• Home
  • »
  • News
  • »
  • lifestyle
  • »
  • Vitamin D Deficiency: ವಿಟಮಿನ್ ಡಿ ಕೊರತೆ ಯಾವೆಲ್ಲಾ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ?

Vitamin D Deficiency: ವಿಟಮಿನ್ ಡಿ ಕೊರತೆ ಯಾವೆಲ್ಲಾ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ವಿಟಮಿನ್ ಡಿ ಕೊರತೆ ಸಾಕಷ್ಟು ಆರೋಗ್ಯ ಸಮಸ್ಯೆ ಉಂಟು ಮಾಡುತ್ತದೆ. ದೇಹದಲ್ಲಿ ವಿಟಮಿನ್ ಡಿ ಕೊರತೆಯಿದ್ದಾಗ ಏನು ಮಾಡಬೇಕು ಎಂಬುದರ ಬಗ್ಗೆ ಮೊದಲು ತಿಳಿದಿರಬೇಕು. ದೇಹದಲ್ಲಿ ಈ ಕೊರತೆ ಪೂರೈಸುವುದು ತುಂಬಾ ಮುಖ್ಯ. ವಿಟಮಿನ್ ಡಿ ರೋಗ ಲಕ್ಷಣಗಳನ್ನು ತಿಳಿಯಬೇಕು.

  • Share this:

    ವಿಟಮಿನ್ ಡಿ ಯನ್ನು (Vitamin D) ಸನ್ಶೈನ್ ವಿಟಮಿನ್ (Sunshine Vitamin) ಎಂದು ಕರೆಯುತ್ತಾರೆ. ಏಕೆಂದರೆ ಸೂರ್ಯನ (Sun) ಬೆಳಕಿಗೆ ಒಡ್ಡಿಕೊಂಡಾಗ ನಿಮ್ಮ ದೇಹವು (Body) ಈ ವಿಟಮಿನ್ ಅನ್ನು ವೇಗವಾಗಿ ಉತ್ಪತ್ತಿ ಮಾಡುತ್ತದೆ. ಕೆಲವು ಆಹಾರಗಳು (Foods) ವಿಟಮಿನ್ ಡಿ ಯನ್ನು ಪೂರೈಕೆ ಮಾಡುತ್ತವೆ. ಆದರೂ ಸಹ ವಿಟಮಿನ್ ಡಿ ಯ ಮುಖ್ಯ ಮೂಲ ಅಂದ್ರೆ ಸೂರ್ಯ. ಸೂರ್ಯನ ಬೆಳಕು ಮುಖ್ಯವಾಗಿ ದೇಹಕ್ಕೆ ವಿಟಮಿನ್ ಡಿ ಪೋಷಕಾಂಶವನ್ನು ನೀಡುತ್ತದೆ. ಸೂರ್ಯನ ಬೆಳಕು ಅಥವಾ ಆಹಾರದಿಂದ ದೇಹವು ಸಾಕಷ್ಟು ವಿಟಮಿನ್ ಡಿ ಅನ್ನು ಪಡೆಯದೇ ಹೋದಾಗ ವಿಟಮಿನ್ ಡಿ ಕೊರತೆ ಉಂಟಾಗುತ್ತದೆ.


    ದೇಹದಲ್ಲಿ ವಿಟಮಿನ್ ಡಿ ಕೊರತೆಯಿದ್ದರೆ ಏನು ಮಾಡಬೇಕು?


    ಹೀಗೆ ಉಂಟಾಗುವ ವಿಟಮಿನ್ ಡಿ ಸಾಕಷ್ಟು ಆರೋಗ್ಯ ಸಮಸ್ಯೆ ಉಂಟು ಮಾಡುತ್ತದೆ. ದೇಹದಲ್ಲಿ ವಿಟಮಿನ್ ಡಿ ಕೊರತೆಯಿದ್ದಾಗ ಏನು ಮಾಡಬೇಕು ಎಂಬುದರ ಬಗ್ಗೆ ನೀವು ಮೊದಲು ತಿಳಿದಿರಬೇಕು. ದೇಹದಲ್ಲಿ ಈ ಕೊರತೆ ಪೂರೈಸುವುದು ತುಂಬಾ ಮುಖ್ಯ. ವಿಟಮಿನ್ ಡಿ ರೋಗ ಲಕ್ಷಣಗಳನ್ನು ಮೊದಲು ತಿಳಿಯಿರಿ.


    ನೀವು ಎಷ್ಟು ಬೇಗ ರೋಗ ನಿರ್ಣಯ ಮಾಡುತ್ತೀರೋ ಅಷ್ಟು ಬೇಗ ನೀವು ಅದನ್ನು ನಿವಾರಿಸಲು ಸುಲಭ ಆಗುತ್ತದೆ. ವಿಟಮಿನ್ ಡಿ ಕೊರತೆ ನೀಗಿಸಲು, ಅಣಬೆ, ಮೊಟ್ಟೆ, ಕಿತ್ತಳೆ ರಸ, ಚೀಸ್, ಸಾಲ್ಮನ್, ಟ್ಯೂನ ಮತ್ತು


    ಇದನ್ನೂ ಓದಿ: ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ಸಮಸ್ಯೆ ಕಡಿಮೆ ಮಾಡಲು ಯಾವ ಆಹಾರ ಸೇವಿಸಬೇಕು?


    ಮ್ಯಾಕೆರೆಲ್ ನಂತಹ ಕೊಬ್ಬಿನ ಮೀನು, ಮೊಸರು, ಹಾಲು, ಧಾನ್ಯ, ಸೋಯಾ ಜ್ಯೂಸ್ ಮುಂತಾದ ಡೈರಿ ಉತ್ಪನ್ನಗಳ ಸೇವನೆ ಮಾಡಿ. ಅಲ್ಲದೇ ಇದು ವಿಟಮಿನ್ ಡಿ ಪೂರಕ ಸೇವನೆ ಮಾಡುವುದು ಸೂಕ್ತ. ಆದರೆ ವೈದ್ಯರ ಮೊದಲು ಪಡೆಯಿರಿ.


    ವಿಟಮಿನ್ ಡಿ ಕೊರತೆ ರೋಗ ನಿರೋಧಕ ಶಕ್ತಿ ದುರ್ಬಲಗೊಳಿಸುತ್ತದೆ


    ಎನ್ ಸಿಬಿಐ ಪ್ರಕಾರ, ವಿಟಮಿನ್ ಡಿ ಮತ್ತು ರೋಗ ನಿರೋಧಕ ಶಕ್ತಿ ಪರಸ್ಪರ ಸಂಬಂಧ ಹೊಂದಿದೆ. ಮರುಕಳಿಸುವ ಅನಾರೋಗ್ಯ ತುಂಬಾ ಸಾಮಾನ್ಯ ಆಗಿದೆ. ಆದರೆ ದೇಹದಲ್ಲಿ ವಿಟಮಿನ್ ಡಿ ಕೊರತೆಯಿಂದ ಇದು ಉಂಟಾಗಬಹುದು.


    ವಿಟಮಿನ್ ಡಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಕೆಲಸ ಮಾಡುತ್ತದೆ. ಇದರ ಕೊರತೆಯು ರೋಗಕಾರಕಗಳ ವಿರುದ್ಧ ಹೋರಾಡಲು ದೇಹದ ಶಕ್ತಿಯ ಮೇಲೆ ಪರಿಣಾಮ ಬೀರುತ್ತದೆ. ಈ ಕಾರಣದಿಂದ ಒಬ್ಬ ವ್ಯಕ್ತಿಯು ಹಲವು ಬಾರಿ ಅನಾರೋಗ್ಯಕ್ಕೆ ಒಳಗಾಗುತ್ತಾನೆ.


    ವಿಟಮಿನ್ ಡಿ ಕೊರತೆ ಆಯಾಸಕ್ಕೆ ಕಾರಣ


    ಯಾವುದೇ ಕಾರಣವಿಲ್ಲದೆ ನೀವು ಯಾವಾಗಲೂ ದಣಿವು ಹೊಂದಿದ್ದರೆ ನಿಮ್ಮ ವಿಟಮಿನ್ ಡಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ವಿಟಮಿನ್ ಡಿ ಕೊರತೆ ನಿಮ್ಮ ಶಕ್ತಿಯ ಮಟ್ಟ ಮತ್ತು ಹೊಸದನ್ನು ಮಾಡುವ ನಿಮ್ಮ ಮನಸ್ಥಿತಿ ಮೇಲೆ ಪರಿಣಾಮ ಬೀರಬಹುದು.


    ಮಾನಸಿಕ ಆರೋಗ್ಯಕ್ಕೆ ವಿಟಮಿನ್ ಡಿ ಅತ್ಯಗತ್ಯ


    Webmd ಪ್ರಕಾರ, ಖಿನ್ನತೆ ವಿಟಮಿನ್ ಡಿ ಕೊರತೆ ಮತ್ತೊಂದು ಸಂಭವನೀಯ ಲಕ್ಷಣ. ನಿರಂತರ ಆಯಾಸ ನಿಮ್ಮ ಮಾನಸಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದು ಖಿನ್ನತೆಯ ಸಮಸ್ಯೆ ಹೆಚ್ಚಿಸುತ್ತದೆ.


    ವಿಟಮಿನ್ ಡಿ ಕೊರತೆ ಕೂದಲು ಉದುರುವಿಕೆಗೂ ಕಾರಣ ಆಗುತ್ತದೆ


    ಅತಿಯಾದ ಕೂದಲು ಉದುರುವಿಕೆ ಮತ್ತು ಕಳಪೆ ಕೂದಲು ಬೆಳವಣಿಗೆ ವಿಟಮಿನ್ ಡಿ ಕೊರತೆಗೆ ಸಂಬಂಧಿಸಿದೆ. ಕಡಿಮೆ ವಿಟಮಿನ್ ಡಿ ಕೂದಲಿನ ಮೇಲೆ ಪರಿಣಾಮ ಬೀರುತ್ತದೆ. ಮತ್ತು ನಮ್ಮಲ್ಲಿ ಅನೇಕರಿಗೆ ಇದು ತಿಳಿದಿಲ್ಲ. ಹಲವು ಔಷಧಿಗಳು ಮತ್ತು ಶಾಂಪೂಗಳ ಬಳಕೆಯೂ ಸಮಸ್ಯೆ ಪರಿಹರಿಸಲ್ಲ. ಹೀಗಿದ್ದಾಗ ವಿಟಮಿನ್ ಡಿ ಸೇವಿಸಿ.


    ಇದನ್ನೂ ಓದಿ: ದೇಹದಲ್ಲಿ ಮೆಗ್ನೀಸಿಯಮ್ ಕೊರತೆ ಈ ಅಪಾಯಕ್ಕೆ ಕಾರಣವಂತೆ, ಎಚ್ಚರವಿರಲಿ


    ವಿಟಮಿನ್ ಡಿ ಕೊರತೆ ಚರ್ಮಕ್ಕೆ ಹಾನಿ ಮಾಡುತ್ತದೆ


    ದೇಹದಲ್ಲಿ ಸಾಕಷ್ಟು ವಿಟಮಿನ್ ಡಿ ಇಲ್ಲದಿರುವ ಜನರಲ್ಲಿ ಚರ್ಮದ ದದ್ದು ಮತ್ತು ಮೊಡವೆ ಸಮಸ್ಯೆ ಕಾಡುತ್ತವೆ. ಚರ್ಮದ ವಯಸ್ಸು ಕೂಡ ಬಹಳ ವೇಗವಾಗಿ ಹೆಚ್ಚಾಗುತ್ತದೆ.

    Published by:renukadariyannavar
    First published: