Health Tips: ನಿಮ್ಮ ನಾಲಿಗೆ ನೋಡಿ ಕೂಡ ವಿಟಮಿನ್ ಡಿ ಕೊರತೆ ಪತ್ತೆ ಹಚ್ಚಬಹುದು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ದೇಹದ ಆರೋಗ್ಯ ಉತ್ತಮವಾಗಿರಲು ವಿಟಮಿನ್​ಗಳ ಅವಶ್ಯಕತೆ ಇರುತ್ತದೆ. ಆದರಲ್ಲೂ ವಿಟಮಿನ್​ ಡಿ ಬಹಳಷ್ಟು ಮುಖ್ಯವಾಗಿರುತ್ತದೆ. ಆದರೆ ವಿಟಮಿನ್​ ಡಿ ಕೊರತೆಯನ್ನು ನೀವು ನಾಲಗೆ ಮೂಲಕ ಪತ್ತೆ ಹಚ್ಚಬಹುದು.

  • Share this:

ನಮ್ಮ ದೇಹದ ಆರೋಗ್ಯಕ್ಕೆ (Health) ಈ ವಿಟಮಿನ್​ಗಳ (Vitamin) ಅವಶ್ಯಕತೆ ತುಂಬಾನೇ ಇರುತ್ತದೆ. ವಾಹನಗಳನ್ನು ಓಡಿಸಲು ಹೇಗೆ ಪೆಟ್ರೋಲ್ ಮತ್ತು ಡೀಸೆಲ್ ಅವಶ್ಯಕವಿರುತ್ತದೆಯೋ, ಹಾಗೆಯೇ ಈ ದೇಹದ ಆರೋಗ್ಯವನ್ನು ಸರಿಯಾಗಿಟ್ಟುಕೊಳ್ಳಲು ವಿಟಮಿನ್​​ಗಳು ಸಹ ಅಷ್ಟೇ ಮುಖ್ಯವಾಗಿರುತ್ತವೆ. ದೇಹದ ಆರೋಗ್ಯಕ್ಕೆ ಅನೇಕ ರೀತಿಯ ವಿಟಮಿನ್​​ಗಳು ಬೇಕಾಗುತ್ತವೆ, ಕೆಲವು ವಿಟಮಿನ್ ಗಳು ನಮಗೆ ನೈಸರ್ಗಿಕವಾಗಿ ಸಿಕ್ಕರೆ, ಇನ್ನೂ ಕೆಲವನ್ನು ನಾವು ಆಹಾರದ ಮೂಲಕ ಪಡೆದುಕೊಳ್ಳಬೇಕಾಗುತ್ತದೆ. ದೇಹಕ್ಕೆ ಅವಶ್ಯಕವಾಗಿರುವ ಅನೇಕ ವಿಟಮಿನ್​​ಗಳಲ್ಲಿ ಯಾವುದು ಒಂದು ವಿಟಮಿನ್​ನ ಕೊರತೆಯಾದರೂ ಅದು ನಮ್ಮ ದೇಹದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.


ಈ ವಿಟಮಿನ್​​ಗಳ ಕೊರತೆ ಇರುವುದು ನಮಗೆ ಕೆಲವೊಮ್ಮೆ ನಮ್ಮ ದೇಹದ ಅಂಗಾಂಗಗಳು ತಿಳಿಸುತ್ತವೆ ನೋಡಿ. ಇಲ್ಲಿ ವಿಟಮಿನ್ ಡಿ ಕೊರತೆ ಇರುವುದು ನಮ್ಮ ನಾಲಿಗೆ ನಮಗೆ ತಿಳಿಸುತ್ತದೆ ಅಂತೆ, ಆದರೆ ಅದನ್ನು ಸರಿಯಾದ ಸಮಯದಲ್ಲಿ ಗುರುತಿಸಬೇಕು ಮತ್ತು ಆ ವಿಟಮಿನ್ ಕೊರತೆಯನ್ನು ಸರಿಪಡಿಸಿಕೊಳ್ಳಬೇಕು.


ವಿಟಮಿನ್ ಡಿ ಅನ್ನು ಸನ್ಶೈನ್ ವಿಟಮಿನ್ ಅಂತಲೂ ಕರೆಯುತ್ತಾರೆ


ವಿಟಮಿನ್ ಡಿ ಯನ್ನು ಕೆಲವೊಮ್ಮೆ ಸನ್ಶೈನ್ ವಿಟಮಿನ್ ಅಂತಲೂ ಕರೆಯಲಾಗುತ್ತದೆ, ಏಕೆಂದರೆ ಸೂರ್ಯನ ಬೆಳಕಿಗೆ ಒಡ್ಡಿಕೊಂಡಾಗ ನಮಗೆ ವಿಟಮಿನ್ ಡಿ ಸಿಗುತ್ತದೆ ಅಂತ ಅನೇಕರು ಹೇಳುತ್ತಾರೆ. ವಿಟಮಿನ್ ಡಿ ದೇಹದಲ್ಲಿರುವ ಮೂಳೆಯ ಆರೋಗ್ಯಕ್ಕೆ ನಿರ್ಣಾಯಕವಾಗಿದೆ ಮತ್ತು ನಿಮ್ಮ ದೇಹದಾದ್ಯಂತ ಅನೇಕ ಪ್ರಮುಖ ಕಾರ್ಯಗಳನ್ನು ಹೊಂದಿದೆ ಎಂದು ಹಲವಾರು ಅಧ್ಯಯನಗಳು ಮತ್ತು ವೈದ್ಯರು ಹೇಳುತ್ತಾರೆ.


ಇದನ್ನೂ ಓದಿ: ಈ ದೇಶಗಳಲ್ಲಿ 1 ಚಹಾ ಕುಡಿಯೋ ದುಡ್ಡಲ್ಲಿ ಇಲ್ಲಿ 3 ಲೋಟ ಕುಡಿಯಬಹುದು


ಬೆಳಗ್ಗೆ ಸಾಕಷ್ಟು ಸೂರ್ಯನ ಬೆಳಕನ್ನು ಪಡೆಯದವರಲ್ಲಿ ವಿಟಮಿನ್ ಡಿ ಕೊರತೆಯು ಸಾಮಾನ್ಯವಾಗಿದೆ. ಎಂದರೆ ದಿನಪೂರ್ತಿ ಮನೆಯಲ್ಲಿಯೇ ಕುಳಿತು ಕೆಲಸ ಮಾಡುವವರು, ಅತಿಯಾಗಿ ಬೊಜ್ಜು ಹೊಂದಿರುವವರು ಮತ್ತು ವಯಸ್ಸಾದವರು ಈ ವಿಟಮಿನ್ ಡಿ ಕೊರತೆಯನ್ನು ಹೆಚ್ಚಾಗಿ ಅನುಭವಿಸುತ್ತಾರೆ.


ವಿಟಮಿನ್ ಡಿ ಕೊರತೆಯಿಂದ ಏನೆಲ್ಲಾ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ?


ಸಾಕಷ್ಟು ವಿಟಮಿನ್ ಡಿ ಕೊರತೆಯು ದೇಹದಲ್ಲಿರುವ ಮೂಳೆಗಳನ್ನು ದುರ್ಬಲ ಮತ್ತು ವಿರೂಪಗೊಳಿಸುತ್ತದೆ. ಸ್ನಾಯು ಸೆಳೆತ ಮತ್ತು ಆಯಾಸದಂತಹ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಮತ್ತು ಅಷ್ಟೇ ಅಲ್ಲದೆ ಮಾನಸಿಕ ಆರೋಗ್ಯ ಸಮಸ್ಯೆಗಳಿಗೂ ಸಹ ಕಾರಣವಾಗಬಹುದು.


ಸಾಂದರ್ಭಿಕ ಚಿತ್ರ


ಕೆಲವು ಸಂದರ್ಭಗಳಲ್ಲಿ, ನಿಮ್ಮ ದೇಹವು ವಿವಿಧ ಚಿಹ್ನೆಗಳ ಮೂಲಕ ನಿಮಗೆ ವಿಟಮಿನ್ ಡಿ ಕೊರತೆಯಿದೆ ಎಂದು ಹೇಳಬಹುದು. ವಿಟಮಿನ್ ಡಿ ಬರ್ನಿಂಗ್ ಮೌತ್ ಸಿಂಡ್ರೋಮ್ ಗೂ ಸಹ ಕಾರಣವಾಗಬಹುದು ಎಂದು ಹಲವಾರು ಅಧ್ಯಯನಗಳು ಹೇಳಿವೆ.


ಇದು ಒಂದು ರೀತಿಯ ನೋವಿನ ಸ್ಥಿತಿಯಾಗಿದ್ದು, ಇದರಲ್ಲಿ ವ್ಯಕ್ತಿಯ ಬಾಯಿಯಲ್ಲಿ ಸುಡುವ ಅಥವಾ ಜುಮುಗುಡುವ ಭಾವನೆಯನ್ನು ಅನುಭವಿಸುತ್ತಾನೆ, ಇದು ಅನೇಕ ದಿನಗಳ ಕಾಲ, ತಿಂಗಳುಗಳು ಮತ್ತು ಕೆಲವೊಮ್ಮೆ ಅದಕ್ಕಿಂತ ಹೆಚ್ಚು ಕಾಲ ಸಹ ಇದು ಹಾಗೆಯೇ ಮುಂದುವರೆಯಬಹುದು.


ವಿಟಮಿನ್ ಡಿ ಕೊರತೆಯು ವಿಶ್ವಾದ್ಯಂತ ಅತ್ಯಂತ ಸಾಮಾನ್ಯ ಪೌಷ್ಠಿಕಾಂಶದ ಕೊರತೆಗಳಲ್ಲಿ ಒಂದಾಗಿದೆ ಎಂಬುದು ಗಮನಾರ್ಹವಾಗಿದೆ. ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಪ್ರಪಂಚದಾದ್ಯಂತ ಅಂದಾಜು 1 ಬಿಲಿಯನ್ ಜನರು ವಿಟಮಿನ್ ಕಡಿಮೆ ರಕ್ತದ ಮಟ್ಟವನ್ನು ಹೊಂದಿದ್ದಾರೆ.


ವಿಟಮಿನ್ ಡಿ ಕೊರತೆಯ ಕೆಲವು ಲಕ್ಷಣಗಳು ಇಲ್ಲಿವೆ


  • ಆಗಾಗ ಅನಾರೋಗ್ಯದಿಂದ ಬಳಲುವುದು

  • ಆಯಾಸ ಮತ್ತು ದಣಿವು

  • ಮೂಳೆ ಮತ್ತು ಬೆನ್ನು ನೋವು

  • ಖಿನ್ನತೆ

  • ಗಾಯ ಗುಣವಾಗಲು ತಡವಾಗುವುದು

  • ಮೂಳೆ ನಷ್ಟವಾಗುವುದು

  • ಕೂದಲು ಉದುರುವಿಕೆ

  • ಸ್ನಾಯು ನೋವು

  • ತೂಕ ಜಾಸ್ತಿಯಾಗುವುದು

  • ಆತಂಕ ಹೆಚ್ಚಾಗುವುದು




ವಿಟಮಿನ್ ಡಿ ಕೊರತೆಯನ್ನು ಹೇಗೆ ಸರಿಪಡಿಸಿಕೊಳ್ಳಬಹುದು?


  • ವಿಟಮಿನ್ ಡಿ ಕೊರತೆಯನ್ನು ಸರಿಪಡಿಸಿಕೊಳ್ಳಲು ಮೌಖಿಕ ಪೂರಕಗಳನ್ನು ತೆಗೆದುಕೊಳ್ಳುವುದು ಒಳ್ಳೆಯದಂತೆ.

  • ಹೆಚ್ಚು ವಿಟಮಿನ್ ಡಿ ಸಮೃದ್ಧ ಆಹಾರಗಳಾದ ಕೊಬ್ಬಿನ ಮೀನು, ಮೊಟ್ಟೆಯ ಹಳದಿ ಲೋಳೆ, ಮೊಸರನ್ನು ತಿನ್ನುವುದರಿಂದ ನಿಮ್ಮ ವಿಟಮಿನ್ ಮಟ್ಟವನ್ನು ಹೆಚ್ಚಿಸಿಕೊಳ್ಳಬಹುದು.

  • ಸೂರ್ಯನ ಬೆಳಕು ವಿಟಮಿನ್ ಡಿ ಯ ನೈಸರ್ಗಿಕ ಮೂಲವಾಗಿರುವುದರಿಂದ, ವೈದ್ಯರು ಹೆಚ್ಚಾಗಿ ಬೆಳಗ್ಗೆ ಹೊರಗೆ ಹೋಗಲು ಹೇಳುತ್ತಾರೆ.

First published: