• Home
  • »
  • News
  • »
  • lifestyle
  • »
  • Vitamin D: ವಿಟಮಿನ್‌ ಡಿ ಕಡಿಮೆ ಆದ್ರೆ ಅಕಾಲಿಕ ಸಾವು ಬರುತ್ತಂತೆ, ಅಧ್ಯಯನದಲ್ಲಿ ಬಹಿರಂಗ

Vitamin D: ವಿಟಮಿನ್‌ ಡಿ ಕಡಿಮೆ ಆದ್ರೆ ಅಕಾಲಿಕ ಸಾವು ಬರುತ್ತಂತೆ, ಅಧ್ಯಯನದಲ್ಲಿ ಬಹಿರಂಗ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Vitamin D Deficiency: ಇತ್ತೀಚಿನ ಅಧ್ಯಯನವು ಅಗತ್ಯವಾದ ಪೋಷಕಾಂಶವಾದ ವಿಟಮಿನ್ ಡಿ ಕೊರತೆಯಿಂದ ಅಕಾಲಿಕ ಮರಣಕ್ಕೆ ತುತ್ತಾಗುವರ ಸಂಖ್ಯೆ ಹೆಚ್ಚುತ್ತಿದೆ ಎಂಬುದರ ಬಗ್ಗೆ ಬೆಳಕು ಚೆಲ್ಲಿದೆ.

  • Share this:

ದೇಹವನ್ನು ರೋಗಗಳಿಂದ (Disease) ದೂರವಿಡಲು ನಾವು ನಮ್ಮ ಆಹಾರದಲ್ಲಿ (Food)  ಅಗತ್ಯವಿರುವ ಎಲ್ಲಾ ಪೋಷಕಾಂಶಗಳನ್ನು ಸೇರಿಸಬೇಕು. ನೀವು ಜೀವಸತ್ವಗಳು (Vitamin), ಖನಿಜಗಳು, ಪ್ರೋಟೀನ್​ಗಳು ಮತ್ತು ಅಮೈನೋ ಆಮ್ಲಗಳಿಂದ ಸಮೃದ್ಧವಾಗಿರುವ ಆಹಾರವನ್ನು ಸೇವಿಸಬೇಕು. ದೇಹವನ್ನು ಬಲಪಡಿಸಲು ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ವಿಟಮಿನ್ ಡಿ ಬಹಳ ಮುಖ್ಯ. ಇತ್ತೀಚಿನ ದಿನಗಳಲ್ಲಿ, ನಗರ ಜೀವನಶೈಲಿಯಲ್ಲಿ (Lifestyle), ವಿಟಮಿನ್ ಡಿ ಕೊರತೆಯು ಜನರಲ್ಲಿ ಹೆಚ್ಚಾಗಿ ಕಾಣಿಸ್ತಿದೆ. ಫ್ಲಾಟ್‌ಗಳಲ್ಲಿ ವಾಸಿಸುವ ಮತ್ತು ಕಚೇರಿಗಳಲ್ಲಿ ಕೆಲಸ ಮಾಡುವ ಜನರು ದಿನವಿಡೀ ಸೂರ್ಯನ ಬೆಳಕಿಗೆ ಹೋಗುವುದಿಲ್ಲ. ಇದರಿಂದಾಗಿ ದೇಹದಲ್ಲಿ ವಿಟಮಿನ್ ಡಿ ಕೊರತೆ ಕಾಣಿಸುತ್ತದೆ.


ವಿಟಮಿನ್ ಡಿ ಮೂಳೆಯ ಆರೋಗ್ಯಕ್ಕೆ ಸಂಬಂಧಿಸಿದೆ ಎಂದು ನಮಗೆಲ್ಲರಿಗೂ ತಿಳಿದಿದೆ ಮತ್ತು ದೇಹದಲ್ಲಿ ಅದರ ಕೊರತೆಯು ಮೂಳೆಯ ಆರೋಗ್ಯವನ್ನು ಹದಗೆಡಿಸುತ್ತದೆ. ಆದರೆ ಇದೆಲ್ಲದರ ಜೊತೆಗೆ, ಇತ್ತೀಚಿನ ಅಧ್ಯಯನವು ಅಗತ್ಯವಾದ ಪೋಷಕಾಂಶವಾದ ವಿಟಮಿನ್ ಡಿ ಕೊರತೆಯಿಂದ ಅಕಾಲಿಕ ಮರಣಕ್ಕೆ ತುತ್ತಾಗುವರ ಸಂಖ್ಯೆ ಹೆಚ್ಚುತ್ತಿದೆ ಎಂಬುದರ ಬಗ್ಗೆ ಬೆಳಕು ಚೆಲ್ಲಿದೆ. ಆ ಅಧ್ಯಯನ ಯಾವ್ದು? ಅದರಲ್ಲಿ ಇರೋ ಮಾಹಿತಿಯೇನು? ಎಂಬುದರ ಬಗ್ಗೆ ಈಗ ತಿಳಿಯೋಣ.


ವಿಟಮಿನ್‌ ಡಿ ಕೊರತೆ ಅಕಾಲಿಕ ಮರಣಕ್ಕೆ ನೇರ ಕಾರಣ


ಅಕ್ಟೋಬರ್ 25 ರಂದು ಆನಲ್ಸ್ ಆಫ್ ಇಂಟರ್ನಲ್ ಮೆಡಿಸಿನ್‌ನಲ್ಲಿ ಪ್ರಕಟವಾದ ಸಂಶೋಧನಾ ಅಧ್ಯಯನವು ವಿಟಮಿನ್ ಡಿ ಕೊರತೆಯಿಂದ ಅಕಾಲಿಕ ಮರಣಕ್ಕೆ ತುತ್ತಾಗುವ ಸಂಭವ ಹೆಚ್ಚು ಎಂದು ಹೇಳಿದೆ.


"ವಿಟಮಿನ್ ಡಿ ಕೊರತೆಯಿಂದ ಯುನೈಟೈಡ್‌ ಕಿಂಗ್‌ಡಮ್‌ನ ಬಯೋಬ್ಯಾಂಕ್‌ನಲ್ಲಿ ಹೆಚ್ಚಿನ ಜನರು ಅಕಾಲಿಕ ಮರಣಕ್ಕೆ ತುತ್ತಾಗುತ್ತಿದ್ದಾರೆ” ಎಂಬ ಶೀರ್ಷಿಕೆಯ ಸಂಶೋಧನಾ ಅಧ್ಯಯನವನ್ನು ಆಸ್ಟ್ರೇಲಿಯನ್ ಸೆಂಟರ್ ಫಾರ್ ಪ್ರಿಸಿಶನ್ ಹೆಲ್ತ್, ಯುನಿಟ್ ಆಫ್ ಕ್ಲಿನಿಕಲ್ ಮತ್ತು ಹೆಲ್ತ್ ಸೈನ್ಸಸ್, ದಕ್ಷಿಣ ಆಸ್ಟ್ರೇಲಿಯಾ, ಅಡಿಲೇಡ್ ವಿಶ್ವವಿದ್ಯಾಲಯದ ಸಂಶೋಧಕರು ಮಾಡಿದ್ದಾರೆ.


ಸಂಶೋಧನಾ ಅಧ್ಯಯನದಲ್ಲಿ ಪಾಲ್ಗೊಂಡ ಜನರ ಸಂಖ್ಯೆ


ಮಾರ್ಚ್ 2006 ರಿಂದ ಜುಲೈ 2020 ರವರೆಗೆ 14 ವರ್ಷಗಳ ಕಾಲ ಒಟ್ಟು 307601 ಜನರನ್ನು ಅಧ್ಯಯನ ಮಾಡಲಾಗಿದೆ.


ಸಂಶೋಧನಾ ಫಲಿತಾಂಶ


ಈ ಸಂಶೋಧನಾ ಅಧ್ಯಯನದಲ್ಲಿ ಪಾಲ್ಗೊಂಡ ಜನರಲ್ಲಿ ಹೆಚ್ಚಿನ ಮಟ್ಟದ ವಿಟಮಿನ್ ಡಿ ಕೊರತೆ ಇದ್ದಿದ್ದರಿಂದ ಸಾವಿನ ಅಪಾಯವು ಹೆಚ್ಚಾಗುತ್ತದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. 14 ವರ್ಷಗಳ ಒಟ್ಟು ಅಧ್ಯಯನದಲ್ಲಿ ಒಟ್ಟು 18,700 ಸಾವುಗಳು ವರದಿಯಾಗಿವೆ. ಸಾವಿನ ಅಪಾಯವು ವಿಟಮಿನ್‌ ಡಿ ಯ ಕೊರತೆಯ ಮಟ್ಟಕ್ಕೆ ನೇರ ಅನುಪಾತದಲ್ಲಿದೆ. ವಿಟಮಿನ್‌ ಡಿ ಕೊರತೆ ಹೆಚ್ಚಾದಂತೆ, ಸಾವಿನ ಅಪಾಯ ಕೂಡ ಹೆಚ್ಚು ಎಂದು ಸಂಶೋಧನೆಯ ಫಲಿತಾಂಶವಾಗಿದೆ.


ಇದನ್ನೂ ಓದಿ: ನಿಮ್ಮ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತವೆ ಈ ಸೂಪರ್‌ಫುಡ್‌ಗಳು


ವಿಟಮಿನ್ ಡಿ ಕೊರತೆಯ ಲಕ್ಷಣಗಳು


ಆಗಾಗ ಅನಾರೋಗ್ಯ, ನಿರಂತರ ಆಯಾಸ, ಮಾನಸಿಕ ಬದಲಾವಣೆಗಳು, ಆತಂಕ, ಖಿನ್ನತೆ, ಕೂದಲು ಉದುರುವಿಕೆ, ಚರ್ಮದ ದದ್ದುಗಳು ಮತ್ತು ಮೊಡವೆಗಳು ದೇಹದಲ್ಲಿನ ವಿಟಮಿನ್ ಡಿ ಮಟ್ಟವನ್ನು ಕಡಿಮೆಗೊಳಿಸುವುದರ ಜೊತೆಗೆ ಮೂಳೆಗಳು ದುರ್ಬಲಗೊಳ್ಳುವುದು, ಕೀಲು ಪ್ರದೇಶಗಳಲ್ಲಿ ನೋವು, ಸ್ನಾಯು ಸೆಳೆತ, ವಿಪರೀತ ಕಾಲುಗಳಲ್ಲಿ ನೋವು, ಮತ್ತು ದೇಹದಲ್ಲಿ ಬಿಗಿತ ಉಂಟಾಗುವ ಸಾಮಾನ್ಯ ಲಕ್ಷಣಗಳನ್ನು ಒಳಗೊಂಡಿರುತ್ತದೆ.


ವಿಟಮಿನ್‌ ಡಿ ಯಿಂದ ಬರುವ ಕಾಯಿಲೆಗಳು


ವಿಟಮಿನ್ ಡಿ ಕೊರತೆಯು ಎಲ್ಲಕ್ಕಿಂತ ಹೆಚ್ಚಾಗಿ ಮೂಳೆಯ ಮೇಲೆ ಪರಿಣಾಮ ಬೀರುತ್ತದೆ. ಇದು ಮೂಳೆಯ ಆರೋಗ್ಯವನ್ನು ಕುಂಠಿತಗೊಳಿಸುತ್ತದೆ. ಇದರ ಕೊರತೆಯು ಮಕ್ಕಳಲ್ಲಿ ರಿಕೆಟ್‌ಗಳಿಗೆ ಮತ್ತು ವಯಸ್ಕರಲ್ಲಿ ಆಸ್ಟಿಯೋಮಲೇಶಿಯಾಕ್ಕೆ ಕಾರಣವಾಗುತ್ತದೆ.


ವಿಟಮಿನ್ ಡಿ ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ಕಡಿಮೆ ಮಾಡುತ್ತದೆ ಮತ್ತು ಉರಿಯೂತವನ್ನು ತಡೆಯುತ್ತದೆ ಎಂದು ಹಲವಾರು ಸಂಶೋಧನಾ ಅಧ್ಯಯನಗಳು ತೋರಿಸಿವೆ. ಪರಿಣಾಮವಾಗಿ, ಇದು ಹೃದಯರಕ್ತನಾಳದ ಆರೋಗ್ಯಕ್ಕೆ ಅತ್ಯಗತ್ಯ ಅಂಶವೆಂದು ಪರಿಗಣಿಸಲಾಗಿದೆ. ಈ ವಿಟಮಿನ್‌ ಕೊರತೆ ನೇರ ಕ್ಯಾನ್ಸರ್‌ ಮತ್ತು ಹೃದಯಕ್ಕೆ ಸಂಬಂಧಪಟ್ಟ ರೋಗಕ್ಕೂ ಕಾರಣ ಎಂದು ತಜ್ಞರು ಸೂಚಿಸುತ್ತಾರೆ.




ಸಂಶೋಧನಾ ಅಧ್ಯಯನಗಳು ಕರುಳಿನ ಕ್ಯಾನ್ಸರ್ ಅಪಾಯವು ವಿಟಮಿನ್ ಡಿ ಕೊರತೆಯಿಂದ ಬರುತ್ತದೆ ಎಂದು ತಿಳಿಸಿವೆ.


ವಿಟಮಿನ್ ಡಿ ಇರುವ ಪ್ರಮುಖ ಮೂಲ


ವಿಟಮಿನ್ ಡಿ ದೇಹಕ್ಕೆ ಬಹಳ ಮುಖ್ಯವಾಗಿದೆ. ಆಹಾರದ ಮೂಲಕ ಸಾಕಷ್ಟು ವಿಟಮಿನ್ ಡಿ ಪಡೆಯುವುದು ಕಷ್ಟ. ಸೂರ್ಯನ UVB ವಿಕಿರಣದಿಂದ 7-ಡಿಹೈಡ್ರೊಕೊಲೆಸ್ಟರಾಲ್ ವಿಭಜನೆಯಾದಾಗ ಜೈವಿಕವಾಗಿ ಉಪಯುಕ್ತವಾದ ವಿಟಮಿನ್ D ರೂಪುಗೊಳ್ಳುತ್ತದೆ. ಇದು ನಮ್ಮ ದೇಹಕ್ಕೆ ಅತಿ ಅಗತ್ಯವಾದ ವಿಟಮಿನ್‌ ಆಗಿದೆ.


ಇದನ್ನೂ ಓದಿ: ಬ್ಯೂಟಿ ಪಾರ್ಲರ್ ಸ್ಟ್ರೋಕ್ ತಡೆಯೋದು ಹೇಗೆ? ತಜ್ಞರ ಸಲಹೆ ಹೀಗಿದೆ ನೋಡಿ


ವಿಟಮಿನ್ ಡಿ ಯ ಆಹಾರ ಮೂಲಗಳು


ಸಾಲ್ಮನ್, ಸಾರ್ಡೀನ್, ಹೆರಿಂಗ್ ಮತ್ತು ಮ್ಯಾಕೆರೆಲ್‌ನಂತಹ ಎಣ್ಣೆಯುಕ್ತ ಮೀನುಗಳಲ್ಲಿ ಧಾರಾಳವಾಗಿ ವಿಟಮಿನ್‌ ಡಿ ನಮ್ಗೆ ದೊರಕುತ್ತದೆ. ಕೆಲವು ಇತರ ಆಹಾರ ಮೂಲಗಳು ಮಾಂಸ, ಯಕೃತ್ತು, ಮೊಟ್ಟೆಯ ಹಳದಿ, ಮತ್ತು ಉಪಹಾರ ಧಾನ್ಯಗಳಂತಹ ಬಲವರ್ಧಿತ ಆಹಾರಗಳಲ್ಲಿ ವಿಟಮಿನ್‌ ಡಿ ಹೆಚ್ಚಿದೆ ಎಂದು ಹೇಳಬಹುದು.

Published by:Sandhya M
First published: