• Home
  • »
  • News
  • »
  • lifestyle
  • »
  • Vitamin D Deficiency: ಕಾಶ್ಮೀರಿ ಮಹಿಳೆಯರಲ್ಲಿ ವಿಟಮಿನ್ ಡಿ ಕೊರತೆ ಹೆಚ್ಚು- ಕಾರಣ ಇಲ್ಲಿದೆ

Vitamin D Deficiency: ಕಾಶ್ಮೀರಿ ಮಹಿಳೆಯರಲ್ಲಿ ವಿಟಮಿನ್ ಡಿ ಕೊರತೆ ಹೆಚ್ಚು- ಕಾರಣ ಇಲ್ಲಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

“222 (82.2%) ಜನರು ವಿಟಮಿನ್ ಡಿ ಕೊರತೆಯನ್ನು ಹೊಂದಿದ್ದರು. 69 ಪುರುಷರಲ್ಲಿ 45 ಮತ್ತು 201ರ ಪೈಕಿ 177 ರಷ್ಟು ಮಹಿಳೆಯರಲ್ಲಿ ವಿಟಮಿನ್ ಡಿ ಕೊರತೆ ಕಂಡುಬಂದಿದೆ” ಎಂದು ಸಂಶೋಧನಾ ಪ್ರಬಂಧವು ಬಹಿರಂಗಪಡಿಸಿದೆ.

  • Share this:

ದೇಹದ ಆರೋಗ್ಯಕ್ಕೆ ಪ್ರತಿಯೊಂದು ವಿಟಮಿನ್(Vitamin) ಅವಶ್ಯಕ. ವಿಟಮಿನ್‌ಗಳಲ್ಲಿ ಯಾವುದಾದರೂ ಒಂದು ವಿಟಮಿನ್ ಕೊರತೆ ಉಂಟಾದರೂ ದೇಹದ ಆರೋಗ್ಯದ(Health) ಮೇಲೆ ಪರಿಣಾಮ ಬೀರುತ್ತದೆ. ಅದರಲ್ಲೂ ವಿಟಮಿನ್ ಡಿ(Vitamin D) ಎನ್ನುವುದು ನಮ್ಮ ದೇಹಕ್ಕೆ ಸೂರ್ಯನಿಂದ ನೇರವಾಗಿ ದೊರೆಯುತ್ತದೆ. ಆದರೆ ಬದಲಾದ ಜೀವನಶೈಲಿಯಿಂದಾಗಿ ವಿಟಮಿನ್ ಡಿ ಕೊರತೆ ಕೆಲವರಲ್ಲಿ ಕಂಡು ಬರುತ್ತಿದೆ.


 ನಮಗೆ ಅಗತ್ಯವಿರುವ ವಿಟಮಿನ್‌ಗಳಲ್ಲಿ ವಿಟಮಿನ್ ಡಿ ಸಹಾ ಒಂದು. ವಿಚಿತ್ರವೆಂದರೆ ಈ ವಿಟಮಿನ್ ಅನ್ನು ದೇಹವೇ ತಯಾರಿಸಿಕೊಳ್ಳುತ್ತದೆಯಾದರೂ, ಇದಕ್ಕೆ ಸೂರ್ಯನ ಬೆಳಕು ಅವಶ್ಯಕವಾಗಿ ಬೇಕಾಗಿರುತ್ತದೆ.


ಈಗ ಜನರು ವಿವಿಧ ಶಿಫ್ಟ್‌ಗಳಲ್ಲಿ ಕೆಲಸ ಮಾಡುತ್ತಾರೆ, ಕೆಲವರಂತೂ ಸೂರ್ಯೋದಯ, ಸೂರ್ಯಾಸ್ತ ನೋಡಿ ಎಷ್ಟೋ ದಿನಗಳಾಗಿರುತ್ತವೆ. ಅಫೀಸ್‌ನೊಳಗೆ ಎಸಿ ರೂಂನಲ್ಲಿ ಕೆಲಸ ಮಾಡುತ್ತಾರೆ. ಸೂರ್ಯನ ಬಿಸಿಲಿಗೆ ಓಡಾಡುವುದೇ ಕಡಿಮೆ, ಅಂಥವರಲ್ಲಿ ವಿಟಮಿನ್ ಡಿ ಕೊರತೆ ಉಂಟಾಗುತ್ತದೆ.


ಆದರೆ ಇಲ್ಲಿ ಮುಖ್ಯವಾಗಿ ನಾವಿಂದು ಚರ್ಚೆ ಮಾಡಬೇಕಿರುವುದು ಭಾರತದ ಕಾಶ್ಮೀರದಲ್ಲಿ ವಿಟಮಿನ್‌ ಡಿ ಕೊರತೆ ಇರುವವರ ಸಂಖ್ಯೆ ಹೆಚ್ಚು ಎಂದು ಅಧ್ಯಯನಗಳು ಹೇಳುತ್ತಿವೆ. ಅದೇನು ಅಂತ ಈ ಲೇಖನದಲ್ಲಿ ಚರ್ಚೆ ಮಾಡೋಣ.


ಇದನ್ನೂ ಓದಿ: Vitamin B 12: ನಮ್ಮ ದೇಹಕ್ಕೆ ವಿಟಮಿನ್ ಬಿ 12 ಎಷ್ಟು ಮುಖ್ಯ?


ವಿಟಮಿನ್ ಡಿ ಕೊರತೆಗೆ ಕಾರಣವೇನು?


ಸೂರ್ಯನ ಬೆಳಕಿಗೆ ನಮ್ಮ ದೇಹವನ್ನು ಒಡ್ಡಿಕೊಳ್ಳದೇ ಇರುವುದು ಪ್ರಮುಖ ಕಾರಣವಾಗಿದೆ ಮತ್ತು ನಿಮ್ಮ ಆಹಾರದಲ್ಲಿ ವಿಟಮಿನ್ ಡಿ-ಭರಿತ ಆಹಾರಗಳ ಕೊರತೆ ಸೇರಿದಂತೆ ಅನೇಕ ಅಂಶಗಳು ವಿಟಮಿನ್ ಡಿ ಕೊರತೆಯನ್ನು ಉಂಟುಮಾಡಬಹುದು.


ಇತರ ಕಾರಣಗಳಲ್ಲಿ, ವಿಟಮಿನ್ ಡಿ ಅನ್ನು ಅದರ ಸಕ್ರಿಯ ರೂಪಕ್ಕೆ ಪರಿವರ್ತಿಸಲು ನಿಮ್ಮ ಮೂತ್ರಪಿಂಡಗಳು ಅಸಮರ್ಥತೆಯಿಂದ ಕೂಡಿರಬಹುದು ಮತ್ತು ನಿಮ್ಮ ಜೀರ್ಣಾಂಗವು ಪೋಷಕಾಂಶವನ್ನು ಸಮರ್ಪಕವಾಗಿ ಹೀರಿಕೊಳ್ಳದೆ ಇರುವುದೂ ಆಗಿರಬಹುದು.


ಇತ್ತಿಚೀಗೆ ಪ್ರತಿಯೊಬ್ಬರೂ ಸಹ ವಿಟಮಿನ್ ಡಿ ಕೊರತೆಗೆ ಗುರಿಯಾಗುತ್ತಿದ್ದಾರೆ. ಇತ್ತೀಚಿನ ಅಧ್ಯಯನವು ಕಾಶ್ಮೀರದಲ್ಲಿ ವಿಶೇಷವಾಗಿ ಮಹಿಳೆಯರಲ್ಲಿ ವಿಟಮಿನ್‌ ಡಿ ಕೊರತೆ ಹೆಚ್ಚಾಗುತ್ತಿದೆ ಎಂದು ಕಂಡುಹಿಡಿದಿದೆ.


ಅಧ್ಯಯನವು ಏನ್‌ ಹೇಳ್ತಿದೆ?


'ಭಾರತದ ಕಿರೀಟವೆಂದು ಕರೆಯುವ ಕಾಶ್ಮೀರ ಕಣಿವೆಯ ಸಾಮಾನ್ಯ ಜನಸಂಖ್ಯೆಯಲ್ಲಿ ವಿಟಮಿನ್ ಡಿ ಸ್ಥಿತಿಯ ಮೌಲ್ಯಮಾಪನ' ಎಂಬ ಶೀರ್ಷಿಕೆಯ ಇತ್ತೀಚಿನ ಅಧ್ಯಯನವು ಸೀರಮ್ 25-ಹೈಡ್ರಾಕ್ಸಿವಿಟಮಿನ್ [25(OH)D] ಮಟ್ಟವನ್ನು ಅಳೆಯುವ ಮೂಲಕ ಕಾಶ್ಮೀರದ ನಿವಾಸಿಗಳ ವಿಟಮಿನ್ ಡಿ ಮಟ್ಟವನ್ನು ಪರಿಶೀಲಿಸಿದೆ.


ಹೆಲ್ತ್‌ಲೈನ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನವು ವಿವಿಧ ವೃತ್ತಿಗಳಲ್ಲಿ ಕಾರ್ಯ ನಿರ್ವಹಿಸುವ ಒಟ್ಟು 270 ಆರೋಗ್ಯವಂತ ಸ್ವಯಂಸೇವಕರನ್ನು ಒಳಗೊಂಡಿತ್ತು. ಅದರಲ್ಲಿ 69 ಪುರುಷರು ಮತ್ತು 201 ಗರ್ಭಿಣಿಯರಲ್ಲದ/ಹಾಲುಣಿಸದ ಮಹಿಳೆಯರು, 18-65 ವರ್ಷ ವಯಸ್ಸಿನವರು ಆಗಿದ್ದರು.


ಕಾಶ್ಮೀರದಲ್ಲಿ ವಿಶೇಷವಾಗಿ ಮಹಿಳೆಯರಲ್ಲಿ ವಿಟಮಿನ್ ಡಿ ಕೊರತೆ ಹೆಚ್ಚು: ಅಧ್ಯಯನ


“222 (82.2%) ಜನರು ವಿಟಮಿನ್ ಡಿ ಕೊರತೆಯನ್ನು ಹೊಂದಿದ್ದರು. 69 ಪುರುಷರಲ್ಲಿ 45 ಮತ್ತು 201ರ ಪೈಕಿ 177 ರಷ್ಟು ಮಹಿಳೆಯರಲ್ಲಿ ವಿಟಮಿನ್ ಡಿ ಕೊರತೆ ಕಂಡುಬಂದಿದೆ” ಎಂದು ಸಂಶೋಧನಾ ಪ್ರಬಂಧವು ಬಹಿರಂಗಪಡಿಸಿದೆ.


ಸಂಶೋಧನೆಗಳ ವಿವರಗಳು: ಕಾಶ್ಮೀರದಲ್ಲಿ ವಿಟಮಿನ್ ಡಿ ಕೊರತೆ ಹೆಚ್ಚೇಕೆ?


ಅಧ್ಯಯನದ ಪ್ರಕಾರ, ವಿಟಮಿನ್ ಡಿ ಕೊರತೆಯ ಪ್ರಮಾಣವು ರೈತರ ಗುಂಪಿನಲ್ಲಿ 58% ರಷ್ಟಿದ್ದರೆ, ಉದ್ಯೋಗಿಗಳ ಗುಂಪಿನಲ್ಲಿ 93% ರಷ್ಟಿದೆ.


ಇದನ್ನೂ ಓದಿ: Soaked Peanuts: ಪ್ರತಿದಿನ ನೆನೆಸಿದ ಕಡಲೆಬೀಜ ತಿನ್ನುವುದರಿಂದ ಸಿಗಲಿವೆ ಈ ಅದ್ಭುತ ಪ್ರಯೋಜನಗಳು


“ಕಣಿವೆಯಲ್ಲಿ ಹೆಚ್ಚಿನ ಪ್ರಮಾಣದ ಸೂರ್ಯನ ಬೆಳಕು ಲಭ್ಯವಿದ್ದರೂ, ರೋಗಿಗಳು ವಿಟಮಿನ್ ಡಿ ಯ ಕೊರತೆಯನ್ನು ಹೊಂದುತ್ತಿದ್ದಾರೆ ಎಂದು ವರದಿ ಹೇಳಿದೆ. ವಿಟಮಿನ್‌ ಡಿ ಕೊರತೆ ಹೆಚ್ಚೇಕೆ ಎಂದ್ರೆ ಅಕ್ಟೋಬರ್‌ನಿಂದ ಮಾರ್ಚ್‌ವರೆಗೆ, ನಮ್ಮ ಕಣಿವೆಯಾದ ಕಾಶ್ಮೀರದಲ್ಲಿ ಲಭ್ಯವಿರುವ ಸೂರ್ಯನ ಬೆಳಕು ಅಗತ್ಯಕ್ಕಿಂತ ಕಡಿಮೆಯಾಗಿದೆ" ಎಂದು ಶ್ರೀನಗರದ ಸರ್ಕಾರಿ ವೈದ್ಯಕೀಯ ಕಾಲೇಜಿನ ಸರ್ಜರಿ ಪ್ರಾಧ್ಯಾಪಕ ಡಾ. ಇಕ್ಬಾಲ್ ಸಲೀಮ್, ಕಾಶ್ಮೀರ ಸುದ್ದಿ ಮಾಧ್ಯಮವಾದ ಮಾನಿಟರ್‌ಗೆ ತಿಳಿಸಿದ್ದಾರೆ.


ಕಾಶ್ಮೀರಿ ಮಹಿಳೆಯರು ವಿಟಮಿನ್ ಡಿ ಕೊರತೆಗೆ ಹೆಚ್ಚೇಕೆ ಒಳಗಾಗುತ್ತಾರೆ?


ಕಾಶ್ಮೀರಿ ಮಹಿಳೆಯರು ವಿಟಮಿನ್‌ ಡಿ ಕೊರತೆಗೆ ಹೆಚ್ಚು ಗುರಿಯಾಗುತ್ತಿದ್ದಾರೆ. ಇಲ್ಲಿ ಈ ಪ್ರಕರಣಗಳು ಸಂಭವಿಸುತ್ತಲೇ ಇರುತ್ತವೆ ಎಂದು ಡಾ. ಸಲೀಮ್ ಮತ್ತಷ್ಟು ಹೈಲೈಟ್ ಮಾಡಿ ಹೇಳುತ್ತಾರೆ. ಇದು ಅವರ ಪ್ರಕಾರ, ಕಳಪೆ ಆಹಾರ ಪದ್ಧತಿ ಮತ್ತು ಸೂರ್ಯನಿಗೆ ಕಡಿಮೆ ಒಡ್ಡುವಿಕೆ ವಿಟಮಿನ್‌ ಡಿ ಕೊರತೆಗೆ ಪ್ರಮುಖ ಕಾರಣವಾಗಿದೆ. 

Published by:Latha CG
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು