಿಟಮಿನ್ ಡಿ ಆಹಾರಗಳನ್ನು ಹೆಚ್ಚಾಗಿ ಸೇವಿಸುವಂತೆ ಅರಿವು ಮೂಡಿಸಲಾಗುತ್ತಿದ್ದು, ಡೈರಿ ಉತ್ಪನ್ನ, ಸ್ಪ್ರೆಡ್ಸ್​ ಮತ್ತು ಮೀನುಗಳ ಸೇವನೆಯಿಂದ ದೇಹದಲ್ಲಿ ವಿಟಮಿನ್ ಡಿ ಜೀವಸತ್ವಗಳನ್ನು ಹೆಚ್ಚಿಸಿಕೊಳ್ಳಬಹುದು ಎಂದು ಅಧ್ಯಯನ ತಂಡ ತಿಳಿಸಿದೆ.
First published:June 11, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...